AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಲೀಕರು ಸ್ಪಂದಿಸ್ತಿಲ್ಲ, ಹಳೇ ದಾಖಲೆ ಸಿಗ್ತಿಲ್ಲ; ಉಚಿತ ಕರೆಂಟ್ ಕೈತಪ್ಪುವ ಭೀತಿಯಲ್ಲಿ ಬೆಂಗಳೂರು ಬಾಡಿಗೆದಾರರು

ರಾಜ್ಯದ ಗೃಹಜ್ಯೋತಿ ಯೋಜನೆ ಮರುಪರಿಶೀಲನೆ ಬೆಂಗಳೂರಿನ ಬಾಡಿಗೆದಾರರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಜುಲೈ 2023 ರ ನಂತರ ಸ್ಥಳಾಂತರಗೊಂಡವರು ಹಳೆಯ ಫಲಾನುಭವಿಗಳ ದಾಖಲೆ ಲಭ್ಯವಿಲ್ಲದೆ ಉಚಿತ ವಿದ್ಯುತ್ ಕಡಿತಗೊಳ್ಳುವ ಭೀತಿಯಲ್ಲಿದ್ದಾರೆ. ಮಾಲೀಕರಿಂದ ಸಹಕಾರ ಸಿಗದೆ ಗೊಂದಲ ಹೆಚ್ಚಿದೆ. ಸ್ವಂತ ಮನೆ ಮಾಲೀಕರಿಗೂ, ಸಂಗಾತಿ ನಿಧನದಂತಹ ಸಂದರ್ಭಗಳಲ್ಲಿ ಅರ್ಹತೆ ಕುರಿತು ಸ್ಪಷ್ಟತೆ ಇಲ್ಲ. ಸರ್ಕಾರ ಅನರ್ಹರನ್ನು ಪತ್ತೆಹಚ್ಚಲು ಈ ಕ್ರಮ ಕೈಗೊಂಡರೂ, ಸಾರ್ವಜನಿಕ ವಲಯದಲ್ಲಿ ತಲ್ಲಣ ಮುಂದುವರಿದಿದೆ.

ಮಾಲೀಕರು ಸ್ಪಂದಿಸ್ತಿಲ್ಲ, ಹಳೇ ದಾಖಲೆ ಸಿಗ್ತಿಲ್ಲ; ಉಚಿತ ಕರೆಂಟ್ ಕೈತಪ್ಪುವ ಭೀತಿಯಲ್ಲಿ ಬೆಂಗಳೂರು ಬಾಡಿಗೆದಾರರು
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Jul 02, 2026 | 7:34 AM

Share

ಮುಖ್ಯಾಂಶಗಳು

  • ‘ಗೃಹಜ್ಯೋತಿ’ ಯೋಜನೆಯ ಫಲಾನುಭವಿಗಳ ಅರ್ಹತೆ ಮರುಪರಿಶೀಲನೆ
  • ಬೆಂಗಳೂರಿನ ಸಾವಿರಾರು ಬಾಡಿಗೆದಾರರಲ್ಲಿ ತೀವ್ರ ಆತಂಕ ಹಾಗೂ ಗೊಂದಲ
  • ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಡೆಸುತ್ತಿರುವ ಈ ಮನೆ ಮನೆ ತಪಾಸಣೆ

ಬೆಂಗಳೂರು ಜು. 2: ರಾಜ್ಯ ಸರ್ಕಾರದ ಉಚಿತ ವಿದ್ಯುತ್ ನೀಡುವ ಮಹತ್ವಾಕಾಂಕ್ಷೆಯ ‘ಗೃಹಜ್ಯೋತಿ’ ಯೋಜನೆಯ ಫಲಾನುಭವಿಗಳ ಅರ್ಹತೆಯನ್ನು ಮರುಪರಿಶೀಲಿಸುವ (Reverification) ಮನೆ ಮನೆ ಸಮೀಕ್ಷೆ ಪ್ರಕ್ರಿಯೆಯನ್ನು ಇಲಾಖೆಯು ಬುಧವಾರದಿಂದ ಅಧಿಕೃತವಾಗಿ ಆರಂಭಿಸಿದೆ. ಆದರೆ, ಇಲಾಖೆಯ ಈ ಹಠಾತ್ ಕ್ರಮವು ರಾಜಧಾನಿ ಬೆಂಗಳೂರಿನ ಸಾವಿರಾರು ಬಾಡಿಗೆದಾರರಲ್ಲಿ ತೀವ್ರ ಆತಂಕ ಹಾಗೂ ಗೊಂದಲವನ್ನು ಮೂಡಿಸಿದೆ. ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಡೆಸುತ್ತಿರುವ ಈ ಮನೆ ಮನೆ ತಪಾಸಣೆಯ ಸಂದರ್ಭದಲ್ಲಿ, ಪ್ರಸ್ತುತ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳು ತಮ್ಮ ಗುರುತಿನ ಚೀಟಿ (Voter ID), ಆಧಾರ ದಾಖಲೆ ಹಾಗೂ ಮನೆಗೆ ಸಂಬಂಧಿಸಿದ ಇತರ ಪೂರಕ ಪತ್ರಗಳನ್ನು ಕಡ್ಡಾಯವಾಗಿ ಹಾಜರುಪಡಿಸುವಂತೆ ಕೇಳುತ್ತಿದ್ದಾರೆ. ಜುಲೈ 2023 ರ ನಂತರ ಹೊಸದಾಗಿ ಬಾಡಿಗೆ ಮನೆಗಳಿಗೆ ಸ್ಥಳಾಂತರಗೊಂಡಿರುವ ಗ್ರಾಹಕರಲ್ಲಿ ಈ ನಿಯಮವು ಹೆಚ್ಚಿನ ಆತಂಕವನ್ನು ಸೃಷ್ಟಿಸಿದೆ.

ಅನೇಕ ಬಾಡಿಗೆದಾರರು ತಮಗಿಂತ ಮುಂಚೆ ಆ ಮನೆಯಲ್ಲಿದ್ದ ಹಳೆಯ ಫಲಾನುಭವಿಗಳ ಹೆಸರಿನಲ್ಲೇ ಗೃಹಜ್ಯೋತಿ ಸೌಲಭ್ಯ ಮುಂದುವರಿಯುತ್ತಿರುವುದನ್ನು ಬಳಸಿಕೊಳ್ಳುತ್ತಿದ್ದರು. “ನಾವು ಈ ಬಗ್ಗೆ ಮಾಲೀಕರ (Landlord) ಸಹಾಯ ಕೇಳಿದರೂ ಅವರಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಈಗ ಅಧಿಕಾರಿಗಳು ಮರುಪರಿಶೀಲನೆಗೆ ಬಂದಾಗ ಹಳೆಯ ಫಲಾನುಭವಿಗಳ ಮೂಲ ದಾಖಲೆಗಳನ್ನು ಒದಗಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಈ ತಾಂತ್ರಿಕ ಕಾರಣದಿಂದಾಗಿ ನಮಗೆ ಸಿಗುತ್ತಿದ್ದ ಉಚಿತ ವಿದ್ಯುತ್ ಕಡಿತ ಆಗಬಹುದು,” ಎಂದು ಹಲವು ಬಾಡಿಗೆ ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಇಂದಿನ ಹವಾಮಾನ: ರಾಜ್ಯಾದ್ಯಂತ ಮುಂದುವರಿದ ಮೋಡ ಕವಿದ ವಾತಾವರಣ; ಉಡುಪಿ, ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್

ಕೇವಲ ಬಾಡಿಗೆದಾರರು ಮಾತ್ರವಲ್ಲದೆ, ಸ್ವಂತ ಮನೆ ಹೊಂದಿರುವ ಕೆಲವು ಕುಟುಂಬಗಳೂ ಸಹ ಈ ಸಮೀಕ್ಷೆಯಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಯಲಹಂಕದ ನಿವಾಸಿಯೊಬ್ಬರು ಮಾತನಾಡಿ, “ನಾನು ನನ್ನ ಪತ್ನಿಯ ಹೆಸರಿನಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದೆ, ಆದರೆ ದುರಾದೃಷ್ಟವಶಾತ್ ಇತ್ತೀಚೆಗೆ ಅವರು ನಿಧನರಾಗಿದ್ದಾರೆ. ಈಗ ಆ ಖಾತೆಯನ್ನು ನನ್ನ ಹೆಸರಿಗೆ ಲಿಂಕ್ ಮಾಡಿಸುವುದು ಹೇಗೆ ಮತ್ತು ಸೌಲಭ್ಯ ಮುಂದುವರಿಯುತ್ತದೆಯೇ ಇಲ್ಲವೇ ಎಂಬ ಗೊಂದಲ ನನಗಿದೆ,” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಎಲ್ಲಾ ಗೊಂದಲಗಳ ನಡುವೆ, ಸರ್ಕಾರವು ಕೇವಲ ಅನರ್ಹರನ್ನು ಮತ್ತು ನಿಯಮ ಬಾಹಿರವಾಗಿ ಸೌಲಭ್ಯ ಪಡೆಯುತ್ತಿರುವವರನ್ನು ಪತ್ತೆ ಹಚ್ಚಲು ಈ ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿಸಿದೆಯಾದರೂ, ಸಾರ್ವಜನಿಕ ವಲಯದಲ್ಲಿ ಮಾತ್ರ ತಲ್ಲಣ ಮುಂದುವರಿದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?
ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?
ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡಿದ ‘ಬಿಗ್ ಬಾಸ್ ಕನ್ನಡ 13’ ಸ್ಪರ್ಧಿ ಮಂಜ
ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡಿದ ‘ಬಿಗ್ ಬಾಸ್ ಕನ್ನಡ 13’ ಸ್ಪರ್ಧಿ ಮಂಜ
ಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ವಿದ್ಯಾರ್ಥಿಗಳ ಸಾಧನೆ
ಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ವಿದ್ಯಾರ್ಥಿಗಳ ಸಾಧನೆ