AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿಲಕ್ ನಗರ ಸಲ್ಮಾ ಹತ್ಯೆಗೆ ಸ್ಫೋಟಕ ಕಾರಣ ಬಹಿರಂಗ, ಸುಬ್ರಹ್ಮಣಿ-ಸೆಂಥಿಲ್ ಸಿಕ್ಕಿಬಿದ್ದಿದ್ದೇ ರೋಚಕ!

ಬೆಂಗಳೂರಿನ ತಿಲಕನಗರದಲ್ಲಿ ನಡೆದಿದ್ದ ಕೊಲೆಗೆ ಕಾರಣ ಸಿಕ್ಕಿದೆ. ಮನೆಯಲ್ಲಿ ಮಹಿಳೆಯನ್ನ ಕೊಲೆ ಮಾಡಿ ಬಳಿಕ ಅಲ್ಲಿಂದ ಸಾಗಿಸಿ ಆಟೋದಲ್ಲಿ ಶವ ಹಾಕಿದ್ದ ಹಂತಕರು ಸಿಕ್ಕಿಬಿದ್ದಿದ್ದು, ಇದೀಗ ಕಂಬಿ ಎಣಿಸುತ್ತಿದ್ದಾರೆ.ಇನ್ನು ಕೊಲೆಯಾದ 24 ಗಂಟೆಯಲ್ಲಿ ಕೊಲೆಗಾರರನ್ನು ಪೊಲೀಸರು ಪತ್ತೆ ಮಾಡಿ ಹಿಡಿದಿದ್ದೇ ರೋಚಕವಾಗಿದೆ. ಆದ್ರೆ ಇಬ್ಬರಲ್ಲಿ ಸಲ್ಮಾಳನ್ನ ಕೊಲೆ ಮಾಡಿದ್ಯಾರು ಮತ್ತು ಮಾಡಿದ್ಯಾಕೆ? ಎನ್ನುವುದು ವಿಚಾರಣೆಯಲ್ಲಿ ಬಯಲಾಗಿದೆ.

ತಿಲಕ್ ನಗರ ಸಲ್ಮಾ ಹತ್ಯೆಗೆ ಸ್ಫೋಟಕ ಕಾರಣ ಬಹಿರಂಗ, ಸುಬ್ರಹ್ಮಣಿ-ಸೆಂಥಿಲ್ ಸಿಕ್ಕಿಬಿದ್ದಿದ್ದೇ ರೋಚಕ!
Salma Murder
ರಮೇಶ್ ಬಿ. ಜವಳಗೇರಾ
|

Updated on:Oct 27, 2025 | 10:45 PM

Share

ಬೆಂಗಳೂರು, (ಅಕ್ಟೋಬರ್ 27): ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ತಿಲಕನಗರದ ಸಲ್ಮಾ ಕೊಲೆ ಸಂಬಂಧ ಇಬ್ಬರು ಆರೋಪಿಗಳನ್ನ ಪೊಲೀಸರ 24 ಗಂಟೆಯಲ್ಲೇ ಬಂಧಿಸಿದ್ದು, ಸದ್ಯ ಇಬ್ಬರನ್ನ ಕಸ್ಟಡಿಗೆ ಪಡೆದು ವಿಚಾರಣೆ ಮಾಡುತ್ತಿದ್ದು, ಈ ವೇಳೆ ಪೊಲೀಸರಿಗೆ ಕೊಲೆಯ ಮತ್ತಷ್ಟು ಕಹಾನಿ ಗೊತ್ತಾಗಿದೆ. ಸುಬ್ರಹ್ಮಣಿ ಮತ್ತು ಸೆಂಥಿಲ್ ಇಬ್ಬರು ಸೇರಿ ಸಲ್ಮಾಳನ್ನ ಕೊಲೆ ಮಾಡಿ ಮೃತದೇಹ ಬಿಸಾಕಿದ್ದೇಗೆ? ನಂತರ ಅದ್ಯಾವ ಊರಿನಲ್ಲಿ ತಲೆಮರೆಸಿಕೊಳ್ಳಲು ಪ್ಲಾನ್ ಮಾಡಿಕೊಂಡಿದ್ರು ಎನ್ನುವುದು ಬಟಾಬಯಲಾಗಿದೆ. ಸುಬ್ರಮಣಿಯೇ ಸಲ್ಮಾಳನ್ನ ಕೊಲೆ ಮಾಡಿರುವುದು ಗೊತ್ತಾಗಿದೆ. ಅಚ್ಚರಿ ಅಂದ್ರೆ ಸುಬ್ರಮಣಿ, ಸಲ್ಮಾಳ ಮೃತದೇಹ ಸಾಗಿಸಲು ಆಕೆಯ ಸ್ನೇಹಿತ ಸೆಂಥಿಲ್ ಸಹಾಯ ಪಡೆದಿರುವುದು ಬೆಳಕಿಗೆ ಬಂದಿದೆ.

ವಿಚಿತ್ರ ಅಂದ್ರೆ ಸಲ್ಮಾ ಹಾಗೂ ಸುಬ್ರಹ್ಮಣಿ  ಅನೈತಿಕ ಸಂಬಂಧ ಹೊಂದಿದ್ದರು. ಆಕೆ ಶುಕ್ರವಾರ ಸಬ್ರಹ್ಮಣಿ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಸಲ್ಮಾ ಸೆಂಥಿಲ್ ಜೊತೆ ಸಲುಗೆಯಿಂದ ಇದ್ದಳಂತೆ. ಇದರಿಂದ ಆಕ್ರೋಶಗೊಂಡಿದ್ದ ಸುಬ್ರಹ್ಮಣಿ, ಕುಡಿತ ಮತ್ತಿನಲ್ಲಿಯೇ ಮನೆಯಲ್ಲಿದ್ದ ರಾಗಿ ಮುದ್ಧೆ ತಿರುಗಿಸುವ ಹಿಟ್ಟಿನ ಕೋಲಿನಲ್ಲಿ ಸಲ್ಮಾಳ ತಲೆಗೆ ಹೊಡೆದು ಹಲ್ಲೆ ಮಾಡಿದ್ದ. ಹಾಗೆ ಸ್ನೇಹಿತ ಸೆಂಥಿಲ್ ಗೂ ಹೊಡೆದಿದ್ದ. ಇದರಿಂದ ಸಲ್ಮಾ ಸ್ಥಳದಲ್ಲೇ ಮೃತಪಟ್ಟಿದ್ದಳು.

ಇದನ್ನೂ ಓದಿ: 4 ಮಕ್ಕಳ ತಾಯಿ ಸಲ್ಮಾ ಕೊಲೆ ಪ್ರಕರಣಕ್ಕೆ ಹೊಸ ತಿರುವು; ದುಷ್ಕರ್ಮಿಗಳ ಕೊಲೆ ಸಂಚು ಹೇಗಿತ್ತು ಗೊತ್ತಾ?

ಇನ್ನು ಸಲ್ಮಾಳ ಮೃತದೇಹವನ್ನು ಮಧ್ಯರಾತ್ರಿ 1.30ರ ಹೊತ್ತಿಗೆ ಮನೆಯಿಂದ 100 ಮೀ ದೂರದಲ್ಲಿರುವ ಜಾಗಕ್ಕೆ ಕೊಂಡೊಯ್ದಿದ್ದು, ಕಳೆದ 2 ವರ್ಷಗಳಿಂದ ಅದೇ ಜಾಗದಲ್ಲಿ ಕೆಟ್ಟು ನಿಂತಿದ್ದಆಟೋವೊಂದರಲ್ಲಿ ಇಟ್ಟು ಪರಾರಿಯಾಗಿದ್ದರು.

ಹಂತಕರು ಸಿಕ್ಕಿಬಿದ್ದಿದ್ಹೇಗೆ?

ಇನ್ನು ಸಲ್ಮಾಳನ್ನ ಕೊಲೆ ಮಾಡಿ ಆರೋಪಿಗಳು ಪಾಂಡಿಚೇರಿಗೆ ಎಸ್ಕೇಪ್ ಆಗುವ ಪ್ಲಾನ್ ನಲ್ಲಿದ್ದರು. ಹೀಗಾಗಿ ಮಧ್ಯರಾತ್ರಿಯೇ ಮೆಜೆಸ್ಟಿಕ್ ವರೆಗೆ ನಡೆದುಕೊಂಡೇ ಹೋಗಿದ್ದ ಆರೋಪಿಗಳಿಬ್ಬರು ಬಳಿಕ ತುಮಕೂರಿಗೆ ಬಸ್ ನಲ್ಲಿ ಎಸ್ಕೇಪ್ ಆಗಿದ್ದರು. ಇತ್ತ ಕೊಲೆಯಾದ ಒಂದು ದಿನಕ್ಕೆ ಮಹಿಳೆಯ ಶವ ಪತ್ತೆಯಾಗಿತ್ತು. ತಿಲಕನಗರ ಪೊಲೀಸರಿಗೆ ಈ ಇಬ್ಬರ ಮೇಲೆ ಪ್ರಾರಂಭದಲ್ಲೇ ಅನುಮಾನ ಬಂದ ಕಾರಣ ಇಬ್ಬರ ಬೆನ್ನುಬಿದ್ದರು. ಬಳಿಕ ಸುಬ್ರಮಣಿ ಮತ್ತು ಸೆಂಥಿಲ್ ಇಬ್ಬರು ತುಮಕೂರಿನಲ್ಲಿ ಇರುವುದನ್ನು ಪತ್ತೆ ಮಾಡಿ ತುಮಕೂರಿನ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ತುಮಕೂರು ಪೊಲೀಸರು ಈ ಇಬ್ಬರು ಆರೋಪಿಗಳನ್ನ ಪತ್ತೆ ಮಾಡಿ ವಶಕ್ಕೆ ಪಡೆದಾಗ ಆರೋಪಿಗಳ ಬಟ್ಟೆ ಉಗುರಿನಲ್ಲಿ ರಕ್ತದ ಕಲೆ ಪತ್ತೆಯಾಗಿತ್ತು. ಇದ್ರಿಂದ ಕೊಲೆಗಡುಕರು ಅವರೇ ಎನ್ನುವುದು ಕನ್ಫರ್ಮ್ ಆಗಿದ್ದು, ನಂತರ ತಿಲಕ ನಗರ ಪೊಲೀಸರು ತುಮಕೂರಿಗೆ ಬಂದು ಇಬ್ಬರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಒಟ್ನಲ್ಲಿ ಶವ ಸಿಕ್ಕ 24 ಗಂಟೆಯೊಳಗೆ ಆರೋಪಿಗಳನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದು, ಇಬ್ಬರನ್ನ ಹೆಚ್ಚಿನ ವಿಚಾರಣೆ ನಡೆಸಲಾಗ್ತಿದೆ. ಆದ್ರೆ ಅನೈತಿಕ ಸಂಬಂಧ ಇದ್ದ ವ್ಯಕ್ತಿಯ ಗೆಳೆಯನ ಜೊತೆ ಸಲುಗೆಯಿಂದ ಇದ್ದ ಸಲ್ಮಾಳ ಕೊಲೆ ನಿಜಕ್ಕೂ ವಿಚಿತ್ರ ಕಹಾನಿ.

ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು.

Published On - 10:43 pm, Mon, 27 October 25

Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!