AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ಪಕ್ಕದಲ್ಲಿ ಮಲಗಿದ್ದ ನಾಯಿಯ ಮೇಲೆ ಕಾರು ಹತ್ತಿಸಿದ ವ್ಯಕ್ತಿ; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಬೆಂಗಳೂರಿನಲ್ಲಿ ರಸ್ತೆ ಪಕ್ಕದಲ್ಲಿ ಮಲಗಿದ್ದ ನಾಯಿಯ ಮೇಲೆ ವ್ಯಕ್ತಿಯೊಬ್ಬ ಕಾರು ಹತ್ತಿಸಿ ದರ್ಪ ಮೆರೆದಿದ್ದಾನೆ.

ರಸ್ತೆ ಪಕ್ಕದಲ್ಲಿ ಮಲಗಿದ್ದ ನಾಯಿಯ ಮೇಲೆ ಕಾರು ಹತ್ತಿಸಿದ ವ್ಯಕ್ತಿ; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ರಸ್ತೆಯಲ್ಲಿ ಮಲಗಿರುವ ಸಿಸಿಟಿವಿ ದೃಶ್ಯ
ಆಯೇಷಾ ಬಾನು
|

Updated on:Mar 13, 2023 | 1:46 PM

Share

ಬೆಂಗಳೂರು: ಬೆಂಗಳೂರಿನ ಹೊರಮಾವು(Horamavu) ಬಳಿಯ ಬಂಜಾರ ಲೇಔಟ್​ನಲ್ಲಿ(Banjara Layout) ಅಮಾನವೀಯ ಘಟನೆ ನಡೆದಿದೆ. ರಸ್ತೆ ಪಕ್ಕದಲ್ಲಿ ಮಲಗಿದ್ದ ನಾಯಿಯ (Dog) ಮೇಲೆ ವ್ಯಕ್ತಿಯೊಬ್ಬ ಕಾರು ಹತ್ತಿಸಿ ದರ್ಪ ಮೆರೆದಿದ್ದಾನೆ.

ವ್ಯಕ್ತಿ ತನ್ನ ಕಾರಿನಲ್ಲಿ ಅಪಾರ್ಟ್‍ಮೆಂಟ್​ಗೆ ಹೋಗುವಾಗ ಮುಂಭಾಗದ ಗೇಟ್ ಬಳಿ ನಾಯಿ ಮಲಗಿರುವುದನ್ನು ನೋಡಿದ್ದಾನೆ. ನಾಯಿ ಇರುವುದು ಗೊತ್ತಿದ್ದರೂ ಸಹ ನಾಯಿಯ ಮೇಲೆಯೇ ಕಾರು ಹತ್ತಿಸಿಕೊಂಡು ಹೋಗಿದ್ದಾನೆ. ಕಾರು ನಾಯಿಯ ಮೇಲೆ ಹತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಂಭೀರವಾಗಿ ಗಾಯಗೊಂಡ ನಾಯಿ ಕಂಡ ಸಾರ್ವಜನಿಕರು ಕಾರು ಚಾಲಕನಿಗೆ ಹಿಡಿ ಶಾಪ ಹಾಕಿದ್ದಾರೆ.

ಕಾರು ಹತ್ತಿಸಿದ ವ್ಯಕ್ತಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಸಮೇತ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಲಾಗಿದೆ. ರಾಮಮೂರ್ತಿ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಕೃತ್ಯ ಎಸಗಿದ ವ್ಯಕ್ತಿ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿ ಬಂದಿದೆ.

ಇದನ್ನೂ ಓದಿ: ನೆಲಮಂಗಲ: ವ್ಯಕ್ತಿಯಿಂದ ಸ್ಮಶಾನ ಜಾಗ ಒತ್ತುವರಿ ಆರೋಪ; ಗ್ರಾಮಸ್ಥರಿಂದ ಆಕ್ರೋಶ

ಚಾರ್ಜ್​ ಹಾಕಿದ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗಾಹುತಿ

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದ ಮನೆಯಲ್ಲಿ ಚಾರ್ಜ್​ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗಾಹುತಿಯಾಗಿದೆ. ಮನೆಯಲ್ಲಿದ್ದ 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಗೃಹೋಪಯೋಗಿ ವಸ್ತುಗಳು ಭಸ್ಮವಾಗಿವೆ.

ಕಳೆದ 6 ತಿಂಗಳ ಹಿಂದಷ್ಟೆ ಮದ್ದೂರಿನಲ್ಲಿ E-ROUTE ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಗ್ರಾಮದ ಮುತ್ತುರಾಜ್ ಎಂಬುವವರು ಖರೀದಿಸಿದ್ದರು. ಮನೆಯಲ್ಲಿ ಸ್ಕೂಟರ್ ಚಾರ್ಜ್ ಗೆ ಹಾಕಿದ್ದ ಸ್ವಲ್ಪ ಹೊತ್ತಿನಲ್ಲೇ ಸ್ಟೋಟಗೊಂಡಿದೆ. ಸ್ಫೋಟದ ರಭಸಕ್ಕೆ ಮನೆಯ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಮನೆಯಲ್ಲಿದ್ದ ಟಿವಿ, ಫ್ರಿಡ್ಜ್, ವಾಶಿಂಗ್ ಮಿಷನ್ ಸೇರಿ ಅನೇಕ ವಸ್ತುಗಳು ಸುಟ್ಟ ಭಸ್ಮವಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ಧವಸ ಧಾನ್ಯಗಳು ನಾಶವಾಗಿವೆ. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:30 pm, Mon, 13 March 23