ಸ್ನೇಹಿತನಿಗೆ ಕಂಠಪೂರ್ತಿ ಕುಡಿಸಿ ರಾಬರಿ ಮಾಡಿಸಿದ ಸ್ನೇಹಿತರು: ಮುಂದೇನಾಯ್ತು?

ಪ್ರತಿಯೊಬ್ಬರ ಜೀವನದಲ್ಲಿ ಸ್ನೇಹಿತರು ಬಹಳ ಪ್ರಮುಖ ಪಾತ್ರ ವಹಿಸುತ್ತಾರೆ. ಸಂಬಂಧಿಗಳಿಗಿಂತಲೂ ಹೆಚ್ಚಾಗಿ ಸ್ನೇಹಿತರಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಆದರೆ ಕೆಲ ಸ್ನೇಹಿತರು ಜೀವನಕ್ಕೆ ಕುತ್ತು ಸಹ ತಂದಿಡುತ್ತಾರೆ. ಇಂತಹದೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಚಿನ್ನಾಭರಣದ ಆಸೆಗೆ ಸ್ನೇಹಿತನಿಗೆ ಕಂಠಪೂರ್ತಿ ಕುಡಿಸಿ ಬಳಿಕ ಸ್ನೇಹಿತರೇ ರಾಬರಿ ಮಾಡಿಸಿದ್ದಾರೆ.

ಸ್ನೇಹಿತನಿಗೆ ಕಂಠಪೂರ್ತಿ ಕುಡಿಸಿ ರಾಬರಿ ಮಾಡಿಸಿದ ಸ್ನೇಹಿತರು: ಮುಂದೇನಾಯ್ತು?
ಅಚಲ್​​, ಚಂದನ್​, ಪವನ್​, ಪ್ರೇಮ್​ ಶೆಟ್ಟಿ

Updated on: Jun 15, 2025 | 1:25 PM

ಬೆಂಗಳೂರು, ಜೂನ್​ 15: ಸ್ನೇಹಿತನಿಗೆ ಕಂಠಪೂರ್ತಿ ಕುಡಿಸಿ ಸ್ನೇಹಿತರೇ (Friends) ಮತ್ತೊಂದು ಗ್ಯಾಂಗ್​ಗೆ ಸುಪಾರಿ ನೀಡಿ ಆತನ ರಾಬರಿ (Robbery) ಮಾಡಿಸಿರುವಂತಹ ಘಟನೆ ನಗರದ ಚಿಕ್ಕಜಾಲದಲ್ಲಿ ನಡೆದಿದೆ. ಚಂದನ್​​ ಎಂಬಾತನ ಚಿನ್ನದ ಸರ, ಕೈ ಕಡಗವನ್ನು ದರೋಡೆ ಮಾಡಲಾಗಿದೆ. ರಾಬರಿ ಮಾಡಿಸಿದ ಸ್ನೇಹಿತರೇ ಪೊಲೀಸ್​ ಠಾಣೆಗೆ ಹೋಗಿ ದೂರು ಕೊಡಿಸಿದ್ದಾರೆ. ಆದರೆ ಈ ಸ್ನೇಹಿತರ ವರ್ತನೆಯಿಂದ ಅನುಮಾನಗೊಂಡ ಪೊಲೀಸರು, ಕಾಲ್ ಲಿಸ್ಟ್​ ತೆಗೆದು ನೋಡಿದಾಗ ಸಿಕ್ಕಿಬಿದಿದ್ದಾರೆ.

ನಡೆದದ್ದಾರೂ ಏನು?

ಚಂದನ್, ಪವನ್ ಹಾಗೂ ಅಚಲ್ ಮೂವರು ಸ್ನೇಹಿತರು. ಕಳೆದ ತಿಂಗಳು ಮೂವರು ಚಿಕ್ಕಜಾಲದ ನೆಕ್ಸ್ಟ್ ಚಾಪ್ಟರ್ ಪಬ್​​ಗೆ ಹೋಗುತ್ತಾರೆ. ಈ ವೇಳೆ ಚಂದನ್​ಗೆ ಉಳಿದಿಬ್ಬರು ಸ್ನೇಹಿತರು ಕಂಠಪೂರ್ತಿ‌ ಕುಡಿಸುತ್ತಾರೆ. ನಂತರ ಪವನ್ ಹಾಗೂ ಅಚಲ್, ಚಂದನ್​​ ನನ್ನು ಕಾರಿನತ್ತ ಕರೆದುಕೊಂಡು ಬರುತ್ತಾರೆ. ಈ ವೇಳೆ ಅಚಲ್ ಜೆಪಿ ನಗರದ ಪ್ರೇಮ್ ಶೆಟ್ಟಿ ಹಾಗೂ ಆತನ ಗ್ಯಾಂಗ್​​ಗೆ ಫೋನ್ ಮಾಡಿ ಕರೆಸಿಕೊಳ್ಳುತ್ತಾನೆ. ಸ್ಥಳಕ್ಕೆ ಬಂದ ಗ್ಯಾಂಗ್​​ ಚಂದನ್​​ಗೆ ಹಿಗ್ಗಾಮುಗ್ಗು ಥಳಿಸಿ ಆತನ ಬಳಿಯಿದ್ದ ಚಿನ್ನಾಭರಣ ದೋಚುತ್ತಾರೆ.

ಇದನ್ನೂ ಓದಿ: ‘ಮನೇಲಿ ಯಾರಿಲ್ಲ ಬಾ’: ಪ್ರೇಯಸಿ ಮಾತಿಗೆ ಮರುಳಾಗಿ ಹೋದವ ಹೆಣವಾದ! ಕೊಲೆ ರಹಸ್ಯ ಕೊನೆಗೂ ಭೇದಿಸಿದ ಕಲಬುರಗಿ ಪೊಲೀಸರು

ಇದನ್ನೂ ಓದಿ
ಪ್ರೇಯಸಿ ಮಾತಿಗೆ ಮರುಳಾಗಿ ಹೋದವ ಹೆಣವಾದ! ಕಲಬುರಗಿ ಕೊಲೆ ರಹಸ್ಯ ಬಯಲು
ಖರ್ಚಿಗೆ ಹಣವಿಲ್ಲದಿದ್ದಾಗ ಖೋಟಾ ನೋಟ್ ಪ್ರಿಂಟ್ ಮಾಡಿದ ಉದ್ಯಮಿ ಮಗ
ಬೆಂಗಳೂರಿನಲ್ಲಿ 10 ಕೋಟಿ ರೂ. ಮೌಲ್ಯದ MDMA ಡ್ರಗ್ಸ್‌ ಜಪ್ತಿ!
ನೆಲಮಂಗಲ: ಲವರ್​ನ ಮದುವೆಯಾಗಲು ಮುಂದಾಗಿದ್ದ ಯುವಕನ ಕೊಲೆ

ಇತ್ತ ಹಲ್ಲೆಗೊಳಗಾದ ಚಂದನ್ ಚಿಕ್ಕಜಾಲ ಠಾಣೆಗೆ ಹೋಗಿ ದೂರು ನೀಡುತ್ತಾನೆ. ಅನುಮಾನಗೊಂಡ ಪೊಲೀಸರು ಅಚಲ್​​ ಕಾಲ್ ಹಿಸ್ಟರಿ ತೆಗೆದುನೋಡುತ್ತಾರೆ. ಆಗ ಸುಲಿಗೆ ಮಾಡಿದ್ದ ಪ್ರೇಮ್ ಶೆಟ್ಟಿ ಹಾಗೂ ಅಚಲ್​​ಗೂ ಲಿಂಕ್ ಇರುವುದು ಗೊತ್ತಾಗುತ್ತೆ. ಇತ್ತ ಪೊಲೀಸರಿಗೆ ಅನುಮಾನ ಬರುತ್ತಿದ್ದಂತೆ ಪವನ್ ಮತ್ತು ಅಚಲ್ ಪರಾರಿ ಆಗಿದ್ದಾರೆ. ಸದ್ಯ ಚಿಕ್ಕಜಾಲ ಪೊಲೀಸರಿಂದ ಆರೋಪಿಗಳಿಗಾಗಿ ಶೋಧ ನಡೆದಿದೆ.

ಸ್ನೇಹಿತರಿಂದಲ್ಲೇ ಸುಲಿಗೆ ಕಾರಣವೇನು?

ಇಂಜಿನಿಯರಿಂಗ್ ವಿದ್ಯಾರ್ಥಿ ಆಗಿರುವ ಚಂದನ್ ಹಾಗೂ ಆರೋಪಿಗಳು ಹಲವು ವರ್ಷಗಳಿಂದ ಸ್ನೇಹಿತರು. ಚಂದನ್​​ ಸಿರಿವಂತನಾಗಿದ್ದು, ಒಬ್ಬನೇ ಮಗ. ಮೈ, ಕೈ ತುಂಬಾ ಚಿನ್ನಾಭರಣ ಹಾಕಿಕೊಂಡು ಓಡಾಡುತ್ತಿದ್ದ. ಸುತ್ತಾಟಕ್ಕೆ ಎಂಜಿ ಹೆಕ್ಟರ್ ಕಾರನ್ನೇ ಬಳಸುತ್ತಿದ್ದ.

ಇದನ್ನೂ ಓದಿ: ಬೆಂಗಳೂರಿನಲ್ಲಿ 10 ಕೋಟಿ ರೂ. ಮೌಲ್ಯದ MDMA ಡ್ರಗ್ಸ್‌ ಜಪ್ತಿ: ಓದಲು ಬಂದವಳು ಪೆಡ್ಲರ್ ಆದಳು

ಅಚಲ್ ಹಾಗೂ ಪವನ್ ಈ ಎಲ್ಲಾ ಐಷಾರಾಮಿ ವಿಚಾರವನ್ನ ತಿಳಿದಿದ್ದರು. ಅಚಲ್ ಜೆಪಿ‌ ನಗರದಲ್ಲಿ ನಾನಾಸ್ ಕೆಫೆ ನಡೆಸುತ್ತಿದ್ದು, ಇತ್ತೀಚೆಗೆ ಅದು ನಷ್ಟದಲ್ಲಿ ನಡೆಯುತ್ತಿತ್ತು. ಸಾಲ ಹೆಚ್ಚಾಗಿದ್ದರಿಂದ ಚಂದನ್ ಮೇಲೆ ಕಣ್ಣುಬಿದ್ದಿತ್ತು. ಹಾಗಾಗಿ ಆತನ ಚಿನ್ನಾಭರಣವನ್ನ ಸುಲಿಗೆ ಮಾಡುವುದಕ್ಕೆ ಮುಂದಾಗುತ್ತಾನೆ. ಇಲ್ಲಿ ಪವನ್​ ಸ್ಕೆಚ್ ರೆಡಿ ಮಾಡಿದ್ದು, ಅವನ ಅಣತಿಯಂತೆ ಪಬ್​ಗೆ ಕರೆದೊಯ್ದು ಮತ್ತೊಂದು ಗ್ಯಾಂಗ್​ನಿಂದ ರಾಬರಿ‌ ಮಾಡಿಸಲಾಗಿತ್ತು.

ವರದಿ: ವಿಕಾಸ್​ ಟಿವಿ9 ಕ್ರೈಂ 

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.