AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಚಾಲಕನ ಪ್ರಾಮಾಣಿಕತೆ: ಕ್ಯಾಬ್​​​​​ನಲ್ಲಿ ಬ್ಯಾಗ್ ಮರೆತ ಪ್ರಯಾಣಿಕನಿಗಾಗಿ ಮಧ್ಯರಾತ್ರಿ ಹುಡುಕಾಟ ನಡೆಸಿದ ಚಾಲಕ

ಬೆಂಗಳೂರಿನ ಕ್ಯಾಬ್ ಚಾಲಕ ಉತ್ತಮ್ ಅವರ ಪ್ರಾಮಾಣಿಕತೆ ನೆಟ್ಟಿಗರ ಮೆಚ್ಚುಗೆ ಗಳಿಸಿದೆ. ಕಂಪನಿಯ ಮ್ಯಾನೇಜರ್ ಒಬ್ಬರು ತಮ್ಮ ಪಾಸ್‌ಪೋರ್ಟ್ ಮತ್ತು ಪಿಆರ್ ಕಾರ್ಡ್ ಇರುವ ಬ್ಯಾಗ್​​ನ್ನು ಕ್ಯಾಬ್​​ನಲ್ಲೇ ಮರೆತು ಹೋಗಿದ್ದರು. ಉತ್ತಮ್, ಸ್ವತಃ ಬ್ಯಾಗ್‌ನ ಮಾಲೀಕರನ್ನು ಹುಡುಕಿ, ದಾಖಲೆಗಳನ್ನು ಸುರಕ್ಷಿತವಾಗಿ ಹಿಂದಿರುಗಿಸಿದರು. ಈ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಉತ್ತಮ್ ಅವರನ್ನು ನಿಜವಾದ ಹೀರೋ ಎಂದು ಶ್ಲಾಘಿಸಲಾಗುತ್ತಿದೆ.

ಬೆಂಗಳೂರು ಚಾಲಕನ ಪ್ರಾಮಾಣಿಕತೆ: ಕ್ಯಾಬ್​​​​​ನಲ್ಲಿ ಬ್ಯಾಗ್ ಮರೆತ ಪ್ರಯಾಣಿಕನಿಗಾಗಿ ಮಧ್ಯರಾತ್ರಿ ಹುಡುಕಾಟ ನಡೆಸಿದ ಚಾಲಕ
ಉತ್ತಮ್​​ ಮತ್ತು ಗ್ಲೆನ್ ಇವಾನ್
ಅಕ್ಷಯ್​ ಪಲ್ಲಮಜಲು​​
|

Updated on: Feb 11, 2026 | 10:31 AM

Share

ಬೆಂಗಳೂರು, ಫೆ,11: ನಗರದಲ್ಲಿ ಕ್ಯಾಬ್​​​, ಬಸ್​​​​ ಚಾಲಕರ ಪ್ರಾಮಾಣಿಕತೆ ಮೆರೆದ ಸುದ್ದಿಗಳು ಆಗ್ಗಾಗೆ ವೈರಲ್​ ಆಗುತ್ತ ಇರುತ್ತದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ (Bangalore cab driver) ಇಂತಹದೇ ಘಟನೆಯೊಂದು ವೈರಲ್​ ಆಗಿದೆ. ಬೆಂಗಳೂರಿನ ಕ್ಯಾಬ್ ಚಾಲಕ ಉತ್ತಮ್ ಅವರ ಪ್ರಾಮಾಣಿಕತೆಯನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಕಂಪನಿಯೊಂದರ ಮಾನ್ಯೇಜರ್​​​​​​ ಗ್ಲೆನ್ ಇವಾನ್ ಎಂಬುವವರು ತಮ್ಮ ಪಾಸ್‌ಪೋರ್ಟ್ ಮತ್ತು ಪಿಆರ್ ಕಾರ್ಡ್ ಇರುವ ಬ್ಯಾಗ್​​ನ್ನು ಕ್ಯಾಬ್​​ನಲ್ಲೇ ಮರೆತು ಹೋಗಿದ್ದರು. ಇದನ್ನು ನೋಡಿದ ಕ್ಯಾಬ್​​ ಚಾಲಕ ಉತ್ತಮ್​​​​​, ಈ ಬ್ಯಾಗಿನ ಮಾಲೀಕರನ್ನು ಹುಡುಕಲು ಆರಂಭಿಸಿದ್ದಾರೆ. ಪಾಸ್‌ಪೋರ್ಟ್ ನಲ್ಲಿರುವ ವಿಳಾಸ ಮೂಲಕ ಗ್ಲೆನ್ ಇವಾನ್ ಅವರ ಪ್ರದೇಶಕ್ಕೆ ಹೋಗಿದ್ದಾರೆ. ​​​ಅಲ್ಲಿರುವ ಸ್ಥಳೀಯರ ಬಳಿಯೂ ಕೇಳಿದ್ರು ಕೂಡ ಯಾರೂ ಕೂಡ ಸರಿಯಾಗಿ ಉತ್ತರಿಸಿಲ್ಲ. ಕೊನೆಗೆ ಗ್ಲೆನ್ ಇವಾನ್ ಅವರ ತಂದೆಯ ಅದೇ ರಸ್ತೆಯಲ್ಲಿ ಸಿಕ್ಕಿದ್ದಾರೆ. ಅವರ ಜತೆಗೆ ಹೋಗಿ ಉತ್ತಮ್​​​​​​ ಬ್ಯಾಗ್​​ ನೀಡಿದ್ದಾರೆ. ಈ ಬಗ್ಗೆ ಗ್ಲೆನ್ಲಿಂಗ್ ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಬೆಂಗಳೂರಿನ ನಿಜವಾದ ಹೀರೋ ಉತ್ತಮ್, ನಾನು ಮಧ್ಯರಾತ್ರಿ 2.30ರ ವೇಳೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಮನೆಗೆ ಕ್ಯಾಬ್​​​ ಒಂದರಲ್ಲಿ ಬಂದೆ. ತುಂಬಾ ನಿದ್ರೆ ಬರುತ್ತಿದ್ದ ಕಾರಣ, ಕಾರಿನಲ್ಲಿ ಗಾಢವಾಗಿ ನಿದ್ದೆಗೆ ಜಾರಿದೆ. ಈ ವೇಳೆ, ನಿದ್ದೆ ಕಣ್ಣಿನಲ್ಲೇ ಕ್ಯಾಬ್​​​ನಿಂದ ಇಳಿದು ಮನೆಗೆ ಬಂದೆ, ಈ ವೇಳೆ ನನ್ನ ಪಾಸ್‌ಪೋರ್ಟ್ ಮತ್ತು ಪಿಆರ್ ಕಾರ್ಡ್ ಕಾರಿನಲ್ಲೇ ಮರೆತು ಬಂದಿದ್ದೇನೆ. ಬೆಳಿಗ್ಗೆ 10:30 ರ ವೇಳೆ ಅಪ್ಪ, ನಿನ್ನ ಪಾಸ್‌ಪೋರ್ಟ್ ಮತ್ತು ಪಿಆರ್ ಕಾರ್ಡ್ ಬ್ಯಾಗ್​​ ಕಳೆದುಕೊಂಡಿದ್ದೀಯಾ ಎಂದು ಕೇಳಿದ್ದಾರೆ. ಅಲ್ಲಿಯವರೆಗೆ ನನಗೆ ಈ ಬ್ಯಾಗ್​​​​ ಕಳೆದು ಹೋಗಿದೆ ಎಂಬುದು ಗೊತ್ತೇ ಇರಲಿಲ್ಲ ಎಂದು ಗ್ಲೆನ್ ಇವಾನ್ ತಮ್ಮ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಉತ್ತಮ್​​ ಅವರು ಪಾಸ್‌ಪೋರ್ಟ್ ನಲ್ಲಿ ವಿಳಾಸ ಇದ್ದ ಕಾರಣ ಮನೆಯ ಹತ್ತಿರ ಬಂದಿದ್ದಾರೆ. ಆದರೆ ನಮ್ಮ ಮನೆ ಯಾವುದು ಎಂದು ಅವರಿಗೆ ಗೊತ್ತಾಗಿಲ್ಲ. ಅಕ್ಕಪಕ್ಕದ ಮನೆಯವರ ಬಾಗಿಲು ಬಡಿದು, ನಮ್ಮ ಮನೆಯ ವಿಳಾಸ ಕೇಳಿದ್ದಾರೆ. ಅದೃಷ್ಟವಶಾತ್ ಅದೇ ಬೀದಿಯಲ್ಲಿ ನನ್ನ ತಂದೆಯನ್ನು ಭೇಟಿಯಾಗಿದ್ದಾರೆ. ನಂತರ ನಮ್ಮ ಮನೆಗೆ ಬಂದು ನನ್ನ ದಾಖಲೆಗಳನ್ನು ನೀಡಿದ್ದಾರೆ. ಆ ಬ್ಯಾಗ್​ನಲ್ಲಿ​​​ ಮೌಲ್ಯಯುತವಾದ ದಾಖಲೆಗಳು ಹಾಗೂ ವಸ್ತುಗಳು ಇತ್ತು. ಉತ್ತಮ್​​ ಅವರ ಪ್ರಾಮಾಣಿಕತೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಗ್ಲೆನ್ ಇವಾನ್ ಹೇಳಿದ್ದಾರೆ.

ಇದನ್ನೂ ಓದಿ: ವ್ಯಾಲೆಂಟೈನ್ಸ್‌ ಡೇಗೆ ಬೆಂಗಳೂರಿನ ಮಹಿಳೆಯರಿಗೆ ಗುಡ್​​​ ನ್ಯೂಸ್: ನಿಮ್ಮ ಸುರಕ್ಷತೆಗೆ ಬರಲಿದೆ ‘ಸಖಿ ಆಟೋ’

ಈ ಪೋಸ್ಟ್​​ ಹಂಚಿಕೊಂಡ ನಂತರ ಇನ್ಸ್ಟಾಗ್ರಾಮ್​​ನಲ್ಲಿ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ಯಾಕ್​​ ಚಾಲಕನ ಪ್ರಾಮಾಣಿಕತೆಗೆ ಶಬ್ಬಾಷ್​​ ಎಂದು ಹೇಳಿದ್ದಾರೆ. ಉತ್ತಮ್ – ಪ್ರಾಮಾಣಿಕ ಮತ್ತು ಒಳ್ಳೆಯ ವ್ಯಕ್ತಿಯಂತೆ ಕಾಣಿಸುತ್ತಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಒಬ್ಬರು ಕಮೆಂಟ್​​ ಮಾಡಿದ್ದಾರೆ. ಎಂತಹ ಅದ್ಭುತ ಮನುಷ್ಯ. ನಿಮ್ಮ ಪಾಸ್‌ಪೋರ್ಟ್ ಮತ್ತು ಪಿಆರ್ ಕಾರ್ಡ್ ಕಳೆದುಕೊಂಡರೆ ಎಷ್ಟು ನೋವಾಗುತ್ತಿತ್ತು, ಅಷ್ಟೆ, ನಿಮ್ಮ ಎಲ್ಲಾ ವಸ್ತುಗಳು ಮರಳಿ ನೀಡಿದು ಕೂಡ ಸಂತೋಷವಾಗಿದೆ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಟಿವಿ9 ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಸ್ಫೂರ್ತಿದಾಯಕ ಭಾಷಣ
ಟಿವಿ9 ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಸ್ಫೂರ್ತಿದಾಯಕ ಭಾಷಣ
ಪ್ರಧಾನಿ ಮೋದಿಗೆ ಮೈ ಹೋಮ್ ಗ್ರೂಪ್ ಚೇರ್ಮನ್ ರಾಮೇಶ್ವರ ರಾವ್ ಸನ್ಮಾನ
ಪ್ರಧಾನಿ ಮೋದಿಗೆ ಮೈ ಹೋಮ್ ಗ್ರೂಪ್ ಚೇರ್ಮನ್ ರಾಮೇಶ್ವರ ರಾವ್ ಸನ್ಮಾನ
ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ
ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ
ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ
ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ
ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ
ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ
ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ
ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮಹತ್ವದ ಸಲಹೆ
ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮಹತ್ವದ ಸಲಹೆ