ಸಾಲದ ಹೆಸರಲ್ಲಿ ಕರೆ ಮಾಡಿ ಕಿರುಕುಳ ನೀಡುವ ಬ್ಯಾಂಕ್ಗಳ ವಿರುದ್ಧ ಡಾ ಸುಂದರ್ ಶಂಕರನ್ ಆಕ್ರೋಶ; ಕ್ಷೆಮೆ ಕೇಳಿದ ಹೆಚ್‌ಡಿಎಫ್‌ಸಿ
ಸಾಲ ಬೇಕಾ ಎಂದು ಬರುವ ಕರೆಗಳಿಂದ ಕಿರುಕುಳ ಆಗುತ್ತಿದೆ. ನಂಬರ್ ಬ್ಲಾಕ್ ಮಾಡಿದರೂ ಬೇರೆ ಬೇರೆ ನಂಬರ್ಗಳಿಂದ ಕಾಲ್ ಮಾಡಿ ನೆಮ್ಮದಿ ಹಾಳು ಮಾಡುತ್ತಿದ್ದಾರೆ ಎಂದು ಆಸ್ಟರ್ ಇನ್‌ಸ್ಟಿಟ್ಯೂಟ್ ಆಫ್ ರೀನಲ್ ಟ್ರಾನ್ಸ್‌ಪ್ಲಾಂಟೇಶನ್ ಆಸ್ಪತ್ರೆಯ ನಿರ್ದೇಶಕ ಡಾ ಸುಂದರ್ ಶಂಕರನ್ ಅವರು ಹೆಚ್‌ಡಿಎಫ್‌ಸಿ ಬ್ಯಾಂಕ್ ವಿರುದ್ಧ ಕಿಡಿಕಾರಿದ್ದಾರೆ. ಆದಷ್ಟು ಬೇಗ ಸ್ಪ್ಯಾಮ್ ಕರೆಗಳಿಗೆ ಕಡಿವಾಣ ಹಾಕಲು ತಿಳಿಸಿದ್ದಾರೆ.
ಬೆಂಗಳೂರು, ಏಪ್ರಿಲ್.01: ಸಾಲವನ್ನು ನೀಡುವ ಬ್ಯಾಂಕ್‌ಗಳಿಂದ ಬರುವಂತಹ ಸ್ಪ್ಯಾಮ್ ಕರೆಗಳು (Spam Calls) ಜನರಿಗೆ ಎಷ್ಟೊಂದು ಕಿರಿಕಿರಿಯನ್ನುಂಟುಮಾಡುತ್ತವೆ ಎಂಬ ಬಗ್ಗೆ ವಿವರಿಸುವ ಅಗತ್ಯವಿಲ್ಲ. ಕರೆಗಳನ್ನು ಸ್ವೀಕರಿಸಿ ಸಾಲ ಬೇಡ ಎಂದರೂ ಪದೇ ಪದೇ ಕರೆ ಮಾಡಿ ಮನಶಾಂತಿಯನ್ನೇ ಹಾಳು ಮಾಡಿಬಿಟ್ಟಿರಿತ್ತಾರೆ. ಸದ್ಯ ಇತ್ತೀಚೆಗೆ, ಬೆಂಗಳೂರಿನ ವೈದ್ಯರೊಬ್ಬರು ಬ್ಯಾಂಕ್ ಸಾಲ ನೀಡುವವರಿಂದ ಬಂದ ಸ್ಪ್ಯಾಮ್ ಕರೆಗಳಿಂದ ಬೇಸತ್ತು. ತಮ್ಮ ಎಕ್ಸ್ ಖಾತೆ ಮೂಲಕ HDFC ಬ್ಯಾಂಕ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಆಸ್ಟರ್ ಇನ್‌ಸ್ಟಿಟ್ಯೂಟ್ ಆಫ್ ರೀನಲ್ ಟ್ರಾನ್ಸ್‌ಪ್ಲಾಂಟೇಶನ್ ಆಸ್ಪತ್ರೆಯ (Aster Institute of Renal Transplantation) ನಿರ್ದೇಶಕ ಡಾ ಸುಂದರ್ ಶಂಕರನ್ ಅವರು ತಮ್ಮ ಎಕ್ಸ್ ಖಾತೆ ಮೂಲಕ ಹೆಚ್‌ಡಿಎಫ್‌ಸಿ ಬ್ಯಾಂಕ್ ವಿರುದ್ದ ಕಿಡಿಕಾರಿದ್ದಾರೆ. ಬಾಂಕ್ನವರು ಸಾಲದ ಹೆಸರಲ್ಲಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ.
”ಹೆಚ್‌ಡಿಎಫ್‌ಸಿ ಬ್ಯಾಂಕ್ ಕಡೆಯಿಂದ ಸಾಲ ನೀಡ್ತೀವಿ ಅಂತಾ ಕರೆ ಮಾಡುವವರು ದೊಡ್ಡ ಪೀಡೆಗಳಾಗಿಬಿಟ್ಟಿದ್ದಾರೆ. ಆ ಕರೆಯಿಂದಾಗಿ ನೀವು ಅವರೊಂದಿಗೆ ಕೋಪಗೊಂಡು ಮೊಬೈಲ್ ಕರೆಗಳನ್ನು ಬ್ಲಾಕ್ ಮಾಡಿದರೂ ಇನ್ನಷ್ಟು ಮತ್ತಷ್ಟು ಕರೆಗಳ ಮೂಲಕ ನೀವು ಅವರಿಂದ ಪೀಡಿಸಲ್ಪಡುತ್ತೀರಿ. ಒಬ್ಬ ಕಾಲರ್ ಕರೆ ಮಾಡಿದಾಗ ನಾನು ಬೇಡವೆಂದಿದ್ದೆ. ಆ ನಂತರ ಮತ್ತೊಬ್ಬ ಕರೆ ಮಾಡಿದವನು ಮ್ಯಾನೇಜರ್ ಎಂದು ಹೇಳಿಕೊಂಡ. ನಾನು ಮೊದಲು ಕರೆ ಮಾಡಿದವನ ಜೊತೆ ಯಾಕೆ ಒರಟಾಗಿದ್ದೇನೆ ಎಂದು ಹೆಚ್‌ಡಿಎಫ್‌ಸಿ ತಿಳಿದುಕೊಳ್ಳಲು ಬಯಸಿದೆ ಎಂದು ಸಮಾಧಾನಗೊಳಿಸುವ ರೀತಿಯಲ್ಲಿ ಮಾತನಾಡಿದ. ಹೇಳಬೇಕು ಅಂದ್ರೆ ಇದು ಸ್ಪ್ಯಾಮ್ ಕಾಲ್ ಇದ್ದಂತೆ ಇತ್ತು. ಆದಾಗ್ಯೂ ಎಚ್ಚೆತ್ತು ಹೆಚ್‌ಡಿಎಫ್‌ಸಿ ಇಂತಹ ಕರೆಗಳ ಬಗ್ಗೆ ನಿಗಾವಹಿಸಬೇಕು ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಹಾಗೂ ಡಾ. ಸುಂದರ್ ತಮ್ಮ ಟ್ವೀಟ್ನಲ್ಲಿ ಅವರು ಸ್ವೀಕರಿಸಿದ ಕೆಲವು ಸ್ಪ್ಯಾಮ್ ಕರೆಗಳ ಫೋನ್ ನಂಬರ್ ಅನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಆರ್ಥಿಕ ವರ್ಷದ ಮೊದಲ ದಿನವೇ ಗುಡ್ ನ್ಯೂಸ್: ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ ಇಳಿಕೆ
ಡಾ.ಸುಂದರ್ ಶಂಕರನ್ ಅವರ ಟ್ವೀಟ್ ಹೀಗಿದೆ
HDFC loan requirement callers have become a nuisance and if you get angry with them you are pestered with more calls despite blocking Today after one caller got fired by me another caller claiming to be manager HDFC wanted to know why I was rude looked like spam calls but HDFC…
— Sundar Sankaran (@sundar_s1955) March 30, 2024
ಸುಂದರ್ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ ಬ್ಯಾಂಕ್
“ಹಾಯ್ ಸುಂದರ್, ನಿಮ್ಮ ಅನುಭವದ ಬಗ್ಗೆ ನಮಗೆ ಕ್ಷಮಿಸಿ. ದಯವಿಟ್ಟು ನಿಮಗೆ ಕರೆ ಮಾಡಿದವರ ವಿವರಗಳು ಮತ್ತು ಕರೆ ಸ್ವೀಕರಿಸಿದ ನಿಮ್ಮ ಸಂಪರ್ಕ ಸಂಖ್ಯೆಯನ್ನು ಸಹಾಯಕ್ಕಾಗಿ ನಮಗೆ ನೀಡಿ ಎಂದು ಹೆಚ್‌ಡಿಎಫ್‌ಸಿ ಸೇವಾ ವ್ಯವಸ್ಥಾಪಕ ಅನಯ್ ಸುಂದರ್ ಟ್ವೀಟ್ಗೆ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಮರು ಪ್ರತಿಕ್ರಿಯೆ ನೀಡಿದ ಡಾ.ಸುಂದರ್, ನಾನು ಈ ಹಿಂದೆ ಇಂತಹ ಕರೆಗಳ ಬಗ್ಗೆ ದೂರು ನೀಡಿದ್ದೆ. ಆದರೆ “ಮೌಖಿಕ” ಉತ್ತರವಷ್ಟೇ ಸಿಕ್ಕಿದೆ. ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ.
ಹಲವಾರು ಬಳಕೆದಾರರು ಇಂತಹ ಕರೆಗಳಿಂದ ಕಿರುಕುಳ ಅನುಭವಿಸುತ್ತಿದ್ದಾರೆ. ಇಂತಹ ಕರೆಗಳನ್ನು ಹೇಗೆ ತಡೆಯಬೇಕೆಂದು ಹಲವು ಟ್ವಿಟರ್ ಬಳಕೆದಾರರು ಸಲಹೆ ನೀಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:59 am, Mon, 1 April 24