ಮಂಜುಗಡ್ಡೆಯಲ್ಲಿ ಮೂಡಿಬಂದ ಕಲಾಕೃತಿಗಳು; ಬೇಸಿಗೆಯ ಬೇಗೆಯ ನಡುವೆ ತಂಪನ್ನೆರೆಯುತ್ತಿದೆ ಸ್ನೋ ಸಿಟಿ
ಬೆಂಗಳೂರಿನಲ್ಲಿರುವ ಸ್ನೋ ಸಿಟಿಯಲ್ಲಿ ಮಂಜುಗಡ್ಡೆಗಳ ಸಹಾಯದಿಂದ ಕಲಾಕೃತಿಗಳನ್ನು ನಿರ್ಮಿಸಲಾಗಿದ್ದು ಜನರು ಫಿದಾ ಆಗಿದ್ದಾರೆ. ಸ್ನೋ ಸಿಟಿಗೆ ಬರುವವರ ಸಂಖ್ಯೆ ಕೂಡ ಹೆಚ್ಚಾಗಿದ್ದು ನಗರದ ಬಿಸಿಲಿನ ಬೇಗೆಗೆ ತಂಪಾಗಿ ಎಂಜಾಯ್ ಮಾಡ್ತಿದ್ದಾರೆ. 5 ರಿಂದ 8 ಡಿಗ್ರಿ ಉಷ್ಣಾಂಶವಿರುವ ಮಂಜುಗಡ್ಡೆಯಲ್ಲಿ ಕೆತ್ತನೆ ಕೆಲಸ ಮಾಡಿ ಮಾಯಾ ಲೋಕವನ್ನೇ ಸೃಷ್ಟಿಸಲಾಗಿದೆ.