AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಸ್ಲಿಮರೇ ಇಲ್ಲದ ಈ ಊರಲ್ಲಿ ಹಿಂದೂಗಳಿಂದ ಮೊಹರಂ ಆಚರಣೆ: ಇದರ ಹಿಂದಿದೆ ಪ್ರಮುಖ ಕಾರಣ..!

ಮೊಹರಂ ಹಬ್ಬವನ್ನ ನಾಡಿನಾದ್ಯಾಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದೆ. ಈ ಹಬ್ಬವನ್ನು ಹಿಂದೂ ಹಾಗೂ ಮುಸ್ಲಿಮರು ಸೇರಿಕೊಂಡು ಆಚರಿಸಲಾಗುತ್ತದೆ. ಆದರೂ ಎಲ್ಲಾ ಪೂಜೆ ಪುನಸ್ಕಾರಗಳು ಮಾಡುವುದು ಹೆಚ್ಚಾಗಿ ಮುಸ್ಲಿಮರು. ಆದ್ರೆ, ಈ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಒಂದೇ ಒಂದು ಕುಟುಂಬ ಇಲ್ಲ. ಆದರೂ ಹಿಂದೂಗಳೇ ಮೊಹರಂ ಹಬ್ಬವನ್ನು ಆಚರಿಸುತ್ತಾರೆ. ಹೀಗಾಗಿ ಯಾದಗಿರಿ ಜಿಲ್ಲೆಯ ಈ ಗ್ರಾಮ ವಿಶಿಷ್ಟವಾಗಿದೆ. ಈ ಗ್ರಾಮದಲ್ಲಿ ಹಿಂದೂಗಳು ಮೊಹರಂ ಹಬ್ಬ ಆಚರಣೆಯ ಹಿಂದೆ ಇತಿಹಾಸವಿದೆ.

ಮುಸ್ಲಿಮರೇ ಇಲ್ಲದ ಈ ಊರಲ್ಲಿ ಹಿಂದೂಗಳಿಂದ ಮೊಹರಂ ಆಚರಣೆ: ಇದರ ಹಿಂದಿದೆ ಪ್ರಮುಖ ಕಾರಣ..!
Hindu Muharram
ಅಮೀನ್​ ಸಾಬ್​
| Edited By: |

Updated on:Jul 06, 2025 | 6:45 PM

Share

ಯಾದಗಿರಿ, (ಜುಲೈ 06): ಮೊಹರಂ ಹಬ್ಬವನ್ನ ಮುಸ್ಲಿಂ ಸಮುದಾಯದ ಜನರ ಪ್ರಮುಖವಾದ ಹಬ್ಬ ಕೂಡ ಆಗಿದೆ. ಈ ಹಬ್ಬವನ್ನು ಹಿಂದೂ ಆದ್ರೆ ಮುಸ್ಲಿಮರೇ ಇಲ್ಲದ ಈ ಊರಿನಲ್ಲಿ ಹಿಂದೂಗಳೆ ಭರ್ಜರಿಯಾಗಿ ಮೊಹರಂ ಹಬ್ಬವನ್ನ ಆಚರಿಸುತ್ತಿದ್ದಾರೆ. ಹೌದು…ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಳವಾರಗೇರಿ ಗ್ರಾಮದಲ್ಲಿ ಅಲೈ ಕುಣಿತದಿಂದ ಹಿಡಿದು ಅಲೈ ದೇವರು ಹಿಡಿಯುವ ಕೆಲಸವನ್ನ ಹಿಂದೂಗಳೇ ಮಾಡುತ್ತಾ ಬಂದಿದ್ದಾರೆ. ದಶಮಾನಗಳಿಂದ ಹಿಂದೂಗಳೇ ಮೊಹರಂ ಆಚರಣೆ ಮಾಡಿಕೊಂಡು ಬಂದಿದ್ದು. ಮುಸ್ಲಿಮರೇ ಇಲ್ಲದ ಈ ಊರಲ್ಲಿ ಹಿಂದೂಗಳು ಮೊಹರಂ ಹಬ್ಬ ಆಚರಣೆಗೆ ಪ್ರಮುಖ ಕಾರಣವೂ ಸಹ ಇದೆ.

ಮುಸ್ಲಿಂ ಇಲ್ಲದ ಊರಲ್ಲಿ ಹಿಂದೂಗಳಿಂದ ಮೊಹರಂ

ಹೌದು.. ಶತಮಾನಗಳಿಂದ ಮೊಹರಂ ಹಬ್ಬವನ್ನ ನಾಡಿನಾದ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಆದ್ರೆ ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಈ ಮೊಹರಂ ಹಬ್ಬ ಕೂಡ ಒಂದಾಗಿದೆ. ಹಸೇನ ಹುಸೇನರ ಕರ್ಬಾಲಕ್ಕೆ ಹೋಗಿದ್ದು ಅದೆ ದಿನ ಕೊನೆಯಾಗಿದ್ದಕ್ಕೆ ಶೋಕದಿಂದ ಮುಸ್ಲಿಮರು ಮೊಹರಂ ಹಬ್ಬವನ್ನ ಆಚರಿಸುತ್ತಾರೆ. ಆದ್ರೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಳವಾರಗೇರಿ ಗ್ರಾಮದಲ್ಲಿ ಮುಸ್ಲಿಮರ ಒಂದೆ ಒಂದು ಮನೆ ಇಲ್ಲದೆ ಇದ್ದರೂ ಹಿಂದೂಗಳು ಮೊಹರಂ ಆಚರಣೆ ಮಾಡ್ತಾಯಿದ್ದಾರೆ. ಕಳೆದ ಹಲವು ದಶಕಗಳಿಂದ ಹಿಂದೂಗಳು ಮುಸ್ಲಿಮರಂತೆ ಮೊಹರಂ ಹಬ್ಬವನ್ನ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಮೊಹರಂ ಹಬ್ಬ ಒಂದು‌ ತಿಂಗಳು ಇರುವ ಮೊದಲೇ ಗ್ರಾಮದ ಎಲ್ಲಾ ಹಿಂದೂಗಳ ತಮಗಾದಷ್ಟು ದೇಣಿಗೆಯನ್ನ ಹಾಕಿ ಮೊಹರಂ ಹಬ್ಬಕ್ಕೆ ತಯಾರಿ ಮಾಡಿಕೊಳ್ಳುತ್ತಾರೆ. ಅಲೈ ದೇವರು ಪ್ರತಿಷ್ಠಾಪನೆ ಮಾಡುವ ಆಶುರಖಾನವನ್ನ ಸ್ವಚ್ಚಗೊಳಿಸಿ ಸುಣ್ಣ ಬಣ್ಣವನ್ನ ಬಳಿದು ಸಿದ್ದ ಪಡಿಸಿಕೊಳ್ಳುತ್ತಾರೆ.. ಆರು ದಿನಗಳ ಕಾಲ ನಡೆಯುವ ಮೊಹರಂ ಹಬ್ಬದಲ್ಲಿ ಹಸೇನ್,ಹುಸೇನ್,ಲಾಲಬಾಸ್,ಕಾಸಿಂಸಾಬ್,ಹಾಗೂ ಮೌಲಾಲಿ ದೇವರ ಪಂಚೆಗಳನ್ನ ಪ್ರತಿಷ್ಠಾಪನೆ ಮಾಡುತ್ತಾರೆ.

ಇದನ್ನೂ ಓದಿ: ಮೊಹರಂ ಹಬ್ಬದ ಇತಿಹಾಸ, ಮಹತ್ವವೇನು?

ಗ್ರಾಮದಲ್ಲಿ ಆರು‌ ದಿನಗಳ ಕಾಲ ನಡೆಯುವ ಮೊಹರಂ‌ ಇವತ್ತು ಕೊನೆ ದಿನವಾಗಿದೆ. ಅಂದ್ರೆ ದೇವರ ಪಂಚೆಗಳನ್ನ ದಪನ್ ಮಾಡಲಾಗುತ್ತೆ. ಹೀಗಾಗಿ ದಪನ್ ಅಂತ‌ ಕರೆಯಲಾಗುತ್ತೆ. ಇನ್ನು ಇವತ್ತಿನ ಎಲ್ಲಾ ಅಲೈ ದೇವರ ಪಂಚೆಗಳನ್ನ ಹಿಡಿದು ಹಿಂದೂಗಳು ಸವಾರಿ ಮಾಡ್ತಾರೆ. ರಮೇಶ್,ಶಾಂತಪ್ಪ,ಸಣ್ಣದೇವಪ್ಪ ಹಾಗೂ ಶಶಿಕುಮಾರಸ್ವಾಮಿ ದೇವರ ಪಂಜೆಗಳನ್ನ ಹಿಡಿದು ಸವಾರಿ ಮಾಡುತ್ತಾರೆ. ಇವತ್ತು ಕೊನೆ ದಿನವಾಗಿದ್ದರಿಂದ ಎಲ್ಲಾ ದೇವರುಗಳನ್ನ ಹಿಡಿದು ಸವಾರಿ ಮಾಡಲಾಗಿದೆ. ನೂರಾರು ಯುವಕರು ತಮಟೆ ಸದ್ದಿಗೆ ಮೊಹರಂ ಹೆಜ್ಜೆಗಳನ್ನ ಹಾಕುತ್ತಾರೆ.ಬಹಳಷ್ಟು ಜನ ಸಂಭ್ರಮದಿಂದ ಒಂದೆ ಬಣ್ಣ ಬಟ್ಟೆಗಳನ್ನ ಧರಿಸಿಕೊಂಡು ಅಲೈ ಕುಣಿಯುತ್ತಾರೆ.

ಹಿಂದೂಗಳ ಆಚರಣೆ ಹಿಂದೆ ಇತಿಹಾಸ

ಈ ಗ್ರಾಮದಲ್ಲಿ ಹಿಂದೂಗಳು ಮೊಹರಂ ಹಬ್ಬ ಆಚರಣೆಯ ಹಿಂದೆ ಇತಿಹಾಸವಿದೆ. 1925 ಕಾಲದಲ್ಲಿ ಗ್ರಾಮದಲ್ಲಿ ಮಳೆ ಇಲ್ಲದೆ ರೈತರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿರುತ್ತಾರೆ ಕಾಲರ ಪ್ಲೇಗ್ ನಂತ ರೋಗಗಳು ಅಪ್ಪಳ್ಳಿಸಿ ಹಿಂಡಿ ಹಿಪ್ಪಿ ಮಾಡಿರುತ್ತೆ ಆಗ ಅಲೈ ಪೀರಾಗಳು ಗ್ರಾಮದ ಗುರುಲಿಂಗಪ್ಪಗೌಡ ಎಂಬ ಹಿರಿಯರ ಕನಸಲ್ಲಿ ಬಂದು ಗ್ರಾಮದಲ್ಲಿ ನಮ್ಮನ್ನ ಪ್ರತಿಷ್ಠಾಪನೆ ಮಾಡಿ ಎಲ್ಲಾ ಸಮಸ್ಯೆಯನ್ನ ದೂರು ಮಾಡುತ್ತೆ ಅಂತ‌ ಹೇಳಿದ್ರಂತೆ ಇದೆ ಕಾರಣಕ್ಕೆ ಗ್ರಾಮದಲ್ಲಿ ಅಲೈ ಪೀರಾಗಳನ್ನ ಪ್ರತಿಷ್ಠಾಪನೆ ಮಾಡಿದ ಬಳಿಕದಿಂದ ಇಲ್ಲಿ‌ ವರೆಗೆ ಯಾವುದೇ ಸಮಸ್ಯೆ ಆಗಿಲ್ವಂತೆ.

ಒಟ್ಟಿನಲ್ಲಿ ಈ ತಳವಾರಗೇರಿ ಗ್ರಾಮದ ಅಲೈ ಪೀರಾಗಳು ಸಾಕಷ್ಟು ಪವರ್ ಫುಲ್ ಇದೆ ಅಂತೆ. ಇದೆ ಕಾರಣಕ್ಕೆ ಪಕ್ಕದ ಊರಿನ ಬಂದು ಮಂತ್ರ ಊದಿಸಿಕೊಂಡು ಪ್ರಸಾದದ ರೂಪದಲ್ಲಿ ಸಕ್ಕರೆ ತೆಗೆದುಕೊಂಡು ಹೋಗುತ್ತಾರೆ. ಒಟ್ಟಾರೆ ಹಿಂದೂ ಮುಸ್ಲಿಂ ಅಂತ ಕಾದಾಟ ನಡೆಸುವ ಕಾಲದಲ್ಲಿ ಇಲ್ಲಿ ಮುಸ್ಲಿಮರು ಇಲ್ಲದೆ ಇದ್ರು ಮುಸ್ಲಿಂರ ಹಬ್ಬವನ್ನ ಹಿಂದೂಗಳು ಆಚರಣೆ ಮಾಡುತ್ತಿರುವುದು ನಿಜಕ್ಕೂ ಗ್ರೇಟ್.

Published On - 6:39 pm, Sun, 6 July 25

ಎಲ್ಲೆಲ್ಲೂ ಗಿಲ್ಲಿ, ಎಲ್ಲೆಲ್ಲೂ ಗಿಲ್ಲಿ: ಅಭಿಮಾನಿಗಳ ಪ್ರೀತಿಯ ಅಭಿಯಾನ ನೋಡಿ
ಎಲ್ಲೆಲ್ಲೂ ಗಿಲ್ಲಿ, ಎಲ್ಲೆಲ್ಲೂ ಗಿಲ್ಲಿ: ಅಭಿಮಾನಿಗಳ ಪ್ರೀತಿಯ ಅಭಿಯಾನ ನೋಡಿ
ಆಸ್ತಿಗಾಗಿ 4 ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನೇ ಕೊಂದ ಪಾಪಿ ಅಣ್ಣ!
ಆಸ್ತಿಗಾಗಿ 4 ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನೇ ಕೊಂದ ಪಾಪಿ ಅಣ್ಣ!
ಮದುವೆಗೆ ಏನಾದರೂ ತೊಂದ್ರೆ ಆದ್ರೆ ಗಿಲ್ಲಿಯೇ ಕಾರಣ; ನೇರವಾಗಿ ಹೇಳಿದ ಕಾವ್ಯಾ
ಮದುವೆಗೆ ಏನಾದರೂ ತೊಂದ್ರೆ ಆದ್ರೆ ಗಿಲ್ಲಿಯೇ ಕಾರಣ; ನೇರವಾಗಿ ಹೇಳಿದ ಕಾವ್ಯಾ
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗೆ ಚುನಾವಣೆಯಲ್ಲಿ ಗೆಲುವು
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗೆ ಚುನಾವಣೆಯಲ್ಲಿ ಗೆಲುವು
ಡಿಕೆಶಿ ದೆಹಲಿ ಪ್ರವಾಸ: ರಾಹುಲ್ ಗಾಂಧಿ ಭೇಟಿ ಬಗ್ಗೆ ಸ್ಫೋಟಕ ಹೇಳಿಕೆ
ಡಿಕೆಶಿ ದೆಹಲಿ ಪ್ರವಾಸ: ರಾಹುಲ್ ಗಾಂಧಿ ಭೇಟಿ ಬಗ್ಗೆ ಸ್ಫೋಟಕ ಹೇಳಿಕೆ
ಬಳ್ಳಾರಿ ಗಲಭೆ; ನಾಳೆ ನಡೆಯಲಿರುವ ಪ್ರತಿಭಟನೆ ಬಗ್ಗೆ SP ಹೇಳಿದ್ದಿಷ್ಟು
ಬಳ್ಳಾರಿ ಗಲಭೆ; ನಾಳೆ ನಡೆಯಲಿರುವ ಪ್ರತಿಭಟನೆ ಬಗ್ಗೆ SP ಹೇಳಿದ್ದಿಷ್ಟು
ಹಾಸನದಲ್ಲಿ ಕಾಡಾನೆಗಳ ತುಂಟಾಟ! ಪರಸ್ಪರ ಕೋರೆ ಮರ್ದಿಸಿದ ಗಜಪಡೆ
ಹಾಸನದಲ್ಲಿ ಕಾಡಾನೆಗಳ ತುಂಟಾಟ! ಪರಸ್ಪರ ಕೋರೆ ಮರ್ದಿಸಿದ ಗಜಪಡೆ
ಪೌರಾಯುಕ್ತೆಗೆ ನಿಂದನೆ ಪ್ರಕರಣ: ಬ್ಯಾನರ್ ತೆಗೆಸೋಕೆ ಇತ್ತು ಬಲವಾದ ಕಾರಣ
ಪೌರಾಯುಕ್ತೆಗೆ ನಿಂದನೆ ಪ್ರಕರಣ: ಬ್ಯಾನರ್ ತೆಗೆಸೋಕೆ ಇತ್ತು ಬಲವಾದ ಕಾರಣ
ಪಾಮ್ ಆಯಿಲ್ ಟ್ಯಾಂಕರ್ ಲಾರಿ ಪಲ್ಟಿ: ಅಡುಗೆ ಎಣ್ಣೆಗಾಗಿ ಮುಗಿಬಿದ್ದ ಜನ
ಪಾಮ್ ಆಯಿಲ್ ಟ್ಯಾಂಕರ್ ಲಾರಿ ಪಲ್ಟಿ: ಅಡುಗೆ ಎಣ್ಣೆಗಾಗಿ ಮುಗಿಬಿದ್ದ ಜನ
ಪೌರಾಯುಕ್ತೆಗೆ ಬೆದರಿಕೆ ಕೇಸ್​​: ರಾಜಿಗೆ ಯತ್ನಿಸಿದ್ದನಾ ರಾಜೀವ್​​ ಗೌಡ?
ಪೌರಾಯುಕ್ತೆಗೆ ಬೆದರಿಕೆ ಕೇಸ್​​: ರಾಜಿಗೆ ಯತ್ನಿಸಿದ್ದನಾ ರಾಜೀವ್​​ ಗೌಡ?