ಲವರ್ ಕೈಕೊಟ್ಟಿದ್ದಕ್ಕೆ ಮಾರಾಕಾಸ್ತ್ರದಿಂದ ಚುಚ್ಚಿಕೊಂಡು ಜೀವ ಬಿಟ್ಟ ಪ್ರಿಯಕರ

ಬೆಂಗಳೂರು ನಗರದ ನಂದಿನಿ ಲೇಔಟ್​ನಲ್ಲಿ(Nandini Layout) ಪ್ರಿಯತಮೆ ಬಿಟ್ಟು ಹೋಗಿದ್ದಕ್ಕೆ ನೊಂದ ಪ್ರಿಯಕರನೊಬ್ಬ ಚೂಪಾದ ಆಯುಧದಿಂದ ಹೊಟ್ಟೆಗೆ ತಿವಿದುಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತನ ಕುಟುಂಬಸ್ಥರು, ಹುಡುಗಿ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಅನುಮಾನಸ್ಪಾದ ಸಾವು ಎಂದು ಪ್ರಕರಣ ದಾಖಲಸಿಕೊಂಡಿರುವ ನಂದಿನಿ ಲೇಔಟ್ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

ಲವರ್  ಕೈಕೊಟ್ಟಿದ್ದಕ್ಕೆ ಮಾರಾಕಾಸ್ತ್ರದಿಂದ ಚುಚ್ಚಿಕೊಂಡು ಜೀವ ಬಿಟ್ಟ ಪ್ರಿಯಕರ
ಮೃತ ಚೇತನ್​
Edited By:

Updated on: Mar 08, 2024 | 5:56 PM

ಬೆಂಗಳೂರು, ಮಾ.08: ಪ್ರಿಯತಮೆ ಬಿಟ್ಟು ಹೋಗಿದ್ದಕ್ಕೆ ನೊಂದ ಪ್ರಿಯಕರನೊಬ್ಬ ಚೂಪಾದ ಆಯುಧದಿಂದ ಹೊಟ್ಟೆಗೆ ತಿವಿದುಕೊಂಡು ಸಾವನ್ನಪ್ಪಿರುವ ಬೆಂಗಳೂರು ನಗರದ ನಂದಿನಿ ಲೇಔಟ್​ನಲ್ಲಿ(Nandini Layout) ನಡೆದಿದೆ. ದಾವಣಗೆರೆ ಮೂಲದ ಚೇತನ್ (21) ಮೃತ ದುರ್ದೈವಿ. ಇಬ್ಬರು ಕಾಲೇಜಿನಲ್ಲಿ ಓದುವ ವೇಳೆ ಪರಿಚಯವಾಗಿ ಲವ್ ಆಗಿತ್ತು. ಎರಡು ವರ್ಷದಿಂದ ಚೇತನ್​ ಯುವತಿಯನ್ನು ಪ್ರೀತಿಸುತ್ತಿದ್ದ. ಈ ವಿಷಯ ಹುಡುಗಿ ಕಡೆಯವರಿಗೆ ಗೊತ್ತಾಗಿತ್ತು. ಈ ಹಿನ್ನಲೆ ಹುಡುಗಿಯ ಚಿಕ್ಕಪ್ಪ ಚೇತನ್ ಜೊತೆ ಮದುವೆಗೆ ಒಪ್ಪಿರಲಿಲ್ಲ.

ಬೇರೆ ಹುಡುಗಿ ಮದುವೆಯಾಗುವಂತೆ ಹೇಳಿದ ಪ್ರಿಯತಮೆ

ಇದಾದ ಬಳಿಕವೂ ಹಲವು ಬಾರಿ ಇಬ್ಬರು ಭೇಟಿಯಾಗಿ ಓಡಾಡಿದ್ದರು. ಮೊನ್ನೆಯಷ್ಟೇ ನಮ್ಮ ಚಿಕ್ಕಪ್ಪ ಮದುವೆಗೆ ಒಪ್ಪುತ್ತಿಲ್ಲ,  ಹೀಗಾಗಿ ನೀನು ಬೇರೆ ಹುಡುಗಿ ಮದುವೆಯಾಗುವಂತೆ ಪ್ರಿಯತಮೆ ಜನನಿ ಹೇಳಿದ್ದಾಳೆ. ತಾನು ಇಷ್ಟಪಟ್ಟ ಹುಡುಗಿ ದೂರವಾಗಿದಕ್ಕೆ ಮನನೊಂದಿದ್ದ ಚೇತನ್, ನಿನ್ನೆ(ಮಾ.07) ರಾತ್ರಿ 11 ಗಂಟೆಗೆ ಹುಡುಗಿ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದ. ಈ ವೇಳೆ ಜನನಿ ಸಿಗದಿದ್ರೆ, ಸಾಯುವುದಾಗಿ ಹೇಳಿದ್ದಾನೆ. ಬಳಿಕ ಜನನಿ ಕಡೆಯವರು ಚೇತನ್ ತಂದೆ-ತಾಯಿಗೆ ವಿಷಯ ತಿಳಿಸಿದ್ದಾರೆ.

ಇದನ್ನೂ ಓದಿ:‘ಗುಟ್ಟಾಗಿ ಮದುವೆಯಾಗಿ ಮೋಸ ಮಾಡಿದ’; ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಜಯಲಕ್ಷ್ಮಿ ವಿಡಿಯೋ

ಚಿಕಿತ್ಸೆ ಫಲಕಾರಿಯಾಗದೇ ಚೇತನ್ ಸಾವು

ಸ್ಥಳಕ್ಕೆ ಪೋಷಕರು ಬಂದು ನೋಡುವಾಗ ಚೇತನ್ ಆಟೋದಲ್ಲಿ ಬಿದ್ದಿದ್ದ. ಬಳಿಕ ನಾಗರಬಾವಿ ಖಾಸಗಿ ಆಸ್ಪತ್ರೆಗೆ ಚೇತನ್​ನನ್ನು ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಚೇತನ್ ಮೃತನಾಗಿದ್ದಾನೆ. ಈ ಹಿನ್ನಲೆ ಚೇತನ್ ಕುಟುಂಬಸ್ಥರು, ಹುಡುಗಿ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಅನುಮಾನಸ್ಪಾದ ಸಾವು ಎಂದು ಪ್ರಕರಣ ದಾಖಲಸಿಕೊಂಡಿರುವ ನಂದಿನಿ ಲೇಔಟ್ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

ಬಾಡಿಗೆ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ಆನೇಕಲ್: ತಾಲ್ಲೂಕಿನ ಅತ್ತಿಬೆಲೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಮಂಡ್ಯ ಮೂಲದ ಬೋರಪುರ ಗ್ರಾಮದ ಸಂಜಯ್(24) ಸಾವನ್ನಪ್ಪಿರುವ ಯುವಕ, ಕಳೆದೊಂದು ವರ್ಷದಿಂದ ಅತ್ತಿಬೆಲೆಯ ಹ್ಯಾಪಿಯಸ್ ಬಾರ್ ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ರಾತ್ರಿ ಕೆಲಸ ಮುಗಿಸಿಕೊಂಡು ರೂಮ್​ಗೆ ಹೋಗಿ ಮಲಗಿದ್ದ ಸಂಜಯ್, ರಾತ್ರಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಬೆಳಿಗ್ಗೆ ರೂಮ್​ನಿಂದ ಸಂಜಯ್​ ಹೊರಬಾರದ ಹಿನ್ನಲೆ ಪರಿಶೀಲನೆ ನಡೆಸಿದಾಗ ಘಟನೆ ಬೆಳಿಕಿಗೆ ಬಂದಿದೆ. ಈ ಕುರಿತು ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ