AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಹವಾಮಾನ ವರದಿ: ಬೆಂಗಳೂರು, ತುಮಕೂರಿನಲ್ಲಿಂದು ಗಾಳಿ ಮಳೆ ಅಬ್ಬರ ಜೋರು!

Karnataka Weather: ಬೆಂಗಳೂರಿನ ಮೆಜೆಸ್ಟಿಕ್, ಶಾಂತಿನಗರ ಸೇರಿದಂತೆ ಹಲವೆಡೆ ಬೆಳ್ಳಂಬೆಳಗ್ಗೆ ಏಕಾಏಕಿ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯಲ್ಲೂ ಸಾಧಾರಣ ಮಳೆಯ ಮುನ್ಸೂಚನೆಯಿದೆ. ಇನ್ನೂ ಮೂರು ದಿನ ರಾಜ್ಯದಲ್ಲಿ ವರುಣಾರ್ಭಟವಿರಲಿದೆ ಎಂದು ಇಲಾಖೆ ತಿಳಿಸಿದೆ.

ಕರ್ನಾಟಕ ಹವಾಮಾನ ವರದಿ: ಬೆಂಗಳೂರು, ತುಮಕೂರಿನಲ್ಲಿಂದು ಗಾಳಿ ಮಳೆ ಅಬ್ಬರ ಜೋರು!
ಬೆಂಗಳೂರು, ತುಮಕೂರಿನಲ್ಲಿಂದು ಗಾಳಿ ಮಳೆ ಅಬ್ಬರ ಜೋರು!
ಭಾವನಾ ಹೆಗಡೆ
|

Updated on:May 04, 2026 | 7:59 AM

Share

ಬೆಂಗಳೂರು, ಮೇ 04: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮಳೆರಾಯ (Karnataka Weather) ಮುಖ ತೋರಿಸಿದ್ದು, ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ, ಶಾಂತಿನಗರ, ಯಶವಂತಪುರ, ಮಲ್ಲೇಶ್ವರ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್ ಸುತ್ತಮುತ್ತ ದಿಢೀರನೆ ಭಾರೀ ಮಳೆ ಸುರಿದಿದೆ. ಬೆಂಗಳೂರಿನಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಎಲ್ಲೆಲ್ಲಿ ಮಳೆ

ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕರ್ನಾಟಕದ ಬೀದರ್, ಕಲ್ಬುರ್ಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಂಭವವಿದ್ದು, ಉಳಿದೆಡೆ ಶುಷ್ಕ ವಾತಾವರಣವಿರಲಿದೆ ಎಂದು ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ವಿಜಯನಗರ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ 30-40 ಕಿ. ಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಜೋರು ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಇನ್ನೂ ಮೂರು ದಿನ ಗುಡುಗು, ಮಳೆಯಬ್ಬರ!

ಕರ್ನಾಟಕದ ದಕ್ಷಿಣ ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮೇ 05 ಮತ್ತು ಮೇ 7ರಂದು ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ ಬೆಂಗಳೂರಿನಲ್ಲಿ ಬೆಳಗ್ಗೆಯೇ ಮಳೆ ಅಬ್ಬರ, ಮೆಜೆಸ್ಟಿಕ್-ಶಾಂತಿನಗರ ಸೇರಿ ಹಲವೆಡೆ ವರ್ಷಧಾರೆ

ಕರ್ನಾಟಕದ ಉತ್ತರ ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ (3.1° C ನಿಂದ 5.0° C). ಕರಾವಳಿ ಕರ್ನಾಟಕದ ಕೆಲವು ಸ್ಥಳಗಳಲ್ಲಿ ಮತ್ತು ಉತ್ತರ ಕರ್ನಾಟಕದ ಒಂದು ಅಥವಾ ಎರಡು ಸ್ಥಳಗಳಲ್ಲಿ ಸಾಮಾನ್ಯಕ್ಕಿಂತ 1.6° C ನಿಂದ 3.0° C ಹೆಚ್ಚಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:51 am, Mon, 4 May 26

Follow Us
ಮಕ್ಕಳ ಹಣೆಯ ಮೇಲೆ ವಿಭೂತಿ ಅಥವಾ ಕುಂಕುಮ ಯಾಕೆ ಇಡಬೇಕು ಗೊತ್ತಾ?
ಮಕ್ಕಳ ಹಣೆಯ ಮೇಲೆ ವಿಭೂತಿ ಅಥವಾ ಕುಂಕುಮ ಯಾಕೆ ಇಡಬೇಕು ಗೊತ್ತಾ?
ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ!
ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ!
DSP ಸಿರಾಜ್ ಶಿಸ್ತುಬದ್ಧ ದಾಳಿಗೆ ಪಂಜಾಬ್ ಸುಸ್ತು
DSP ಸಿರಾಜ್ ಶಿಸ್ತುಬದ್ಧ ದಾಳಿಗೆ ಪಂಜಾಬ್ ಸುಸ್ತು
ಟಿ20 ವೃತ್ತಿಜೀವನದಲ್ಲಿ ಅತ್ಯಂತ ದುಬಾರಿ ಓವರ್ ಎಸೆದ ಪ್ಯಾಟ್ ಕಮ್ಮಿನ್ಸ್
ಟಿ20 ವೃತ್ತಿಜೀವನದಲ್ಲಿ ಅತ್ಯಂತ ದುಬಾರಿ ಓವರ್ ಎಸೆದ ಪ್ಯಾಟ್ ಕಮ್ಮಿನ್ಸ್
ನಟ ಸುದೀಪ್ ಹೆಲಿಕಾಪ್ಟರ್ ಲ್ಯಾಂಡಿಂಗ್​​ನಲ್ಲಿ ಗೊಂದಲ: ಆಗಿದ್ದೇನು?
ನಟ ಸುದೀಪ್ ಹೆಲಿಕಾಪ್ಟರ್ ಲ್ಯಾಂಡಿಂಗ್​​ನಲ್ಲಿ ಗೊಂದಲ: ಆಗಿದ್ದೇನು?
ಒಂದೇ ಸೂರಿನಡಿ ಪ್ರಮುಖ ಶಿಕ್ಷಣ ಸಂಸ್ಥೆಗಳನ್ನು ಪರಿಚಯಿಸಿದ ಟಿವಿ9
ಒಂದೇ ಸೂರಿನಡಿ ಪ್ರಮುಖ ಶಿಕ್ಷಣ ಸಂಸ್ಥೆಗಳನ್ನು ಪರಿಚಯಿಸಿದ ಟಿವಿ9
ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಮತ ಎಣಿಕೆಗೆ ಕ್ಷಣಗಣನೆ
ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಮತ ಎಣಿಕೆಗೆ ಕ್ಷಣಗಣನೆ
ಮೈಸೂರು ಬೆಂಗಳೂರು ಎಕ್ಸ್‌‍‌ಪ್ರೆಸ್‌ವೇನಲ್ಲಿ ವಾಹನ ಪಲ್ಟಿ, ಭಯಾನಕ ದೃಶ್ಯ!
ಮೈಸೂರು ಬೆಂಗಳೂರು ಎಕ್ಸ್‌‍‌ಪ್ರೆಸ್‌ವೇನಲ್ಲಿ ವಾಹನ ಪಲ್ಟಿ, ಭಯಾನಕ ದೃಶ್ಯ!
ರಾಯಚೂರು: ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅಗ್ನಿ ಅವಘಡ; ವಿಡಿಯೋ ನೋಡಿ
ರಾಯಚೂರು: ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅಗ್ನಿ ಅವಘಡ; ವಿಡಿಯೋ ನೋಡಿ
19 ಕೆಜಿ ಕಮರ್ಷಿಯಲ್ ಗ್ಯಾಸ್​ ಸಿಲಿಂಡರ್​ಗೆ ಎಷ್ಟು ಖರ್ಚು ಆಗುತ್ತೆ ಗೊತ್ತಾ?
19 ಕೆಜಿ ಕಮರ್ಷಿಯಲ್ ಗ್ಯಾಸ್​ ಸಿಲಿಂಡರ್​ಗೆ ಎಷ್ಟು ಖರ್ಚು ಆಗುತ್ತೆ ಗೊತ್ತಾ?