ಬೆಂಗಳೂರು: ಜೂನ್ ತಿಂಗಳಲ್ಲಿ ಹೆಚ್ಚು ವಿದ್ಯುತ್ ಬಿಲ್ (Electricity Bill) ಬಂದ ಬಗ್ಗೆ ಗ್ರಾಹಕರು ತಲೆಕೆಡಿಸಿಕೊಂಡಿದ್ದು, ಈ ವಿಚಾರವಾಗಿ ಬೆಸ್ಕಾಂ (BESCOM) ಸ್ಪಷ್ಟೀಕರಣ ನೀಡಿದೆ. ಜೂನ್ ತಿಂಗಳಲ್ಲಿ ಗ್ರಾಹಕರಿಗೆ ನೀಡಿರುವ ಬಿಲ್ ಮಾಹಿತಿ ತಂತ್ರಾಂಶದಲ್ಲಿ ಸೇರ್ಪಡೆಗೊಳಿಸುವ ಕಾರ್ಯ ಪ್ರಗತಿಯಲ್ಲಿರುವ ಕಾರಣ ಆನ್ಲೈನ್ನಲ್ಲಿ ಋಣಾತ್ಮಕ ಬಿಲ್ ಬಂದಿದೆ. ಇನ್ನೆರಡು ದಿನಗಳ ಒಳಗೆ ಇದನ್ನು ಸರಿಪಡಿಸಲಾಗುವುದು ಎಂದು ಬೆಸ್ಕಾಂ ಸೋಮವಾರ ಹೇಳಿದೆ.
ಗ್ರಾಹಕರಿಗೆ ನೀಡಿರುವ ಮುದ್ರಿತ ಬಿಲ್ನಲ್ಲಿ ಮೊತ್ತ ನಮೂದಾಗಿರುತ್ತದೆ. ಆ ಮೊತ್ತವನ್ನು ಆನ್ಲೈನ್ನಲ್ಲಿ ನಮೂದಿಸಿ ಪಾವತಿಸಲು ಕೋರಲಾಗಿದೆ. ಬಿಲ್ ಬಗ್ಗೆ ಗೊಂದಲಗಳಿದ್ದರೆ ಆತಂಕಕ್ಕೀಡಾಗದೆ ಉಪವಿಭಾಗವನ್ನು ಸಂಪರ್ಕಿಸಬಹುದು. ಬೆಸ್ಕಾಂ ಹೆಲ್ಪ್ಲೈನ್ 1912 ಸಂಖ್ಯೆಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ.
ಬೆಸ್ಕಾಂ ಗ್ರಾಹಕರ ಬಳಕೆಗೆ ಅನುಗುಣವಾಗಿ ಮಾತ್ರ ಬಿಲ್ ನೀಡಲಾಗಿದೆ. ಯಾವುದೇ ಹೆಚ್ಚುವರಿ ಶುಲ್ಕ ಸೇರಿಸಿ ಬೆಸ್ಕಾಂ ಬಿಲ್ ನೀಡಿರುವುದಿಲ್ಲ. ಜುಲೈ ತಿಂಗಳಲ್ಲಿ ಯಾವುದೇ ಬಿಲ್ಲಿಂಗ್ ಸಮಸ್ಯೆ ಇರುವುದಿಲ್ಲ ಎಂದು ಬೆಸ್ಕಾಂ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: Gruha Jyothi Scheme: ಗೃಹಜ್ಯೋತಿ ಯೋಜನೆ ನೋಂದಣಿ, ಮೊದಲ ದಿನ 55 ಸಾವಿರ ಅರ್ಜಿ
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ಸೋಮವಾರ 1,61,958 ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಬೆಳಗ್ಗೆಯಿಂದ ಸಂಜೆ 5.30 ರವರೆಗೆ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. ಮೊದಲ ದಿನ ಸುಮಾರು 55 ಸಾವಿರ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದರು. ಎರಡನೇ ದಿನ ನೋಂದಣಿ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಲಕ್ಷಕ್ಕೂ ಹೆಚ್ಚು ಮಂದಿ ಯೋಜನೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ