‘Bengaluru is so crazy’ ಬ್ರೋ: ಇವರು ರಾಪಿಡೋ ಚಾಲಕ ಮಾತ್ರವಲ್ಲ, ಲಕ್ಷ ಲಕ್ಷ ದುಡಿಯುವ ಐಟಿ ಕಂಪನಿಯ ಉದ್ಯೋಗಿ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜೀವನ ವೆಚ್ಚವು ಉದ್ಯೋಗಿಗಳಿಗೆ, ವಿಶೇಷವಾಗಿ ಐಟಿ ವೃತ್ತಿಪರರಿಗೂ ಸವಾಲಾಗಿದೆ. ಫೋನ್‌ಪೇ ಸೇಲ್ಸ್ ಮ್ಯಾನೇಜರ್ ರಾತ್ರಿ ರಾಪಿಡೋ ಚಾಲಕರಾಗಿ ಕೆಲಸ ಮಾಡುತ್ತಿರುವ ಘಟನೆ ಈ ವಾಸ್ತವವನ್ನು ಎತ್ತಿ ತೋರಿಸಿದೆ. ದುಬಾರಿ ಬಾಡಿಗೆ, ಇಎಂಐ ಹಾಗೂ ನಿತ್ಯದ ಖರ್ಚುಗಳನ್ನು ನಿಭಾಯಿಸಲು ಅನೇಕರು ಪಾರ್ಟ್ ಟೈಮ್ ಕೆಲಸದ ಮೊರೆ ಹೋಗುತ್ತಿದ್ದಾರೆ. ಇದು ನಗರದ ಆರ್ಥಿಕ ವಾಸ್ತವ ಮತ್ತು "ಬರ್ನ್‌ಔಟ್" ಸಂಸ್ಕೃತಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

Bengaluru is so crazy ಬ್ರೋ: ಇವರು ರಾಪಿಡೋ ಚಾಲಕ ಮಾತ್ರವಲ್ಲ, ಲಕ್ಷ ಲಕ್ಷ ದುಡಿಯುವ ಐಟಿ ಕಂಪನಿಯ ಉದ್ಯೋಗಿ
ಸಾಂದರ್ಭಿಕ ಚಿತ್ರ
Image Credit source: Tv9 kannada

Updated on: Feb 11, 2026 | 12:44 PM

ಬೆಂಗಳೂರು, ಫೆ. 11: ಬೆಂಗಳೂರಿನಲ್ಲಿ ಜೀವನ ನಡೆಸುವುದು ತುಂಬಾ ಸುಲಭ ಮಾತಲ್ಲ, ಅದರಲ್ಲೂ 20-30 ಸಾವಿರ ರೂ. ಸಂಬಳಕ್ಕೊಂದು ನಗರಕ್ಕೆ ದುಡಿಯಲು ಬಂದ ಯುವಕರಿಗೆ ಇನ್ನು ಕಷ್ಟ. ಯಾಕೆಂದರೆ ಇಲ್ಲಿ ಎಲ್ಲವೂ ದುಬಾರಿಯಾಗಿರುತ್ತದೆ. ಅದಕ್ಕಾಗಿ ಅವರು ಪಾರ್ಟ್ ಟೈಮ್ ಜಾಬ್ ಮಾಡುತ್ತಾರೆ. ಆದರೆ ಇದೀಗ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜೀವನ ವೆಚ್ಚದಿಂದ ಐಟಿ, ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಕೂಡ ಬೆಂಗಳೂರಿನಲ್ಲಿ ಪಾರ್ಟ್ ಟೈಮ್ ಜಾಬ್ ಮಾಡುತ್ತಿದ್ದಾರೆ. ಈ ಬಗ್ಗೆ ಎಕ್ಸ್​ ಖಾತೆಯಲ್ಲಿ ಒಬ್ಬರು ಹಂಚಿಕೊಂಡಿದ್ದಾರೆ. PhonePeಯಲ್ಲಿ ಸೇಲ್ಸ್​​​​ ಮ್ಯಾನೇಜರ್​​​ ಆಗಿ ಕೆಲಸ ಮಾಡುವ ವ್ಯಕ್ತಿ Rapido ಓಡಿಸುತ್ತಿರುವುದನ್ನು ಕಂಡ ಅಚ್ಚರಿಗೊಂಡಿದ್ದಾರೆ. ಇದೀಗ ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ.

ಅಭಿನವ್ ಎಂಬುವವರು ತಮ್ಮ ಎಕ್ಸ್​ ಖಾತೆಯಲ್ಲಿ ಈ ಪೋಸ್ಟ್​ನ್ನು ಹಂಚಿಕೊಂಡಿದ್ದಾರೆ. ‘Bengaluru is so crazy’ ಬ್ರೋ, ನಾನು ತಡರಾತ್ರಿ Rapido ಬೈಕ್ ಬುಕ್​​​​ ಮಾಡಿದೆ. ಚಾಲಕನ ಜತೆಗೆ ಹೀಗೆ ಮಾಡುತ್ತಿರುವಾಗ ಅವರ ಉದ್ಯೋಗಿದ ಬಗ್ಗೆ ಹೇಳಿಕೊಂಡಿದ್ದಾರೆ. ರಾಪಿಡೋ ಚಾಲಕ ಸಾಮಾನ್ಯ ವ್ಯಕ್ತಿಯಲ್ಲ. ಫೋನ್‌ಪೇಯಲ್ಲಿ ಸೇಲ್ಸ್​ ಮ್ಯಾನೇಜರ್​​​ ಆಗಿ ಕೆಲಸ ಮಾಡುತ್ತಿದ್ದಾರೆ. ಚಾಲಕ ಬೆಂಗಳೂರಿನಲ್ಲಿ ಒಂದು ಫ್ಲಾಟ್ ಹೊಂದಿದ್ದಾರೆ. ಹಗಲಿನಲ್ಲಿ ಕಾರ್ಪೊರೇಟ್ ಕೆಲಸ ಮಾಡುತ್ತಾರೆ . ರಾತ್ರಿ ಹೊತ್ತು ರಾಪಿಡೋ ಓಡಿಸುತ್ತಾರೆ ಎಂದು ಅಭಿನವ್ ಬರೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಚಾಲಕನ ಪ್ರಾಮಾಣಿಕತೆ: ಕ್ಯಾಬ್​​​​​ನಲ್ಲಿ ಬ್ಯಾಗ್ ಮರೆತ ಪ್ರಯಾಣಿಕನಿಗಾಗಿ ಮಧ್ಯರಾತ್ರಿ ಹುಡುಕಾಟ ನಡೆಸಿದ ಚಾಲಕ

ವೈರಲ್​​ ಪೋಸ್ಟ್​ ಇಲ್ಲಿದೆ ನೋಡಿ:

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೂ ಕೂಡ ಕಾರಣವಾಗಿದೆ. ನಮ್ಮ ಆರ್ಥಿಕತೆಯು ಹದಗೆಡುತ್ತಿದೆ ಎಂಬುದನ್ನು ಇದು ತೋರಿಸುತ್ತದೆ, ಜನರು ದಿನಕ್ಕೆ ಎರಡು ಕೆಲಸ ಮಾಡದೆ ಸರಳ ಜೀವನಶೈಲಿಯನ್ನು ನಡೆಸಲು ಸಾಧ್ಯವಿಲ್ಲ ಎಂದು ಒಬ್ಬರು ಹೇಳಿದ್ದಾರೆ. ಇದು ಗಡಿಬಿಡಿಯ ಸಂಸ್ಕೃತಿಯಲ್ಲ, ಇದು ಜೀವನ ವೆಚ್ಚದ ಸಂಕೇತ. ಫ್ಲಾಟ್ ಹೊಂದಿರುವ ಈ ವ್ಯಕ್ತಿ ಹೆಚ್ಚು ಹಣ ಗಳಿಸಬೇಕು ಎಂಬ ಉದ್ದೇಶವಲ್ಲ, ಮನೆ ನಿರ್ವಹಣೆ, ಬಾಡಿಗೆ ಇಎಂಐಗಳ ಹೊರೆಯು ಇರಬಹುದು ಎಂದು ಮತ್ತೊಬ್ಬರು ಹೇಳಿದ್ದಾರೆ. ಬೆಂಗಳೂರು ಕೇವಲ ಸ್ಟಾರ್ಟ್‌ಅಪ್‌ಗಳನ್ನು ನಿರ್ಮಿಸುತ್ತಿಲ್ಲ. ಅದು ಸದ್ದಿಲ್ಲದೆ ಬರ್ನ್‌ಔಟ್ (ಒತ್ತಡ, ಜವಾಬ್ದಾರಿ ಅಥವಾ ಮಾನಸಿಕ ಒತ್ತಡ ಮಾನಸಿಕ ಹಿಂಸೆ) ಮಾಡುತ್ತಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ