ಎಸ್​ಟಿ ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್‌ಮೇಲ್ ಪ್ರಕರಣ; ಶಾಸಕರಿಂದ ವಿವರಣೆ ಪಡೆದ ಸಿಸಿಬಿ

ಎಸ್​ಟಿ ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್‌ಮೇಲ್ ಪ್ರಕರಣ; ಶಾಸಕರಿಂದ ವಿವರಣೆ ಪಡೆದ ಸಿಸಿಬಿ
ಸಚಿವ ಸೋಮಶೇಖರ್‌ ಮತ್ತು ಪುತ್ರ ನಿಶಾಂತ್

ದೂರುದಾರ ನಿಶಾಂತ್​ರಿಂದ ಮಾಹಿತಿ ಪಡೆದಿರುವ ಸಿಸಿಬಿ, ಕೆಲವು ವ್ಯಕ್ತಿಗಳ ಮೇಲೆ ಅನುಮಾನ ವ್ಯಕ್ತಪಡಿಸಿದೆ. ಅವರ ಬಳಿ ಕೆಲಸ ಮಾಡಿದ್ದವರ ಮೇಲೂ ಅನುಮಾನ ಉಂಟಾಗಿದೆ.

TV9kannada Web Team

| Edited By: ganapathi bhat

Jan 09, 2022 | 4:50 PM

ಬೆಂಗಳೂರು: ಸಚಿವ ಎಸ್.ಟಿ. ಸೋಮಶೇಖರ್‌ ಪುತ್ರನಿಗೆ ಬ್ಲ್ಯಾಕ್‌ಮೇಲ್ ಪ್ರಕರಣಕ್ಕೆ ಸಂಬಂಧಿಸಿ ಶಾಸಕರನ್ನು ಸಂಪರ್ಕಿಸಿದ್ದ ಸಿಸಿಬಿ ತಂಡ, ವಿಜಯಪುರ ಜಿಲ್ಲೆಯ ಶಾಸಕರಿಂದ ವಿವರಣೆ ಪಡೆದಿದೆ. ಶಾಸಕರ ಮಗಳ ಹೆಸರಿನ ಸಿಮ್​ನಿಂದ ವಿಡಿಯೋ ಕಳಿಸಿದ್ದಾರೆ. ಹಣಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ಶಾಸಕರಿಗೆ ಸಿಸಿಬಿ ತಿಳಿಸಿತ್ತು. ಅಸಲಿಗೆ ಸದ್ಯ ಆ ಸಿಮ್ ಶಾಸಕರ ಪುತ್ರಿಯ ಬಳಿ ಇಲ್ಲ. ಶಾಸಕರ ಪುತ್ರಿ ವಿದ್ಯಾಭ್ಯಾಸಕ್ಕೆಂದು ವಿದೇಶದಲ್ಲಿದ್ದಾರೆ. ವಿದೇಶಕ್ಕೆ ಹೋಗುವಾಗ ಸಿಮ್ ಕೊಟ್ಟುಹೋಗಿದ್ದಾರೆ. ಶಾಸಕರ ಪುತ್ರಿ ಸ್ನೇಹಿತನಿಗೆ ಸಿಮ್ ಕೊಟ್ಟು ಹೋಗಿದ್ದಾರೆ. ವಿಡಿಯೋ ಕಳಿಸಿ, ಬ್ಲ್ಯಾಕ್​ಮೇಲ್ ನಡೆದ ಬಗ್ಗೆ ಗೊತ್ತಿಲ್ಲ. ಬ್ಲ್ಯಾಕ್​ಮೇಲ್​ ಬಗ್ಗೆ ಶಾಸಕರ ಪುತ್ರಿಗೆ ಏನೂ ಗೊತ್ತಿಲ್ಲ ಎಂದು ತಿಳಿಸಲಾಗಿದೆ.

ಆ ಬಳಿಕ ಸ್ನೇಹಿತರ ವಿಚಾರಣೆ ನಡೆಸಿದ್ದ ಸಿಸಿಬಿ ತಂಡ, ಸಂಬಂಧಿಕ ಹಾಗೂ ರಾಹುಲ್ ಭಟ್ ಸ್ನೇಹಿತರಾಗಿದ್ದಾರೆ. ಸಂಬಂಧಿಕನಿಂದ ಮೊಬೈಲ್ ಪಡೆದು ವೀಡಿಯೊ ಕಳಿಸಿದ್ದ. ಮೊಬೈಲ್​ ಪಡೆದು ರಾಹುಲ್ ಭಟ್ ವಿಡಿಯೋ ಕಳಿಸಿದ್ದ ಎಂದು ಮಾಹಿತಿ ಪಡೆದುಕೊಂಡಿದೆ. ಸಂಬಂಧಿಕನನ್ನ ವಶಕ್ಕೆ ಪಡೆದು ಸಿಸಿಬಿಯಿಂದ ವಿಚಾರಣೆ ನಡೆಸಲಾಗಿದೆ. ಸೂಕ್ತ ದಾಖಲೆಗಳು ಮತ್ತಷ್ಟು ಲಭ್ಯವಾಗಬೇಕಿದ್ದು, ವಿಚಾರಣೆಗೆ ಮತ್ತೆ ಹಾಜರಾಗುವಂತೆ ಸಿಸಿಬಿ ಸೂಚನೆ ನೀಡಿದೆ.

ಈ ಬಗ್ಗೆ ಟಿವಿ9ಗೆ ಶಾಸಕ ಯಶವಂತರಾಯಗೌಡ ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ. ಡಿಸೆಂಬರ್ 28ರಂದು ಸಿಸಿಬಿ ಅಧಿಕಾರಿಗಳು ಬಂದಿದ್ದರು. ಸಿಮ್ ಬಳಕೆ ಬಗ್ಗೆ ಹೇಳಿದ್ರು, ನಾನೂ ಮಗಳನ್ನು ವಿಚಾರಿಸಿದೆ. ಅವಳ ಸ್ನೇಹಿತ ಕ್ಲೈಂಟ್‌ಗೆ ಬೇಕು ಎಂದಿದ್ದಕ್ಕೆ ಸಿಮ್ ಕೊಟ್ಟಿದ್ದಾಳೆ. ಅವನು ರಾಹುಲ್ ಭಟ್ ಎಂಬುವವನಿಗೆ ಸಿಮ್ ಕೊಟ್ಟಿದ್ದಾನೆ. ನಾನೂ ಸಹ ನೋಟಿಸ್ ಬಂದ ಮೇಲೆ ಮಾಹಿತಿ ಪಡೆದೆ. ಎಸ್.ಟಿ. ಸೋಮಶೇಖರ್‌ರನ್ನೂ ಭೇಟಿಯಾಗಿ ತನಿಖೆಗೆ ಮನವಿ ಮಾಡಿದ್ದೇನೆ. ಸೂಕ್ತ ತನಿಖೆ ಮಾಡಿಸುವಂತೆ ಮಾತನಾಡಿದ್ದೇನೆ. ನಾವು ಸಾರ್ವಜನಿಕ ಜೀವನದಲ್ಲಿ ಇರುವವರು. ನಮ್ಮಲ್ಲಿ ಯಾವುದೂ ಮುಚ್ಚುಮರೆ ಇರಬಾರದು. ಸರಿಯಾದ ತನಿಖೆ ಆಗಿ ಸತ್ಯಾಸತ್ಯತೆ ಹೊರಗೆ ಬರಲಿ ಎಂದು ಟಿವಿ9ಗೆ ಶಾಸಕ ಯಶವಂತರಾಯಗೌಡ ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ.

ದೂರುದಾರ ನಿಶಾಂತ್​ರಿಂದ ಮಾಹಿತಿ ಪಡೆದ ಸಿಸಿಬಿ, ಕೆಲವು ವ್ಯಕ್ತಿಗಳ ಮೇಲೆ ಅನುಮಾನ ಆರೋಪಿ ರಾಹುಲ್ ಭಟ್ ವಶಕ್ಕೆ ಪಡೆದು ಸಿಸಿಬಿ ವಿಚಾರಣೆ ನಡೆಸಿದೆ. ಸಿಸಿಬಿ ಎಸಿಪಿ ಜಗನ್ನಾಥ್ ರೈರಿಂದ ಪ್ರಕರಣದ ವಿಚಾರಣೆ ನಡೆಸಲಾಗುತ್ತಿದೆ. ರಾಹುಲ್ ಬಳಿ ಯಾವುದೇ ವಿಡಿಯೋಗಳು ಪತ್ತೆ ಆಗಿಲ್ಲ. ದೂರುದಾರ ನಿಶಾಂತ್​ರಿಂದ ಮಾಹಿತಿ ಪಡೆದಿರುವ ಸಿಸಿಬಿ, ಕೆಲವು ವ್ಯಕ್ತಿಗಳ ಮೇಲೆ ಅನುಮಾನ ವ್ಯಕ್ತಪಡಿಸಿದೆ. ಅವರ ಬಳಿ ಕೆಲಸ ಮಾಡಿದ್ದವರ ಮೇಲೂ ಅನುಮಾನ ಉಂಟಾಗಿದೆ. ದೂರುದಾರರಿಗೆ ಕಳುಹಿಸಿದ ವಿಡಿಯೋ ಮಾತ್ರ ಲಭ್ಯವಾಗಿದೆ. ಟಿವಿ9ಗೆ ಸಿಸಿಬಿ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ. ದೂರುದಾರರ ಮಾಹಿತಿ ಆಧರಿಸಿ ತನಿಖೆ ಚುರುಕು ಮಾಡಲಾಗಿದೆ.

ನಕಲಿ ವಿಡಿಯೋ, ಬ್ಲ್ಯಾಕ್​ಮೇಲ್ ಕುರಿತು ತನಿಖೆ ಚುರುಕುಗೊಳಿಸಲಾಗಿದೆ. ಮತ್ತೋರ್ವ ಆರೋಪಿಗಾಗಿ ಸಿಸಿಬಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಈ ಹಿಂದೆ ಸೋಮಶೇಖರ್ ಜತೆ ಕೆಲಸ‌ ಮಾಡ್ತಿದ್ದ ಆರೋಪಿ, ಈತನಿಂದಲೇ ಸಚಿವರ ಪುತ್ರನ ಮಾಹಿತಿ ಸಂಗ್ರಹ ಆರೋಪ ಕೇಳಿಬಂದಿದೆ. ಸದ್ಯ ಮೊಬೈಲ್ ಸ್ವಿಚ್​​ಆಫ್ ಮಾಡಿ ಆರೋಪಿ ಎಸ್ಕೇಪ್ ಆಗಿದ್ದಾನೆ. ಸಿಸಿಬಿ ತಂಡಕ್ಕೆ ಇದೇ ವ್ಯಕ್ತಿ ಮೇಲೆ ಬಲವಾದ ಅನುಮಾನ ಉಂಟಾಗಿದೆ. ಬಂಧಿತ ರಾಹುಲ್ ಭಟ್ ಜತೆ ಸೇರಿ ಕೃತ್ಯ ಎಸಗಿದ ಶಂಕೆ ವ್ಯಕ್ತವಾಗಿದೆ. ಈ ಕುರಿತು ಸಿಸಿಬಿಯಿಂದ ರಾಹುಲ್ ಭಟ್ ತೀವ್ರ ವಿಚಾರಣೆ ನಡೆಸಿದೆ.

ಆರೋಪಿ ರಾಹುಲ್ ಭಟ್ ಬಂಧನ, 5 ದಿನ ಸಿಸಿಬಿ ವಶಕ್ಕೆ ಸಚಿವ ಎಸ್.ಟಿ.ಸೋಮಶೇಖರ್‌ ಪುತ್ರ ನಿಶಾಂತ್‌ ಅವರಿಗೆ ಕೆಲವು ದಿನಗಳ ಹಿಂದೆ ಅಪರಿಚಿತ ನಂಬರ್‌ನಿಂದ ವಾಟ್ಸಾಪ್‌ನಲ್ಲಿ 1 ಮೆಸೇಜ್ ಬಂದಿತ್ತು. ವಿಡಿಯೋದಲ್ಲಿ ತನ್ನ ಫೋಟೋ ಎಡಿಟ್ ಮಾಡಿ ಕಳಿಸಿದ್ದರು. ಬಳಿಕ ವಾಟ್ಸಾಪ್ ಮೂಲಕ ತನಗೆ, ತಂದೆಗೆ ಬೆದರಿಕೆ ಹಾಕಿದ್ದಾರೆ. ಪಿಎಗೆ ಕಳಿಸಿ ಬೆದರಿಕೆ ಹಾಕಿದ್ದಾಗಿ ನಿಶಾಂತ್ ದೂರು ನೀಡಿದ್ದಾರೆ. 1 ಕೋಟಿ ನೀಡದಿದ್ದರೆ ವಿಡಿಯೋ ಬಿಡುಗಡೆ ಮಾಡುವ ಬೆದರಿಕೆ ಹಾಕಿದ್ದಾರೆ. ಈ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಸೈಬರ್‌ ಕ್ರೈಂ ಪೊಲೀಸರಿಗೆ ಎಸ್.ಟಿ.ಸೋಮಶೇಖರ್‌ ಪುತ್ರ ದೂರು ನೀಡಿದ್ದಾರೆ.

ಇನ್ನು ದೂರು ದಾಖಲಾಗುತ್ತಿದ್ದಂತೆ ಆರೋಪಿ ರಾಹುಲ್ ಭಟ್ನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ 5 ದಿನ ಸಿಸಿಬಿ ವಶಕ್ಕೆ ಪಡೆಯಲಾಗಿದೆ. ದುಬೈನಿಂದ ವಾಪಸಾದ ಬಳಿಕ ರಾಹುಲ್ ಭಟ್ ವಶಕ್ಕೆ ಪಡೆದಿದ್ದು ಮತ್ತೋರ್ವ ಆರೋಪಿ ಶಾಸಕರ ಪುತ್ರಿಗಾಗಿ ಹುಡುಕಾಟ ನಡೆಯುತ್ತಿದೆ.

ಇದನ್ನೂ ಓದಿ: ಸಚಿವ S.T.ಸೋಮಶೇಖರ್‌ ಪುತ್ರನಿಗೆ ಬ್ಲ್ಯಾಕ್‌ಮೇಲ್; ಆರೋಪಿ ರಾಹುಲ್ ಭಟ್ ಬಂಧನ, 5 ದಿನ ಸಿಸಿಬಿ ವಶಕ್ಕೆ

ಇದನ್ನೂ ಓದಿ: ಡ್ರಗ್ಸ್ ಮಾರಾಟಕ್ಕೆ ಹೊಸ ಮಾರ್ಗ: ಫೋಟೋ ಲೊಕೇಶನ್ ಮೂಲಕ ನಡೀತಿದ್ದ ನಶೆ ಏರಿಸೋ ಆಟಕ್ಕೆ ಫೋಟೋ ಫಿನಿಷ್ ಕೊಟ್ಟ ಸಿಸಿಬಿ

Follow us on

Related Stories

Most Read Stories

Click on your DTH Provider to Add TV9 Kannada