ಆಗಸ್ಟ್‌ 15ರಂದು ಹಲವಾರು ಕಾರ್ಯಕ್ರಮಗಳು ಆಯೋಜನೆ: ಸಂಚಾರ ದಟ್ಟಣೆ ನಿಯಂತ್ರಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ಪ್ಲ್ಯಾನ್‌

ಸ್ವಾತಂತ್ರ್ಯ ದಿನಾಚರಣೆ ದಿನ ಯಾವ ಯಾವ ರಸ್ತೆಯಲ್ಲಿ ಯಾವ ಸಮಯದಲ್ಲಿ ಸಂಚಾರ ಅವೈಡ್ ಮಾಡಬೇಕು ಅನ್ನೋದ್ರ ಬಗ್ಗೆ ಸಂಚಾರಿ ಪೊಲೀಸ್ ಆಯುಕ್ತರು ಸುತ್ತೋಲೆ ಪ್ರಕಟಿಸಿದ್ದಾರೆ.

ಆಗಸ್ಟ್‌ 15ರಂದು ಹಲವಾರು ಕಾರ್ಯಕ್ರಮಗಳು ಆಯೋಜನೆ: ಸಂಚಾರ ದಟ್ಟಣೆ ನಿಯಂತ್ರಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ಪ್ಲ್ಯಾನ್‌
ಟ್ರಾಫಿಕ್ ಪೊಲೀಸರು
TV9kannada Web Team

| Edited By: Ayesha Banu

Aug 13, 2022 | 9:55 PM

ಬೆಂಗಳೂರು: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಪಾದಯಾತ್ರೆಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಆಗಸ್ಟ್ 15ರಂದು ಮಧ್ಯಾಹ್ನ 2 ಗಂಟೆಗೆ ಮೆಜೆಸ್ಟಿಕ್ ಬಳಿಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪಾದಯಾತ್ರೆ ಆರಂಭವಾಗಿ ಕೆ.ಆರ್.ವೃತ್ತ, ಹಡ್ಸನ್ ಸರ್ಕಲ್, ಜೆ.ಸಿ.ರಸ್ತೆ, ಮಿನರ್ವ ವೃತ್ತ, ವಿ.ವಿ.ಪುರಂ ವೃತ್ತ ಮಾರ್ಗವಾಗಿ ಫ್ರೀಡಂ ಮಾರ್ಚ್ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ತಲುಪಲಿದೆ. ಫ್ರೀಡಂ ಮಾರ್ಚ್ನಲ್ಲಿ 1.5 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗುವ ನಿರೀಕ್ಷೆ ಇದೆ. ಅಲ್ಲದೆ ಆಗಸ್ಟ್ 15 ರಂದು ಹಲವು ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿದೆ. ಹೀಗಾಗಿ ಆಗಸ್ಟ್ 15ರ ಸೋಮವಾರದಂದು ಭಾರೀ ಟ್ರಾಫಿಕ್ ಬಿಸಿ ತಟ್ಟಲಿದ್ದು ಬೆಂಗಳೂರು ಟ್ರಾಫಿಕ್ ಪೊಲೀಸರು ಟ್ರಾಫಿಕ್ ಕಂಟ್ರೋಲ್ಗೆ ಪ್ಲಾನ್ ಮಾಡಿಕೊಂಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ದಿನ ಯಾವ ಯಾವ ರಸ್ತೆಯಲ್ಲಿ ಯಾವ ಸಮಯದಲ್ಲಿ ಸಂಚಾರ ಅವೈಡ್ ಮಾಡಬೇಕು ಅನ್ನೋದ್ರ ಬಗ್ಗೆ ಸಂಚಾರಿ ಪೊಲೀಸ್ ಆಯುಕ್ತರು ಸುತ್ತೋಲೆ ಪ್ರಕಟಿಸಿದ್ದಾರೆ. ಬೆಳಗ್ಗೆ 6.30 ರಿಂದ 8 ಗಂಟೆವರೆಗೆ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ ಸಂಚಾರದಲ್ಲಿ ದಟ್ಟಣೆ ಸಾಧ್ಯತೆ ಇದೆ.

ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಹೆಚ್ಎಂಟಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಾಧ್ಯತೆ ಇದೆ.

ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ವಿಠಲ್ ನಾಗರಾಜ ರಸ್ತೆ, ರಾಜ್ ಕುಮಾರ್ ರಸ್ತೆ, ತುಮಕೂರು ರಸ್ತೆ, ಶೇಷಾದ್ರಿ ರಸ್ತೆಯಲ್ಲಿ ಸಂಚಾರ ದಟ್ಟಣೆಯಾಗಲಿದೆ.

ಇದನ್ನೂ ಓದಿ: ಆಗಸ್ಟ್ 15ರಂದು ಕಾಂಗ್ರೆಸ್ನಿಂದ ಬೃಹತ್ ಫ್ರೀಡಂ ಮಾರ್ಚ್: ವಾಹನ ಸವಾರರಿಗೆ ತಟ್ಟಲಿದೆ ಭಾರೀ ಟ್ರಾಫಿಕ್ ಬಿಸಿ

ಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ನೃಪತುಂಗ ರಸ್ತೆ, ಎನ್ ಆರ್ ರೋಡ್, ಜೆ.ಸಿ ರೋಡ್, ಜಿ.ಟಿ ರೋಡ್, ಎಲ್.ಪಿ.ಟಿ ರೋಡ್, ಕೆ.ಜಿ ರೋಡ್, ಗಾಂಧಿ ನಗರ 5th ಮುಖ್ಯ ರಸ್ತೆಯಲ್ಲಿ ಸಂಚರಿಸದಂತೆ ಸೂಚನೆ ನೀಡಲಾಗಿದೆ.

ಮಧ್ಯಾಹ್ನ 12ರಿಂದ 3 ಗಂಟೆ ವರೆಗೆ ಆನಂದ್ ರಾವ್ ಸರ್ಕಲ್‌ ನಿಂದ ಸುಬೇದಾರ್ ಚತ್ರಂ ರಸ್ತೆ, ಗೂಡ್ ಶೆಡ್ ರೋಡ್ ನಿಂದ ಟಿ.ಎಮ್. ಸಿ ರಾಯನ್ ರೋಡ್, ಮೆಜೆಸ್ಟಿಕ್ ಪ್ಲಾಟ್ ಫಾರ್ಮ್ ರೋಡ್ ನಿಂದ ಸಂಗೋಳ್ಳಿ ರಾಯಣ್ಣ ಸರ್ಕಲ್, ಬಿನ್ನಿಪೇಟೆ – ಹುಣಸೇಮರ ಜಂಕ್ಷನ್ ನಿಂದ ಗೂಡ್ ಶೆಡ್ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಶೇಷಾದ್ರಿ ರಸ್ತೆ, ಸೌತ್ ಎಂಡ್ ರಸ್ತೆಯಿಂದ ಲಾಲ್ ಬಾಗ್ ಪಶ್ಚಿಮ‌ ಗೇಟ್, ಮಿನರ್ವ ಸರ್ಕಲ್ ನಿಂದ ಟೌನ್ ಹಾಲ್ ಕಡೆಗೆ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ.

ಮಧ್ಯಾಹ್ನ 12 ಗಂಟೆಯಿಂದ 4 ಗಂಟೆವರೆಗೆ ಶೇಷ್ಮಾಲ್ ಜಂಕ್ಷನ್ ನಿಂದ ರಾಮಕೃಷ್ಣ ಆಶ್ರಮ ಸರ್ಕಲ್, ಬುಲ್ ಟೆಂಪಲ್ ರಸ್ತೆ ಮಂಜುನಾಥ ಕಲ್ಯಾಣ ಮಂಟಪದಿಂದ ಉಮಾ ಥಿಯೇಟರ್ ಕಡೆಗೆ, ಕೆ.ಆರ್ ರಸ್ತೆ ಡಿಎಮ್ ಜಂಕ್ಷನ್‌ ನಿಂದ ಶಿವಶಂಕರ್ ಸರ್ಕಲ್‌ವರೆಗೆ, ಡಯಾಗನಕ್ ರೋಡ್ ಹೋಮ್ ಸ್ಕೂಲ್ ಜಂಕ್ಷನ್ ನಿಂದ ವಾಸವಿ ರಸ್ತೆ ಮತ್ತು ನ್ಯಾಶನಲ್ ಕಾಲೇಜ್ ರಸ್ತೆ ವರೆಗೆ ಸಂಚಾರ ಹೆಚ್ಚಿರಲಿದ್ದು ಈ ರಸ್ತೆಗಳಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡಲು ಬೆಂಗಳೂರು ಸಂಚಾರಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada