AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋ ಪ್ರಯಾಣಿಕರಿಗೆ ಕ್ರಿಸ್ಮಸ್, ಹೊಸ ವರ್ಷದ ಗಿಫ್ಟ್: 12 ನಿಮಿಷಕ್ಕೊಂದರಂತೆ ಸಂಚರಿಲಿದೆ ಯೆಲ್ಲೋ ಲೈನ್ ಮೆಟ್ರೋ

Namma Metro Yellow Line: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಆರನೇ ರೈಲು ಸಂಚಾರ ಇದೇ 22 ರಿಂದ ಆರಭವಾಗುವ ಸಾಧ್ಯತೆ ಇದೆ. ಇದರಿಂದಾಗಿ ಪ್ರತಿ 12 ನಿಮಿಷಕ್ಕೊದರಂತೆರೈಲುಗಳು ಸಂಚಾರ ಮಾಡಲಿವೆ. ಆದರೆ, ಯೆಲ್ಲೋ ಲೈನ್​ನಲ್ಲಿ ಬೆಳಗ್ಗೆ 6ಕ್ಕೆ ಶುರುವಾಗುವ ಮೆಟ್ರೋ ಸಂಚಾರ ಅದೇ ರೀತಿ ಮುಂದುವರಿಯಲಿದೆ ಎಂದು ಬಿಎಂಆರ್​​ಸಿಎಲ್ ಮೂಲಗಳು ತಿಳಿಸಿವೆ.

ಮೆಟ್ರೋ ಪ್ರಯಾಣಿಕರಿಗೆ ಕ್ರಿಸ್ಮಸ್, ಹೊಸ ವರ್ಷದ ಗಿಫ್ಟ್: 12 ನಿಮಿಷಕ್ಕೊಂದರಂತೆ ಸಂಚರಿಲಿದೆ ಯೆಲ್ಲೋ ಲೈನ್ ಮೆಟ್ರೋ
ಸಾಂದರ್ಭಿಕ ಚಿತ್ರ
Ganapathi Sharma
|

Updated on: Dec 11, 2025 | 9:15 AM

Share

ಬೆಂಗಳೂರು, ಡಿಸೆಂಬರ್ 11: ನಮ್ಮ ಮೆಟ್ರೋ ಯೆಲ್ಲೋ ಲೈನ್ (Namma Metro Yellow Line) ಪ್ರಯಾಣಿಕರಿಗೆ ಬಿಎಂಆರ್​ಸಿಎಲ್ (BMRCL) ಕ್ರಿಸ್ಮಸ್, ಹೊಸ ವರ್ಷದ ಉಡುಗೊರೆ ನೀಡಿದೆ. ಡಿಸೆಂಬರ್ 22 ರಿಂದ ಹಳದಿ ಮಾರ್ಗ ಮೆಟ್ರೋದಲ್ಲಿ ಆರನೇ ರೈಲು ಸಂಚಾರ ಆರಂಭಿಸುವ ಸಾಧ್ಯತೆ ದಟ್ಟವಾಗಿದೆ. ಇದರಿಂದ ಹಳದಿ ಮಾರ್ಗದಲ್ಲಿ ರೈಲುಗಳು ಪ್ರತಿ 12 ನಿಮಿಷಗಳಿಗೊಮ್ಮೆ ಸಂಚಾರ ಮಾಡಲಿವೆ. ನವೆಂಬರ್ ಕೊನೆಯ ವಾರದಲ್ಲಿ ಆರು ಬೋಗಿಗಳ ಆರನೇ ರೈಲನ್ನು ಬಿಎಂಆರ್‌ಸಿಎಲ್ ಸ್ವೀಕರಿಸಿತ್ತು. ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್‌ ಜತೆಗಿನ ಒಪ್ಪಂದದ ಅಡಿಯಲ್ಲಿ ಟಿಟಾಘರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (ಟಿಆರ್‌ಎಸ್‌ಎಲ್) ಕೋಲ್ಕತ್ತಾ ಬಳಿ ಈ ಬೋಗಿಗಳನ್ನು ತಯಾರಿಸಿದೆ. ಒಪ್ಪಂದದ ಭಾಗವಾಗಿ ಟಿಆರ್‌ಎಸ್‌ಎಲ್ ಒಟ್ಟು 36 ರೈಲುಗಳನ್ನು 1,578 ಕೋಟಿ ರೂ.ಗಳಿಗೆ ಪೂರೈಸುತ್ತಿದೆ.

ಆರನೇ ರೈಲು ಪ್ರಯಾಣಿಕರ ಸೇವೆಗೆ ಲಭ್ಯವಾಗುವ ಮೊದಲು ಸಿಗ್ನಲಿಂಗ್ ಇಂಟರ್ಫೇಸ್ ಟೆಸ್ಟ್​ಗಳ ಜೊತೆಗೆ 750 ಕಿಮೀ ಸಂಚಾರವನ್ನು ಪೂರ್ಣಗೊಳಿಸಬೇಕಾಗಿದೆ. ಕ್ರಿಸ್‌ಮಸ್‌ಗೆ ಮುಂಚಿತವಾಗಿ, ಡಿಸೆಂಬರ್ 22 ರಂದು ರೈಲು ಸಂಚಾರ ಆರಂಭಿಸಲು ಪ್ರಯತ್ನಗಳು ನಡೆಯುತ್ತಿವೆ ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಮ್ಮ ಮೆಟ್ರೋ ಹಳದಿ ಲೈನ್​ನಲ್ಲಿ ಬೆಳಗ್ಗೆ 5ಕ್ಕೇ ಶುರುವಾಗುತ್ತಾ ಸಂಚಾರ?

ಪೀಕ್-ಅವರ್ ಸಂಚಾರವನ್ನು ಪ್ರತಿ 12 ನಿಮಿಷಕ್ಕೆ ಒಂದರಂತೆ ಮಾಡಿದರೂ ಬೆಳಗ್ಗೆ ಸಂಚಾರ ಶುರುವಾಗುವ ಸಮಯ ಯಥಾಪ್ರಕಾರ (ಬೆಳ್ಗೆ 6 ಗಂಟೆ) ಮುಂದುವರಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ನಮ್ಮ ಮೆಟ್ರೋದ ಇತರ ಮಾರ್ಗಗಳಲ್ಲಿ ಬೆಳಗ್ಗೆ 5ಕ್ಕೇ ಮೆಟ್ರೋ ರೈಲು ಸಂಚಾರ ಆರಂಭವಾಗುತ್ತದೆ.

ಇದನ್ನೂ ಓದಿ: ನಿಗದಿತ ಅವಧಿಯೊಳಗೆ ಮೆಟ್ರೋ ನೀಲಿ ಮಾರ್ಗ ಕಾಮಗಾರಿ ಮುಗಿಯಬೇಕು, ಇಲ್ಲವಾದ್ರೆ ಮುಂದೆ ಕಾಮಗಾರಿ ನೀಡಲ್ಲ: ಗುತ್ತಿಗೆದಾರರಿಗೆ ಡಿಸಿಎಂ ಎಚ್ಚರಿಕೆ

19.15 ಕಿ.ಮೀ. ಉದ್ದದ ಆರ್‌ವಿ ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆಗಸ್ಟ್ 11 ರಿಂದ ಆರಂಭವಾಗಿದೆ. ಇದು ಮೆಟ್ರೋದ ದೈನಂದಿನ ಪ್ರಯಾಣಿಕರ ಸಂಖ್ಯೆಯನ್ನು 10 ಲಕ್ಷ ದಾಟುವಂತೆ ಮಾಡಿದೆ. ಆದರೆ ಹಳದಿ ಮಾರ್ಗದಲ್ಲಿ ಕಡಿಮೆ ರಲುಗಳ ಸಂಚಾರ ಮತ್ತು ಬೆಳಗ್ಗೆ ತಡವಾಗಿ ಪ್ರಾರಂಭವಾಗುವ ಬಗ್ಗೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪ್ರಸ್ತುತ ಮೆಟ್ರೋ ಹಳದಿ ಲೈನ್​​ನಲ್ಲಿ ಪೀಕ್-ಅವರ್​​ನಲ್ಲಿ 15 ನಿಮಿಷಕ್ಕೆ ಒಂದರಂತೆ ರೈಲುಗಳು ಸಂಚರಿಸುತ್ತವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ