ಬೆಂಗಳೂರು, ಡಿಸೆಂಬರ್ 08: ಹೊಸ ವರ್ಷವನ್ನು (New Year) ಸ್ವಾಗತಿಸಲು ಜನರು ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ರೆಸ್ಟೋರೆಂಟ್ ಮತ್ತು ಪಬ್ಗಳು ಹೊಸ ವರ್ಷಕ್ಕೆ ಆಶ್ಚರ್ಯಕರ ಆಫರ್ಗಳನ್ನು ನೀಡಲು ಸಿದ್ದವಾಗಿವೆ. ಎಂಜಿ ರೋಡ್, ಬ್ರಿಗೇಡ್ ರೋಡ್ ಮತ್ತು ಕೋರಮಂಗಲದ ಪಬ್ಗಳಲ್ಲಿ ಪಾರ್ಟಿ ಮಾಡಿ, ನಶೆಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಆದರೆ, ನೀವೇನಾದರು ನಶೆಯಲ್ಲಿ ಹೊರಗಡೆ ಓಡಾಡಿದರೆ ಪೊಲೀಸರ (Police) ಕೈಯಲ್ಲಿ ಲಾಕ್ ಆಗುವುದು ಪಕ್ಕಾ.
ಹೌದು, ಬೆಂಗಳೂರು ನಗರ ಪೊಲೀಸರು ಮತ್ತು ಸಿಸಿಬಿ ಪೊಲೀಸರು ಡ್ರಗ್ಸ್ ಜಾಲದ ಮೇಲೆ ಕಣ್ಣಿಟ್ಟಿದ್ದು, ಈಗಾಗಲೆ ಹಲವು ಕಡೆ ದಾಳಿ ಮಾಡಿ, ಕೋಟ್ಯಾಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದೀಗ, ಮಾದಕ ವಸ್ತು ಅಥವಾ ಮದ್ಯಪಾನ ಮಾಡಿ ರಸ್ತೆಗಳಲ್ಲಿ ಸುತ್ತಾಡುವರನ್ನು ಪತ್ತೆ ಹಚ್ಚಲು ಪೊಲೀಸರು ತಪಾಸಣಾ ಕಿಟ್ವೊಂದನ್ನು ಖರೀದಿಸಿದ್ದಾರೆ.
ಹೊಸ ವರ್ಷ ಸಂಭ್ರಮಾಚರಣೆ ಒಂದು ವಾರಕ್ಕೂ ಮುಂಚೆಯೇ ತಪಾಸಣೆ ಆರಂಭಿಸಲಿದ್ದಾರೆ. ಅನುಮಾನ ಬಂದವರನ್ನು ತಪಾಸಣೆಗೆ ಒಳಪಡಿಸುತ್ತಾರೆ. ಈ ಕಿಟ್ನಿಂದ ಕ್ಷಣಾರ್ಧದಲ್ಲೇ ವರದಿ ಬರಲಿದೆ. ಈ ತಪಾಸಣಾ ಕಿಟ್ ಏಕಕಾಲದಲ್ಲಿ ಆರು ಟೆಸ್ಟಿಂಗ್ ರಿಪೋರ್ಟ್ ನೀಡುತ್ತದೆ. ಮೆತ್ ಆಂಫೆಟಮೈನ್, ಕೊಕೇನ್, ಓಪಿಐಓಡಿಎಸ್ ಸೇರಿದಂತೆ ಆರು ಮಾದಕ ದ್ರವ್ಯಗಳನ್ನು ತಪಾಸಣೆ ನಡೆಸಲಿದೆ. ಮಧ್ಯಪಾನ ಸೇರಿದಂತೆ ಗಾಂಜಾಸೇವನೆ, ಡ್ರಗ್ ಸೇವನೆ ವರದಿ ನೀಡಲಿದೆ.
ಇದನ್ನೂ ಓದಿ: ಅಂಚೆ ಇಲಾಖೆ ಮೂಲಕ ಬೆಂಗಳೂರಿಗೆ ಬರ್ತಾಯಿದೆ ವಿದೇಶಿ ಡ್ರಗ್ಸ್: 21 ಕೋಟಿ ರೂ ಮೌಲ್ಯದ ಡ್ರಗ್ಸ್ ವಶಕ್ಕೆ
ಈಗಾಗಲೆ ಪೊಲೀಸರ 120ಕ್ಕೂ ಹೆಚ್ಚು ಡ್ರಗ್ ವ್ಯಸನಿಗಳ ಮೇಲೆ ಕಣ್ಣು ಇಟ್ಟಿದ್ದಾರೆ. ಹಾಗೇ, ಡ್ರಗ್ಸ್ ಪೆಡ್ಲರ್ಗಳ ಮೇಲೂ ಹದ್ದಿನ ಕಣ್ಣಿಟ್ಟಿದ್ದಾರೆ. 21 ವರ್ಷದ ಒಳಗಿರುವ ಯುವಕ, ಯುವತಿಯರ ಮೇಲೆ ನಿಗಾ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. 21 ವರ್ಷದ ಒಳಗಿನ ಯುವಕ, ಯುವತಿಯರು ಪಬ್ ಅಥವಾ ಬಾರ್ಗೆ ಪ್ರವೇಶಿಸಿದರೇ, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗಾಂಜಾ ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಬಸವನಗೌಡನ ಬಂಧಿತ ಆರೋಪಿ. 218ಗ್ರಾಂ ಗಾಂಜಾ, ಬೈಕ್ ಜಪ್ತಿ ಮಾಡಲಾಗಿದೆ. ಅಬಕಾರಿ ಇನ್ಸ್ಪೆಕ್ಟರ್ ವಿಠ್ಠಲ ಪೀರಣ್ಣನವರ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಅಬಕಾರಿ ಪೊಲೀಸರು ಎನ್ಡಿಪಿಎಸ್ ಕಾಯ್ದೆಯಡಿ ಕೇಸ್ ದಾಖಲಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:27 am, Sun, 8 December 24