AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangalore Vegetable Price: ಟೊಮೆಟೋ ಬೆಲೆ ಭಾರಿ ಹೆಚ್ಚಳ, ಬೆಂಗಳೂರಿನಲ್ಲಿ ತರಕಾರಿ ಬೆಲೆ ಏರಿಕೆ

ಬೆಂಗಳೂರು ತರಕಾರಿ ಬೆಲೆ: ಕರ್ನಾಟಕದಲ್ಲಿ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಬೇಸತ್ತು ಹೋಗಿದ್ದಾರೆ. ನಿತ್ಯ ಅತ್ಯಗತ್ಯವಾಗಿ ಬೇಕಾದ ತರಕಾರಿಗಳ ಬೆಲೆ ಕೇಳಿ ಗ್ರಾಹಕರು ಬೇಸರ ಹೊರಹಾಕುವಂತಾಗಿದೆ. ಅದರಲ್ಲೂ ಅಡುಗೆಗೆ ಅನಿವಾರ್ಯವಾದ ಟೊಮೆಟೋ ಬೆಲೆ ಕೆಜಿಗೆ 70-80 ರೂಪಾಯಿಗೆ ಬಂದು ನಿಂತಿದ್ದು ಜನರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Bangalore Vegetable Price: ಟೊಮೆಟೋ ಬೆಲೆ ಭಾರಿ ಹೆಚ್ಚಳ, ಬೆಂಗಳೂರಿನಲ್ಲಿ ತರಕಾರಿ ಬೆಲೆ ಏರಿಕೆ
ಸಾಂದರ್ಭಿಕ ಚಿತ್ರ
Ganapathi Sharma
|

Updated on: Nov 26, 2025 | 8:14 AM

Share

ಬೆಂಗಳೂರು, ನವೆಂಬರ್ 26: ಅಗತ್ಯ ವಸ್ತುಗಳ ಬೆಲೆ ಮೇಲಿಂದ ಮೇಲೆ ಏರಿಕೆಯಾಗುತ್ತಿರುವುದು ಬಡ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಗಾಯದ ಮೇಲೆ ಬರೆ ಎಳೆಯುವಂತೆ ಪರಿಸ್ಥಿತಿ ಸೃಷ್ಟಿಸಿದೆ. ಅದರಲ್ಲೂ ನಿತ್ಯ ಅನಿವಾರ್ಯವಾದ ತರಕಾರಿಗಳು ಕೂಡ ಜನರ ಕೈಗೆಟುಕದಷ್ಟು (Vegetable Price) ದುಬಾರಿಯಾಗುತ್ತಿವೆ. ಅದರಲ್ಲೂ ಅಡುಗೆಗೆ ಕಡ್ಡಾಯವಾಗಿ ಬೇಕಾದ ಟೊಮೆಟೋ ಬೆಲೆ ಕೇಳಿ ಗ್ರಾಹಕರು ಆಘಾತಕ್ಕೆ ಒಳಗಾಗುತ್ತಿದ್ದಾರೆ. ಬೆಂಗಳೂರಿನಲ್ಲಿ (Bengaluru) ಕಳೆದ ವಾರ ಕೆಜಿಗೆ 30-40 ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮೆಟೋ ಪ್ರಸ್ತುತ 70-80 ರೂಪಾಯಿಗೆ ಮಾರಾಟವಾಗುತ್ತಿದೆ. ಇದು ಗ್ರಾಹಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಟೊಮೆಟೋ ಬೆಲೆ ಏರಿಕೆಗೆ ಕಾರಣವೇನು?

ಬೇಡಿಕೆಗೆ ತಕ್ಕಂತೆ ಟೊಮೆಟೋ ವಿತರಣೆಯಾಗದ ಹಿನ್ನೆಲೆ ಈ ಬಿಕ್ಕಟ್ಟು ಉದ್ಭವವಾಗಿದೆ ಎಂದು ಕೆಲವು ವ್ಯಾಪಾರಿಗಳು ಹೇಳಿದ್ದಾರೆ. ನಮ್ಮ ಬೇಡಿಕೆಗೆ ತಕ್ಕಷ್ಟು ಟೊಮೆಟೋ ಪೂರೈಕೆ ಆಗುತ್ತಿಲ್ಲ. ಇದರಿಂದ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ವ್ಯಾಪಾರಿ ಅಹಮದ್ ಎಂಬವರು ತಿಳಿಸಿದ್ದಾರೆ.

ಟೊಮೆಟೋ ಮಾತ್ರವಲ್ಲದೆ ಇನ್ನೂ ಹಲವು ತರಕಾರಿಗಳ ಬೆಲೆಯೂ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಬಟಾಣಿ, ಬೀನ್ಸ್, ಕ್ಯಾರೆಟ್, ನೌಕಲ್, ಬದನೇಕಾಯಿ, ಮೆಣಸಿನಕಾಯಿ ಸೇರಿ ಹತ್ತು ಹಲವು ತರಕಾರಿಗಳ ಬೆಲೆ ಕಳೆದ ವಾರಕ್ಕಿಂತ ಹೆಚ್ಚಿದೆ.

ತರಕಾರಿ – ಕಳೆದ ವಾರದ ಬೆಲೆ – ಪ್ರಸ್ತುತ ಬೆಲೆ (ರೂ.ಗಳಲ್ಲಿ)

  • ಟೊಮೆಟೋ – 40 – 70
  • ಬಟಾಣಿ – 60 – 100
  • ಬೀನ್ಸ್ – 50 – 60
  • ನೌಕಲ್ – 30 – 40
  • ಬದನೇಕಾಯಿ – 40 – 50
  • ಮೆಣಸಿನಕಾಯಿ – 60 – 80
  • ಮೂಲಂಗಿ- 60 – 80
  • ತೊಂಡೆಕಾಯಿ- 50 – 60
  • ಬೆಂಡೆಕಾಯಿ- 50 – 60
  • ಬೆಳ್ಳುಳ್ಳಿ- 100 – 120

ಇದನ್ನೂ ಓದಿ: ಇನ್ಮುಂದೆ ಸೌದಿ ಅರೇಬಿಯಾ, ಅಮೆರಿಕ, ಆಸ್ಟ್ರೇಲಿಯಾದಲ್ಲೂ ‘KMF ನಂದಿನಿ’ ಹವಾ

ಒಟ್ಟಾರೆ ತರಕಾರಿಗಳ ಖರೀದಿಗೆ ಅಂತ ಇಂತಿಷ್ಟು ಎಂದು ಬಜೆಟ್ ಫಿಕ್ಸ್ ಮಾಡಿಕೊಂಡು ಬರುವ ಗ್ರಾಹಕರು ಕೊಳ್ಳಲು ಹಿಂದೆ ಮುಂದೆ ನೋಡುವಂತೆ ಆಗಿದೆ. 2 ಕೆಜಿ ಕೊಳ್ಳಲು ಬಂದವರು 1 ಕೆಜಿ ಅಥವಾ ಅರ್ಧ ಕೆಜಿ ಕೊಂಡು ಹೋಗುತ್ತಿದ್ದಾರೆ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ