ಆಟೋದಲ್ಲಿ ಎಸ್ಕೇಪ್ ಆಗ್ತಿದ್ದ ಸರಗಳ್ಳನನ್ನ ಚೇಸ್ ಮಾಡಿ ಹಿಡಿದ ಸಂಚಾರಿ ಪೊಲೀಸ್, ಬಾಡಿ ಕ್ಯಾಮೆರಾದಲ್ಲಿ ಸೆರೆ

ಬೆಂಗಳೂರಿನ ಮಾಗಡಿ ರಸ್ತೆ ಸಂಚಾರಿ ಪೊಲೀಸರು ರೆಡ್‌ಹ್ಯಾಂಡ್‌ ಆಗಿ ಕಳ್ಳನನ್ನು ಹಿಡಿದಿದ್ದಾರೆ. ಹೊಸ ವರ್ಷದ ಮೊದಲ ದಿನವೇ ವೀರತಂತಿ ರಸ್ತೆಯಲ್ಲಿ ಚಿನ್ನದ ಸರ ಕಸಿದು ಆಟೋದಲ್ಲಿ ಎಸ್ಕೇಪ್ ಆಗ್ತಿದ್ದ ಕಳ್ಳನ್ನು ಬಂಧಿಸಿದ್ದಾರೆ. ಕಳ್ಳನನ್ನು ಹಿಡಿದ ದೃಶ್ಯ ಬಾಡಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆಟೋದಲ್ಲಿ ಎಸ್ಕೇಪ್ ಆಗ್ತಿದ್ದ ಸರಗಳ್ಳನನ್ನ ಚೇಸ್ ಮಾಡಿ ಹಿಡಿದ ಸಂಚಾರಿ ಪೊಲೀಸ್, ಬಾಡಿ ಕ್ಯಾಮೆರಾದಲ್ಲಿ ಸೆರೆ
ಸರಗಳ್ಳನನ್ನ ಚೇಸ್ ಮಾಡಿ ಹಿಡಿದ ಸಂಚಾರಿ ಪೊಲೀಸ್
Follow us
TV9 Web
| Updated By: ಆಯೇಷಾ ಬಾನು

Updated on: Jan 03, 2024 | 2:42 PM

ಬೆಂಗಳೂರು, ಜ.03: ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಸರಗಳ್ಳತನ (Chain Snatching) ಮಾಡಿ ಪರಾರಿಯಾಗ್ತಿದ್ದ ಕಳ್ಳನನ್ನ ಸಂಚಾರಿ ಪೊಲೀಸರು (Bengaluru Traffic Police) ಚೇಸ್‌ ಮಾಡಿ ಹೆಡೆಮುರಿ ಕಟ್ಟಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆ ಸಂಚಾರಿ ಪೊಲೀಸರು ರೆಡ್‌ಹ್ಯಾಂಡ್‌ ಆಗಿ ಕಳ್ಳನನ್ನು ಹಿಡಿದಿದ್ದಾರೆ. ಹೊಸ ವರ್ಷದ ಮೊದಲ ದಿನವೇ ವೀರತಂತಿ ರಸ್ತೆಯಲ್ಲಿ ಚಿನ್ನದ ಸರ ಕಸಿದು ಆಟೋದಲ್ಲಿ ಎಸ್ಕೇಪ್ ಆಗ್ತಿದ್ದ ಕಳ್ಳನ್ನು ಬಂಧಿಸಿದ್ದಾರೆ.

ಜ.01ರ ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದ ಸರಗಳ್ಳತನ ಬಗ್ಗೆ ಸಂಚಾರಿ ಪೊಲೀಸರಿಗೆ ಸ್ಥಳೀಯ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಸಂಚಾರಿ ಪೊಲೀಸ್, ಆಟೋದಲ್ಲಿ ತೆರಳುತ್ತಿದ್ದ ಸರಗಳ್ಳನನ್ನು ಬೆನ್ನಟ್ಟಿದ್ದಾರೆ. ಕೊನೆಗೆ ಆಟೋ ಹಿಂಬಾಲಿಸಿ ಆರೋಪಿಯನ್ನು ಬಂಧಿಸುವಲ್ಲಿ ಟ್ರಾಫಿಕ್‌ ಪೊಲೀಸ್ ಯಶಸ್ವಿಯಾಗಿದ್ದಾರೆ. ಕಳ್ಳನನ್ನು ಹಿಡಿದ ದೃಶ್ಯ ಬಾಡಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಂಚಾರಿ ಪೊಲೀಸರ ಕೆಲಸವನ್ನು ಪೊಲೀಸ್ ಆಯುಕ್ತ ಬಿ.ದಯಾನಂದ್ ಹೊಗಳಿದ್ದಾರೆ. ಕಳ್ಳನನ್ನು ಹಿಡಿಯುವ ದೃಶ್ಯವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಗಿಂಬಳದ ಹಿಂದೆ ಬಿದ್ದಿದ್ದ ಸರ್ಕಾರಿ ನೌಕರ ಬಿಲ್ಡಪ್ ಕೊಟ್ಟು ಮದುವೆಗೆ ಸಜ್ಜಾಗಿದ್ದ, ವರದಕ್ಷಿಣೆ ದಾಹವೂ ಸೇರಿಕೊಂಡಾಗ… ಏನಾಯ್ತು ನೋಡಿ

ಸ್ಕೂಟಿ ಡಿಕ್ಕಿಯಾದ ರಭಸಕ್ಕೆ ಹಾರಿ ಬಿದ್ದ ಪಾದಚಾರಿ

ಚಿಕ್ಕಮಗಳೂರಿನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸ್ಕೂಟಿ ಡಿಕ್ಕಿ ಹೊಡೆದ ರಭಸಕ್ಕೆ ಪಾದಚಾರಿ ಹಾರಿಬಿದ್ದಿದ್ದಾನೆ. ಈ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಚಿಕ್ಕಮಗಳೂರಿನ ಬಿಳಗುಳ ಗ್ರಾಮದ ಬಳಿ ಈ ಅಪಘಾತದ ನಡೆದಿದೆ. ಬೆಳಗಿನ ಜಾವ ವಾಕಿಂಗ್ ಹೋಗಿದ್ದ ಸಮೀರ್ ಎಂಬಾತ ರಸ್ತೆ ದಾಟಲು ಮುಂದಾದಾಗ ಸ್ಕೂಟಿ ಡಿಕ್ಕಿ ಹೊಡೆದಿದ್ದು, ಸಮೀರ್‌ ಮುಖ ಮತ್ತು ಕೈ, ಕಾಲಿಗೆ ಪೆಟ್ಟು ಬಿದ್ದಿದೆ. ಸ್ಕೂಟಿ ಡಿಕ್ಕಿ ಹೊಡೆದ ರಭಸಕ್ಕೆ ಸಮೀರ್ ಹಾರಿ ಬಿದ್ದಿದ್ದಾರೆ. ಸ್ಕೂಟಿ ಚಾಲಕನಿಗೂ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ