ಬಾಡಿಗೆ ಮನೆ ಹಾಲು ಉಕ್ಕಿಸುವ ನೆಪದಲ್ಲಿ ಖತರ್ನಾಕ್ ಸ್ಕೆಚ್: ಮಹಿಳೆಯ ಕೈಕಾಲು ಕಟ್ಟಿ 1 ಲಕ್ಷ ರೂ. ನಗದು, ಮಾಂಗಲ್ಯ ಸರ ದೋಚಿದ್ದ ಮೂವರ ಬಂಧನ

ಬೆಂಗಳೂರಿನ ನಾಗಸಂದ್ರದಲ್ಲಿ ಮಹಿಳೆಯೊಬ್ಬರನ್ನು 'ಹಾಲು ಉಕ್ಕಿಸುವ' ನೆಪದಲ್ಲಿ ಬಾಡಿಗೆ ಮನೆಗೆ ಕರೆಸಿ, ಕೈಕಾಲು ಕಟ್ಟಿ ಹಲ್ಲೆ ನಡೆಸಿ ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ದೋಚಿದ್ದ ಮೂವರು ಖತರ್ನಾಕ್ ಆರೋಪಿಗಳನ್ನು ಪೀಣ್ಯಾ ಪೊಲೀಸರು ಬಂಧಿಸಿದ್ದಾರೆ. ಬೋರೆಗೌಡ, ಅಭಿ, ಸತೀಶ್ ಬಂಧಿತ ಆರೋಪಿಗಳು. ದರೋಡೆ ಬಗ್ಗೆ ದೂರು ದಾಖಲಾದ ನಂತರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಜೈಲಿಗಟ್ಟಿದ್ದಾರೆ.

ಬಾಡಿಗೆ ಮನೆ ಹಾಲು ಉಕ್ಕಿಸುವ ನೆಪದಲ್ಲಿ ಖತರ್ನಾಕ್ ಸ್ಕೆಚ್: ಮಹಿಳೆಯ ಕೈಕಾಲು ಕಟ್ಟಿ 1 ಲಕ್ಷ ರೂ. ನಗದು, ಮಾಂಗಲ್ಯ ಸರ ದೋಚಿದ್ದ ಮೂವರ ಬಂಧನ
ಹಾಲು ಉಕ್ಕಿಸುವ ನೆಪದ ವಂಚನೆ
Edited By:

Updated on: Sep 26, 2026 | 4:53 PM

ಬೆಂಗಳೂರು, ಸೆ.26: ಬಾಡಿಗೆ ಮನೆಯಲ್ಲಿ ಹಾಲು ಉಕ್ಕಿಸುವ ನೆಪದಲ್ಲಿ ಮಹಿಳೆಯೊಬ್ಬರನ್ನು ನಂಬಿಸಿ ಕರೆಸಿಕೊಂಡು, ಆಕೆಯ ಕೈಕಾಲು ಕಟ್ಟಿ ಹಲ್ಲೆ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣ ದೋಚಿದ್ದ ಮೂವರು ಖತರ್ನಾಕ್ ಆರೋಪಿಗಳನ್ನು ಪೀಣ್ಯಾ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಬಂಧಿತ ಆರೋಪಿಗಳನ್ನು ಬೋರೆಗೌಡ, ಅಭಿ ಹಾಗೂ ಸತೀಶ್ ಎಂದು ಗುರುತಿಸಲಾಗಿದೆ.

ಆಗಿದ್ದೇನು? – ‘ಹಾಲು ಉಕ್ಕಿಸುವ’ ನೆಪದಲ್ಲಿ ಸ್ಕೆಚ್:

ನಾಗಮಂಗಲ ಮೂಲದ ವರದರಾಜು ಎಂಬುವರ ಪತ್ನಿ ಸುಜಾತ ಎಂಬಾಕೆಗೆ ಕೆಲವು ತಿಂಗಳ ಹಿಂದೆ ಬೋರೆಗೌಡ ಎಂಬಾತನ ಪರಿಚಯವಾಗಿತ್ತು. ಪರಿಚಯದ ಸಲಿಗೆಯಲ್ಲೇ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದರು. ಇದೇ ಸಲುಗೆಯನ್ನು ಬಳಸಿಕೊಂಡ ಬೋರೆಗೌಡ, ಬೆಂಗಳೂರಿನ ನಾಗಸಂದ್ರದಲ್ಲಿ ತಾನು ಬಾಡಿಗೆ ಮನೆ ಮಾಡಿರುವುದಾಗಿ ನಂಬಿಸಿ, ಮನೆ ಹಾಲು ಉಕ್ಕಿಸುವ ಕಾರ್ಯಕ್ರಮಕ್ಕೆ ಬರುವಂತೆ ಸುಜಾತಗೆ ಆಹ್ವಾನ ನೀಡಿದ್ದ. ಇದನ್ನು ನಂಬಿದ ಸುಜಾತ, ತನ್ನ ಪತಿಗೆ ವಿಷಯ ತಿಳಿಸದೇ 1 ಲಕ್ಷ ರೂಪಾಯಿ ನಗದು ಹಾಗೂ ಬಂಗಾರದ ಮಾಂಗಲ್ಯ ಸರ ಧರಿಸಿಕೊಂಡು ನಾಗಸಂದ್ರದ ಬಾಡಿಗೆ ಮನೆಗೆ ಬಂದಿದ್ದಳು.

ಸುಜಾತ ಮನೆಗೆ ಬಂದ ತಕ್ಷಣ ಒಲೆ ಮೇಲೆ ಹಾಲು ಇಟ್ಟು ಹಾಲು ಉಕ್ಕಿಸಲಾಗಿತ್ತು. ಆದರೆ, ಮರುಕ್ಷಣವೇ ಬೋರೆಗೌಡ ಹಾಗೂ ಆತನ ಸಹಚರರಾದ ಅಭಿ ಮತ್ತು ಸತೀಶ್ ಮೂವರೂ ಸೇರಿ ಮಹಿಳೆಯ ಕೈಕಾಲು ಕಟ್ಟಿ ಹಾಕಿ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಬಳಿಕ ಆಕೆಯ ಬಳಿಯಿದ್ದ 1 ಲಕ್ಷ ರೂ. ನಗದು ಹಾಗೂ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಸಿದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದರು.

ಇದನ್ನೂ ಓದಿ: ಮೆಚ್ಚಿನ ಶಿಕ್ಷಕನಿಗೆ ಮಕ್ಕಳ ಕಣ್ಣೀರಿನ ವಿದಾಯ: ಶಾಲಾ ಆವರಣದಲ್ಲಿ ಪಾರ್ಥಿವ ಶರೀರಕ್ಕೆ ಪುಷ್ಪವೃಷ್ಠಿ

ತನ್ನ ಪತ್ನಿಗೆ ಅನ್ಯಾಯವಾಗಿದೆ ಎಂದು ತಿಳಿಯುತ್ತಿದ್ದಂತೆ ಪತಿ ವರದರಾಜು ಪೀಣ್ಯಾ ಪೊಲೀಸ್ ಠಾಣೆಯ ಮೆಟ್ಟಿಲೇರಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೀಣ್ಯಾ ಪೊಲೀಸರು, ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಬೋರೆಗೌಡ ಸೇರಿದಂತೆ ಅಭಿ ಹಾಗೂ ಸತೀಶ್ ಮೂವರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಮಂಜುನಾಥ ಎಚ್​. ವಿ.

ಮಂಜುನಾಥ ಹೆಚ್ ವಿ. ಇವರು ಹುಟ್ಟಿದ್ದು ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದರು. 8 ವರ್ಷಗಳ ಕಾಲ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿದ್ದಾರೆ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಆಗಿ ವೃತ್ತಿ ನಿರ್ವಹಿಸಿದ್ದು ಸಾಮಾಜಿಕವಾಗಿ ನ್ಯಾಯ ಒದಗಿಸುವ ಕೆಲಸವನ್ನ ಮಾಡಿದ್ದಾರೆ. ಕಳೆದ 9 ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟಿವಿ9 ಕನ್ನಡ ಸಂಸ್ಥೆಗೆ ಬೆಂಗಳೂರು ಹಾಗೂ ನೆಲಮಂಗಲ ಭಾಗದ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕ್ರಿಕೆಟ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್, ಬುಕ್ ಹಾಗೂ ಪೇಪರ್ ಓದುವ ಹವ್ಯಾಸವಿದೆ.

Read More
Loading...
Unable to load recommendations.
Follow Us