ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್: ಅನಂತರಾಜು ಬರೆದ ಡೆತ್ನೋಟ್ನ್ನ ಪೊಲೀಸರಿಗೆ ನೀಡಿದ ಪತ್ನಿ ಸುಮಾ
ಬಿಜೆಪಿ (BJP) ಮುಖಂಡ ಅನಂತರಾಜ್ (Antha Raju) ಆತ್ಮಹತ್ಯೆ ಕೇಸ್ಗೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸರು ಡೆತ್ ನೋಟ್ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ನಗರದಲ್ಲಿ ಬಿಜೆಪಿ (BJP) ಮುಖಂಡ ಅನಂತರಾಜು (Antha Raju) ಆತ್ಮಹತ್ಯೆ ಕೇಸ್ಗೆ ಸಂಬಂಧಿಸಿದಂತೆ ಸದ್ಯ ಬ್ಯಾಡರಹಳ್ಳಿ ಪೊಲೀಸರು ಡೆತ್ ನೋಟ್ ವಶಕ್ಕೆ ಪಡೆದಿದ್ದಾರೆ. ಇದು ಡೆತ್ ನೋಟ್ ಎಂದು ಪತ್ನಿ ಸುಮಾ ಪೊಲೀಸರಿಗೆ ನೀಡಿದ್ದಾರೆ. ಪ್ರಿಯ ಸುಮ ಕ್ಷಮಿಸಿಬಿಡು ನಾನು ನಿನಗೆ ಮೋಸ ಮಾಡಿದ್ದೇನೆ ಎಂದು ಪತ್ನಿ ಸುಮ ಹೆಸರಲ್ಲಿ ಅನಂತ್‌ರಾಜು ಡೆತ್ ನೋಟ್ ಬರೆದಿದ್ದಾರೆ. ಡೆತ್ ನೋಟ್ ಬರೆದಿರೋದು ಅನಂತರಾಜು ಅಥವಾ ಬೇರೆಯವರಾ ಎಂದು ಎಫ್‌ಎಸ್‌ಎಲ್ ಪರೀಕ್ಷೆ ಪೊಲೀಸರು ಕಳಿಸಲಿದ್ದಾರೆ. ಈ ಹಿಂದೆ ಫೋನ್ ಕಾಲ್ನಲ್ಲಿ ಮಾತನಾಡುವಾಗ ರೇಖಾಗೆ ಅವಾಜ್ ಹಾಕಿದ್ದಳು. ನಿನ್ನ ಮೇಲೆ ಬರೆದಿರೊ ಡೆತ್ ನೋಟ್ ಇದೆ ಅದನ್ನು ಕೊಟ್ಟು ನಿನ್ನ ಜೈಲಿಗೆ ಹಾಕಿಸುತ್ತೆನೆ ಎಂದು ಸುಮಾ ಹೇಳಿದ್ದಳು. ಹೀಗಾಗಿ ಈ ಡೆತ್ ನೋಟ್ ಯಾವಾಗ ಮತ್ತು ಯಾವ ಸಂದರ್ಭದಲ್ಲಿ ಬರೆದಿದ್ದು ಎಂದು ಬ್ಯಾಡರಹಳ್ಳಿ ಪೊಲೀಸರು ತನಿಖೆ ನಡೆಸಲಿದ್ದಾರೆ.
ಇದನ್ನೂ ಓದಿ: Vikram: ಕಮಲ್ ಹಾಸನ್ಗೆ 50 ಕೋಟಿ ರೂ. ಸಂಬಳ; ವಿಜಯ್ ಸೇತುಪತಿ, ಫಹಾದ್ ಫಾಸಿಲ್ಗೆ ಎಷ್ಟು?
ರೇಖಾ ಆರೋಪಕ್ಕೆ ಪತ್ನಿ ಸುಮಾ ಸ್ಪಷ್ಟನೆ
ರೇಖಾ ಮಾಡಿದ ಆರೋಪಗಳಿಗೆ ಪತ್ನಿ ಸುಮಾ ಸುದ್ದಿಗೋಷ್ಠಿ ಮಾಡಿದ್ದು, ಮಾರ್ಚ್ ೨೪ರ ರಾತ್ರಿ ನನಗೆ ವಿಷಯ ಗೊತ್ತಾಯ್ತು. ಏಪ್ರಿಲ್ 7 ರಂದು ನಾನು ಮನೆಗೆ ವಾಪಾಸ್ ಬಂದೆ. ನನ್ನ ಗಂಡನಿಗೆ ನಾನು ಹೋಂ ಅರೆಸ್ಟ್ ಮಾಡಿಲ್ಲ, ನನ್ನ ಗಂಡನನ್ನ ಪ್ರೀತಿಸುತ್ತಿದ್ದೆ. ಎಆರ್ ಆರ್ಗೆ ಹೋದಮೇಲೆ ನನ್ನ ಗಂಡನಿಗೆ ಬ್ಲಾಕ್ ಮೇಲ್ ಮೇಸೆಜ್ ಕಳಿಸಿದಳು. ಓರ್ವ ವಿಐಪಿಗೆ ಪೋಟೊ, ವಿಡಿಯೋ ಕಳಿಸುವುದಾಗಿ ಬೆದರಿಕೆ ಹಾಕಿದಳು ಎಂದು ಸ್ಪಷ್ಟನೆ ನೀಡಿದರು. ಯಾವ ಹೆಂಡತಿ ಕೂಡಾ ಪತಿಯನ್ನ ಕೊಲ್ಲುವುದಿಲ್ಲ. ನನ್ನ ಗಂಡ ಮತ್ತು ಆಕೆಗೆ 2 ವರೆ ಲಕ್ಷ ಟ್ರಾನ್ಸ್ಆಕ್ಷನ್ ಆಗಿದೆ. ನನಗೆ ಅನಂತರಾಜು ಇಲ್ಲದಿದ್ದರೆ, ನಿನಗೂ ಸಿಗಲು ಬಿಡುವುದಿಲ್ಲ ಅಂದಿದ್ದಳು. ಅವಳಿಂದ ನನಗೆ ಟಾರ್ಚರ್ ಇದೆ ಎಂದು ಅಂತಾ ಅನಂತರಾಜು ಹೇಳಿದ್ದರು. ಸುಳ್ಳು ಹೇಳಿ ಆಕೆಗೆ ಹೆದರಿಸಿದರೆ ನನ್ನ ಗಂಡನನ್ನ ಉಳಿಸಿಕೊಳ್ಳಲು ಈ ರೀತಿ ಮಾಡಿದ್ದೇನೆ. ಹೊಟ್ಟೆ ಉರಿಗೆ ನನ್ನ ಗಂಡನ ಜತೆ ಜಗಳ ಮಾಡಿದ್ದೇನೆ ವಿನಃ ನಾನು ಅವರಿಗೆ ನೋವು ಮಾಡಿಲ್ಲ ಎಂದರು.
ರೇಖಾ ಆತ್ಮಹತ್ಯೆಗೆ ಯತ್ನ
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆ ಎದುರೇ ರೇಖಾ ಆತ್ಮಹತ್ಯೆಗೆ ಯತ್ನಿಸಿದ್ದರು. ಬಿಬಿಎಂಟಿಸಿ ಬಸ್‌ಗೆ ಅಡ್ಡವಾಗಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸುಮಾ ವಿರುದ್ಧ ಬೆದರಿಕೆ ಸಂಬಂಧ ದೂರು ರೇಖಾ ನೀಡಲು ಪೊಲೀಸ್ ಠಾಣೆಗೆ ಆಗಮಿಸಿದ್ದರು. ಆದ್ರೆ ದೂರು ಕೊಡಲು ಬಂದರೆ ನನ್ನನ್ನೇ ವಿಚಾರಣೆಗೆ ಅಂತಾ ಇರಿಸಿಕೊಳುತ್ತಾರೆ. ನ್ಯಾಯ ಸಿಗತ್ತೆ ಎಂದು ನನಗೆ ಅನಿಸೋದಿಲ್ಲ. ಠಾಣೆಯಿಂದ ಬಂದು ವಾಹನಕ್ಕೆ ಅಡ್ಡ ನಿಂತು ಆತ್ಮಹತ್ಯೆಗೆ ಯತ್ನಿಸಿಸಿದ್ದರು. ಅದೃಷ್ಟವಶಾತ್ ಸ್ನೇಹಿತನಿಂದ ಸುಮಾ ರಕ್ಷಣೆ ಮಾಡಲಾಯ್ತು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಗೆ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:26 pm, Sun, 5 June 22