ಬೆಂಗಳೂರಿನಲ್ಲಿ ವೈಟ್​​ ಆ್ಯಂಡ್​ ಬ್ಲಾಕ್​ ದಂಧೆ ಹೆಸರಿನಲ್ಲಿ ಕೋಟ್ಯಂತರ ರೂ ದರೋಡೆ: ಮೂವರ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 05, 2025 | 9:26 PM

ಬೆಂಗಳೂರಿನಲ್ಲಿ ನಡೆದ ಒಂದು ಕೋಟಿ ರೂ. ದರೋಡೆಯಲ್ಲಿ ಮೂವರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ವೈಟ್ ಆ್ಯಂಡ್​ ಬ್ಲಾಕ್ ಹೆಸರಿನಲ್ಲಿ ವಂಚಿಸಿ ಒಂದು ಕೋಟಿ ರೂ ದರೋಡೆ ಮಾಡಲಾಗಿತ್ತು. ಆದರೆ ಒಬ್ಬ ಆರೋಪಿಯನ್ನು ಸ್ಥಳದಲ್ಲೇ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಉಳಿದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನಲ್ಲಿ ವೈಟ್​​ ಆ್ಯಂಡ್​ ಬ್ಲಾಕ್​ ದಂಧೆ ಹೆಸರಿನಲ್ಲಿ ಕೋಟ್ಯಂತರ ರೂ ದರೋಡೆ: ಮೂವರ ಬಂಧನ
ಬೆಂಗಳೂರಿನಲ್ಲಿ ವೈಟ್​​ ಆ್ಯಂಡ್​ ಬ್ಲಾಕ್​ ದಂಧೆ ಹೆಸರಿನಲ್ಲಿ ಕೋಟ್ಯಂತರ ರೂ ದರೋಡೆ: ಮೂವರ ಬಂಧನ
Follow us on

ಬೆಂಗಳೂರು, ಮಾರ್ಚ್​ 05: ನಗರದಲ್ಲಿ ವೈಟ್​​ ಆ್ಯಂಡ್​ ಬ್ಲಾಕ್​ ದಂಧೆ (White and Black Money Scam) ಹೆಸರಿನಲ್ಲಿ ಕೋಟ್ಯಂತರ ರೂ ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ್, ಅಂಬರೀಶ್, ಮಾರ್ಟಿನ್​ನ್ನು ಬಂಧಿಸಿದ ಪೊಲೀಸರು, ನಾಪತ್ತೆಯಾಗಿರುವ ಸಚಿನ್, ರವಿ, ವೆಂಕಟೇಶ್​​ಗಾಗಿ ಹುಡುಕಾಟ ನಡೆಸಿದ್ದಾರೆ. ತನಿಖೆ ಮುಂದುವರೆದಿದೆ.

ಈ‌ ಹಿಂದೆಲ್ಲಾ, ಅಕೌಂಟ್​​ಗೆ ಹಣ ಹಾಕಿದರೆ ನಗದು ಜಾಸ್ತಿ ಕೊಡುತ್ತೇವೆ ಅಂತಾ ನಂಬಿಸಿ ಮೋಸ ಮಾಡುತ್ತಿದ್ದರು. ಈಗ ಕಾಲ ಬದಲಾಗಿದೆ. ನಗದು ಒಂದು ಕೋಟಿ ರೂ ಕೊಟ್ಟರೆ, ಅಕೌಂಟ್​ಗೆ ಇಪ್ಪತ್ತು ಲಕ್ಷ ರೂ ಸೇರಿಸಿ ಒಂದು ಕೋಟಿ ಇಪ್ಪತ್ತು ಲಕ್ಷ ರೂ ಹಾಕ್ತಾರಂತೆ. ಚನ್ನಪಟ್ಟಣ ಮೂಲದ ಜಯಚಂದ್ರ ಅನ್ನೋರಿಗೆ ಇಂದಿರಾನಗರ ನಿವಾಸಿ ಶ್ರೀನಿವಾಸ್ ಅನ್ನೋನು ಇಂಥದೊಂದು ಡೀಲ್ ತಂದಿದ್ದ.

ಇದನ್ನೂ ಓದಿ: ಎರಡು ಕುಟುಂಬಗಳ ನಡುವೆ ಮಾರಾಮಾರಿ: ಜಗಳ ಬಿಡಿಸಲು ಹೋದ ವ್ಯಕ್ತಿ ದುರಂತ ಅಂತ್ಯ

ಇದನ್ನೂ ಓದಿ
ಅಪ್ಪ ಪೋಲಿಸ್.. ಮಗಳು ಕಳ್ಳಿ.. ನಟಿ ರನ್ಯಾ ಚಿನ್ನದ ರಹಸ್ಯ!
ಚಿಕ್ಕಬಳ್ಳಾಪುರ: ಮನೆ ದರೋಡೆಗೆ ಪೊಲೀಸ್​ನಿಂದಲೇ ಟ್ರೈನಿಂಗ್! ಆರೋಪಿ ಅಂದರ್
ಸಾಲ ತೀರಿಸೋಕೆ ಬುರ್ಖಾ ತೊಟ್ಟು ವೃದ್ದೆಯ ಚಿನ್ನಾಭರಣ ಕದ್ದ ಕಳ್ಳಿಯರು
ವಿದೇಶಿಗರಿಗೆ ಮನೆ ಬಾಡಿಗೆ ನೀಡಿದ್ದ ಮಾಲೀಕನಿಗೆ ದಂಡ! ಕಾರಣವೇನು?

ಹೇಗೆ ಅಂತಾ ಕೇಳಿದರೆ, ನಮ್ಮದೊಂದು ಕಂಪನಿ ಇದೆ. ಅಲ್ಲಿ ಅಕೌಂಟ್ ಮೂಲಕ ಹಣ ಹಾಕಿದರೆ ದುಡ್ ಕಟ್ ಆಗುತ್ತೆ. ನಮಗೆ ನಗದು ಬೇಕು, ಬೇರೆ ಕಡೆಯಿಂದ ನಿಮಗೆ ಅಕೌಂಟ್​ಗೆ ಹಣ ಹಾಕ್ತಿವಿ ಅಂತಾ ನಂಬಿಸಿದ್ದಾರೆ. ಜಯಚಂದ್ರ ಕೂಡ ಇಪ್ಪತ್ತು ಲಕ್ಷ ರೂ ಹಣಕ್ಕೆ ಆಸೆ ಬಿದ್ದು ಈ ಡೀಲ್ ಓಕೆ ಮಾಡಿದ್ದ. ಕಳೆದ ಒಂದನೇ ತಾರೀಖು ರಾತ್ರಿ ವೇಳೆ ವಿದ್ಯಾರಣ್ಯಪುರದ ಅದೊಂದು ಕಚೇರಿಯಲ್ಲಿ ಎಲ್ಲರು ಸೇರಿದ್ದರು. ಜಯಚಂದ್ರ ಒಂದು ಕೋಟಿ ರೂ ನಗದು ತಂದು ಟೇಬಲ್ ಮೇಲಿಟ್ಟು, ಒಂದು ಕೋಟಿ ಇಪ್ಪತ್ತು ಲಕ್ಷ ರೂ ಅಕೌಂಟ್​ಗೆ ಹಾಕಿ ಅಂದಿದ್ದ.

ಕರೆಂಟ್ ಕಟ್: ಒಂದು ಕೋಟಿ ರೂ ಮಾಯ

ಯಾವಾಗ ಜಯಚಂದ್ರ ಒಂದು ಕೋಟಿ ರೂ ಹಣ ಆರೋಪಿ ಶ್ರೀನಿವಾಸ್ ಮುಂದಿಟ್ನೋ ಆರೋಪಿಗಳು ಆ ಹಣವನ್ನು ತೆಗೆದುಕೊಳ್ಳೋಕೆ ಮುಂದಾಗಿದ್ದರು. ಈ ವೇಳೆ ಅನುಮಾನಗೊಂಡ ಜಯಚಂದ್ರ ಮೊದಲು, ಅಕೌಂಟ್​ಗೆ ಹಣ ಹಾಕಿ ಆಮೇಲೆ ದುಡ್ಡು ತಗೋಳಿ ಅಂದಿದ್ದಾರೆ. ಈ ಮಾತುಕತೆ ನಡೆಯುತ್ತಿರುವಾಗಲೇ ಕಚೇರಿಯಲ್ಲಿ ದಿಢೀರ್​ ಕರೆಂಟ್ ಕಟ್ ಆಗಿದೆ. ಈ ವೇಳೆ ಒಂದು ಕೋಟಿ ರೂ ಮಂಗಮಾಯವಾಗಿತ್ತು. ತಕ್ಷಣ ಜೊತಗೆ ಇದ್ದ ಓರ್ವನನ್ನು ಅಂದರೆ ಮಾರ್ಟಿನ್ ನನ್ನು ಇಟ್ಟುಕೊಂಡು ಅಲರ್ಟ್ ಆದ ಜಯಚಂದ್ರ 112ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ಏರಿಯಾ ಪೂರ್ತಿ ಸುತ್ತುವರೆದು ಕೆಲವೇ ಗಂಟೆಗಳಲ್ಲಿ ಶ್ರೀನಿವಾಸ್, ಮಾರ್ಟಿನ್ ಮತ್ತು ಅಂಬರೀಶ್​​ನನ್ನು ಬಂಧಿಸಿದ್ದಾರೆ. ಆರೋಪಿಗಳ ಬಳಿ ತೊಂಬತ್ತೆಂಟು ಲಕ್ಷ ರೂ. ಹಣ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಮನೆ ದರೋಡೆಗೆ ಪೊಲೀಸ್​ನಿಂದಲೇ ಟ್ರೈನಿಂಗ್! ಆರೋಪಿ ಅಂದರ್

ಪೊಲೀಸರು ಸ್ವಲ್ಪ ನಿರ್ಲಕ್ಷ್ಯ ಮಾಡಿದ್ರೂ, ಕೋಟಿ ಕೈಗೆ ಸಿಕ್ತಾ ಇರಲಿಲ್ಲ. ಇನ್ನೂ ಜಯಚಂದ್ರ ಕೂಡ ಪ್ರಾರಂಭದಲ್ಲಿ ಕೇಸು, ಗೀಸು ಬೇಡ ಅಂತಿದ್ರಂತೆ. ಪೊಲೀಸರ ಭಾಷೆಯಲ್ಲಿ ವಾರ್ನ್ ಮಾಡಿದ ತಕ್ಷಣ ವಿದ್ಯಾರಣ್ಯಪುರದಲ್ಲಿ ಕೇಸು ದಾಖಲಿಸಿದ್ದಾರೆ. ಆಸಲಿಗೆ ಜಯಚಂದ್ರ ಬಳಿಯಿರುವ ಆ ಹಣದ ಮೂಲ ಯಾವುದು, ಯಾಕೆ ನಗದು ಕೊಟ್ಟು ಅಕೌಂಟ್​​ಗೆ ಹಾಕಿಸಿಕೊಳ್ಳೋಕೆ ಹೋದರೂ ಅನ್ನೋದು ಕೂಡ ಹಲವು ಅನುಮಾನಕ್ಕೆ ಕಾರಣವಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:22 pm, Wed, 5 March 25