ಬೆಂಗಳೂರು: ನಗರದ ಈ ರಸ್ತೆಗಳಲ್ಲಿಂದು ಟ್ರಾಫಿಕ್ ಕಿರಿಕಿರಿ, ಸಂಚಾರ ಪೊಲೀಸ್ ಸಲಹೆ ಗಮನಿಸಿ
ಬೆಂಗಳೂರು ಟ್ರಾಫಿಕ್ ಪೊಲೀಸ್ ಸಲಹೆ: ಬೆಂಗಳೂರು ನಗರದ ಹಲವು ಕಡೆಗಳ ರಸ್ತೆಗಳಲ್ಲಿ ಇಂದು ವಿವಿಧ ಕಾರಣಗಳಿಂದ ನಿಧಾನಗತಿಯ ವಾಹನ ಸಂಚಾರ ಇದೆ. ಕೆಲವೆಡೆ ಸಂಜೆ ವರೆಗೂ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ. ಈ ವಿಚಾರವಾಗಿ ಸಂಚಾರ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಕೆಲವೆಡೆ ಪರ್ಯಾಯ ಮಾರ್ಗ ಬಳಕೆಗೆ ಸೂಚನೆ ನೀಡಲಾಗಿದೆ. ಮಾಹಿತಿ ಇಲ್ಲಿದೆ.

ಬೆಂಗಳೂರು, ಜನವರಿ 31: ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ರಸ್ತೆ ಹಾಗೂ ಇತರ ಕಾಮಗಾರಿಗಳು ನಡೆಯುತ್ತಿರುವ ಕಾರಣ ಇಂದು ಟ್ರಾಫಿಕ್ ಜಾಮ್ ಹಾಗೂ ನಿಧಾನ ಗತಿಯ ಸಂಚಾರ ಇರುವ ಸಾಧ್ಯತೆ ಇದೆ. ಈ ವಿಚಾರವಾಗಿ ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ವಾಹನ ಸವಾರು ಮತ್ತು ಸಾರ್ವಜನಿಕರು ಹೊರಡುವ ಮುನ್ನ ಈ ವಿಚಾರವನ್ನು ಗಮನಿಸುವುದು ಒಳಿತು.
ಬಿಎಂಆರ್‌ಸಿಎಲ್ ಕಾಮಗಾರಿ ನಡೆಯುತ್ತಿರುವ ಕಾರಣ ಮಾರತಹಳ್ಳಿ ಪೊಲೀಸ್ ಸ್ಟೇಷನ್ ಎದುರು ಭಾಗದಲ್ಲಿ ಔಟರ್ ರಿಂಗ್ ರೋಡ್ನಲ್ಲಿ (ಹೊರ ವರ್ತುಲ ರಸ್ತೆ) ಇಂದು ನಿಧಾನ ಗತಿಯ ಸಂಚಾರ ಇರುತ್ತದೆ. ಕಾಡುಬೀಸನಹಳ್ಳಿಯಿಂದ ಕಾರ್ತಿಕ ನಗರದ ವರೆಗೆ ಸಂಚಾರದಟ್ಟಣೆ ಇರುತ್ತದೆ. ವಾಹನ ಸವಾರರು ಸಹಕರಿಸಬೇಕು ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ದೊಡ್ಡಾನೆಕುಂದಿ ಬದಲು ಪರ್ಯಾಯಮಾರ್ಗ ಬಳಸಿ
ದೊಡ್ಡಾನೆಕುಂದಿ ಪ್ರದೇಶದಲ್ಲಿ ಸಿವಿಲ್ ಕಾಮಗಾರಿ ನಡೆಯುತ್ತಿದ್ದು ಟ್ರಾಫಿಕ್ ಮೂವ್ಮೆಂಟ್ ನಿಧಾನವಾಗಿದೆ. ಈ ಮಾರ್ಗದಲ್ಲಿ ಇಂದು ಪ್ರಯಾಣ ಮಾಡುವವರು ಪರ್ಯಾಯಮಾರ್ಗಗಳಲ್ಲಿ ಸಂಚರಿಸುವುದು ಉತ್ತಮ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
“Traffic Advisory” Due to ongoing Metro work on ORR (Outer ring road) at opposite marathahalli police station,traffic movement is very slow from kaadubeesanahalli towards kartiknagar ,we request all commuters please co-operate with us, thank you. @CPBlr @Jointcptraffic pic.twitter.com/vrmwkze5ND
— HAL AIRPORT TRAFFIC BTP (@halairporttrfps) January 31, 2025
ಮಾರತಹಳ್ಳಿಯಿಂದ ದೇವರಬೀಸನಹಳ್ಳಿ ಮಾರ್ಗದಲ್ಲಿಯೂ ಸಂಚಾರದಟ್ಟಣೆ ಇದೆ. ಕಾಮಗಾರಿಗಳು ನಡೆಯುತ್ತಿರುವರಿಂದ ಇಂದು ಸಂಜೆವರೆಗೆ ಇದೇ ಪರಿಸ್ಥಿತಿ ಇರಲಿದೆ. ಹೀಗಾಗಿ ವಾಹನ ಸವಾರರು ಸಹಕರಿಸಬೇಕು ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಪಾಣತ್ತೂರು ರೈಲ್ವೆ ಸೇತುವೆ ಬಳಿ ಕೆಪಿಟಿಸಿಎಲ್ ಕೇಬಲ್ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು ಪರಿಣಾಮವಾಗಿ ನಿಧಾನಗತಿಯ ಸಂಚಾರ ಇರುತ್ತದೆ.
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಅಸ್ತ್ರಂ ಆ್ಯಪ್ ಬಿಡುಗಡೆ, ಇಲ್ಲಿದೆ ವಿವರ
ಸಾಕ್ರ ಆಸ್ಪತ್ರೆ ಬಳಿ ಬೆಂಗಳೂರು ಜಲ ಮಂಡಳಿಯ ಪೈಪ್ ಳವಡಿಕೆ ಕಾಮಗಾರಿ ನಡೆಯುತ್ತಿದ್ದು ಸಂಚಾರದ ದಟ್ಟಣೆ ಇದೆ. ವಾಹನ ಸವಾರರು ಪರ್ಯಾಯಮಾರ್ಗವನ್ನು ಬಳಸುವಂತೆ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:03 am, Fri, 31 January 25




