ಕರ್ನಾಟಕ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ: ಕಂಪನಿಯ ಸರ್ವರ್ ಹ್ಯಾಕ್​, 378 ಕೋಟಿ ರೂ. ಮಾಯ

ಕರ್ನಾಟಕದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ಅಪರಾಧ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ನೆಬಿಲೊ ಟೆಕ್ನಾಲಜೀಸ್‌ನ ಸರ್ವರ್ ಹ್ಯಾಕ್ ಮಾಡಿ ಕೋಟ್ಯಾಂತರ ರೂಪಾಯಿ ಕಳವು ಮಾಡಲಾಗಿದೆ. ಪ್ರಕರಣ ಸಂಬಂಧ ಕಂಪನಿಯ ಉದ್ಯೋಗಿ ರಾಹುಲ್ ಅಗರ್ವಾಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಲ್ಯಾಪ್‌ಟಾಪ್ ಮೂಲಕ ಸರ್ವರ್ ಹ್ಯಾಕ್ ಆಗಿರುವುದು ತನಿಖೆಯಿಂದ ತಿಳಿದುಬಂದಿದೆ.

ಕರ್ನಾಟಕ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ: ಕಂಪನಿಯ ಸರ್ವರ್ ಹ್ಯಾಕ್​, 378 ಕೋಟಿ ರೂ. ಮಾಯ
ಸಾಂದರ್ಭಿಕ ಚಿತ್ರ
Updated By: ವಿವೇಕ ಬಿರಾದಾರ

Updated on: Jul 30, 2025 | 2:57 PM

ಬೆಂಗಳೂರು, ಜುಲೈ 30: ಕರ್ನಾಟಕ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ (Cyber Crime) ಪ್ರಕರಣವೊಂದು ಬೆಂಗಳೂರಿನ (Bengaluru) ವೈಟ್​ಫೀಲ್ಡ್​ನಲ್ಲಿ ಬೆಳಕಿಗೆ ಬಂದಿದೆ. ದೇಶದ ಪ್ರತಿಷ್ಠಿತ ಕ್ರಿಪ್ಟೋ ಕರೆನ್ಸಿ ಕಂಪನಿಯಾದ ನೆಬಿಲೊ ಟೆಕ್ನಾಲಜೀಸ್ ಪ್ರೈವೇಟ್​ ಲಿಮಿಟೆಡ್​ನ ಸರ್ವರ್ ಹ್ಯಾಕ್ ಮಾಡಿ, ಸೈಬರ್​ ಖದೀಮರು 378 ಕೋಟಿ ರೂಪಾಯಿ ಕಳವು ಮಾಡಿದ್ದಾರೆ. ಪ್ರಕರಣ ಸಂಬಂಧ ವೈಟ್​​ಫೀಲ್ಡ್ (Whitefield)​​ ಸೈಬರ್​ ಕ್ರೈಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ನೆಬಿಲೊ ಟೆಕ್ನಾಲಜೀಸ್ ಕಂಪನಿ ನೌಕರ ರಾಹುಲ್ ಅಗರ್ವಾಲ್ ಎಂಬುವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸೈಬರ್​ ಕ್ರೈಂ ಪೊಲೀಸರು ರಾಹುಲ್​ನ ಲ್ಯಾಪ್​ಟಾಪ್​ ವಶಕ್ಕೆ ಪಡೆದು ತಪಾಸಣೆ ನಡೆಸುತ್ತಿದ್ದಾರೆ.

ನೆಬಿಲೊ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಕ್ರಿಪ್ಟೊ ಕರೆನ್ಸಿ ಎಕ್ಸಚೇಂಜ್ ಮಾಡುವ ಫ್ಲಾಟ್ ಫಾರಂ ಆಗಿದೆ. ಸೈಬರ್ ವಂಚಕರು ಎರಡು ಬಾರಿ ಸರ್ವರ್​ ಹ್ಯಾಕ್​ ಮಾಡಿದ್ದಾರೆ. ಮೊದಲಿಗೆ ನಸುಕಿನ ಜಾವ 2:37ಕ್ಕೆ ಕಂಪನಿಯ ಸರ್ವರ್ ಹ್ಯಾಕ್​ ಮಾಡಿ, ವ್ಯಾಲೆಟ್​ನಿಂದ​ 1 USDT ಅನ್ನು ಮತ್ತೊಂದು ವ್ಯಾಲೆಟ್​ಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ನಂತರ, ಬೆಳಗ್ಗೆ 9:40 ಮತ್ತೆ ಸರ್ವರ್​ ಹ್ಯಾಕ್​ ಮಾಡಿ, ವ್ಯಾಲೆಟ್​ನಿಂದ 44 ಮಿಲಿಯನ್ USDT (ಅಂದಾಜು 3,78,00,00,000 ರೂಪಾಯಿ) ವರ್ಗಾವಣೆ ಮಾಡಿಕೊಂಡಿದ್ದಾರೆ.

ಸರ್ವರ್ ಹ್ಯಾಕ್​ ಮಾಡಿದ್ದು ಹೇಗೆ?

ಹಣ ಕಳುವು ಆಗುತ್ತಿದ್ದಂತೆ, ನೆಬಿಲೊ ಟೆಕ್ನಾಲಜಿಸ್ ಕಂಪನಿ ಆಂತರಿಕ ತನಿಖೆ ನಡೆಸಿತ್ತು. ತನಿಖೆ ವೇಳೆ ತನ್ನದೇ ಕಂಪನಿಯ ನೌಕರ ರಾಹುಲ್ ಅಗರ್ವಾಲ್​ ಅವರ ಲ್ಯಾಪ್​ಟ್ಯಾಪ್​ ಮೂಲಕ ಸರ್ವರ್​ ಹ್ಯಾಕ್​ ಮಾಡಲಾಗಿದೆ ಎಂಬುವುದು ಗೊತ್ತಾಗಿದೆ. ರಾಹುಲ್​ ಅಗರ್ವಾಲ್​ ಅವರು ಕಂಪನಿ ನೀಡಿದ ಲ್ಯಾಪ್​ಟಾಟ್​ ಬಳಸಿಕೊಂಡು ಮತ್ತೊಂದು ಕಂಪನಿಯಲ್ಲಿ ಪಾರ್ಟಟೈಮ್ ಕೆಲಸ ಮಾಡಿದ್ದರು. ರಾಹುಲ್​ ಅಗರ್ವಾಲ್​ ಮತ್ತೊಂದು ಕಂಪನಿಯಲ್ಲಿ ಕೆಲಸ ಮಾಡಿ 15 ಲಕ್ಷ ರೂ. ಹಣ ಪಡೆಯುತ್ತಿದ್ದರು. ರಾಹುಲ್​ ಅಗರ್ವಾಲ್ ಮತ್ತೊಂದು ಕಂಪನಿಯಲ್ಲಿ ಕೆಲಸ ಮಾಡುವ ವೇಳೆ ಸೈಬರ್ ವಂಚಕರು ಇವರ ಲ್ಯಾಪ್​ಟಾಪ್ ಹ್ಯಾಕ್ ಮಾಡಿ ಸರ್ವರ್​ಗೆ ಎಂಟ್ರಿಯಾಗಿ, 44 ಮಿಲಿಯನ್ ಡಾಲರ್ ದೋಚಿದ್ದಾರೆ.

ಇದನ್ನೂ ಓದಿ
357 ಬ್ಯಾಂಕ್ ಖಾತೆ ಸೈಬರ್ ವಂಚಕರಿಗೆ ಮಾರಾಟ ಮಾಡಿದ್ದ ಗ್ಯಾಂಗ್ ಪತ್ತೆ
ರಜೆ ಮಜಾ ಮಾಡಲು ಹೋಗಿ ಸೈಬರ್ ವಂಚಕರ ಬಲೆಗೆ ಬಿದ್ದ
ನಿಮ್ಮ ಫೋನ್‌ನಲ್ಲಿ 1930 ಸಂಖ್ಯೆಯನ್ನು ಸೇವ್ ಮಾಡಿದ್ದೀರ? ಏನು ಪ್ರಯೋಜನ?
ಸೈಬರ್​ ಕ್ರೈಂ: ವೃದ್ಧೆಯಿಂದ 1 ಕೋಟಿಗೂ ಅಧಿಕ ಹಣ ದೋಚಿದ ವಂಚಕರು

ಇದನ್ನೂ ಓದಿ: ಕರ್ನಾಟಕ ಗ್ರಾಮೀಣ ಪ್ರದೇಶಗಳಲ್ಲಿ ಎರಡು ವರ್ಷಗಳಲ್ಲಿ ಸೈಬರ್ ಅಪರಾಧ ದುಪ್ಪಟ್ಟು

ಒಂದೇ ಪ್ರಕರಣದಲ್ಲಿ 378 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಕ್ರಿಪ್ಟೋ ಕರೆನ್ಸಿ ಕಳುವುಗೊಂಡಿರುವ ಈ ಘಟನೆ, ಕರ್ನಾಟಕದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ಕ್ರೈಂ ಎಂದು ಗುರುತಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:56 pm, Wed, 30 July 25