
ಬೆಂಗಳೂರು, (ಮಾರ್ಚ್ 22): ನಗರದ ಡಿ.ಜೆ.ಹಳ್ಳಿ ಸಕ್ಕರೆ ಮಂಡಿಯ ಪಾಳುಮನೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತೆಯನ್ನ ಕೊಲೆ ಮಾಡಿ ಪರಾರಿಯಾಗಿದ್ದ ಭಾವಿ ಪತಿ ಸೈಯದ್ ಶಬೀಲ್ ಸಿಕ್ಕಿಬಿದ್ದಿದ್ದಾನೆ. ಮದುವೆಯಾಗಿಬೇಕಿದ್ದ ಯುವತಿ ಮೇಲಿನ ಅನುಮಾನದಿಂದ ಆಕೆನ್ನು ಕೊಂದಿದ್ದ. ಮಾರ್ಚ್ 17ರಂದು ಆಕೆಯನ್ನು ಭೇಟಿಯ ನೆಪದಲ್ಲಿ ಕರೆದು, ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಮತ್ತು ಕುತ್ತಿಗೆ ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದ. ಬಳಿಕ ಪೊಲೀಸರು ಎಲ್ಲಾ ಕಡೆ ಶೋಧ ನಡೆಸಿದ್ದು, ಅಂತಿಮವಾಗಿ ಹಂತಕ ಶಬೀಲ್ ರಾಜಸ್ಥಾನದ ಅಜ್ಮೀರ್ ದರ್ಗಾ ಬಳಿ ಬಲೆಗೆ ಬಿದಿದ್ದಾನೆ. ಕೊಲೆ ಬಳಿಕ ಪಶ್ಚಾತ್ತಾಪಕ್ಕಾಗಿ ಅಜ್ಮೀರ್ ದರ್ಗಾಕ್ಕೆ ಹೋಗಿದ್ದ ಎಂದು ತಿಳಿದುಬಂದಿದೆ.
ಕೊಲೆ ಮಾಡಿ ಬಳಿಕ ತಲೆ ಮರಿಸಿಕೊಂಡಿದ್ದ ಶಬೀಲ್ ನನ್ನು ಅಜ್ಮೀರ್ ನಲ್ಲಿ ಬಂಧಿಸುವಲ್ಲಿ ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆ ಬಳಿಕ ಪಶ್ಚಾತ್ತಾಪ ಪಟ್ಟು ಅಜ್ಮೀರಗೆ ತೆರಳಿದ್ದು, ದರ್ಗಾದಲ್ಲಿ ಪ್ರಾರ್ಥನೆ ಮಾಡಿ ಪ್ರಾಯಶ್ಚಿತಕ್ಕಾಗಿ ಬೇಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಕೋಲಾರ ಮೂಲದ ಅಪ್ರಾಪ್ತ ಬಾಲಕಿ ಆಗಾಗ ಬೆಂಗಳೂರಿನ ಸಂಬಂಧಿಕರ ಮನೆಗೆ ಬರುತ್ತಿದ್ದಳು. ಈ ನಡುವೆ ಡಿಜೆ ಹಳ್ಳಿಯ ಈರುಳ್ಳಿ ಮಾರ್ಕೆಟ್ನಲ್ಲಿ ಕೆಲಸ ಮಾಡ್ತಿದ್ದ ಸೈಯದ್ ಶಬೀಲ್ ಎಂಬ ಯುವಕನ ಜೊತೆ ಆಕೆಗೆ ಪ್ರೀತಿ ಶುರುವಾಗಿತ್ತು. ಆಗಾಗ ಫೋನ್ನಲ್ಲಿಇವರು ಮಾತಾನಾಡುತ್ತಿರೋದನ್ನು ಗಮನಿಸಿದ ಸಂಬಂಧಿಕರು, ಪೋಷಕರಿಗೆ ವಿಚಾರ ತಿಳಿಸಿದ್ದರು. ಬಳಿಕ ಆಕೆ ಪ್ರೀತಿಸುತ್ತಿದ್ದವನ ಜೊತೆಯೇ ಮದುವೆ ಮಾಡಲು ಮನೆಯವರು ಮುಂದಾಗಿದ್ದರು. ಅದರಂತೆ ಕಳೆದ 2025ರ ಜೂನ್ನಲ್ಲಿ ಇವರಿಬ್ಬರ ಎಂಗೇಜ್ಮೆಂಟ್ ಕೂಡ ನಡೆದಿತ್ತು. ಕೆಲ ಸಮಯದ ಬಳಿಕ ಮದುವೆಯ ತಯಾರಿಯಲ್ಲೂ ಮನೆಯವರಿದ್ದರು. ಆದರೆ ಇತ್ತೀಚೆಗೆ ಅಪ್ರಾಪ್ತಳ ಮೇಲೆ ಅನುಮಾನ ಪಟ್ಟಿದ್ದ. ಬಳಿಕ ಇದೇ ಮಾರ್ಚ್ 17ರಂದು ಮಾತನಾಡುವ ನೆಪದಲ್ಲಿ ಡಿ.ಜೆ.ಹಳ್ಳಿ ಸಕ್ಕರೆ ಮಂಡಿಯ ಪಾಳುಮನೆಗೆ ಕರೆದೊಯ್ದು ಆಕೆಯ ಎದೆ ಭಾಗ ಕತ್ತರಿಸಿ ಗುಪ್ತಾಂಗಕ್ಕೆ ಚಾಕುವಿನಿಂದ ಇರಿದಿದ್ದ. ಸಾಲದಕ್ಕೆ ಕುತ್ತಿಗೆ ಕೊಯ್ದು ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದ.