ಬೆಂಗಳೂರು: ಹೋಳಿ ಆಚರಣೆ ನಂತರ ಹಲವರಲ್ಲಿ ಚರ್ಮ, ಕಣ್ಣಿನ ಸಮಸ್ಯೆ; ವೈದ್ಯರು ಹೇಳುವುದೇನು?

ರಾಜ್ಯಾದ್ಯಂತ ಜನರು ಹೋಳಿ ಆಚರಣೆ ಮಾಡಿದ್ದಾರೆ. ಬೆಂಗಳೂರಿನಲ್ಲೂ ಅದ್ದೂರಿಯಾಗಿ ಆಚರಿಸಲಾಗಿದೆ. ಆದರೆ, ಹೋಳಿ ಆಚರಿಸಿದ ನಂತರ ಕಣ್ಣಿನ ಸಮಸ್ಯೆ ಮತ್ತು ಚರ್ಚದ ಸಮಸ್ಯೆ ಎಂದು ಹೇಳಿಕೊಂಡು ಹಲವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ. ಆದರೆ, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಇಂತಹ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಕಡಿಮೆಯಾಗಿದೆ.

ಬೆಂಗಳೂರು: ಹೋಳಿ ಆಚರಣೆ ನಂತರ ಹಲವರಲ್ಲಿ ಚರ್ಮ, ಕಣ್ಣಿನ ಸಮಸ್ಯೆ; ವೈದ್ಯರು ಹೇಳುವುದೇನು?
ಬೆಂಗಳೂರು: ಹೋಳಿ ಆಚರಣೆ ನಂತರ ಹಲವರಲ್ಲಿ ಚರ್ಮ, ಕಣ್ಣಿನ ಸಮಸ್ಯೆ; ವೈದ್ಯರು ಹೇಳುವುದೇನು?Image Credit source: Getty Images
Follow us
Rakesh Nayak Manchi
|

Updated on: Mar 28, 2024 | 8:23 AM

ಬೆಂಗಳೂರು, ಮಾ.28: ನಗರದಲ್ಲಿ (Bengaluru) ಹೋಳಿ (Holi) ಆಚರಣೆಯ ನಂತರ ಹಲವರು ಚರ್ಮ (Skin) ಮತ್ತು ಕಣ್ಣಿನ ಸಮಸ್ಯೆಯಿಂದ (Eye Problem) ಬಳಲಿದ ಪ್ರಕರಣಗಳು ನಡೆದಿವೆ. ಕಿರಿಕಿರಿ, ತುರಿಕೆ ಮತ್ತು ಕಣ್ಣು ಕೆಂಪಾಗುವಿಕೆಯಂತಹ ಸಮಸ್ಯೆ ಎಂದು ಹೇಳಿಕೊಂಡು ಆಸ್ಪತ್ರೆಗೆ ಬಂದಿದ್ದಾರೆ ಎಂದು ಖಾಸಗಿ ಕಣ್ಣಿನ ಆಸ್ಪತ್ರೆಗಳ ಸಮೂಹದ ವೈದ್ಯರು ಹೇಳಿದ್ದಾರೆ. ಆದಾಗ್ಯೂ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ಹೋಳಿ ಆಚರಣೆ ವೇಳೆ ಕಣ್ಣಿನೊಳಗೆ ಬಣ್ಣ ಹೋಗಿ ಉಂಟಾದ ಕಿರಿಕಿರಿಯಿಂದಾಗಿ ನಮ್ಮ ಆಸ್ಪತ್ರೆಗೆ ನಾಲ್ಕು ಜನರು ಭೇಟಿ ನೀಡಿದ್ದಾರೆ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ ​​(PHANA) ಉಪಾಧ್ಯಕ್ಷ ಮತ್ತು ಹಿರಿಯ ನೇತ್ರತಜ್ಞ ಡಾ ರಾಜಶೇಖರ್ ವೈಎಲ್ ಹೇಳಿದ್ದಾಗಿ ಸುದ್ದಿಸಂಸ್ಥೆ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ತಮ್ಮ ಕಣ್ಣುಗಳಿಂದ ಬಣ್ಣವನ್ನು ಹೊರಹಾಕಲು ಕಣ್ಣು ಶುಚಿಗೊಳಿಸುವ ಸಣ್ಣ ಕಾರ್ಯವಿಧಾನಕ್ಕೆ ಒಳಗಾಗಿದ್ದಾರೆ ಎಂದು ಅವರು ಹೇಳಿದ್ದಾಗಿ ವರದಿ ಮಾಡಿದೆ.

ಇದನ್ನೂ ಓದಿ: Viral Video: ಹೋಳಿ ಹೆಸರಲ್ಲಿ ರಸ್ತೆಯಲ್ಲಿ ಯುವತಿಯರಿಬ್ಬರ ಅಸಭ್ಯ ವರ್ತನೆ; 33,000 ರೂ ದಂಡ​​

ನಗರದ ಖಾಸಗಿ ಕಣ್ಣಿನ ಆಸ್ಪತ್ರೆಗಳ ಸಮೂಹದ ಸಲಹೆಗಾರರಾದ ಡಾ. ಪೂಜಾ ಖಮರ್ ಮತ್ತು ಡಾ. ಜ್ಯೋತಿ ಮಟಾಲಿಯಾ, ಐವರು ಸ್ವಲ್ಪ ಪ್ರಮಾಣದ ಕಿರಿಕಿರಿ, ತುರಿಕೆ ಮತ್ತು ಕೆಂಪಾಗುವಿಕೆಯೊಂದಿಗೆ ಬರುವುದನ್ನು ನೋಡಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಕಳೆದ ವರ್ಷ ಈ ಸಂಖ್ಯೆ ಎರಡಂಕಿಯಲ್ಲಿತ್ತು. ಈ ವರ್ಷ ಒಂದಂಕಿಗೆ ಇಳಿಕೆಯಾಗಿದೆ ಎಂದರು.

ಐವರು ಕಾಂಟ್ಯಾಕ್ಟ್ ಡರ್ಮಟೈಟಿಸ್‌ನಿಂದ ಬಳಲುತ್ತಿದ್ದಾರೆ. ಇದು ಹೋಳಿ ಬಣ್ಣಗಳಲ್ಲಿನ ರಾಸಾಯನಿಕಗಳಿಂದ ಉಂಟಾಗುವ ಚರ್ಮದ ದದ್ದು ಎಂದು ಇಂದಿರಾನಗರದಲ್ಲಿ ಖಾಸಗಿ ಪ್ರಾಕ್ಟೀಸ್ ನಡೆಸುತ್ತಿರುವ ಚರ್ಮರೋಗ ತಜ್ಞೆ ಡಾ.ಶ್ವೇತಾ ಗೌಡ ಹೇಳಿದ್ದಾರೆ. ವ್ಯಕ್ತಿಯೊಬ್ಬರ ಕೈ ಮತ್ತು ಅಂಗೈಯಲ್ಲಿ ಕೆಂಪು ಬಣ್ಣ ಮತ್ತು ಗುಳ್ಳೆಗಳು ಎದ್ದಿರುವುದಾಗಿ ತಿಳಿಸಿದರು. ಕಡಿಮೆ ರಾಸಾಯನಿಕಗಳೊಂದಿಗೆ ಸಾವಯವ ಬಣ್ಣಗಳನ್ನು ಬಳಸುತ್ತಿದ್ದಾರೆ. ಹೀಗಾಗಿ ಕಳೆದ ಕೆಲವು ವರ್ಷಗಳಿಂದ ಚರ್ಮದ ಕಿರಿಕಿರಿಯಿಂದ ಬರುವ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ