AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Water Cut: ಬೆಂಗಳೂರಿನ ಹಲವೆಡೆ ನೀರು ಪೂರೈಕೆ ಸ್ಥಗಿತ: ಸಮಯ, ಪ್ರದೇಶ ವಿವರ ಇಲ್ಲಿದೆ

ಬೆಂಗಳೂರಿನ ಜಲ ಸಂಕಷ್ಟ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಒಂದೆಡೆ ನೀರಿನ ಅಭಾವ ತಲೆದೂರಿದ್ದರೆ, ಮತ್ತೊಂದೆಡೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ಕಾರ್ಯಗಳಿಗಾಗಿ ಹಲವು ಪ್ರದೇಶಗಳಲ್ಲಿ 24 ಗಂಟೆ ಅವಧಿಗೆ ನೀರು ಪೂರೈಕೆ ಸ್ಥತಗಿತಗೊಳಿಸಿದೆ. ಯಾವೆಲ್ಲ ಪ್ರದೇಶಗಳಲ್ಲಿ ಎಷ್ಟು ಹೊತ್ತಿನವರೆಗೆ ನೀರು ಪೂರೈಕೆ ಸ್ಥಗಿತವಾಗಿರಲಿದೆ ಎಂಬ ವಿವರ ಇಲ್ಲಿದೆ.

Bengaluru Water Cut: ಬೆಂಗಳೂರಿನ ಹಲವೆಡೆ ನೀರು ಪೂರೈಕೆ ಸ್ಥಗಿತ: ಸಮಯ, ಪ್ರದೇಶ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
Ganapathi Sharma
|

Updated on: Feb 27, 2024 | 11:45 AM

Share

ಬೆಂಗಳೂರು, ಫೆಬ್ರವರಿ 27: ಬೆಂಗಳೂರು ನಗರದ (Bengaluru City) ಹಲವೆಡೆ ಇಂದು (ಮಂಗಳವಾರ) ಮತ್ತು ನಾಳೆ ನೀರು ಪೂರೈಕೆಯಲ್ಲಿ (Water Supply) ವ್ಯತ್ಯಯವಾಗಲಿದೆ. ಮಳೆ ಕೊರತೆ ಮತ್ತು ತಮಿಳುನಾಡಿಗೆ ನೀರು ಬಿಡಬೇಕಾಗಿ ಬಂದ ಕಾರಣ ಕರ್ನಾಟಕವು ಜಲ ಸಂಕಷ್ಟ ಎದುರಿಸುತ್ತಿದ್ದು, ಇದೀಗ ರಾಜ್ಯ ರಾಜಧಾನಿ ಬೆಂಗಳೂರಿಲ್ಲಿ ನೀರಿಗೆ ಸಂಕಷ್ಟ ಎದುರಾಗಿದೆ. 1.3 ಕೋಟಿ ಜನಸಂಖ್ಯೆ ಹೊಂದಿರುವ ನಗರದಲ್ಲಿ ನೀರಿನ ಬೇಡಿಕೆ ಪೂರೈಸಲು ಆಡಳಿತವು ಪರದಾಡುವಂತಾಗಿದೆ. ಈ ಸಂದರ್ಭದಲ್ಲೇ ಎರಡು ದಿನ ಸಿಲಿಕಾನ್ ಸಿಟಿಯ ವಿವಿಧ ಪ್ರದೇಶಗಳಲ್ಲಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಗತ್ಯ ನಿರ್ವಹಣಾ ಕಾರ್ಯಗಳನ್ನು ನಿರ್ವಹಿಸಲು ಮತ್ತು ಮೀಟರ್‌ಗಳನ್ನು ಸ್ಥಾಪಿಸಲು ನೀರು ಪೂರೈಕೆ ತಾತ್ಕಾಲಿತ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.

ಫೆಬ್ರವರಿ 27 ರಂದು ಬೆಳಿಗ್ಗೆ 6 ಗಂಟೆಯಿಂದ ಫೆಬ್ರವರಿ 28 ರಂದು ಬೆಳಿಗ್ಗೆ 6 ರವರೆಗೆ ನೀರು ಪೂರೈಕೆ ಸ್ಥಗಿತಗೊಂಡಿರಲಿದೆ.

ಎಲ್ಲೆಲ್ಲಿ ನೀರು ಪೂರೈಕೆ ಸ್ಥಗಿತ?

ದಕ್ಷಿಣ ಬೆಂಗಳೂರು

ಬಿಹೆಚ್​ಇಎಲ್​ ಲೇಔಟ್, ಶ್ರೀನಿವಾಸ ನಗರ, ಜೈಮಾರುತಿ ನಗರ, ನಂದಿನಿ ಲೇಔಟ್, ಸಾಕಮ್ಮ ಲೇಔಟ್, ನರಸಿಂಹ ಸ್ವಾಮಿ ಲೇಔಟ್, ಮುನೇಶ್ವರ ನಗರ, ಜ್ಞಾನ ಜ್ಯೋತಿ ನಗರ, ಜ್ಞಾನಗಂಗಾನಗರ, ಮಲ್ಲತ್ತಹಳ್ಳಿ, ಎನ್​ಜಿಇಎಫ್ ಲೇಔಟ್, ಐಟಿಐ ಲೇಔಟ್‌ನ ಭಾಗ, 1ನೇ ಮತ್ತು 2ನೇ ಹಂತದ ರೈಲ್ವೆ ಲೇಔಟ್, ಆರ್​ಹೆಚ್​ಬಿಸಿಎಸ್​ ಲೇಔಟ್ 1 ನೇ ಮತ್ತು 2 ನೇ ಹಂತ, ಬೈರವೇಶ್ವರನಗರ, ಸುಂಕದಕಟ್ಟೆ, ಜಯ ಲಕ್ಷ್ಮಮ್ಮ ಲೇಔಟ್, ಕೆಬ್ಬೆಹಳ್ಳ, ಚಂದನ ಲೇಔಟ್, ಚಂದ್ರಶೇಖರ ಬಡಾವಣೆ, ಭೂವಿಜ್ಞಾನ ಲೇಔಟ್, ನರಸಾಪುರ, ಕಂದಾಯ ಬಡಾವಣೆ, ಮುಳಕಟ್ಟಮ್ಮ ಬಡಾವಣೆ, ಪಾಪರೆಡ್ಡಿಪಾಳ್ಯ ಭಾಗ, ಬಿಇಎಲ್​​ 1ನೇ ಮತ್ತು 2ನೇ ಹಂತ, ಬಿಳೇಕಲ್ಲು, ಬ್ಯಾಡರಹಳ್ಳಿ, ಉಪಕಾರ್ ಲೇಔಟ್ ಈ ಪ್ರದೇಶಗಳಲ್ಲಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.

ಬೆಂಗಳೂರು ಉತ್ತರದಲ್ಲಿ ಎಲ್ಲೆಲ್ಲಿ ಸ್ಥಗಿತ?

ದಾಸರಹಳ್ಳಿ ವಲಯ ಮತ್ತು ಆರ್ ಆರ್ ನಗರ ವಲಯದ ಭಾಗಗಳು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಜಲಕ್ಷಾಮ; ನೀರಿಲ್ಲದೆ ಕಂಗಾಲಾದ ಕೆಂಗೇರಿಯ ಲಗ್ಜುರಿ ಅಪಾರ್ಟ್ಮೆಂಟ್​ನ 2,800 ಕುಟುಂಬಗಳು

ಪೂರ್ವ ಬೆಂಗಳೂರಿನ ಈ ಪ್ರದೇಶಗಳಲ್ಲಿ ಇರಲ್ಲ ನೀರು ಪೂರೈಕೆ

ಎ ನಾರಾಯಣಪುರದ ಭಾಗಗಳು, ಉದಯ ನಗರ, ಆಂಧ್ರ ಕಾಲೋನಿ, ವಿಎಸ್ಆರ್ ಲೇಔಟ್, ಇಂದಿರಾ ಗಾಂಧಿ ಸ್ಟ್ರೀಟ್, ಜ್ಯೋತಿ ನಗರ, ದರ್ಗಮಹಾಲ್, ಸಾಕಮ್ಮ ಲೇಔಟ್, ವಿಜ್ಞಾನ ನಗರ ಸೇವಾ ಠಾಣೆ ವ್ಯಾಪ್ತಿಯ ವಿಜ್ಞಾನ ನಗರ, ಅಕ್ಷಯನಗರ, ಎಂಇಜಿ ಲೇಔಟ್, ರಮೇಶ್ ನಗರ, ವೀರಭದ್ರ ನಗರ, ಜಗದೀಶ್ ನಗರ ಸೇವಾ ಠಾಣೆ ವ್ಯಾಪ್ತಿಯ ಶಿವ ಶಕ್ತಿ ಕಾಲೋನಿ, ದೊಡ್ಡಾನೆಕುಂದಿ ಮತ್ತು ಮಾರತಳ್ಳಿ ಸರ್ವೀಸ್ ಸ್ಟೇಷನ್ಪ್ರ ದೇಶಗಳು, ನಲ್ಲೂರು ಪುರಂ, ರಮೇಶ್ ನಗರ, ರೆಡ್ಡಿ ಪಾಳ್ಯ, ವಿಭೂತಿಪುರ, ಅನ್ನಸಂದ್ರ ಪಾಳ್ಯ, ಎಲ್​ಬಿಎಸ್ ನಗರ ಈ ಪ್ರದೇಶಗಳಲ್ಲಿ ನೀರು ಪೂರೈಕೆ ಇರುವುದಿಲ್ಲ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ