ಬೆಂಗಳೂರಿನಲ್ಲಿ ಎಟಿಎಂನಿಂದ 17 ಲಕ್ಷ ಎಗರಿಸಿ ಎಸ್ಕೇಪ್ ಆಗಿದ್ದ ಇಬ್ಬರು ಅರೆಸ್ಟ್!

ಬಂಧಿತ ಆರೋಪಿಗಳಿಗೆ ಪ್ರಮುಖ ನಗರಗಳ ಎಟಿಮ್​ಗಳೇ ಹಾಟ್ ಸ್ಪಾಟ್ ಆಗಿತ್ತು. ಗ್ಯಾಸ್ ಕಟರ್ ಸಹಾಯದಿಂದ ಬರೋಬ್ಬರಿ 17 ಲಕ್ಷ ಹಣವನ್ನು ಕದ್ದಿದ್ದರು.

ಬೆಂಗಳೂರಿನಲ್ಲಿ ಎಟಿಎಂನಿಂದ 17 ಲಕ್ಷ ಎಗರಿಸಿ ಎಸ್ಕೇಪ್ ಆಗಿದ್ದ ಇಬ್ಬರು ಅರೆಸ್ಟ್!
ಬಂಧಿತ ಆರೋಪಿಗಳು
Edited By: sandhya thejappa

Updated on: Oct 23, 2021 | 4:20 PM

ಬೆಂಗಳೂರು: ಎಟಿಎಂಗೆ (ATM) ಕನ್ನ ಹಾಕಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಮರ್ಜಿತ್ ಸಿಂಗ್ ಹಾಗೂ ರಾಜ್ಕುಮಾರ್ ಎಂಬುವವರನ್ನು ಬೆಂಗಳೂರಿನ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಫ್ಲೈಟ್ನಲ್ಲಿ ಬಂದು ಓಯೋ ರೂಂನಲ್ಲಿದ್ದು ಹಣ ಎಗರಿಸಲು ಸ್ಕೆಚ್ ಹಾಕುತ್ತಿದ್ದರು. ಉತ್ತರಹಳ್ಳಿಯ ಕೆನರಾ ಬ್ಯಾಂಕ್ ಎಟಿಎಂಗೆ ಕನ್ನ ಹಾಕಿದ್ದರು. ಗ್ಯಾಸ್ ಕಟರ್ ಬಳಸಿ ಸುಮಾರು 17 ಲಕ್ಷ ರೂ. ಹಣ ಎಗರಿಸಿ ಪರಾರಿಯಾಗಿದ್ದರು.

ಬಂಧಿತ ಆರೋಪಿಗಳಿಗೆ ಪ್ರಮುಖ ನಗರಗಳ ಎಟಿಮ್​ಗಳೇ ಹಾಟ್ ಸ್ಪಾಟ್ ಆಗಿತ್ತು. ಗ್ಯಾಸ್ ಕಟರ್ ಸಹಾಯದಿಂದ ಬರೋಬ್ಬರಿ 17 ಲಕ್ಷ ಹಣವನ್ನು ಕದ್ದಿದ್ದರು. ಬಂಧಿತ ಆರೋಪಿಗಳ ಮೇಲೆ ಬ್ಯಾಟರಾಯನಪುರ, ಸುಬ್ರಹ್ಮಣ್ಯಪುರ ಠಾಣೆ ಮತ್ತು ಪೀಣ್ಯ ಠಾಣೆಯಲ್ಲಿ ಎಟಿಎಮ್ ದೋಚಿದ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಗಳನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸರಣಿ ಕಳ್ಳತನ
ಯಾದಗಿರಿ ತಾಲೂಕಿನ ಸೈದಾಪುರದಲ್ಲಿ ಸರಣಿ ಕಳ್ಳತನ ನಡೆದಿದೆ. ಬೀಗ ಮುರಿದು 6 ಮನೆಗಳಲ್ಲಿ ಕಳ್ಳತನ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಶಿಕ್ಷಕಿ ಸುಧಾ ಎಂಬುವವರ ಮನೆಯಲ್ಲಿ 150 ಗ್ರಾಂ ಚಿನ್ನಾಭರಣ, 120 ಗ್ರಾಂ ಬೆಳ್ಳಿ ವಸ್ತುಗಳು ಕಳ್ಳತನವಾಗಿದೆ. ಪರ್ವತರೆಡ್ಡಿ ಎಂಬುವವರ ಮನೆಯಲ್ಲಿ 60 ಸಾವಿರ ನಗದು ಕಳ್ಳತನವಾಗಿದೆ. ಇನ್ನುಳಿದ 4 ಮನೆಗಳಲ್ಲಿ ಬೆಲೆಬಾಳುವ ವಸ್ತುಗಳು ಕಳುವಾಗಿವೆ.

ನಿನ್ನೆ ರಾತ್ರಿ ಮನೆಗಳ ಬೀಗ ಮುರಿದು ಕಳ್ಳತನ ಎಸಗಿದ್ದಾರೆ. ಮನೆಯವವರು ಬೀಗ ಹಾಕಿ ಬೇರೆ ಊರಿಗೆ ಹೋಗಿದ್ದರು. ಈ ವೇಳೆ ಕಳ್ಳತನ ಕೃತ್ಯ ನಡೆಸಿದ್ದಾರೆ. ಸ್ಥಳಕ್ಕೆ ಯಾದಗಿರಿ ಡಿವೈಎಸ್​ಪಿ ಸಂತೋಷ್ ಬನಹಟ್ಟಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

ಹೀಗೆ ಆದ್ರೆ ಆರ್ಯನ್​ ಖಾನ್​ಗೆ ಸದ್ಯಕ್ಕೆ ಸಿಗಲ್ಲ ಜಾಮೀನು; ಸಮೀರ್​ ವಾಂಖೆಡೆ ಸಿದ್ಧಪಡಿಸಿದ್ದಾರೆ ದೊಡ್ಡ ತಂತ್ರ

Radhe Shyam: ‘ನನಗೆ ಎಲ್ಲಾ ಗೊತ್ತು, ಆದರೆ ಅದನ್ನ ಯಾರಿಗೂ ಹೇಳೋದಿಲ್ಲ’ ಎಂ‌ದ ಪ್ರಭಾಸ್; ಏಕಂತೆ?

Web contact

TV9 Kannada

Read More
Follow Us