ಬೆಂಗಳೂರು, ಜನವರಿ 17: ಗಣರಾಜ್ಯೋತ್ಸವ ದಿನಾಚರಣೆ (Republic Day) ಪ್ರಯುಕ್ತ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ (Lal Bagh) ಫಲಪುಷ್ಪ ಪ್ರದರ್ಶನ (Flower Show) ಆರಂಭವಾಗಿದೆ. ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಗಣ್ಯವ್ಯಕ್ತಿಗಳು, ಸಾರ್ವಜನಿಕರು, ಪ್ರವಾಸಿಗರು ಹಾಗೂ ಶಾಲಾ ವಿದ್ಯಾರ್ಥಿಗಳನ್ನೊಳಗೊಂಡಂತೆ ಸುಮಾರು 8 ರಿಂದ 10 ಲಕ್ಷ ಜನ ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರಿ ಪೊಲೀಸರು (Bengaluru City Traffic Police) ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ, ಪಾರ್ಕಿಂಗ್ ನಿಷೇಧಿಸಿದ್ದಾರೆ. ಯಾವ್ಯಾವ ರಸ್ತೆಯಲ್ಲಿ ಸಂಚಾರ ಮತ್ತು ಪಾರ್ಕಿಂಗ್ ನಿಷೇಧ, ಪರ್ಯಾಯ ಮಾರ್ಗ ಇಲ್ಲಿದೆ ವಿವರ.
10ನೇ ಕ್ರಾಸ್ ಡಾ. ಮರಿಗೌಡ ರಸ್ತೆ: ಡೈರಿ ಸರ್ಕಲ್ ಕಡೆಯಿಂದ ಲಾಲ್‌ಬಾಗ ಕಡೆಗೆ ಬರುವ ವಾಹನಗಳಿಗೆ ನಿರ್ಬಂಧಿಸಲಾಗಿದೆ.
ಲಾಲ್‌ಬಾಗ್ ರಸ್ತೆ, ಊರ್ವಶಿ ಜಂಕ್ಷನ್: ಸುಬ್ಬಯ್ಯ ಸರ್ಕಲ್ ಕಡೆಯಿಂದ ಲಾಲ್‌ಬಾಗ್ ಮುಖ್ಯ ದ್ವಾರದ ಕಡೆಗೆ ಬರುವ ವಾಹನಗಳಿಗೆ ನಿರ್ಬಂಧಿಸಲಾಗಿದೆ.
ಸಿದ್ದಯ್ಯ ರಸ್ತೆ ಕಡೆಯಿಂದ ಲಾಲ್‌ಬಾಗ್ ಮುಖ್ಯ ದ್ವಾರದ ಕಡೆಗೆ ಬರುವ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ.
10ನೇ ಕ್ರಾಸ್ ಡಾ. ಮರಿಗೌಡ ರಸ್ತೆ
ಡೈರಿ ಸರ್ಕಲ್ ಕಡೆಯಿಂದ ಲಾಲ್‌ಬಾಗ ಕಡೆಗೆ ಬರುವ ವಾಹನಗಳು 10ನೇ ಕ್ರಾಸ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಸಿ.ಟಿ ಮಾರ್ಕೇಟ್, ಮೆಜಿಸ್ಟಿಕ್, ಕಡೆಗೆ ಎಲ್ಸನ್ ಗಾರ್ಡನ್ ಮುಖ್ಯ ರಸ್ತೆಯ ಹಾಗೂ ಬಿಟಿಎಸ್ ರಸ್ತೆಯ ಮುಖಾಂತರ ಬಿಎಮ್ಟಿಸಿ (ಕೆ.ಹೆಚ್) ರಸ್ತೆಯ ಕಡೆಗೆ ಸಂಪರ್ಕಿಸಬಹುದಾಗಿದೆ.
ಊರ್ವಶಿ ಜಂಕ್ಷನ್, ಲಾಲ್‌ಬಾಗ್ ರಸ್ತೆ
ಸುಬ್ಬಯ್ಯ ಸರ್ಕಲ್ ಕಡೆಯಿಂದ, ಸಿಟಿ ಮಾರ್ಕೇಟ್ ಕಡೆಯಿಂದ, ಲಾಲ್ಬಾಗ, ಜಯನಗರ, ಎಲೇಕ್ಟ್ರಾನಿಕ್ ಸಿಟಿ, ಹೊಸೂರು ಕಡೆ ಸಂಚರಿಸುವ ವಾಹನಗಳು ಊರ್ವಶಿ ಜಂಕ್ಷನ್‌ನಲ್ಲಿ ನೇರ ಹಾಗೂ ಎಡ ತಿರುವು ಪಡೆದು ಸಿದ್ದಯ್ಯ ರಸ್ತೆಯ ಮುಖಾಂತರ ಸಂಚರಿಸಿ ಡಾ. ಮಂಗೌಡ ರಸ್ತೆಗೆ ಸಂಪರ್ಕಿಸಬಹುದಾಗಿದೆ.
ವಾಹನಗಳ ನಿಲುಗಡೆ ನಿಷೇಧಿಸಿರುವ ರಸ್ತೆಗಳು
ಲಾಲ್‌ಬಾಗ್ ಮುಖ್ಯ ದ್ವಾರ ಬಳಿ
ಲಾಲ್ ಬಾಗ್ ಪೂರ್ವ ದ್ವಾರ: (ಕೆ.ಹೆಚ್ ಸರ್ಕಲ್)
ಕೆ.ಹೆಚ್ ರಸ್ತೆಯ ಕಡೆಯಿಂದ ಹಾಗೂ ಡಾಕಿ ಮರಿಗೌಡ ರಸ್ತೆಯ ಕಡೆಯಿಂದ ಬರುವ ವಾಹನೆಗಳು ಲಾಲ್‌ಬಾಗ್ ಪೂರ್ವ ದ್ವಾರದ ಬಳಿ.
ಎನ್.ಟಿ.ಪೇಟೆಯ 1ನೇ ಮತ್ತು 2ನೇ ಮುಖ್ಯರಸ್ತೆ ಹಾಗೂ ಅಡ್ಡ ರಸ್ತೆಗಳಲ್ಲಿ ಬಿಬಿಎಂಪಿ ವೈಟ್ ಟ್ಯಾಪಿಂಗ್ ಕಾಮಗಾರಿ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಎನ್.ಟಿ ಪೇಟೆ 1ನೇ ಮತ್ತು 2ನೇ ಮುಖ್ಯರಸ್ತೆಗಳಲ್ಲಿ ಜನವರಿ 13 ರಿಂದ ಫೆಬ್ರವರಿ ರವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಪಿ.ಎಂ.ಕೆ ರಸ್ತೆಯಿಂದ ಮೈಸೂರು ರಸ್ತೆಗೆ ಹೋಗುವ ವಾಹನ ಸವಾರರು ಮಿಂಟೊ ಜಂಕ್ಷನ್ ಬಳಿ ಎಡ ತಿರುವನ್ನು ಪಡೆದು ಎವಿ ರಸ್ತೆಯಲ್ಲಿ ಚಲಿಸಿ ಹೊಸದಾಗಿ ನಿರ್ಮಿಸಿರುವ ಚಾಮರಾಜಪೇಟೆ ಸಂಚಾರ ಪೊಲೀಸ್ ಠಾಣೆಯ ಬಳಿ ಬಲ ತಿರುವು ಪಡೆದು ಮೈಸೂರು ರಸ್ತೆಗೆ ಸಂಪರ್ಕ ಪಡೆದು ಸಂಚರಿಸಬಹುದಾಗಿದೆ.
ಪಿ.ಎಂ.ಕೆ ರಸ್ತೆಯಿಂದ ಮೆಜೆಸ್ಟಿಕ್ ಕಡೆಗೆ ಸಂಚರಿಸುವ ವಾಹನ ಸವಾರರು ಮಿಂಟೊ ಜಂಕ್ಷನ್ ಬಳಿ ಬಲ ತಿರುವನ್ನು ಪಡೆದು ಎ.ವಿ ರಸ್ತೆಯ ಮೂಲಕ ಮೆಡಿಕಲ್ ಕಾಲೇಜು ಜಂಕ್ಷನ್ ಬಳಿ ಎಡ ತಿರುವನ್ನು ಪಡೆದು ಕೆ.ಆರ್ ರಸ್ತೆಯ ಮೂಲಕ ಮೆಜೆಸ್ಟಿಕ್ ಕಡೆಗೆ ಸಂಪರ್ಕ ಹೋಗಬಹುದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ