ಬೆಂಗಳೂರು, (ಜನವರಿ 16): ಅದು ಜನವರಿ 12ರಂದು ಸಂಜೆ 7.30 ರ ಸಮಯ. ಬೆಂಗಳೂರಿನ ಐಟಿಪಿಎಲ್ ಮುಖ್ಯ ರಸ್ತೆಯಲ್ಲಿರುವ ರಾಧ ಹೋಮ್ಟೆಲ್ ಹೋಟೆಲ್ನಲ್ಲಿ ಘನಘೋರವೇ ನಡೆದು ಹೋಗಿತ್ತು. ಹೋಟೆಲ್ನ ಒಂದು ಕೊಠಡಿಯಲ್ಲಿ 24 ವರ್ಷದ ಯುವತಿಯೋರ್ವಳು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದ್ರೆ, ಆಗಲೇ ಅರ್ಧ ಸುಟ್ಟಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗಿದೆ ಕೊನೆಯುಸಿರೆಳೆದಿದ್ದಾಳೆ. ಅಷ್ಟಕ್ಕೂ ಆಕೆ ಸುಟ್ಟು ಭಸ್ಮವಾಗಿದ್ದು ಮಾತ್ರ ಮಾವನ ಕಾಮದ ಕಾಟಕ್ಕೆ.
ಹೌದು..ಯುವತಿಯ ಹೆಸರು ಸುಹಾಸಿ ಸಿಂಗ್. ಇನ್ನು ಆಕೆಯ ಮಾವನ ಹೆಸರು ಈತ ಪ್ರವೀಣ್ ಸಿಂಗ್. ಇಬ್ಬರು ಸಂಬಂಧದಲ್ಲಿ ಸುಹಾಸಿಗೆ ಪ್ರವೀಣ್ ಸಿಂಗ್ ಮಾವ ಆಗಬೇಕು. ಅಂದ್ರೆ, ತಂದೆಯ ತಂಗಿ ಗಂಡ. ಪ್ರವೀಣ್ ಸಿಂಗ್ ಈಗಾಗಲೇ ಮದುವೆಯಾಗಿದ್ದು, ಕೆ.ಆರ್.ಪುರಂ ಆಲ್ಫಾ ಗಾರ್ಡನ್ ನಲ್ಲಿರುವ ಎಸ್ ವಿ ಎಸ್ ಪ್ಯಾರಡೈಸ್ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ. ಸುಹಾಸಿ ಸಿಂಗ್ ಸಹ ಅವರ ಮನೆಯಿಂದಲೇ ಕೆಲಸಕ್ಕೆ ಹೋಗುತ್ತಿದ್ದಳು.
ರಜಾ ದಿನಗಳಲ್ಲಿ ಪ್ರವೀಣ್ ಹಾಗೂ ಆತನ ಪತ್ನಿ ಜೊತೆಗೆ ಈಕೆ ಕೂಡ ಟ್ರಿಪ್ ಹೋಗುತ್ತಿದ್ದಳು. ದಿನ ಕಳೆದಂತೆ ಇಬ್ಬರ ನಡುವೆ ಸಲುಗೆ ಬೆಳೆದಿದೆ. ಅದೆ ಸಲುಗೆ ದೈಹಿಕ ಸಂಪರ್ಕದವರೆಗೆ ಕೂಡ ಹೋಗಿತ್ತು. ಕಳೆದ ಎರಡು ವರ್ಷದಿಂದ ಇವರ ಕಣ್ಣಾಮುಚ್ಚಾಲೆ ಆಟ ನಡೆಯುತ್ತಲೇ ಇತ್ತು.
ಹೀಗಿರುವಾಗ ಇಬ್ಬರು ಒಟ್ಟಿಗೆ ಕಳೆದ ಖಾಸಗಿ ಕ್ಷಣವನ್ನು ಪ್ರವೀಣ್ ಸಿಂಗ್ ಮೊಬೈಲ್ ನಲ್ಲಿ ವೀಡಿಯೋ ಮಾಡಿಟ್ಟುಕೊಂಡಿದ್ದ. ಅದನ್ನ ಪೆನ್ ಡ್ರೈವ್ ನಲ್ಲಿ ಸಹ ಸೇವ್ ಮಾಡಿಟ್ಟಿದ್ದ. ಆದ್ರೆ ಇತ್ತೀಚೆಗೆ ಬೇರೊಬ್ಬ ಯುವಕನ ಜೊತೆಗೆ ಸುಹಾಸಿ ಸಿಂಗ್ ಆತ್ಮೀಯವಾಗಿದ್ದಳು.ಇದು ಪ್ರವೀಣ್ ಸಿಂಗ್ ನಿಂದ ಅಂತರ ಕಾಯ್ದುಕೊಳ್ಳುವಂತೆ ಮಾಡಿತ್ತು .ಅಷ್ಟೇ ಅಲ್ಲ ಅವರ ವಾಟ್ಸಪ್ ಚಾಟ್ ನೋಡಿ ಸಿಟ್ಟಿಗೆದ್ದಿದ್ದ. ಬಳಿಕ ಪದೇ ಪದೇ ಫೋನ್ ಮಾಡಿ ಸುಹಾಸಿ ಸಿಂಗ್ ನನ್ನ ದೈಹಿಕ ಸಂಪರ್ಕಕ್ಕಾಗಿ ಪೀಡಿಸ್ತಿದ್ದ. ಬರದಿದ್ದರೆ ನಗ್ನ ಫೋಟೊ ಹಾಗೂ ವೀಡಿಯೊ ವೈರಲ್ ಮಾಡುವುದಾಗಿ ಬೆದರಿ ಹಾಕಿದ್ದಾನೆ. ಇದರಿಂದ ಯುವತಿ ಸಾಕಷ್ಟು ರೋಸಿಹೋಗಿದ್ದಳು. ಹೀಗೆ ಒಂದು ದಿನ ಅಂದರೆ ಜನವರಿ 12 ರಂದು ಐಟಿಪಿಎಲ್ ಮುಖ್ಯ ರಸ್ತೆಯಲ್ಲಿರುವ ರಾಧ ಹೋಟೆಲ್ ನಲ್ಲಿ ರೂಂ ಬುಕ್ ಮಾಡಿದ್ದ. ಬಳಿಕ ಸುಹಾಸಿ ಸಿಂಗ್ಗೆ ಫೋನ್ ಮಾಡಿ ಹೋಟೆಲ್ಗೆ ಬರುವಂತೆ ಪೀಡಿಸಿದ್ದಾನೆ.
ಪ್ರವೀಣ್ ಕಾಟ ತಾಳಲಾರ ಆಕೆ ಸಾಯುವ ನಿರ್ಧಾರ ಮಾಡಿಬಿಟ್ಟಿದ್ದಳು. ಸ್ಕೂಟರ್ ನಲ್ಲಿ ಬರುವಾಗ ಪೆಟ್ರೊಲ್ ಬಂಕ್ನಲ್ಲಿ ಬಾಟಲ್ ಪೆಟ್ರೋಲ್ ತುಂಬಿಸಿಕೊಂಡು ಪ್ರವೀಣ್ ಬುಕ್ ಮಾಡಿದ್ದ ಹೋಟೆಲ್ ರೂಂಗೆ ಬಂದಿದ್ದಾಳೆ. ಹೀಗೆ ಬಂದವಳಿಗೆ ಲೈಂಗಿಕತೆಗೆ ಸಹಕರಿಸುವಂತೆ ಕೇಳಿಕೊಂಡಿದ್ದ. ಈ ವೇಳೆ ಸುಹಾಸಿ ಸಿಂಗ್ ಇದೆಲ್ಲ ಇಲ್ಲಿಗೆ ನಿಲ್ಲಿಸಿ ಬಿಡೋಣ ಎಂದಿದ್ದಾಳೆ.
ಇದರಿಂದ ಸಿಟ್ಟಿಗೆದ್ದ ಪ್ರವೀಣ್ಮ ಪೆನ್ ಡ್ರೈವ್ ನಲ್ಲಿದ್ದ ಇಬ್ಬರ ನಡುವಿನ ಖಾಸಗಿ ವೀಡಿಯೊ ತೋರಿಸಿದ್ದಾನೆ. ಅಲ್ಲದೇ ಸಹಕರಿಸದಿದ್ದರೆ ತಂದೆ, ತಾಯಿಗೆ ವೀಡಿಯೊ ಕಳಿಸೋದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ನೊಂದ ಆಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.
ಬೆಂಕಿ ಹಚ್ಚಿಕೊಳ್ಳುತ್ತಿದ್ದಂತೆಯೇ ಆರಿಸಲು ಪ್ರವೀಣ್ ಸಿಂಗ್ ಯತ್ನಿಸಿದ್ದಾನೆ. ತಕ್ಷಣ ಸ್ನಾನದ ಕೊಣೆಗೆ ಎತ್ತಿಕೊಂಡು ಹೋಗಿ ಶವರ್ ಆನ್ ಮಾಡಿದ್ದ. ಅಷ್ಟರಲ್ಲಾಗಲ್ಲೇ ಸಂಪೂರ್ಣ ಸುಟ್ಟು ಹೋಗಿದ್ದ ಯುವತಿ ಸುಹಾಸಿ ಸಿಂಗ್ ಳನ್ನ ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ಸುಹಾಸಿ ಸಿಂಗ್ ರವಾನೆ ಮಾಡಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಜನವರಿ 12 ರಂದು ರಾತ್ರಿ 10 ಗಂಟೆಗೆ ಸುಹಾಸಿ ಸಿಂಗ್ ಸಾವನ್ನಪ್ಪಿದ್ದಾಳೆ.
ಮೃತ ಯುವತಿ ತಾಯಿ ನೀಡಿದ ದೂರಿದ ಆಧಾರದ ಮೇಲೆ ಘಟನೆ ಸಂಬಂಧ ಎಫ್ಐಆರ್ ದಾಖಲಿಸಿಕೊಂಡ ಹೆಚ್ಎಎಲ್ ಪೊಲೀಸರು, ಆರೋಪಿ ಪ್ರವೀಣ್ ಸಿಂಗ್ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅದೇನೆ ಹೇಳಿ ಬಾಳಿ ಬದುಕ ಬೇಕಾದ ಯುವತಿ ಕಾಮ ಕ್ರಿಮಿಯ ಸಂಗ ಮಾಡಿ ಸಾವಿನ ಮನೆ ಸೇರಿರೋದು ಮಾತ್ರ ನಿಜಕ್ಕೂ ದುರಂತ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ