ನಟಿ ಶಿಲ್ಪಾಶೆಟ್ಟಿ ಒಡೆತನದ ಬೆಂಗಳೂರು ಪಬ್‌ನಲ್ಲಿ ಗಲಾಟೆ: ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಉದ್ಯಮಿ
ಬೆಂಗಳೂರಿನ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಒಡೆತನದ 'ಬ್ಯಾಸ್ಟಿಯನ್' ಪಬ್‌ನಲ್ಲಿ ಉದ್ಯಮಿ ಸತ್ಯ ನಾಯ್ಡು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಸೇವೆ ವಿಚಾರಕ್ಕೆ ಗುರುವಾರ ರಾತ್ರಿ ನಡೆದ ಗಲಾಟೆ 2 ದಿನಗಳ ನಂತರ ಬೆಳಕಿಗೆ ಬಂದಿದೆ. ಸತ್ಯ ನಾಯ್ಡು ಕುಡಿದ ಅಮಲಿನಲ್ಲಿದ್ದು, ಹಲ್ಲೆ ನಡೆಸಿದ ವಿಡಿಯೋ ಲಭ್ಯವಾಗಿದೆ. ದೂರು ದಾಖಲಾಗದಿದ್ದರೂ, ಕಬ್ಬನ್ ಪಾರ್ಕ್ ಪೊಲೀಸರು ಈಗ ಸ್ವತಃ ತನಿಖೆ ಆರಂಭಿಸಿದ್ದಾರೆ.

ಬೆಂಗಳೂರು, ಡಿ.13: ಬೆಂಗಳೂರು ನಗರದ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ನಟಿ ಶಿಲ್ಪಾಶೆಟ್ಟಿ ಒಡೆತನದ ‘ಬ್ಯಾಸ್ಟಿಯನ್’ ಪಬ್‌ನಲ್ಲಿ (Bangalore pub brawl) ಗಲಾಟೆ ನಡೆದಿದೆ. 2 ದಿನಗಳ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಗುರುವಾರ ರಾತ್ರಿ 1.30 ಸುಮಾರಿಗೆ ಈ ಘಟನೆ ನಡೆದಿದೆ. ಪಬ್‌ನಲ್ಲಿ ಸರ್ವಿಸ್ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ. ಈ ವೇಳೆ ಸಿಬ್ಬಂದಿ ಹಾಗೂ ಉದ್ಯಮಿ ಸತ್ಯ ನಾಯ್ಡು ನಡುವೆ ವಾಗ್ವಾದ ನಡೆದು, ಪಬ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾರೆ. ಇನ್ನು ಗಲಾಟೆಯ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಇದೀಗ ಪೊಲೀಸರು ಸ್ವತಃ ಪಬ್ಗೆ ಬಂದು ಮಾಹಿತಿ ಕಲೆಹಾಕಿದ್ದಾರೆ. ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೆ ಈ ಗಲಾಟೆ ಬಗ್ಗೆ ವಿಡಿಯೋವೊಂದು ಸಿಕ್ಕಿದೆ, ಅದರ ಆಧಾರ ಮೇಲೆ ತನಿಖೆ ನಡೆಸಿದ್ದಾರೆ.
ಇನ್ನು ಉದ್ಯಮಿ ಸತ್ಯ ನಾಯ್ಡು ಅವರನ್ನು ಮಾಜಿ ಬಿಗ್ ಬಾಸ್ ಸ್ಪರ್ಧಿ ಮತ್ತು ನಿರೂಪಕಿಯ ಮಾಜಿ ಪತಿ ಎಂದು ಹೇಳಲಾಗಿದೆ. ಪಬ್ ಮುಚ್ಚುವ ಸಮಯದಲ್ಲಿ ಈ ಗಲಾಟೆ ನಡೆದಿದೆ. ಪಬ್‌ನಲ್ಲಿ ಸರ್ವಿಸ್ ನೀಡುವ ವಿಚಾರಕ್ಕೆ ಸತ್ಯ ನಾಯ್ಡು ಸಿಬ್ಬಂದಿಗಳ ಮೇಲೆ ಸಿಟ್ಟಾಗಿದ್ದಾರೆ. ಈ ವೇಳೆ ಸಿಬ್ಬಂದಿಗಳು ತುಂಬಾ ತಾಳ್ಮೆಯಿಂದ, ಅವರನ್ನು ಸಮಾಧಾನ ಮಾಡಲು ಮುಂದಾಗಿದ್ದಾರೆ. ಆದರೆ ಸತ್ಯ ನಾಯ್ಡು ಮಾತು ಕೇಳದೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಇಬ್ಬರು ಗಂಡಂದಿರ ಮುದ್ದಿನ ಮಡದಿ ಪೊಲೀಸಪ್ಪನ ಜತೆ ಪರಾರಿ
ಈ ಘಟನೆಯ ವೇಳೆ ಸತ್ಯ ನಾಯ್ಡು ಅತಿಯಾಗಿ ಮದ್ಯಪಾನ ಮಾಡಿದ್ದರು ಎಂದು ಹೇಳಲಾಗಿದೆ. ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದನ್ನು ತಡೆಯಲು ಪಬ್‌ನ ಬೌನ್ಸರ್‌ಗಳು ಪ್ರಯತ್ನಿಸಿದ್ದಾರೆ. ಇನ್ನು ಈ ಬಗ್ಗೆ ಪೊಲೀಸರು ಯಾವುದೇ ದೂರು ದಾಖಲಿಸಿಕೊಂಡಿಲ್ಲ ಎಂದು ಹೇಳಲಾಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿದ್ದಾರೆ. ಇನ್ನು ಈ ಗಲಾಟೆಯ ಬಗ್ಗೆ ವಿಡಿಯೋವೊಂದು ಸಿಕ್ಕಿದೆ. ಅದರ ಆಧಾರ ಮೇಲೆ ತನಿಖೆ ನಡೆಸಲು ಮುಂದಾಗಿದ್ದಾರೆ.
ವರದಿ: ಜಗ್ಗ
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




