ಬೆಂಗಳೂರಿನ ವಾಹನ ಸವಾರರಿಗೆ ಜಿಬಿಯಿಂದ ಬಿಗ್ ರಿಲೀಫ್; 107 ಬಸ್ ನಿಲ್ದಾಣಗಳ ಸ್ಥಳಾಂತರಕ್ಕೆ ಮಾಸ್ಟರ್ ಪ್ಲಾನ್!

ಬೆಂಗಳೂರಿನ ಸರಣಿ ಟ್ರಾಫಿಕ್ ಜ್ಯಾಮ್‌ಗೆ ಪರಿಹಾರ ಕಂಡುಕೊಳ್ಳಲು ಜಿಬಿಎ ಮತ್ತು ಬಿಎಂಟಿಸಿ ಮಹತ್ವದ ಮಾಸ್ಟರ್ ಪ್ಲಾನ್ ರೂಪಿಸಿವೆ. ಸಿಗ್ನಲ್ ಹಾಗೂ ಜಂಕ್ಷನ್ ಬಳಿ ಇರುವ 107 ಬಸ್ ನಿಲ್ದಾಣಗಳನ್ನು ಕನಿಷ್ಠ 50 ಮೀಟರ್ ದೂರಕ್ಕೆ ಸರಿಸಲಾಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕೆ ಹೈಟೆಕ್ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದ್ದು, ವಾಹನ ಸಂಚಾರ ಸುಗಮವಾಗಲಿದೆ.

ಬೆಂಗಳೂರಿನ ವಾಹನ ಸವಾರರಿಗೆ ಜಿಬಿಯಿಂದ ಬಿಗ್ ರಿಲೀಫ್; 107 ಬಸ್ ನಿಲ್ದಾಣಗಳ ಸ್ಥಳಾಂತರಕ್ಕೆ ಮಾಸ್ಟರ್ ಪ್ಲಾನ್!
107 ಬಸ್ ನಿಲ್ದಾಣಗಳ ಸ್ಥಳಾಂತರಕ್ಕೆ ಮಾಸ್ಟರ್ ಪ್ಲಾನ್!
Edited By:

Updated on: Sep 09, 2026 | 7:51 AM

ಮುಖ್ಯಾಂಶಗಳು

  • ಬೆಂಗಳೂರಿನ 107 ಬಸ್ ನಿಲ್ದಾಣಗಳನ್ನು ಸಿಗ್ನಲ್‌ನಿಂದ ದೂರ ಸ್ಥಳಾಂತರಿಸಲು ನಿರ್ಧಾರ.
  • ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು ಜಿಬಿಎ-ಬಿಎಂಟಿಸಿ ಮಾಸ್ಟರ್ ಪ್ಲಾನ್.
  • ಸಿಗ್ನಲ್‌ನಿಂದ 50 ಮೀಟರ್ ದೂರದಲ್ಲಿ ಸುಸಜ್ಜಿತ ಬಸ್ ನಿಲ್ದಾಣಗಳ ನಿರ್ಮಾಣ.

ಬೆಂಗಳೂರು, ಸೆಪ್ಟೆಂಬರ್ 09: ಬೆಂಗಳೂರಿನಲ್ಲಿ ಟ್ರಾಫಿಕ್ ಸಿಗ್ನಲ್ ದಾಟುವುದೇ ಬೃಹತ್ ಸವಾಲಾಗಿದ್ದ ವಾಹನ ಸವಾರರಿಗೆ ಇದೀಗ ಬಿಗ್ ರಿಲೀಫ್ ಸಿಗಲಿದೆ. ಪ್ರಮುಖ ಜಂಕ್ಷನ್‌ಗಳ ಬಳಿ ಉಂಟಾಗುತ್ತಿದ್ದ ನಿತ್ಯದ ಸರಣಿ ಟ್ರಾಫಿಕ್ ಜ್ಯಾಮ್‌ಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಬಿಎಂಟಿಸಿ ಜಂಟಿಯಾಗಿ ಬೃಹತ್ ಮಾಸ್ಟರ್ ಪ್ಲಾನ್ ಒಂದನ್ನು ರೂಪಿಸಿವೆ. ನಗರದಲ್ಲಿ ಅಜ್ಞಾನದಿಂದ ನಿರ್ಮಿಸಲಾಗಿದ್ದ 107 ಪ್ರಮುಖ ಬಸ್ ನಿಲ್ದಾಣಗಳನ್ನು ವೈಜ್ಞಾನಿಕವಾಗಿ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.

ಸಿಗ್ನಲ್‌ನಿಂದ ಕನಿಷ್ಠ 50 ಮೀಟರ್ ದೂರಕ್ಕೆ ಶಿಫ್ಟ್

ಟ್ರಾಫಿಕ್ ಸಿಗ್ನಲ್ ಹಾಗೂ ಜಂಕ್ಷನ್‌ಗಳ ತೀರಾ ಹತ್ತಿರದಲ್ಲೇ ಬಸ್‌ಗಳು ನಿಲ್ಲುವುದರಿಂದ ಹಿಂಬದಿಯ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತಿತ್ತು. ಇದನ್ನರಿತ ಸಂಚಾರ ಪೊಲೀಸರ ತಾಂತ್ರಿಕ ವರದಿ ಆಧಾರದ ಮೇಲೆ, ಸಿಗ್ನಲ್ ಕ್ಲಿಯರ್ ಆದ ತಕ್ಷಣ ವಾಹನಗಳು ಸುಗಮವಾಗಿ ಸಾಗಲು ಬಸ್ ನಿಲ್ದಾಣಗಳನ್ನು ಸಿಗ್ನಲ್‌ನಿಂದ ಕನಿಷ್ಠ 50 ಮೀಟರ್ ದೂರಕ್ಕೆ ಸರಿಸಲಾಗುತ್ತಿದೆ. ಇದರಿಂದ ಜಂಕ್ಷನ್‌ಗಳಲ್ಲಿ ಉಂಟಾಗುವ ವಾಹನ ದಟ್ಟಣೆ ನಿಯಂತ್ರಣಕ್ಕೆ ಬರಲಿದೆ.

ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ

ರಸ್ತೆ ತಿರುವುಗಳಲ್ಲಿ ಬಸ್‌ಗಳು ನಿಲ್ಲುವುದರಿಂದ ಸಂಭವಿಸುತ್ತಿದ್ದ ಸರಣಿ ಅಪಘಾತಗಳನ್ನು ತಪ್ಪಿಸಲು ಜನರು ಹಾಗೂ ಚಾಲಕರು ನಿರಂತರ ಮನವಿ ಮಾಡುತ್ತಿದ್ದರು. ನೂತನ ಯೋಜನೆಯಡಿ ಕೇವಲ ಬಸ್ ನಿಲ್ದಾಣಗಳನ್ನು ಶಿಫ್ಟ್ ಮಾಡುವುದು ಮಾತ್ರವಲ್ಲದೆ, ಪ್ರಯಾಣಿಕರಿಗೆ ಸುಸಜ್ಜಿತ ನೆರಳು, ನೈರ್ಮಲ್ಯ ಹಾಗೂ ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತನಾಡಿ, “ಸಂಚಾರ ದಟ್ಟಣೆ ತಗ್ಗಿಸಲು ಹಾಗೂ ಸಾರ್ವಜನಿಕ ಸಾರಿಗೆ ಸೌಲಭ್ಯವನ್ನು ಜಾಗತಿಕ ಮಟ್ಟದಲ್ಲಿ ಮೇಲ್ದರ್ಜೆಗೇರಿಸಲು ಈ ಮಾಸ್ಟರ್ ಪ್ಲಾನ್ ಜಾರಿಗೆ ತರಲಾಗುತ್ತಿದೆ” ಎಂದಿದ್ದಾರೆ. ವಿಜ್ಞಾನಾಧಾರಿತವಾಗಿ ಕೈಗೊಂಡಿರುವ ಈ ಯೋಜನೆಯಿಂದ ರಾಜಧಾನಿಯ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ಮೂಡಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರುಣ್ ಕುಮಾರ್​ ಆರ್​.

ಅರುಣ್ ಕುಮಾರ್ ಆರ್. ಬೆಂಗಳೂರಿನ ಜ್ಞಾನಭಾರತಿ ವಿವಿಯಲ್ಲಿ ಸಮೂಹ ಸಂವಹನ ಹಾಗೂ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಟಿವಿ9 ಕನ್ನಡದಲ್ಲಿ ಮೆಟ್ರೋ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಜಿಬಿಎ ಹಾಗೂ ನಗರದ ಅಭಿವೃದ್ಧಿ ಕ್ಷೇತ್ರದಲ್ಲಿ ಒಂದು ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಇವರು, ಒಟ್ಟು 2 ವರ್ಷಗಳ ವರದಿಗಾರಿಕೆ ಅನುಭವದೊಂದಿಗೆ ಜನೋಪಯೋಗಿ ವಿಷಯಗಳ ಕುರಿತು ವರದಿ ಮಾಡುತ್ತಿದ್ದಾರೆ.

Read More
Loading...
Unable to load recommendations.
Follow Us