AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಮತ್ತೆ ಕಾಣಿಸಿಕೊಳ್ಳಲಿವೆ ಹೋರ್ಡಿಂಗ್​ಗಳು: ಹೊಸ ನಿಯಮ ಜಾರಿ

ಏಳು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಹೋರ್ಡಿಂಗ್‌ಗಳಿಗೆ ಅನುಮತಿ ನೀಡಲಾಗಿದೆ. ಕರ್ನಾಟಕ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ರಸ್ತೆಯ ಅಗಲ, ಸ್ಥಳದ ಪ್ರಕಾರ ಜಾಹೀರಾತು ಅಳವಡಿಕೆಗೆ ಮಿತಿ ವಿಧಿಸಲಾಗಿದೆ. ದೇವಾಲಯ, ಮಸೀದಿ ಮುಂತಾದ ಧಾರ್ಮಿಕ ಸ್ಥಳಗಳು ಹಾಗೂ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಜಾಹೀರಾತು ನಿಷೇಧಿಸಲಾಗಿದೆ. ಹೊಸ ನೀತಿಯಡಿ ಟೆಂಡರ್ ಪ್ರಕ್ರಿಯೆ ಮೂಲಕ ಜಾಹೀರಾತು ಅವಕಾಶ ನೀಡಲಾಗುವುದು.

ಬೆಂಗಳೂರಿನಲ್ಲಿ ಮತ್ತೆ ಕಾಣಿಸಿಕೊಳ್ಳಲಿವೆ ಹೋರ್ಡಿಂಗ್​ಗಳು: ಹೊಸ ನಿಯಮ ಜಾರಿ
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ
|

Updated on: Jul 19, 2025 | 3:07 PM

Share

ಬೆಂಗಳೂರು, ಜುಲೈ 19: ಬೆಂಗಳೂರು (Bengaluru) ಮಹಾನಗರದಲ್ಲಿ ಏಳು ವರ್ಷಗಳ ಬಳಿಕ ಹೋರ್ಡಿಂಗ್​ಗಳು (Hoarding) ಮತ್ತೆ ಕಾಣಿಸಿಕೊಳ್ಳಲಿವೆ. ಸರ್ಕಾರವೇ ಏಳು ವರ್ಷಗಳ ಹಿಂದೆ ನಿಷೇಧ ಹೇರಿದ್ದ ಹೋರ್ಡಿಂಗ್​ ಬಳಕೆಗೆ ಮತ್ತೆ ಅನುಮತಿ ನೀಡಿದೆ. ಆದರೆ, ಈ ಬಾರಿ ಬೇಕಾಬಿಟ್ಟಿಯಾಗಿ ಹೋರ್ಡಿಂಗ್ಸ್ ಮತ್ತು ಜಾಹೀರಾತುಗಳ ಅಳವಡಿಕೆ ಇರುವುದಿಲ್ಲ. ತಮಗೆ ಬೇಕಾದ ಸ್ಥಳ, ಬೇಕಾದ ರೀತಿಯಲ್ಲೂ ಹೋರ್ಡಿಂಗ್ಸ್ ಮತ್ತು ಜಾಹೀರಾತು ಹಾಕುವ ಹಾಗಿಲ್ಲ. ಇದಕ್ಕಾಗಿ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ. ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಜಾಹೀರಾತು ಪ್ರದರ್ಶನಕ್ಕೆ ಹೊಸ ನಿಯಮ ಜಾರಿಗೆ ಮಾಡಲಾಗಿದೆ.

ನಿಯಮವೇನು?

18 ರಿಂದ 24 ಮೀಟರ್‌ವರೆಗಿನ ವಿಸ್ತೀರ್ಣದ ರಸ್ತೆಗಳಲ್ಲಿ ಪ್ರತಿ 200 ಮೀಟರ್‌ ಉದ್ದದವರೆಗೆ ಜಾಹೀರಾತು ಅಳವಡಿಸಲು ಅವಕಾಶ ನೀಡಲಾಗಿದೆ. 24 ಮೀಟರ್‌ನಿಂದ 30 ಮೀ.ವರೆಗಿನ ರಸ್ತೆಗಳಲ್ಲಿ 1000 ಚದರ ಅಡಿ, 30 ರಿಂದ 60 ಮೀ.ವರೆಗಿನ ರಸ್ತೆಗಳಲ್ಲಿ1100 ಚದರ ಅಡಿ, 60 ಮೀಟರ್‌ ಮೇಲ್ಪಟ್ಟ ರಸ್ತೆಗಳಲ್ಲಿ 1200 ಚದರ ಅಡಿ ಜಾಹಿರಾತು ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಮುಖ್ಯರಸ್ತೆಗಳು, ಕಟ್ಟಡಗಳ ಮೇಲೂ ಜಾಹೀರಾತು ಪ್ರದರ್ಶನ ಮಾಡಬಹುದು. ಕೆಲ ಸ್ಥಳಗಳಲ್ಲಿ ಮಾತ್ರ ಜಾಹೀರಾತಿಗೆ ಸರ್ಕಾರ ನಿಷೇಧ ಹೇರಿದೆ.

ಎಲ್ಲೆಲ್ಲಿ ಜಾಹೀರಾತು ಪ್ರದರ್ಶನ ನಿಷೇಧ?

  • ದೇವಾಲಯ, ಮಸೀದಿ, ಗುರುದ್ವಾರ, ಧಾರ್ಮಿಕ ಸ್ಥಳಗಳು
  • ಧಾರ್ಮಿಕ ಸ್ಥಳಗಳಿರುವ ರಸ್ತೆಗಳ ಮಧ್ಯದಿಂದ 50 ಮೀ. ಒಳಗೆ ಮತ್ತು ಧಾರ್ಮಿಕ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಂದ 100 ಮೀ ರಸ್ತೆಯಲ್ಲಿ ನಿಷೇಧ ಹೇರಲಾಗಿದೆ.
  • ಮೇಲ್ಸೇತುವೆ, ರೈಲ್ವೆ ಮೇಲ್ಸೇತುವೆ, ಎಲಿವೇಟೆಡ್‌ ಕಾರಿಡಾರ್‌
  • ಮೊಬೈಲ್‌ ಟವರ್‌ ಮತ್ತು ಕಟ್ಟಡಗಳ ಅಂಚಿನಿಂದ ಐದು ಮೀಟರ್‌ ಒಳಗೆ
  • ಭೂಮಿ ಮೇಲೆ ನಿರ್ಮಿಸಿರುವ ಜಲಮಂಡಳಿಯ ನೀರಿನ ಟ್ಯಾಂಕ್‌ ಮತ್ತು ಪ್ರಸರಣಾ ಗೋಪುರದಿಂದ 15 ಮೀ.ಒಳಗೆ
  • ಬಿಬಿಎಂಪಿ ನಿರ್ಬಂಧ ವಿಧಿಸುವ ಜಾಗಗಳಲ್ಲಿ ಜಾಹಿರಾತು ಹಾಕಲು ನಿಷೇಧ ಹೇರಲಾಗಿದೆ.

ರಾಜ್ಯ ಸರ್ಕಾರ2008 ರಿಂದ ಜಾಹೀರಾತು ಪ್ರದರ್ಶನ ನಿಷೇಧ ಹೇರಿತ್ತು. ಇದೀಗ ಜಾಹೀರಾತು ಮಾಫಿಯಾಗೆ ಮತ್ತೆ ಮಣೆ ಹಾಕಲಾಗಿದೆ. ಸರ್ಕಾರ ಆಗಸ್ಟ್​ನಲ್ಲಿ ಟೆಂಡರ್ ಕರೆಯಲಿದ್ದಾರೆ. ಹೊಸ ಜಾಹೀರಾತು ನೀತಿ ಪ್ರಕಾರ ಮಾರ್ಗಸೂಚಿ ದರದ ಮೇಲೆ ಜಾಹೀರಾತು ಶುಲ್ಕ ನಿಗದಿ ಮಾಡಲಾಗಿದೆ. ಟೆಂಡರ್‌ನಲ್ಲಿ ಭಾಗವಹಿಸಲು ಕಡ್ಡಾಯ 5 ಲಕ್ಷ ರೂ. ಶುಲ್ಕ ಪಾವತಿಸಬೇಕು. ಮುಖ್ಯವಾಗಿ ಪರಿಷರ ಸ್ನೇಹಿ ಇರುವ ವಸ್ತುಗಳನ್ನು ಬಳಕೆ ಮಾಡಿಕೊಳ್ಳಬೇಕು, ಅನಧಿಕೃತ ಜಾಹೀರಾತು ಪ್ರದರ್ಶನಕ್ಕೆ ಪಡೆದ ದರದ ಎರಡು ಪಟ್ಟು ದಂಡ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ
Image
ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ: ಜಾಹೀರಾತು ಮೊರೆ ಹೋದ BMRCL
Image
ಸಾರಿಗೆ ಬಸ್‌ಗಳಲ್ಲಿ ಜಾಹೀರಾತು: ಸಿಎಂ ಕಚೇರಿಯಿಂದ ಬಂತು ಖಡಕ್ ಸೂಚನೆ
Image
ನಮ್ಮ ಮೆಟ್ರೋಗೆ ಆದಾಯ ಕೊರತೆ: ಜಾಹೀರಾತು ಮೊರೆ ಹೋದ ಬಿಎಂಆರ್​ಸಿಎಲ್
Image
ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ ಜಾರಿ ಮಾಡಿದ ಸರ್ಕಾರ

ಅನಧಿಕೃತ ಜಾಹೀರಾತು ತೆರವು ಜವಾಬ್ದಾರಿಯನ್ನು ವಲಯ ಆಯುಕ್ತರಿಗೆ ನೀಡಲಾಗಿದೆ. ನಗರದಲ್ಲಿರುವ ಅಂಗಡಿಮಳಿಗೆಗಳು 150 ಚದರಡಿವರೆಗೆ ಉಚಿತವಾಗಿ ಜಾಹೀರಾತು ಫಲಕ ಅಳವಡಿಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಕೊನೆಗೂ ಮೆಟ್ರೋ ಹಳದಿ ಮಾರ್ಗ ಸಂಚಾರಕ್ಕೆ ಮುಹೂರ್ತ ಬಹುತೇಕ ಫಿಕ್ಸ್, ಮೋದಿಯಿಂದ ಚಾಲನೆ ಸಾಧ್ಯತೆ

ವಿಧಾನಸೌಧ, ಹೈಕೋರ್ಟ್, ಕುಮಾರಕೃಪ, ರಾಜಭವನ ಸುತ್ತಮುತ್ತ ಜಾಹೀರಾತು ನಿಷೇಧಿಸಲಾಗಿದೆ. ವಿಧಾನಸೌಧ, ಹೈಕೋರ್ಟ್, ಕುಮಾರ ಕೃಪಾ ರಸ್ತೆ, ರಾಜಭವನ ಸುತ್ತಮುತ್ತ, ಸ್ಯಾಂಕಿ ರಸ್ತೆ, ಪೋಸ್ಟ್​ ಆಫೀಸ್​ ರಸ್ತೆ, ಚಾಲುಕ್ಯ ವೃತ್ತ, ಮಹಾರಾಣಿ ಕಾಲೇಜು ರಸ್ತೆ, ಕೆಆರ್​ ವೃತ್ತ, ಕಬ್ಬನ್ ಪಾರ್ಕ್​, ಲಾಲ್​ ಬಾಗ್​ ಆವರಣ, ನೃಪತುಂಗ ರಸ್ತೆ, ಹಡ್ಸನ್​ ವೃತ್ತ, ಅರಮನೆ ರಸ್ತೆ ಹಾಗೂ ದೇವಸ್ಥಾನ, ಗುರುದ್ವಾರ, ಚರ್ಚ್​, ಮಸೀದಿಗೆ ಹೋಗುವ ರಸ್ತೆ ಮತ್ತು ಸುತ್ತಮುತ್ತಲಿಮ ಪ್ರದೇಶನದಲ್ಲಿ ಜಾಹೀರಾತು ಪ್ರದರ್ಶನ ನಿಷೇಧಿಸಲಾಗಿದೆ.

ವರದಿ: ಶಾಂತಮೂರ್ತಿ, ಟವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ