ವಿಧವಾ ಮಹಿಳೆಗೆ ಖಾಸಗಿ ಅಂಗಾಂಗ ತೋರಿಸಿ ವಿಕೃತಿ ಮೆರೆದ ವ್ಯಕ್ತಿ: ಪ್ರಶ್ನೆ ಮಾಡಿದ್ದಕ್ಕೆ ಸುಳ್ಳು ಕೇಸ್ ದಾಖಲು
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ಓರ್ವ ವ್ಯಕ್ತಿ ವಿಧವೆ ಮಹಿಳೆಗೆ ತನ್ನ ಖಾಸಗಿ ಅಂಗಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿರುವಂತಹ ಘಟನೆ ನಡೆದಿದೆ. ಅಷ್ಟೇ ಅಲ್ಲದೆ ಇದನ್ನು ಪ್ರಶ್ನೆ ಮಾಡಿದ ಮಹಿಳೆ ಸೇರಿ ಆಕೆಯ ಪೋಷಕರ ವಿರುದ್ಧವೇ ಕೇಸ್ ದಾಖಲಿಸಲಾಗಿದೆ. ಇದರಿಂದ ರೊಚ್ಚಿಗೆದ್ದ ಮಹಿಳೆಯರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡಿದ್ದಾರೆ.

ಯಾದಗಿರಿ, ಜುಲೈ 10: ವಿಧವೆ ಸೇರಿದಂತೆ ಒಂಟಿ ಮಹಿಳೆಯರಿಗೆ ಓರ್ವ ವ್ಯಕ್ತಿ ತನ್ನ ಖಾಸಗಿ ಅಂಗಾಂಗವನ್ನು ತೋರಿಸಿ ವಿಕೃತಿ ಮೆರೆದಿರುವಂತಹ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ವಿಧವಾ ಮಹಿಳೆ ಸೇರಿದಂತೆ ಅವರ ಪೋಷಕರ ಮೇಲೆಯೇ ಸುಳ್ಳು ಕೇಸ್ ದಾಖಲಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಗ್ರಾಮದ ಮಹಿಳೆಯರು ವಿಕೃತ ಮೆರೆದ ವ್ಯಕ್ತಿ ವಿರುದ್ಧ ಕೇಸ್ ದಾಖಲಿಸುವಂತೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಿದ್ದಾರೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಪೊಲೀಸ್ ಠಾಣೆ ಎದುರು ಮಹಿಳೆಯರು ಪ್ರತಿಭಟನೆ ಮಾಡಲು ಕಾರಣ ಇದೇ ಗ್ರಾಮದ ಶಿವಪ್ಪ ಉದ್ದನ್. ಏಕೆಂದರೆ ಇತನೇ ವಿಧವೆ ಮಹಿಳೆಗೆ ಖಾಸಗಿ ಅಂಗಾಂಗ ತೋರಿಸಿ ವಿಕೃತಿ ಮೆರೆದ ವ್ಯಕ್ತಿ. ಇತನ ವಿರುದ್ಧ ಕೇಸ್ ದಾಖಲಿಸುವಂತೆ ಮಹಿಳೆಯರು ಠಾಣೆಯ ಪಿಎಸ್‌ಐ ಜೊತೆಗೆ ವಾಗ್ವಾದ ಕೂಡ ಮಾಡಿದ್ದಾರೆ. ಆದರೆ ಪೊಲೀಸರು ಮಾತ್ರ ಕೇಸ್ ದಾಖಲು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕೇಸ್ ದಾಖಲಿಸುವವರೆಗೆ ಪ್ರತಿಭಟನೆ ಮುಂದುವರೆಸುವುದಾಗಿ ಪಟ್ಟು ಹಿಡಿದಿದ್ದಾರೆ.
ಶಿವಪ್ಪ ಉದ್ದಿನ್, ಗ್ರಾಮದ ವಿಧವೆ ಮಹಿಳೆ ಸವಿತಾ ಎಂಬುವವರಿಗೆ ಖಾಸಗಿ ಅಂಗಾಂಗಳನ್ನ ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದನ್ನು ಮಹಿಳೆ ಪೋಷಕರು ಶಿವಪ್ಪಗೆ ಪ್ರಶ್ನೆ ಮಾಡಿದ್ದಾರೆ. ಇದೆ ಕಾರಣಕ್ಕೆ ಶಿವಪ್ಪ ‘ನನಗೆ ಜೀವ ಬೆದರಿಕೆ ಹಾಕಿದ್ದಾರೆ, ನನ್ನ ಮೇಲೆ ಹಲ್ಲೆ’ ಮಾಡಿದ್ದಾರೆ ಎಂದು ಮಹಿಳೆ ಹಾಗೂ ಪೋಷಕರ ವಿರುದ್ಧ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಸುಳ್ಳು ಕೇಸ್ ದಾಖಲಿಸಿದ್ದಾನೆ. ಇತ್ತ ಅನ್ಯಾಯಕ್ಕೆ ಒಳಗಾದ ಸವಿತಾ ‘ನಮ್ಮ ಕೇಸ್ ಪಡೆಯದೇ, ನಮ್ಮವರ ಮೇಲೆಯೇ ಕೇಸ್ ದಾಖಲು ಮಾಡಿದ್ದಾರೆ’ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಯಾದಗಿರಿ: ಕಲುಷಿತ ನೀರು ಸೇವಿಸಿ ಮೂವರ ಸಾವು, 6 ಜನರ ಸ್ಥಿತಿ ಗಂಭೀರ
ಕಳೆದ ಕೆಲ ದಿನಗಳಿಂದ ಶಿವಪ್ಪ ವಿಧವೆ ಮಹಿಳೆಗೆ ಖಾಸಗಿ ಅಂಗಾಂಗಳನ್ನ ತೋರಿಸುತ್ತಿದ್ದ. ಮನೆ ಹೊರಗಡೆ, ಮಹಿಳೆ ಇದ್ದ ಕಡೆ ಬಂದು ಮೂರ್ತ ವಿಸರ್ಜನೆ ಮಾಡುವ ನೆಪದಲ್ಲಿ ಅಂಗಾಂಗ ತೋರಿಸುತ್ತಿದ್ದ. ಮೊದಲಿಗೆ ಮಹಿಳೆ ಪೋಷಕರು ಶಿವಪ್ಪ ಬಳಿ ಹೋಗಿ ಬುದ್ದಿ ಮಾತು ಹೇಳಿದ್ದಾರೆ. ಕೇಳದ್ದಕ್ಕೆ ಬೈದು ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ‘ನನ್ನ ಮೇಲೆ ಹಲ್ಲೆ ಮಾಡಿದ್ದಾರೆ, ಜೀವ ಬೆದರಿಕೆ ಹಾಕಿದ್ದಾರೆ’ ಅಂತ ಕೊಡೇಕಲ್ ಠಾಣೆಯಲ್ಲಿ ಶಿವಪ್ಪ ಕೇಸ್ ದಾಖಲಿಸಿದ್ದಾನೆ.
ಸುರಪುರ ಶಾಸಕರ ಒತ್ತಡ ಆರೋಪ
ಇತ್ತ ಮಹಿಳೆ ಕೂಡ ಕೇಸ್ ದಾಖಲು ಮಾಡಲು ಬಂದರೆ ಪೊಲೀಸರು ಕೇಸ್ ಪಡೆದಿಲ್ಲ. ಇದರ ಹಿಂದೆ ಸುರಪುರ ಶಾಸಕರ ಒತ್ತಡ ಪೊಲೀಸರ ಮೇಲಿದೆ ಅಂತ ಆರೋಪ ಕೇಳಿ ಬಂದಿದೆ. ಇದೆ ಕಾರಣಕ್ಕೆ ಮಹಿಳೆಯ ಬೆಂಬಲಕ್ಕೆ ಬಿಜೆಪಿ ಮುಖಂಡರು ಸಹ ನಿಂತಿದ್ದಾರೆ. ಮಹಿಳೆಯ ಕೇಸ್ ಪಡೆದಿಲ್ಲ ಅಂದರೆ ಇಂದು ಕೊಡೇಕಲ್ ಪಟ್ಟಣ ಮುಖ್ಯ ರಸ್ತೆ ಬಂದ ಮಾಡಿ ಪ್ರತಿಭಟನೆ ಮಾಡುತ್ತೇವೆ ಎಂದು ಬಿಜೆಪಿ ಮುಖಂಡ ಬಬ್ಲೂ ನಾಯಕ ಆಕ್ರೋಶ ಹೊರ ಹಾಕಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:11 am, Thu, 10 July 25







