ಬೆಂಗಳೂರಿನಲ್ಲಿ ತಲೆಯೆತ್ತಲಿದೆ 110 ಕೀ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್; 18000 ಕೋಟಿ ಯೋಜನೆಗೆ ರಾಜಧಾನಿ ಸಜ್ಜು!
ಬೆಂಗಳೂರಿನಲ್ಲಿ ಸುರಂಗ ರಸ್ತೆ ರಚನೆಯಾಗಲಿದ್ದು, ಈಗಾಗಲೇ ಅದರ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದರ ಮಧ್ಯೆ ಬರೋಬ್ಬರಿ 110 ಕಿಲೋಮೀಟರ್ ಉದ್ದದ ಬೃಹದಾಕಾರದ ಎಲಿವೇಟೆಡ್ ಕಾರಿಡಾರ್ (Elevated Corridor) ನ ಯೋಜನೆಯೂ ಬೆಳಕಿಗೆ ಬಂದಿದೆ. ಸರ್ಕಾರದ ಅನುಮತಿ ಸಿಕ್ಕ ನಂತರ ಡಿಸೆಂಬರ್ನಲ್ಲೇ ಕಾರಿಡಾರ್ ನ ಕೆಲಸ ಆರಂಬಿಸಿದರೆ 25 ತಿಂಗಳೊಳಗಾಗಿ ಯೋಜನೆಯು ಸಿದ್ಧಗೊಳ್ಳಲಿದೆ.

ಬೆಂಗಳೂರು, ಸೆಪ್ಟೆಂಬರ್ 18: ಬೆಂಗಳೂರಿನಲ್ಲಿ ಸುರಂಗ ರಸ್ತೆ ರಚನೆಯಾಗಲಿದ್ದು, ಈಗಾಗಲೇ ಅದರ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದರ ಮಧ್ಯೆ ಬರೋಬ್ಬರಿ 110 ಕಿಲೋಮೀಟರ್ ಉದ್ದದ ಬೃಹದಾಕಾರದ ಎಲಿವೇಟೆಡ್ ಕಾರಿಡಾರ್ನ ( Elevated Corridor) ಯೋಜನೆಯೂ ಬೆಳಕಿಗೆ ಬಂದಿದೆ. ಈ ಕುರಿತು ವಿವರವಾದ ವರದಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ತಾಂತ್ರಿಕ ಸಲಹಾ ಸಮಿತಿಯು ಅನುಮೋದಿತಗೊಳಿಸಿದೆ. ಭೂ ಸ್ವಾಧೀನಕ್ಕಾಗಿ ರೂ.3000 ಕೋಟಿ ಸೇರಿದಂತೆ ಒಟ್ಟೂ 18000 ಕೋಟಿ ರೂ. ಗಳ ವೆಚ್ಚದಲ್ಲಿ ಈ ಕಾರಿಡಾರ್ ನಿರ್ಮಾಣವಾಗಲಿದೆ. ಡಿಸೆಂಬರ್ನಲ್ಲೇ ಕಾರಿಡಾರ್ ನ ಕೆಲಸ ಆರಂಬಿಸಿದರೆ 25 ತಿಂಗಳೊಳಗಾಗಿ ಯೋಜನೆಯು ಸಿದ್ಧಗೊಳ್ಳಲಿದೆ.
ಹೇಗಿರಲಿದೆ ಈ ಎಲಿವೇಟೆಡ್ ಕಾರಿಡಾರ್?
ಎಲಿವೇಟೆಡ್ ಕಾರಿಡಾರನ್ನು ಸಂಪೂರ್ಣವಾಗಿ ಎತ್ತರದಲ್ಲಿ ನಿರ್ಮಿಸಲಾಗುವುದು. ಅದರೊಂದಿಗೆ ನಿರ್ಧಿಷ್ಟ ಸ್ಥಳಗಳಲ್ಲಿ ಪ್ರವೇಶ ಮತ್ತು ನಿರ್ಗಮನದ ಅವಕಾಶಗಳನ್ನು ಕಲ್ಪಿಸಲಾಗುವುದು. ಸೆಪ್ಟೆಂಬರ್ 25 ರ ಒಳಗಾಗಿ ಯೋಜನೆಯ ವರದಿಯನ್ನು ರಾಜ್ಯ ಸರ್ಕಾರದ ಅನುಮೋದನೆಗೆ ಕಳುಹಿಸಲಾಗುವುದು. ಕಾರಿಡಾರನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೇಲೆ ನಿರ್ಮಾಣಗೊಳಿಸಲಾಗುವುದು. ಬೆಂಗಳೂರು-ಮೈಸೂರು ಹೆದ್ದಾರಿಗಳಲ್ಲಿ ಎಲಿವೇಟೆಡ್ ಕಾರಿಡಾರ್ಗಳಿಗೆ ಟೋಲ್ ವಿಧಿಸಲಾಗುವುದು. ಟೋಲ್ ಎಷ್ಟಿರಲಿದೆ ಎಂದು ಸರ್ಕಾರವೇ ನಿರ್ಧರಿಸಲಿದೆ. ಸರ್ಕಾರದ ಅನುಮತಿ ಸಿಕ್ಕ ನಂತರ ಡಿಸೆಂಬರ್ ನಲ್ಲೇ ಕಾರಿಡಾರ್ನ ಕೆಲಸ ಆರಂಬಿಸಿ 25 ತಿಂಗಳೊಳಗಾಗಿ ಯೋಜನೆಯು ಮುಕ್ತಾಯಗೊಳ್ಳಲಿದೆ ಎಂಬ ಬಿ.ಎಸ್ ಪ್ರಹ್ಲಾದ್ ಅವರ ಹೇಳಿಕೆಯನ್ನು ಇಂಡಿಯನ್ ಎಕ್ಪ್ರೆಸ್ಸ್ ವರದಿ ಮಾಡಿದೆ. ಈ ಕಾರಿಡಾರ್ ಬೆಂಗಳೂರಿನ ಮುಖ್ಯ ಪ್ರದೇಶಗಳಲ್ಲಿ ಹಾದುಹೋಗುವುದರಿಂದ ಸಂಚಾರ ಸಮಸ್ಯೆಗೆ ಸಮಗ್ರ ಪರಿಹಾರವನ್ನು ಒದಗಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ : ಬೆಂಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣದಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಳ: ತಜ್ಞರು
ಎಲ್ಲೆಲ್ಲಿ ಹಾದುಹೋಗಲಿದೆ ಎಲಿವೇಟೆಡ್ ಕಾರಿಡಾರ್ ರಸ್ತೆ?
ಕಾರಿಡಾರನ್ನು ನಿರ್ಮಿಸಲು ಉತ್ತಮ ಪ್ರದರ್ಶನವಿರುವ ಪೈಬರ್ ರಿಇನ್ಪೋರ್ಸ್ಡ್ (Fiber reinforced) ಕಾಂಕ್ರೀಟ್ ತಂತ್ರಜ್ಞಾನವನ್ನು ಬಳಸಲಾಗುವುದು. ಇದೇ ತಂತ್ರಜ್ಞಾನ ಹೊಂದಿರುವ ನಾಗ್ಪುರಕ್ಕೆ ಬೆಂಗಳೂರು ಸ್ಮಾರ್ಟ್ ಇನ್ಪ್ರಾಸ್ಟಕ್ಚರ್ ಲಿಮಿಟೆಡ್ (B-SMILE) ಭೇಟಿ ನೀಡಿ ಅಧ್ಯಯನ ನಡೆಸಿದೆ . ಉತ್ತಮ ಗುಣಮಟ್ಟ ಮತ್ತು ಶಕ್ತಿಯುತ ಕಾರಿಡಾರ್ ನಿರ್ಮಾಣ B-SMILE ನ ಮುಖ್ಯ ಉದ್ದೇಶವಾಗಿದೆ. ಹೀಗಾಗಿ ಗುಣಮಟ್ಟದ ಸರಕುಗಳನ್ನು ಪೂರ್ವಭಾವಿಯಾಗಿ ಕಾರ್ಖಾನೆಗಳಲ್ಲಿ ತಯಾರಿಸಲಾಗುತ್ತದೆ.
ಈ ಬೃಹದಾಕಾರದ ಕಾರಿಡಾರ್ಗಳು ಪರ್ಯಾಯ ರಸ್ತೆಗಳಾಗಿದ್ದು, ಈಗಿರುವ ರಸ್ತೆಗಳಿಗೆ ಪೂರಕವಾಗಿರುವುದಿಲ್ಲ. ಟೆಂಡರ್ ಗೆದ್ದವರಿಗೆ ಅಗತ್ಯವಿದ್ದಲ್ಲಿ ರಾಜ್ಯ ಸರ್ಕಾರ ಕೆಲವು ಕಾರ್ಯಸಾಧ್ಯತಾ ನಿಧಿಗಳನ್ನು ಪೂರೈಸಬಹುದು. ಎಲಿವೇಟೆಡ್ ಕಾರಿಡಾರ್ ಗಳು ಬೆಂಗಳೂರಿನ ಹೊರ ವಲಯಗಳನ್ನೂ ಸಂಪರ್ಕಿಸಲಿವೆ. ಪ್ರಯಾಣಿಕರು ಯಾವಾಗಲಾದರೂ ಪರಸ್ಪರ ಮಾರ್ಗ ಬದಲಾಯಿಸಿಕೊಳ್ಳಬಹುದು ಮತ್ತು ವೇಗವಾಗಿ ತಲುಪಬಹುದು. ಕಾರಿಡಾರ್ನ ಪೂರ್ವ ಭಾಗದಿಂದ ವಿಮಾನ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಲಾಗುತ್ತದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:13 pm, Thu, 18 September 25




