AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೀಸ್ ಮನೆ ಕೊಡಿಸುವುದಾಗಿ ನಂಬಿಸಿ 200 ಕೋಟಿ ರೂ. ವಂಚನೆ: ಜಾನ್ಸ್ ಅಸೆಟ್ ಕಂಪನಿ ಮಾಲೀಕ ಎಸ್ಕೇಪ್!

ಮನೆಗಳನ್ನು ಲೀಸ್​ಗೆ ಕೊಡಿಸುವುದಾಗಿ ನಂಬಿಸಿ ಸುಮಾರು 300 ಗ್ರಾಹಕರಿಗೆ 200 ಕೋಟಿಗೂ ಅಧಿಕ ಹಣ ವಂಚಿಸಿರುವ ಜಾನ್ಸ್ ಅಸೆಟ್ ಕಂಪನಿಯ ಹಗರಣ ಬೆಳಕಿಗೆ ಬಂದಿದೆ. ಲೀಸ್ ಹಣವನ್ನು ಇನ್ವೆಸ್ಟ್‌ಮೆಂಟ್ ಆಗಿ ಬದಲಾಯಿಸಿ ವಂಚಿಸಿರುವ ಮಾಲೀಕ ಸ್ಟೀಫನ್ ಅರ್ಥರ್ ಕಚೇರಿ ಮುಚ್ಚಿ ಎಸ್ಕೇಪ್ ಆಗಿದ್ದು, ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲೀಸ್ ಮನೆ ಕೊಡಿಸುವುದಾಗಿ ನಂಬಿಸಿ 200 ಕೋಟಿ ರೂ. ವಂಚನೆ: ಜಾನ್ಸ್ ಅಸೆಟ್ ಕಂಪನಿ ಮಾಲೀಕ ಎಸ್ಕೇಪ್!
ಲೀಸ್ ಮನೆ ಕೊಡಿಸುವುದಾಗಿ ನಂಬಿಸಿ 200 ಕೋಟಿ ರೂ. ವಂಚನೆ
Shivaprasad B
| Edited By: |

Updated on: May 18, 2026 | 10:23 AM

Share

ಬೆಂಗಳೂರು, ಮೇ 18: ನಗರದಲ್ಲಿ ಮನೆಗಳನ್ನು ಲೀಸ್​ಗೆ (Lease) ಪಡೆಯಲು ಬಯಸುವವರನ್ನೇ ಟಾರ್ಗೆಟ್ ಮಾಡಿ ಬರೋಬ್ಬರಿ 200 ಕೋಟಿ ರೂ.ಗೂ ಅಧಿಕ ಹಣ ವಂಚಿಸಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಜಾನ್ಸ್ ಅಸೆಟ್ (Johns Asset) ಎಂಬ ಮಿಡಿಯೇಟರ್ ಕಂಪನಿಯು ಸುಮಾರು 300ಕ್ಕೂ ಹೆಚ್ಚು ಜನರಿಗೆ ಮಕ್ಮಲ್ ಟೋಪಿ ಹಾಕಿದ್ದು, ಕಂಪನಿ ಮಾಲೀಕ ಪರಾರಿಯಾಗಿದ್ದಾನೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಮನೆ ಲೀಸ್​ಗೆ ಪಡೆಯುವವರನ್ನು ಟಾರ್ಗೆಟ್ ಮಾಡಿ ಭಾರಿ ವಂಚನೆ ನೆಡೆದಿದೆ.
  • ಜಾನ್ಸ್ ಅಸೆಟ್ ಕಂಪನಿಯು 300 ಜನರಿಗೆ 200 ಕೋಟಿಗೂ ಅಧಿಕ ವಂಚಿಸಿದೆ.
  • ಇಂದಿರಾನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಾಲೀಕ ಸ್ಟೀಫನ್ ಅರ್ಥರ್ ಸದ್ಯ ಎಸ್ಕೇಪ್.

ವಂಚನೆ ನೆಟ್‌ವರ್ಕ್ ಹೇಗೆ ಕೆಲಸ ಮಾಡ್ತಿತ್ತು?

ನಗರದಲ್ಲಿ ಇತ್ತೀಚೆಗೆ ಲೀಸ್ ಮನೆಗಳ ಕೊರತೆ ಇರುವುದನ್ನು ಬಂಡವಾಳ ಮಾಡಿಕೊಂಡ ಈ ಕಂಪನಿ, ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿತ್ತು. ನಿಮ್ಮ ಲೀಸ್ ಹಣವನ್ನು ನಮಗೆ ಕೊಡಿ, ನಾವು ನಿಮಗಾಗಿ ಮನೆ ಹುಡುಕಿ ಅದರ ಮಾಸಿಕ ಬಾಡಿಗೆಯನ್ನು ನಾವೇ ಪಾವತಿಸುತ್ತೇವೆ ಎಂದು ನಂಬಿಸುತ್ತಿತ್ತು. ಹಣವೂ ಉಳಿಯುತ್ತದೆ, ಬಾಡಿಗೆ ಕೊಡುವುದೂ ತಪ್ಪುತ್ತದೆ ಎಂದು ನಂಬಿದ ಸಾರ್ವಜನಿಕರಿಂದ ತಲಾ 10ರಿಂದ 75 ಲಕ್ಷ ರೂಪಾಯಿವರೆಗೆ ಹಣ ವಸೂಲಿ ಮಾಡಲಾಗಿತ್ತು. ಆರಂಭದ ಕೆಲವು ತಿಂಗಳು ಬಾಡಿಗೆ ಪಾವತಿಸಿ, ನಂತರ ಕಂಪನಿ ಕಳ್ಳಾಟ ಶುರು ಮಾಡಿದೆ.

ಲೀಸ್ ಹಣವನ್ನೇ ಇನ್ವೆಸ್ಟ್‌ಮೆಂಟ್ ಮಾಡಿಸಿ ವಂಚನೆ!

ಗಾಯಿತ್ರಿ ಎಂಬ ಸಂತ್ರಸ್ತೆ ತಮಗೆ ಆದ ವಂಚನೆ ಬಗ್ಗೆ ಮಾಹಿತಿ ನೀಡಿದ್ದು, ಅವರಿಂದಲೇ 37 ಲಕ್ಷ ರೂಪಾಯಿ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಮನೆ ಮಾಲೀಕರು ಮನೆ ಖಾಲಿ ಮಾಡಲು ಹೇಳಿದಾಗ ಗಾಯಿತ್ರಿ ಅವರು ಕಂಪನಿಯ ಬಳಿ ಹಣ ವಾಪಸ್ ಕೇಳಲು ಹೋಗಿದ್ದರು. ಈ ವೇಳೆ ಕಂಪನಿಯು ಹಣ ನೀಡದೆ, ಆ ಮೊತ್ತವನ್ನು ತಮ್ಮಲ್ಲೇ ಇನ್ವೆಸ್ಟ್ ಮಾಡಿದರೆ ತಿಂಗಳಿಗೆ ಶೇ4ರಷ್ಟು ಬಡ್ಡಿ ನೀಡುವುದಾಗಿ ಆಸೆ ತೋರಿಸಿತ್ತು. ಇದನ್ನು ನಂಬಿ ಇನ್ವೆಸ್ಟ್‌ಮೆಂಟ್ ಆಗಿ ಬದಲಾಯಿಸಿಕೊಂಡ ಗಾಯಿತ್ರಿಗೆ ಕೇವಲ ಎರಡು ತಿಂಗಳು ಹಣ ನೀಡಿ ಆಮೇಲೆ ಕಂಪನಿ ಕೈಕೊಟ್ಟಿದೆ.

ಇದನ್ನೂ ಓದಿ ಕಿಟಕಿ ಸರಳು ಮುರಿದು ಉಗಾಂಡದ ನಾಲ್ವರು ಮಹಿಳೆಯರು ಎಸ್ಕೇಪ್; ಮತ್ತೆ ಡ್ರಗ್ಸ್ ದಂಧೆಗೆ ಇಳಿಯುವ ಆತಂಕ!

ಮಾಲೀಕ ಎಸ್ಕೇಪ್

ಸದ್ಯ ಕಂಪನಿಯನ್ನು ಕ್ಲೋಸ್ ಮಾಡಿ ಅದರ ಮಾಲೀಕ ಸ್ಟೀಫನ್ ಅರ್ಥರ್ ಎಂಬಾತ ಕೋಟ್ಯಂತರ ರೂಪಾಯಿ ಹಣದೊಂದಿಗೆ ಎಸ್ಕೇಪ್ ಆಗಿದ್ದಾನೆ. ಸಂತ್ರಸ್ತರು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹಣ ಕಳೆದುಕೊಂಡು ಕಂಗಾಲಾಗಿ ಠಾಣೆಯ ಅಲೆಯುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Shivaprasad B
Shivaprasad B