AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವಾಜ್ ಹಾಕುತ್ತಾ ಓಡಾಡುತ್ತಿದ್ದವ ಅರೆಸ್ಟ್: ಫೀಲ್ಡ್ ಆಫೀಸರ್ ಏಕಾಏಕಿ ಪೊಲೀಸ್​ ಆದ ಕಥೆ!

ಪೊಲೀಸ್ ಐಡಿ ಕಾರ್ಡ್ ಹಿಡಿದು ಎಲ್ಲರಿಗೂ ಆವಾಜ್​ ಹಾಕಿಕೊಂಡು ಓಡಾಡುತ್ತಿದ್ದ ಕಳ್ಳಖಾಕಿಯನ್ನ ಬಂಧಿಸಲಾಗಿದೆ. PSI ಮಂಜುನಾಥ್ ಎಂಬುವವರ ಐಡಿ ಕಾರ್ಡ್ ಬಳಸಿ ಟೋಲ್ ಪ್ಲಾಜಾ ಮತ್ತು ವಿಮಾನ ನಿಲ್ದಾಣಗಳಲ್ಲಿ ಪೊಲೀಸ್ ಎಂದು ಹೇಳಿಕೊಂಡು ಓಡಾಡುತ್ತಿದ್ದ. ಮಾಹಿತಿ ತಿಳಿದ ಪೀಣ್ಯ ಪೊಲೀಸರಿಂದ ಆರೋಪಿಯನ್ನ ಅರೆಸ್ಟ್ ಮಾಡಲಾಗಿದೆ.

ಅವಾಜ್ ಹಾಕುತ್ತಾ ಓಡಾಡುತ್ತಿದ್ದವ ಅರೆಸ್ಟ್: ಫೀಲ್ಡ್ ಆಫೀಸರ್ ಏಕಾಏಕಿ ಪೊಲೀಸ್​ ಆದ ಕಥೆ!
ಬಂಧಿತ ವ್ಯಕ್ತಿ
ಗಂಗಾಧರ​ ಬ. ಸಾಬೋಜಿ
|

Updated on:Jul 07, 2025 | 5:04 PM

Share

ಬೆಂಗಳೂರು, ಜುಲೈ 07: ಪೊಲೀಸ್ ಐಡಿ ಕಾರ್ಡ್ ಹಿಡಿದು ಓಡಾಡುತ್ತಿದ್ದ ನಕಲಿ ಪೊಲೀಸನನ್ನು (police) ಅರೆಸ್ಟ್ (arrest) ಮಾಡಲಾಗಿದೆ. ಪಿಎಸ್​​ಐ ಮಂಜುನಾಥ್ ಎಂಬವರ ಐಡಿ ಕಾರ್ಡಿಗೆ ತನ್ನ ಫೋಟೋ ಹಾಕಿ ಟೋಲ್, ಏರ್​ಪೋರ್ಟ್​​ಗಳಲ್ಲಿ ಆವಾಜ್ ಹಾಕಿಕೊಂಡು ಓಡಾಡುತ್ತಿದ್ದ ಕರಿಹೋಬನಹಳ್ಳಿಯ ರವಿ ಎಂಬಾತನನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.

ಏಯ್​ ನಾನು ಪೊಲೀಸ್​!

ಬಂಧಿತ ರವಿ ಎಲ್ಲಾ ಕಡೆ ‘ಏಯ್ ಪೊಲೀಸಪ್ಪ ನಾನು’ ಅಂತ ಐಡಿ ಕಾರ್ಡ್ ತೋರಿಸುತ್ತಿದ್ದ. ರವಿ ಶೇಷಾದ್ರಿಪುರಂನ ರೇಣುಕಾ ಶುಗರ್ಸ್​ನಲ್ಲಿ ಫೀಲ್ಡ್ ಆಫೀಸರ್ ಆಗಿ ಕೆಲಸ ಮಾಡಿಕೊಂಡಿದ್ದರು. ಆದರೆ ಏಕಾಏಕಿ ಪೊಲೀಸ್ ಐಡಿ ಕಾರ್ಡ್ ಹಿಡಿದು ಓಡಾಡುವುದಕ್ಕೆ ಶುರುಮಾಡಿದ್ದರು.

ಇದನ್ನೂ ಓದಿ: ರೇಣುಕಾಸ್ವಾಮಿ ರೀತಿ ಕಲಬುರಗಿಯಲ್ಲೂ ಕಿಡ್ನಾಪ್ ಮಾಡಿ ಹತ್ಯೆ: ವ್ಯಕ್ತಿ ಕೊಲೆ ಹಿಂದೆ ಹಳೇ ಲವರ್ ಗ್ಯಾಂಗ್

ಇದನ್ನೂ ಓದಿ
Image
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
Image
ಮನೆಯಲ್ಲೇ ಹೈಟೆಕ್ ವೇಶ್ಯವಾಟಿಕೆ ದಂಧೆ: ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದರು
Image
ಯಶವಂತಪುರದಿಂದ ಹೊರಡುವ ಈ ವಂದೇ ಭಾರತ್ ರೈಲಿಗೆ ಹೆಚ್ಚುವರಿ ಬೋಗಿಗಳು
Image
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ

ಬೆಂಗಳೂರು ಕೆಂಪೇಗೌಡ ಏರ್​ಪೋರ್ಟ್​ನ ಇಮಿಗ್ರೇಷನ್ ಬಳಿಯೂ ರವಿ ಐಡಿ ಕಾರ್ಡ್ ತೋರಿಸಿದ್ದರು. ಐಡಿ ಸ್ಕ್ಯಾನ್ ಮಾಡಿದ್ದ ಇಮಿಗ್ರೇಷನ್ ಅಧಿಕಾರಿಗಳಿಗೆ ಆರೋಪಿ ರವಿ ಮೇಲೆ ಅನುಮಾನ ಬಂದಿತ್ತು. ಎದುರುಗಡೆ ಇರುವ ವ್ಯಕ್ತಿನೇ ಬೇರೆ ಐಡಿ ನಂಬರೇ ಬೇರೆ ಎನ್ನುವುದು ಪಕ್ಕಾ ಆಗಿತ್ತು. ಬಳಿಕ ಇಮಿಗ್ರೇಷನ್​ನಿಂದ ನೇರವಾಗಿ ಸ್ಟೇಟ್ ಇಂಟ್​ಗೆ ಮಾಹಿತಿ ಹೋಗಿತ್ತು. ಮಾಹಿತಿ ತಿಳಿದ ಪೀಣ್ಯ ಪೊಲೀಸರಿಂದ ಆರೋಪಿ ರವಿಯನ್ನು ಅರೆಸ್ಟ್ ಮಾಡಲಾಗಿದೆ.

ಪಾರ್ಕಿಂಗ್ ವಿಚಾರವಾಗಿ ಪೊಲೀಸರ ನಡುವೆಯೇ ಗಲಾಟೆ

ಪೊಲೀಸರ ನಡುವೆಯೇ ಪಾರ್ಕಿಂಗ್ ವಿಚಾರವಾಗಿ ಮಾತಿನ ಚಕಮಕಿ ಉಂಟಾಗಿದ್ದ ಘಟನೆ ಇತ್ತೀಚೆಗೆ ರಾಮನಗರದ ಐಜೂರು ವೃತ್ತದಲ್ಲಿ ನಡೆದಿತ್ತು. ರಾಮನಗರ ಪುರಠಾಣೆಯ ಮಹಿಳಾ ಪೇದೆ ರುಕ್ಮಿಣಿ ಪಾಟೀಲ್ ಹಾಗೂ ಸಂಚಾರ ಠಾಣೆ ಪೇದೆ ಮೋಹನ್ ಕುಮಾರ್ ನಡುವೆ ವಾಗ್ವಾದ ನಡೆದಿತ್ತು.

ಇದನ್ನೂ ಓದಿ: ಮನೆಯಲ್ಲೇ ಹೈಟೆಕ್ ವೇಶ್ಯವಾಟಿಕೆ ದಂಧೆ: ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದ 6 ಪುರುಷರು, ಇಬ್ಬರು ಯುವತಿಯರು

ರಾಮನಗರದ ಐಜೂರು ವೃತ್ತದಲ್ಲಿ ರಾಂಗ್ ರೂಟ್​ನಲ್ಲಿ ಮಹಿಳಾ ಪೇದೆ ರುಕ್ಮಿಣಿ ಬಂದಿದ್ದರು. ಇದನ್ನ ತಡೆದು ಸಂಚಾರಿ ಠಾಣೆ ಪಿಸಿ ಮೋಹನ್ ಕುಮಾರ್ ಪ್ರಶ್ನೆ ಮಾಡಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ಸ್ಥಳೀಯರು ಹಾಗೂ ಎಎಸ್​ಐ ಸಮಾಧಾನ ಮಾಡಿದರು ಪೇದೆಗಳು ಕೇಳದೇ ಮಾತಿಕ ಚಕಮಕಿ ನಡೆಸಿದ್ದರು.

ವರದಿ: ವಿಕಾಸ್​​ ಗೌಡ, ಕ್ರೈಂ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:03 pm, Mon, 7 July 25