Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಲಿನ ಬೇಗೆ: KMF ಉತ್ಪನ್ನಗಳಿಗೆ ಭಾರಿ ಬೇಡಿಕೆ, ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದಲ್ಲಿ ಮಾರಾಟ

ಬಿರು ಬಿಸಿಲಿನಿಂದ ಹೈರಾಣಾಗುತ್ತಿರುವ ಬೆಂಗಳೂರಿನ ಜನತೆ ತಂಪು ಪಾನಿಯಗಳತ್ತ ಮುಖ ಮಾಡಿದ್ದಾರೆ. ವಿಶೇಷವಾಗಿ ಕೆಎಂಎಫ್​​ನ ಮೊಸರು, ಮಜ್ಜಿಗೆ, ಐಸ್​ ಕ್ರೀಂಗಳನ್ನು ಹೆಚ್ಚಾಗಿ ಕೊಂಡುಕೊಳ್ಳುತ್ತಿದ್ದಾರೆ. ಇದರಿಂದ ಕೆಎಂಎಫ್​ಗೆ ಅಧಿಕ ಲಾಭವಾಗುತ್ತಿದೆ. ಹಾಗಿದ್ದರೆ ಕೆಎಂಎಫ್​​ನ ಯಾವ ಉತ್ಪನ್ನ ಬೆಂಗಳೂರಿನಲ್ಲಿ ಎಷ್ಟು ಮಾರಾಟವಾಗಿದೆ? ಇಲ್ಲಿದೆ ಮಾಹಿತಿ..

ಬಿಸಿಲಿನ ಬೇಗೆ: KMF ಉತ್ಪನ್ನಗಳಿಗೆ ಭಾರಿ ಬೇಡಿಕೆ, ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದಲ್ಲಿ ಮಾರಾಟ
ಕೆಎಂಎಫ್​ ಉತ್ಪನ್ನಗಳು
Follow us
Poornima Agali Nagaraj
| Updated By: ವಿವೇಕ ಬಿರಾದಾರ

Updated on:Apr 20, 2024 | 11:11 AM

ಬೆಂಗಳೂರು ಏಪ್ರಿಲ್​ 20: ರಾಜಾಧಾನಿ ಬೆಂಗಳೂರಿನಲ್ಲಿ (Bengaluru) ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಜಾಸ್ತಿಯಾಗುತ್ತಿದೆ.‌ ಹೀಗಾಗಿ ಜನರು ಮೊಸರು, ಮಜ್ಜಿಗೆ ತೆಗದುಕೊಳ್ಳಲು ಹೆಚ್ಚು ಮುಂದಾಗುತ್ತಿದ್ದು, ಈ ವರ್ಷದ ಬೇಸಿಗೆಯಲ್ಲಿ‌‌ ಕರ್ನಾಟಕ ಹಾಲು ಒಕ್ಕೂಟ (KMF)​ಗೆ ಭರ್ಜರಿ ವ್ಯಾಪಾರವಾಗುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..

ಬಿಸಿಲಿನ ತಾಪ ತಾಳಲಾರದೆ ಬೆಂಗಳೂರು ಮಂದಿ ತಂಪು ಪಾನಿಯಗಳತ್ತ ಮುಖ ಮಾಡುತ್ತಿದ್ದಾರೆ. ಹಣ್ಣಿನ ಜ್ಯೂಸ್​ಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕೆಎಂಎಫ್​​ನ ನಂದಿನಿ ಮೊಸರು, ಮಜ್ಜಿಗೆ, ಐಸ್ ಕ್ರೀಮ್​ಗಳಿಗೆ ಫುಲ್ ಡಿಮ್ಯಾಂಡ್ ಬಂದಿದೆ. ಒಂದೇ ದಿನ ಬೆಂಗಳೂರಿನಲ್ಲಿ 16 ಲಕ್ಷ ಲೀಟರ್​ ಮೊಸರು ಮಾರಾಟವಾಗಿದ್ದು, ಕೆಎಂಎಫ್ ಇತಿಹಾಸದಲ್ಲೇ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ.

ಕೆಎಂಎಫ್​ ಮೊದಲು ಪ್ರತಿದಿನ 42 ಲಕ್ಷ ಲೀಟರ್ ಹಾಲು ಮಾರಾಟ ಮಾಡುತ್ತಿತ್ತು. ಆದರೆ ಈ ವರ್ಷ 47 ಲಕ್ಷ ಲೀಟರ್​ನಷ್ಟು ಹಾಲು ಮಾರಾಟವಾಗುತ್ತಿದೆ. ಇನ್ನು ಮೊಸರು ಮೊದಲು ಪ್ರತಿದಿನ 10 ಲಕ್ಷ ಲೀಟರ್​ನಷ್ಟು ಮಾರಾಟವಾಗುತ್ತಿತ್ತು. ಆದರೆ ಈ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಕಳೆದ ಎರಡು ತಿಂಗಳಿನಿಂದ ನಂದಿನಿ ಮೊಸರಿಗೆ ಡಿಮ್ಯಾಂಡ್ ಜಾಸ್ತಿಯಾಗಿದ್ದು, ಏಪ್ರಿಲ್​ 6ನೇ ತಾರೀಖಿನಂದು 13.56 ಲಕ್ಷ ಲೀಟರ್ ಮೊಸರು ಮಾರಾಟವಾಗಿದೆ. ಆದರೆ ರಾಮನವಮಿಯ ದಿನದಂದು ಈ ದಾಖಲೆ ಮುರಿದಿದ್ದು, ಒಟ್ಟು 16 ಲಕ್ಷ ಲೀಟರ್​​ದಷ್ಟು ಮೊಸರು ಮಾರಾಟವಾಗಿದೆ. ಕೆಎಂಎಫ್ ಇತಿಹಾಸದಲ್ಲೆ ಇದು ದಾಖಾಲೆಯ ಮಾರಟವಾಗಿದೆ.

ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ನಂದಿನಿ ಮಜ್ಜಿಗೆಗೆ ಬಂತು ಭಾರೀ ಬೇಡಿಕೆ, ಕೆಎಂಎಫ್ ಹೇಳೋದೇನು ನೋಡಿ

ಈ ಹಿಂದೆ ಮಜ್ಜಿಗೆ ಹಾಗೂ ಲಸ್ಸಿ ಪ್ರತಿದಿನ 1.10 ಲಕ್ಷ ಲೀಟರ್ ನಷ್ಟು ಮಾರಾಟ ಆಗುತ್ತಿತ್ತು. ‌ಆದರೆ ಈ ವರ್ಷ ಒಂದೂವರೆ‌ ಲಕ್ಷ ಲೀಟರ್​ನಷ್ಟು ಮಾರಾಟವಾಗುತ್ತಿದೆ. ಇನ್ನು, ಐಸ್ ಕ್ರೀಮ್ ಶೇ 36 ರಷ್ಟು ಮಾರಾಟವಾಗುತ್ತಿದ್ದು, ಒಟ್ಟು 16 ಸಾವಿರ ಲೀಟರ್ ಮಾರಾಟ ಆಗಿತ್ತು. ಈ ವರ್ಷದ ಬೇಸಿಗೆಯಲ್ಲಿ ಒಟ್ಟು 25,439 ಲೀಟರ್ ಐಸ್ ಕ್ರೀಮ್ ಮಾರಾಟವಾಗಿದ್ದು, ಕೆಎಂಎಫ್ ಭರ್ಜರಿ ಲಾಭವನ್ನು ಪಡೆಯುತ್ತಿದೆ. ಈ ಬಿಸಿಲು ಹೀಗೆ ಮುಂದುವರಿದರೇ ಇನ್ನು ಹೆಚ್ಚು ನಂದಿನಿ‌ ಉತ್ಪನ್ನಗಳು ಮಾರಾಟ ಆಗುವ ಸಾಧ್ಯತೆ ಇದ್ದು, ಎಲ್ಲಿಯೂ ಕೊರತೆಯಾಗದಂತೆ ನಂದಿನಿ ಉತ್ಪನ್ನಗಳನ್ನ ಪೂರೈಕೆ ಮಾಡಲು ಇಲಾಖೆ ಮುಂದಾಗಿದೆ.

ನಂದಿನಿ ಉತ್ಪನ್ನಗಳ ಬೆಲೆ

ಮಜ್ಜಿಗೆ – 9 ರೂ.

ಅರ್ಧ ಲೀಟರ್ ಮೊಸರು – 26 ರೂ.

ಸ್ಪೇಷಲ್ ಹಾಲಿಗೆ – 25 ರೂ.

ಸಾಮಾನ್ಯ ಹಾಲು – 22 ರೂ.

1 ಲೀಟರ್ ಹಾಲಿಗೆ – 44 ರೂ

ಕಪ್ ಐಸ್ – 10 ರೂ.

ಕೋನ್ ಐಸ್ – 15 ರೂ.

ಚಾಕೊಲೇಟ್ – 40 ರೂ.

ಬಟರ್ ಸ್ಕಾಟ್- 30 ರೂ.

ಟೆಂಡರ್ ಕೊಕನೆಟ್ – 50 ರೂ.

ಲಸ್ಸಿ – 20 ರೂ.

ಬಾದಮಿ ಹಾಲು – 25 ರೂ.

ಮಿಲ್ಕ್ ಶೇಕ್ – 35 ರೂ.

ಮ್ಯಾಂಗೋ ಲಸ್ಸಿ – 25 ರೂ.

ಜ್ಯೂಸ್ ಬೆಲೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ‌. 100 ರೂ. ಕೊಟ್ಟು ಜ್ಯೂಸ್ ಕುಡಿಯುವ ಬದಲು 10 ರೂಪಾಯಿ‌ ಕೊಟ್ಟು ಮಜ್ಜಿಗೆ ಕೊಡಿಯುವುದು ಒಳಿತು.‌‌ ಅದೇ 100 ರೂ‌ನಲ್ಲಿ ಮೊಸರು ತೆಗೆದುಕೊಂಡು ಹೋದರೆ ಮನೆಯವರೆಲ್ಲ ಮಜ್ಜಿಗೆ ಕುಡಿಯಬಹುದು.‌ ನಂದಿನಿ ಉತ್ಪನ್ನಗಳು ಆರೋಗ್ಯಕ್ಕೆ ಒಳ್ಳೆಯದು ಅಂತ ಬೆಂಗಳೂರು ಜನರು ಹೇಳುತ್ತಿದ್ದಾರೆ.‌

ಒಟ್ಟಿನಲ್ಲಿ, ಬಿಸಿಲು ಜಾಸ್ತಿಯಾಗಿರುವುದರಿಂದ ತಂಪು ಪಾನಿಯಗಳ ಬೆಲೆ ಗಗನಕ್ಕೆ ಏರಿಕೆಯಾಗಿದ್ದು, ಬೆಲೆ ಕಡಿಮೆ ಇರುವ ನಂದಿನಿ ಉತ್ಪನ್ನಗಳಿಗೆ ಜನರು ಡಿಮ್ಯಾಂಡ್ ಮಾಡುತ್ತಿದ್ದು, ಈ ವರ್ಷ ಬೇಸಿಗೆಯಲ್ಲಿ ಕೆಎಂಎಫ್ ಹೊಸ ದಾಖಾಲೆಯನ್ನು ಬರೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:58 am, Sat, 20 April 24