ಬೆಂಗಳೂರು, ಆಗಸ್ಟ್.17: ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ 20 ಜನ ಹೆಚ್ಚುವರಿ ಪಿಡಿಒಗಳನ್ನ ನಿಯೋಜನೆಗೊಳಿಸಿದ್ದ ಆದೇಶವನ್ನು ರದ್ದು ಮಾಡಲಾಗಿದೆ. ಸರ್ಕಾರದಿಂದ (Karnataka Government) ಅನುಮೋದನೆ ಪಡೆಯದೆ ಜಿಲ್ಲಾಮಟ್ಟದಲ್ಲಿಯೇ ಪಿಡಿಒಗಳ ನಿಯೋಜನೆ ಹಿನ್ನೆಲೆಯಲ್ಲಿ ಹೆಚ್ಚುವರಿ ಪಿಡಿಒಗಳ ನಿಯೋಜನೆ ಆದೇಶವನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ.
ನಿಯೋಜನೆಗೂ ಮೊದಲು ಇಲಾಖೆ ಆಯುಕ್ತರಿಂದ ಅನುಮೋದನೆ ಕಡ್ಡಾಯ. ಆದರೆ ಅನುಮೋದನೆ ಪಡೆಯದೆ ತರಾತುರಿಯಲ್ಲಿ ಜಿಲ್ಲಾಮಟ್ಟದ ಸಿಇಒ ಹಂತದಲ್ಲಿಯೇ ನಿಯೋಜನೆ ಮಾಡಲಾಗಿದೆ, ಹೀಗಾಗಿ ಆದೇಶಕ್ಕೆ ತಡೆ ನೀಡಿ RDPR ಆಯುಕ್ತೆ ಅರುಂಧತಿ ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದಲ್ಲಿಯೇ ನೇಮಕ ಮಾಡಲಾಗಿತ್ತು. ಇದೀಗ 20 ಪಿಡಿಒಗಳ ನಿಯೋಜನೆ ಆದೇಶವನ್ನು ಸರ್ಕಾರ ರದ್ದುಗೊಳಿಸಿದೆ.
ಇದನ್ನೂ ಓದಿ: ಮಳೆ ಹಾನಿ ಸ್ಥಳಕ್ಕೆ ತಡವಾಗಿ ಬಂದದ್ದನ್ನು ಪ್ರಶ್ನಿಸಿದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಿಜೆಪಿ ಶಾಸಕ ಹರೀಶ್ ಪೂಂಜಾ
ಮಕ್ಕಳಿಗೆ ನೀಡಬೇಕಿದ್ದ ಆಹಾರ ಪದಾರ್ಥಗಳನ್ನು ಕಾಳಸಂತೆಯಲ್ಲಿ ಮಾರುತ್ತಿದ್ದ, ಅಂಗನವಾಡಿ ಕಾರ್ಯಕರ್ತೆ ಸಸ್ಪೆಂಡ್ ಆಗಿದ್ದಾರೆ. ಟಿವಿ9ನಲ್ಲಿ ಸುದ್ದಿ ಬಿತ್ತರವಾಗ್ತಿದ್ದಂತೆ ಯಾದಗಿರಿ ಜಿಲ್ಲೆ ಹುಣಸಗಿಯ ಹಗರಟಗಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಉಮಾದೇವಿ ಸಸ್ಪೆಂಡ್ ಆಗಿದ್ದಾರೆ. ಅಕ್ಕಿ, ಮೊಟ್ಟೆ, ಗೋಧಿ, ರವೆ, ಅಡುಗೆ ಎಣ್ಣೆ, ಬೆಲ್ಲ ಹಾಗೂ ಬೇಳೆಯನ್ನ ಕಾರ್ಯಕರ್ತೆ ಉಮಾದೇವಿ ಮಾರಾಟ ಮಾಡ್ತಿದ್ದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿತ್ತು. ಈ ಕುರಿತು ನಿನ್ನೆ ಟಿವಿ9ನಲ್ಲಿ ಸುದ್ದಿ ಬಿತ್ತರಿಸಲಾಗಿತ್ತು.
ಮೆಟ್ರೋ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಗುಡ್ನ್ಯೂಸ್ ಕೊಟ್ಟಿದೆ. ನಮ್ಮ ಮೆಟ್ರೋ 3ನೇ ಹಂತದ ಕಾಮಗಾರಿಗೆ ಕೇಂದ್ರ ಸಂಪುಟ ಗ್ರೀನ್ಸಿಗ್ನಲ್ ಕೊಟ್ಟಿದೆ. ಬರೋಬ್ಬರಿ ₹15,611 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಒಪ್ಪಿಗೆ ನೀಡಿದೆ. ಕಾರಿಡಾರ್-1 ಜೆಪಿ ನಗರದ 4ನೇ ಹಂತದಿಂದ ಕೆಂಪಾಪುರವರೆಗೆ 21 ಸ್ಟೇಷನ್ಗಳು, 32.15 ಕಿಲೋ ಮೀಟರ್ ವಿಸ್ತೀರ್ಣವಿರುವ ಮಾರ್ಗದಲ್ಲಿ ಕಾಮಗಾರಿ ನಡೆಯಲಿದೆ. ಇನ್ನು, ಕಾರಿಡಾರ್- 2 ಹೊಸಹಳ್ಳಿಯಿಂದ ಕಡಬಗೆರೆಯವರೆಗೆ 9 ಸ್ಟೇಷನ್ಗಳು, ಮಾಗಡಿ ರಸ್ತೆಯಲ್ಲಿ 12.50 ಕಿಲೋ ಮೀಟರ್ ಮಾರ್ಗದಲ್ಲಿ ಕಾಮಗಾರಿ ನಡೆಯಲಿದೆ. ಇದರಿಂದ ಮೆಟ್ರೋ ವಿಸ್ತೀರ್ಣ 220.20 ಕಿಲೋ ಮೀಟರ್ ಹೊಂದಲಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:12 am, Sat, 17 August 24