ಅಸಭ್ಯ ರೀತಿಯಲ್ಲಿ ಯುವತಿಯರ ವಿಡಿಯೋ ತೆಗೆದು ಅಪ್ಲೋಡ್ ಮಾಡ್ತಿದ್ದ ಯುವಕನ ಬಂಧನ​

ಯುವತಿಯರ ಅಸಭ್ಯ ರೀತಿಯಲ್ಲಿ ವಿಡಿಯೋ ತೆಗೆದು ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್​​ ಮಾಡುತ್ತಿರುವಂತಹ ಘಟನೆಗಳು ಇತ್ತೀಚೆಗೆ ಹೆಚ್ಚಾಗಿವೆ. ಇದೀಗ ಮತ್ತೊಂದು ಇಂತಹದ್ದೆ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದ್ದು, ಸದ್ಯ ಮಣಿಪುರದ ಇಂಪಾಲ್ ಮೂಲದ 19 ವರ್ಷದ ಯುವಕನನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಸಭ್ಯ ರೀತಿಯಲ್ಲಿ ಯುವತಿಯರ ವಿಡಿಯೋ ತೆಗೆದು ಅಪ್ಲೋಡ್ ಮಾಡ್ತಿದ್ದ ಯುವಕನ ಬಂಧನ​
ಹುಸೇನ್‌ ಬಂಧಿತ ಯುವಕ

Updated on: Jul 24, 2025 | 11:57 AM

ಬೆಂಗಳೂರು, ಜುಲೈ 24: ಯುವತಿಯರ (girls) ವಿಡಿಯೋ ತೆಗೆದು ಇನ್​​ಸ್ಟಾಗ್ರಾಂನಲ್ಲಿ ಅಪ್ಲೋಡ್​ ಮಾಡುತ್ತಿದ್ದ ಯುವಕನನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ (Arrest). ಮಣಿಪುರದ ಇಂಪಾಲ್ ಮೂಲದ ದಿಲವರ್ ಹುಸೇನ್​​(19) ಬಂಧಿತ ಯುವಕ. ಎಂ.ಜಿ.ರಸ್ತೆ, ಬ್ರಿಗೇಡ್ ರೋಡ್​ನಲ್ಲಿ ಯುವತಿಯರ ಅಸಭ್ಯ ರೀತಿಯಲ್ಲಿ ವಿಡಿಯೋ ತೆಗೆದು ಬಳಿಕ ಅಪ್ಲೋಡ್ ಮಾಡುತ್ತಿದ್ದ. ಈ ಸಂಬಂಧ ಅಶೋಕನಗರ ಠಾಣೆ ಪೊಲೀಸರು ಸುಮೋಟೋ ಕೇಸ್ ದಾಖಲಾಗಿದೆ.

ಯುವಕ ಹುಸೇನ್‌, ಬೆಂಗಳೂರಿನ ಕೊತ್ತನೂರಿನಲ್ಲಿ ವಾಸವಿದ್ದು, ಫುಡ್ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದ. ಯುವತಿಯರ ಅಸಭ್ಯ ವಿಡಿಯೋಗಳಿಗೆ ಸಾಂಗ್ ಹಾಕಿ ಎಡಿಟ್ ಮಾಡುತ್ತಿದ್ದ. ಬಳಿಕ Dilbar Jaani -64 ಎಂಬ ಇನ್​​ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡುತ್ತಿದ್ದ. ಫೋಲೋವರ್ಸ್ ಹೆಚ್ಚಿಸಿಕೊಳ್ಳಲು ಈ ರೀತಿ ವಿಡಿಯೋ ಮಾಡುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಮೆಟ್ರೋದಲ್ಲಿ ಯುವತಿಯರ ವೀಡಿಯೋ ರೆಕಾರ್ಡ್ ಮಾಡಿ ವಿಕೃತಿ ಮರೆದಿದ್ದವ ಅರೆಸ್ಟ್!

ಇದನ್ನೂ ಓದಿ
ಇಬ್ಬರು ಸ್ನೇಹಿತೆಯರಿಗೆ ಡಿಜಿಟಲ್ ಅರೆಸ್ಟ್: ಬೆತ್ತಲೆಗೊಳಿಸಿ ಕಿರುಕುಳ!
ವಿಧವಾ ಮಹಿಳೆಗೆ ಖಾಸಗಿ ಅಂಗಾಂಗ ತೋರಿಸಿ ವಿಕೃತಿ: ಸುಳ್ಳು ಕೇಸ್​ ದಾಖಲು
ಮೆಟ್ರೋದಲ್ಲಿ ಯುವತಿಯರ ವೀಡಿಯೋ ರೆಕಾರ್ಡ್ ಮಾಡಿ ವಿಕೃತಿ ಮರೆದಿದ್ದವ ಅರೆಸ್ಟ್
ಮೆಟ್ರೋದಲ್ಲಿ ಹುಡುಗಿಯರ ಆಕ್ಷೇಪಾರ್ಹ ವಿಡಿಯೋ,ಇನ್​ಸ್ಟಾಗ್ರಾಂನಲ್ಲಿ ಅಪ್ಲೋಡ್

ಈ ರೀತಿಯ ಪ್ರಕರಣಗಳು ಬೆಂಗಳೂರಿನಲ್ಲಿ ಹೆಚ್ಚುತ್ತಿವೆ. ಇತ್ತೀಚೆಗೆ ಮೆಟ್ರೋದಲ್ಲಿ ಪ್ರಯಾಣಿಸುವ ಯುವತಿಯರ ವಿಡಿಯೋ ತೆಗೆದು ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಿ ವಿಕೃತಿ ಮೆರೆದಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಹಾಸನದ ಹೊಳೆನರಸೀಪುರದ ಮೂಲದ ದಿಗಂತ್​ ಬಂಧಿತ ವ್ಯಕ್ತಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ವಿಡಿಯೋಗಳನ್ನು ಡಿಲೀಟ್‌ ಮಾಡಲಾಗಿತ್ತು.

ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕ ಅರೆಸ್ಟ್

ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗೋವಿಂದಪುರ ಪೊಲೀಸರಿಂದ ಮರೂಫ್ ಫರೀಫ್ ಎಂಬಾತನನ್ನು ಬಂಧಿಸಲಾಗಿದೆ. ಈ ಕುರಿತು ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇಬ್ಬರು ಸ್ನೇಹಿತೆಯರಿಗೆ ಡಿಜಿಟಲ್ ಅರೆಸ್ಟ್: ಬೆತ್ತಲೆಗೊಳಿಸಿ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ

ಯುವತಿ ಅಂಗಡಿಗೆ ರೇಷನ್​ ತರಲು ಹೋಗಿದ್ದಳು. ಈ ವೇಳೆ ಆಕೆಯನ್ನು ಹಿಂಬಾಲಿಸಿದ ಮರೂಫ್ ಫರೀಫ್ ನಡು‌ ರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸುವುದಲ್ಲದೇ ಲೈಂಗಿಕವಾಗಿ ಕಿರುಕುಳ ನೀಡಿದ್ದ. ಆತನಿಂದ ತಪ್ಪಿಸಿಕೊಂಡ ಯುವತಿ ಮನೆಗೆ ಹೋಗಿ ತಾಯಿಯ ಬಳಿ ಹೇಳಿದ್ದಾಳೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.