AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭೆ ಚುನಾವಣೆ: ನರೇಗಾ ಅಡಿಯಲ್ಲಿ ಕೆಲಸ ಮಾಡುವವರ ಸಂಖ್ಯೆ ಶೇ85 ರಷ್ಟು ಕುಸಿತ

ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ರಾಜಕೀಯ ರ್ಯಾಲಿಗಳು ಮತ್ತು ಮನೆ-ಮನೆ ಪ್ರಚಾರದಲ್ಲಿ ಭಾಗವಹಿಸಿದರೆ ದುಪ್ಪಟ್ಟು ಹಣವನ್ನು ಪಡೆಯುತ್ತಾರೆ. ಜೊತೆಗೆ ಅವರಿಗೆ ಉಚಿತವಾಗಿ ಉಪಹಾರ ಮತ್ತು ಊಟವನ್ನು ಸಹ ನೀಡಲಾಗುತ್ತಿದ್ದು, ಈ ಕಾರಣಗಳಿಂದ ಕಾರ್ಮಿಕರು ಕೆಲಸಕ್ಕೆ ಹೋಗುತ್ತಿಲ್ಲ.

ಲೋಕಸಭೆ ಚುನಾವಣೆ: ನರೇಗಾ ಅಡಿಯಲ್ಲಿ ಕೆಲಸ ಮಾಡುವವರ ಸಂಖ್ಯೆ ಶೇ85 ರಷ್ಟು ಕುಸಿತ
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ
|

Updated on: Apr 01, 2024 | 8:17 AM

Share

ಬೆಂಗಳೂರು, ಏಪ್ರಿಲ್​ 01: ಲೋಕಸಭೆ ಚುನಾವಣೆಯ (Lok Sabha Election) ದಿನಾಂಕ ಘೋಷಣೆಯಾದಾಗಿನಿಂದ ಕರ್ನಾಟಕದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS-ನರೇಗಾ) ಅಡಿಯಲ್ಲಿ ಕೆಲಸ ಮಾಡುವವರ ಸಂಖ್ಯೆ ಶೇಕಡಾ 85 ರಷ್ಟು ಕುಸಿದಿದೆ. ಪ್ರಚಾರದ ಉದ್ದೇಶಕ್ಕಾಗಿ ಅಭ್ಯರ್ಥಿಗಳು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಕೃಷಿ ಮತ್ತು ಕಾರ್ಮಿಕರನ್ನು ಜೋಡಿಸುವುದರಿಂದ ನರೇಗಾದ (Narega) ಅಡಿಯಲ್ಲಿ ಕೆಲಸ ಮಾಡುವವರ ಸಂಖ್ಯೆ ಕಡಿಮೆಯಾಗಿದೆ.

ಚುನಾವಣೆ ದಿನಾಂಕ ಘೋಷಣೆಯಾದ ನಂತರ ಕರ್ನಾಟಕದ 5,963 ಗ್ರಾಮ ಪಂಚಾಯತಿಗಳಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಒಂದೇ ಒಂದು ಕೆಲಸವನ್ನು ಕೈಗೆತ್ತಿಕೊಂಡಿಲ್ಲ. ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಚುನಾವಣೆ ನಡೆಯಲಿದೆ.

ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಪ್ರಚಾರದತ್ತ ವಾಲಲು, ವೇತನ ಪಾವತಿಯಲ್ಲಿನ ವಿಳಂಬವು ಒಂದು ಕಾರಣವಾಗಿದೆ ಎಂದು ಹೇಳಲಾಗುತ್ತದೆ. ಇದಲ್ಲದೆ, ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ರಾಜಕೀಯ ರ್ಯಾಲಿಗಳು ಮತ್ತು ಮನೆ-ಮನೆ ಪ್ರಚಾರದಲ್ಲಿ ಭಾಗವಹಿಸಿದರೆ ದುಪ್ಪಟ್ಟು ಹಣವನ್ನು ಪಡೆಯುತ್ತಾರೆ. ಜೊತೆಗೆ ಅವರಿಗೆ ಉಚಿತವಾಗಿ ಉಪಹಾರ ಮತ್ತು ಊಟವನ್ನು ಸಹ ನೀಡಲಾಗುತ್ತಿದ್ದು, ಈ ಕಾರಣಗಳಿಂದ ಕಾರ್ಮಿಕರು ಕೆಲಸಕ್ಕೆ ಹೋಗುತ್ತಿಲ್ಲ.

ದಿನದ ಪ್ರಚಾರದ ಕೊನೆಯಲ್ಲಿ ನಾವು ಹಣವನ್ನು ಪಡೆಯುತ್ತೇವೆ. ಚುನಾವಣೆ ಮುಗಿಯುವವರೆಗೂ ನರೇಗಾ ಕೆಲಸಕ್ಕೆ ಮರಳುವ ಪ್ರಶ್ನೆಯೇ ಇಲ್ಲ ಎಂದು ದಾವಣಗೆರೆ ಜಿಲ್ಲೆಯ ತಣಿಗೇರಿಯ ಕೂಲಿ ಕಾರ್ಮಿಕ ಅಂಜನಪ್ಪ ಹೇಳಿದರು. ಈ ಹಿಂದೆ ನರೇಗಾ ಅಡಿಯಲ್ಲಿ ದಿನಕ್ಕೆ 316 ರೂ. ನೀಡಲಾಗುತ್ತಿತ್ತು, ಇದನ್ನು ಇತ್ತೀಚೆಗೆ 349 ರೂ.ಗೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ: ಧಾರವಾಡದಲ್ಲಿ ನರೇಗಾ ಕಾರ್ಮಿಕರಿಗೆ ರಾಜ್ಯ ಸರ್ಕಾರ ಒಂದು ಪೈಸೆ ಕೂಲಿಯನ್ನೂ ನೀಡಿಲ್ಲ! 6.51 ಕೋಟಿ ಬಾಕಿ ಉಳಿಸಿಕೊಂಡಿದೆ!

ನಿಯಮಗಳ ಪ್ರಕಾರ ಕೂಲಿಕಾರರು 15 ದಿನಕ್ಕೊಮ್ಮೆ ಕೂಲಿ ಪಡೆಯಬೇಕು. ಆದಾಗ್ಯೂ, ವೇತನ ಪಾವತಿಯಲ್ಲಿ ವಿಳಂಬವಾಗುತ್ತಿದೆ. ಹೀಗಾಗಿ ಕಾರ್ಮಿಕರು ನರೇಗಾ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ನರೇಗಾ ಫಲಾನುಭವಿಗಳು ಡಿಸೆಂಬರ್ ಮೂರನೇ ವಾರದಲ್ಲಿ ವೇತನವನ್ನು ಪಡೆದಿದ್ದಾರೆ. ಆದರೆ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ವೇತನ ನೀಡಲಿಲ್ಲ. ನಂತರ ಮಾರ್ಚ್ 21 ರಂದು ವೇತನ ನೀಡಲಾಗಿದೆ.

“ನರೇಗಾ ಅಡಿಯಲ್ಲಿ ತುರ್ತು ಕೆಲಸಗಳನ್ನು ಪೂರ್ಣಗೊಳಿಸುವ ಸಲುವಾಗಿ, ಕೆಲಸಕ್ಕೆ ಬನ್ನಿ ಅಂತ ಕಾರ್ಮಿಕರನ್ನು ವಿನಂತಿಸುತ್ತಿದ್ದೇವೆ. ಆದರೆ, ಹಲವರು ಕೆಲಸಕ್ಕೆ ಬರಲು ಸಿದ್ಧರಿಲ್ಲ. ಹಲವು ಮಹತ್ವದ ಕಾಮಗಾರಿಗಳು ಬಾಕಿ ಉಳಿದಿವೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ತಿಳಿಸಿದರು.

ಇತರ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ

ಕೂಲಿಕಾರರು ಅಭ್ಯರ್ಥಿಗಳ ಪ್ರಚಾರದಲ್ಲಿ ನಿರತರಾಗಿರುವ ಕಾರಣ ಚುನಾವಣಾ ಪ್ರಚಾರವು ನಿರ್ಮಾಣ ಉದ್ಯಮ, ಕೃಷಿ ಕೆಲಸಗಳು ಮತ್ತು ಇತರರ ಮೇಲೂ ಪರಿಣಾಮ ಬೀರಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ