AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಈ ರೆಸ್ಟೋರೆಂಟ್​​​ಗಳಲ್ಲಿ ಊಟ ಸೇವಿಸಿದ್ರೆ ಪ್ರಾಣ ಹೋಗುವುದು ಖಂಡಿತ, ಟಿವಿ9 ಕನ್ನಡ ನಡೆಸಿದ ಬಿಗ್ ಕಾರ್ಯಚರಣೆ

ಬೆಂಗಳೂರಿನ ರೆಸ್ಟೋರೆಂಟ್‌ಗಳಲ್ಲಿ ಅವಧಿ ಮೀರಿದ ಆಹಾರ ಉತ್ಪನ್ನಗಳನ್ನು ಬಳಸಿ, ಗ್ರಾಹಕರ ಆರೋಗ್ಯದೊಂದಿಗೆ ಚೆಲ್ಲಾಟವಾಡಲಾಗುತ್ತಿದೆ. ರಾಜಾಜಿನಗರದ ಹಂಗ್ರಿ ಬೈಟ್ಸ್‌ನಂತಹ ಸ್ಥಳಗಳಲ್ಲಿ ಎಕ್ಸ್‌ಪೈರಿ ದಿನಾಂಕ ಮುಗಿದಿರುವ ಸಾಸ್, ಮಯೋನಿಸ್ ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಇದು ಜನರ ಜೀವಕ್ಕೆ ಅಪಾಯ ತರುವ ಜೊತೆಗೆ, ಆರೋಗ್ಯ ಅಧಿಕಾರಿಗಳ ಮೃದು ಧೋರಣೆಯೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಹಕರು ಆಹಾರದ ಗುಣಮಟ್ಟದ ಬಗ್ಗೆ ಎಚ್ಚರಿಕೆ ವಹಿಸುವುದು ಅನಿವಾರ್ಯ.

ಬೆಂಗಳೂರಿನ ಈ ರೆಸ್ಟೋರೆಂಟ್​​​ಗಳಲ್ಲಿ ಊಟ ಸೇವಿಸಿದ್ರೆ ಪ್ರಾಣ ಹೋಗುವುದು ಖಂಡಿತ, ಟಿವಿ9 ಕನ್ನಡ ನಡೆಸಿದ ಬಿಗ್ ಕಾರ್ಯಚರಣೆ
ಸಾಂದರ್ಭಿಕ ಚಿತ್ರ Image Credit source: Google
ಅಕ್ಷಯ್​ ಪಲ್ಲಮಜಲು​​
|

Updated on:Jan 29, 2026 | 9:53 AM

Share

ಬೆಂಗಳೂರು, ಜ.29: ಬೆಂಗಳೂರಿನಲ್ಲಿ (Bengaluru) ರೆಸ್ಟೋರೆಂಟ್​​​ಗಳಿಗೆ ಏನು ಕಡಿಮೆ ಇಲ್ಲ. ಬೀದಿ ಬೀದಿಯಲ್ಲಿ ರೆಸ್ಟೋರೆಂಟ್​​ಗಳು ಇದೆ. ಆದ್ರೆ ಅಲ್ಲಿ ಸರಿಯಾದ ಹಾಗೂ ಉತ್ತಮ ಗುಣಮಟ್ಟದ ಆಹಾರಗಳು ಸಿಗುತ್ತಾ? ಎಂಬ ಅನುಮಾನ ಮೂಡಿದೆ. ಹಣ ಗಳಿಸುವ ಆಸೆಯಲ್ಲಿ ಜನರ ಜೀವದ ಜತೆಗೆ ಚೆಲ್ಲಾಟ ಆಡುತ್ತಿದ್ದಾರೆ. ಇದೀಗ ಬೆಂಗಳೂರಿನ ಆಹಾರದ ಗುಣಮಟ್ಟದ ಬಗ್ಗೆ ಪ್ರಶ್ನೆ ಎದ್ದಿದೆ. ದೇಶ-ವಿದೇಶದ ಜನರನ್ನು ಬೆಂಗಳೂರು ಆಹಾರ ವಿಚಾರದಲ್ಲಿ ಸೆಳೆದುಕೊಂಡಿದೆ. ಆದರೆ ಇದೀಗ ಇಲ್ಲಿನ ರೆಸ್ಟೋರೆಂಟ್ ನಲ್ಲಿ ಸಿಗುವ ಆಹಾರಗಳು ಎಷ್ಟು ಸೇಫ್​​​ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗಿದೆ. ಬೆಂಗಳೂರಿನಲ್ಲಿ ಜನಸಾಮಾನ್ಯರ ಹಸಿವನ್ನು ಬಂಡವಾಳ ಮಾಡಿಕೊಂಡ ಹೋಟೆಲ್ ಮಾಲೀಕರು ಆಹಾರದಲ್ಲೂ ಒಂದು ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ರಾಜಾಜಿನಗರ ಬಳಿಯ ಶಿವನಗರ ಸಿಗ್ನಲ್ ಸಮೀಪದ ಹಂಗ್ರಿ ಬೈಟ್ಸ್ ಎಂಬ ರೆಸ್ಟೋರೆಂಟ್ ಅವಧಿ ಮೀರಿದ ಆಹಾರ ಉತ್ಪನ್ನಗಳನ್ನು ಬಳಸಿ ಅಡುಗೆ ತಯಾರಿಸುತ್ತಿದ್ದಾರೆ. ಸಾಸ್, ಮಯೋನಿಸ್, ಜ್ಯೂಸ್​ ಫ್ಲೇವರ್ಸ್, ಸೇರಿ ಹತ್ತು ಹಲವು ಉತ್ಪನ್ನಗಳ ಎಕ್ಸ್​​ಪೈರಿ ಡೇಟ್​ ಮುಗಿದು ಒಂದು ವರ್ಷವಾದರೂ ಅದನ್ನೇ ಬಳಸುತ್ತಿದ್ದಾರೆ ಎಂಬುದನ್ನು ಟಿವಿ9 ಕನ್ನಡ ಪತ್ತೆ ಮಾಡಿದೆ.

ಸ್ಯಾಂಡ್ ವಿಚ್, ಮೊಮೊಸ್, ಫ್ರೆಂಚ್ ಫ್ರೈಸ್ ಸೇರಿದಂತೆ ಇನ್ನು ಅನೇಕ ಆಹಾರ ತಯಾರಿಸಲು ಬಳಸುವ ಉತ್ಪನ್ನಗಳು ತುಂಬಾ ಕಳಪೆಯಾಗಿದೆ. ಒಂದು ವೇಳೆ ಇದನ್ನು ಅಪ್ಪಿ ತಪ್ಪಿ ತಿಂದರೆ, ಜೀವ ಹೋಗುವುದು ಖಂಡಿತ. ರೆಸ್ಟೋರೆಂಟ್ ನಡೆಸುವವರು ಗ್ರಾಹಕರ ಆರೋಗ್ಯದ ಬಗ್ಗೆ ಕಿಂಚಿತ್ತು ಕಾಳಜಿ ವಹಿಸದಿರುವುದು ದುರಂತ. ಟಿವಿ9 ಸ್ಥಳಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಆರೋಗ್ಯ ಅಧಿಕಾರಿ ರೆಸ್ಟೋರೆಂಟ್ ಮಾಲೀಕರಿಗೆ 2 ಸಾವಿರ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ. ಇನ್ನು ರೆಸ್ಟೋರೆಂಟ್ ಮಾಲೀಕರು ಹಾಗೂ ಅಡುಗೆ ತಯಾರಿಸುವವರ ಮಧ್ಯೆ ನಾನಾ ರೀತಿಯ ವೈಯಕ್ತಿಕ ತಕರಾರು ಹಾಗೂ ಭಿನ್ನಾಭಿಪ್ರಾಯಗಳಿವೆ. ಕೊನೆಗೆ ಅದರ ಸೇಡನ್ನ ಪರಿಣಾಮ ದುಡ್ಡು ಕೊಟ್ಟು ಆಹಾರ ಸವಿಯಲು ಬಂದ ಗ್ರಾಹಕರ ಮೇಲೆ ತೀರಿಸಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: ರಾತ್ರಿ ವೇಳೆ ಭಯಾನಕ ಶಬ್ದ, ಬೆಳಿಗ್ಗೆ ಎದ್ದು ನೋಡಿದ್ರೆ ಕಾರು, ಬೈಕ್​​​​ ಜಖಂ, ಭಯದ ವಾತವಾರಣದಲ್ಲಿ ಸ್ಥಳೀಯರು

ಅಧಿಕಾರಿಗಳ ಮೃದು ಧೋರಣೆ?

ಇಷ್ಟು ದೊಡ್ಡ ಮಟ್ಟದ ಉಲ್ಲಂಘನೆ ಪತ್ತೆಯಾದ ನಂತರವೂ ಆರೋಗ್ಯ ಅಧಿಕಾರಿಗಳು ಕೇವಲ ₹2,000 ದಂಡ ವಿಧಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜನರ ಜೀವಕ್ಕೆ ಅಪಾಯ ತರುವ ಇಂತಹ ಹೋಟೆಲ್‌ಗಳಿಗೆ ಇಷ್ಟು ಕಡಿಮೆ ದಂಡ ವಿಧಿಸುವುದು ದಂಧೆಕೋರರಿಗೆ ಭಯವಿಲ್ಲದಂತೆ ಮಾಡುತ್ತದೆ ಎಂಬುದು ಕಟು ಸತ್ಯ.

ಗ್ರಾಹಕರು ವಹಿಸಬೇಕಾದ ಮುನ್ನೆಚ್ಚರಿಕೆ:

ಸಾಧ್ಯವಾದರೆ ಹೋಟೆಲ್‌ನ ಅಡುಗೆ ಮನೆ ಎಷ್ಟು ಸ್ವಚ್ಛವಾಗಿದೆ ಎಂದು ಒಮ್ಮೆ ಕಣ್ಣಾಡಿಸಿ.

ಹಾರದಲ್ಲಿ ಅಸಹಜ ವಾಸನೆ ಅಥವಾ ರುಚಿ ಕಂಡುಬಂದರೆ ತಕ್ಷಣ ತಿನ್ನುವುದನ್ನು ನಿಲ್ಲಿಸಿ.

ದೊಡ್ಡ ರೆಸ್ಟೋರೆಂಟ್ ಅಥವಾ ಬ್ರ್ಯಾಂಡ್ ಎಂಬ ಕಾರಣಕ್ಕೆ ಎಲ್ಲವೂ ಸರಿ ಇರುತ್ತದೆ ಎಂದು ಕುರುಡಾಗಿ ನಂಬಬೇಡಿ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಕನ್ನಡ

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:50 am, Thu, 29 January 26

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ