ಭಾರತ-ಅಫ್ಘಾನ್ 3ನೇ ಟಿ20 ಪಂದ್ಯ: ನಾಳೆ ಬೆಂಗಳೂರಿನ ಈ ರಸ್ತೆಗಳಲ್ಲಿ ಪಾರ್ಕಿಂಗ್​ ನಿಷೇಧ

India vs Afghanistan: ಬೆಂಗಳೂರಿನಲ್ಲಿ ನಾಳೆ ಭಾರತ-ಅಫ್ಘಾನಿಸ್ತಾನ್ ನಡುವೆ 3ನೇ ಟಿ20 ಪಂದ್ಯ ನಡೆಯಲಿದೆ. ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿಷೇಧಿಸಲಾಗಿದೆ. ಹಾಗೇ ಕ್ರೀಡಾಂಗಣ ಸಮೀಪದ ರಸ್ತೆಗಳನ್ನು ಬಳಸದಂತೆ ವಾಹನ ಸವಾರರಿಗೆ ಟ್ರಾಫಿಕ್ ಪೊಲಿಸರು ಮನವಿ ಮಾಡಿದ್ದಾರೆ. ಹಾಗಾದ್ರೆ, ಯಾವೆಲ್ಲಾ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ ಎನ್ನುವ ವಿವರ ಈ ಕೆಳಗಿನಂತಿದೆ.

ಭಾರತ-ಅಫ್ಘಾನ್ 3ನೇ ಟಿ20 ಪಂದ್ಯ: ನಾಳೆ ಬೆಂಗಳೂರಿನ ಈ ರಸ್ತೆಗಳಲ್ಲಿ ಪಾರ್ಕಿಂಗ್​ ನಿಷೇಧ
ಚಿನ್ನಸ್ವಾಮಿ ಸ್ಟೇಡಿಯಂ
Follow us
Shivaprasad
| Updated By: ರಮೇಶ್ ಬಿ. ಜವಳಗೇರಾ

Updated on:Jan 16, 2024 | 5:49 PM

ಬೆಂಗಳೂರು, (ಜನವರಿ 16): ಅಫ್ಘಾನಿಸ್ತಾನ ವಿರುದ್ಧದ ಮೂರು ಟಿ20 ಪಂದ್ಯಗಳಲ್ಲಿ (India vs Afghanistan  T20) ಈಗಾಗಲೇ ಟೀಮ್ ಇಂಡಿಯಾ ಎರಡು ಪಂದ್ಯಗಳಲ್ಲಿ ಗೆದ್ದು ಸರಣಿ ವಶ ಪಡಿಸಿಕೊಂಡಿದೆ. ಇನ್ನು ಕೊನೆಯ ಅಂತಿಮ ಪಂದ್ಯ ನಾಳೆ (ಜನವರಿ 17) ಬೆಂಗಳೂರಿನ (Bengaluru) ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy stadium) ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಎಲ್ಲೆಲ್ಲಿ ವಾಹನ ನಿಲುಗಡೆ ನಿಷೇಧ?

ನಾಳೆ(ಬುಧವಾರ) ಮಧ್ಯಾಹ್ನ 2 ಗಂಟೆಗೆ ಭಾರತ ಮತ್ತು ಅಪಘಾನಿಸ್ತಾನದ ನಡುವೆ ಅಂತಿಮ(ಮೂರನೇ) ಟಿ20 ಪಂದ್ಯ ಶುರುವಾಗಲಿದೆ. ಹೀಗಾಗಿ ಬೆಂಗಳೂರಿನ ಕ್ವೀನ್ಸ್ ರಸ್ತೆ, ಎಂ.ಜಿ.ರಸ್ತೆ, ರಾಜಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್, ಕಬ್ಬನ್ ರಸ್ತೆ, ಸೇಂಟ್​ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರ್​ಬಾ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಲ್ಯಾವೆಲ್ಲೆ ರಸ್ತೆ, ವಿಠ್ಠಲ್ ಮಲ್ಯ ರಸ್ತೆ, ನೃಪತುಂಗ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಇದನ್ನೂ ಓದಿ: IND vs AFG: ಟೀಮ್ ಇಂಡಿಯಾದಲ್ಲಿ 3 ಬದಲಾವಣೆ ಸಾಧ್ಯತೆ

ಪಂದ್ಯ ವೀಕ್ಷಣೆಗೆ ಬರುವವರ ವಾಹನ ನಿಲುಗಡೆ ಎಲ್ಲಿ?

ಶಿವಾಜಿನಗರ ಬಿಎಂಟಿಸಿ ಬಸ್ ನಿಲ್ದಾಣ ಮೊದಲ ಮಹಡಿ, ಕಿಂಗ್ಸ್ ರಸ್ತೆ ಯುಬಿ ಸಿಟಿ ಪಾರ್ಕಿಂಗ್​ನಲ್ಲಿ ಸ್ಥಳ ಲಭ್ಯತೆ ಮೇಲೆ ಪೇ ಆ್ಯಂಡ್ ಪಾರ್ಕಿಂಗ್​ ಮಾಡಬಹುದು. ಇಲ್ಲಿ ಪಂದ್ಯ ವೀಕ್ಷಣೆಗೆ ಬರುವವರ ವಾಹನಗಳ ನಿಲುಗಡೆಗೆ ಮಾತ್ರ ಅವಕಾಶವಿದ್ದು, ಇನ್ನುಳಿದವರಿಗೆ ನಿರ್ಬಂಧಿಸಲಾಗಿದೆ. ಇನ್ನು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲ ರಸ್ತೆ ಬಳಸದಂತೆ ವಾಹನ ಸವಾರರಿಗೆ ಬೆಂಗಳೂರು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.

Published On - 5:46 pm, Tue, 16 January 24