ಪುನೀತ್​ಗೆ ಪದ್ಮಶ್ರೀ, ಡಾ. ರಾಜ್​ಕುಮಾರ್‌ಗೆ​ ಭಾರತ ರತ್ನ ಗೌರವ ನೀಡಬೇಕು: ಎಂಪಿ ರೇಣುಕಾಚಾರ್ಯ ಹೇಳಿಕೆ

MP Renukacharya: ನೇತ್ರದಾನ ಬಗ್ಗೆ ನಮ್ಮ ಕುಟುಂಬಸ್ಥರು ಅಭಿಯಾನ ಮಾಡುತ್ತೇವೆ. ಪುನೀತ್​ಗೆ ಪದ್ಮಶ್ರೀ, ಡಾ. ರಾಜ್​ಕುಮಾರ್‌ಗೆ​ ಭಾರತ ರತ್ನ ಗೌರವ ನೀಡಬೇಕು. ಈ ಬಗ್ಗೆ ಪ್ರಧಾನಿಗೆ ಪತ್ರ ಬರೆಯುವೆ ಎಂದು ಶಾಸಕ ರೇಣುಕಾಚಾರ್ಯ ತಿಳಿಸಿದ್ದಾರೆ.

ಪುನೀತ್​ಗೆ ಪದ್ಮಶ್ರೀ, ಡಾ. ರಾಜ್​ಕುಮಾರ್‌ಗೆ​ ಭಾರತ ರತ್ನ ಗೌರವ ನೀಡಬೇಕು: ಎಂಪಿ ರೇಣುಕಾಚಾರ್ಯ ಹೇಳಿಕೆ
ಎಂ.ಪಿ. ರೇಣುಕಾಚಾರ್ಯ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Nov 07, 2021 | 5:04 PM

ಬೆಂಗಳೂರು: ಕರ್ನಾಟಕದ ಜನರಿಂದ ದೀಪಾವಳಿ ಆಚರಣೆ ಬದಲು ಪುನೀತ್ ರಾಜ್​ಕುಮಾರ್ ಸಮಾಧಿ ದರ್ಶನ ಮಾಡಲಾಗಿದೆ. ಜನರು ಈಗಲೂ ಸಾಗರೋಪಾದಿಯಲ್ಲಿ ಬಂದು ಪುನೀತ್ ಸಮಾಧಿ ದರ್ಶನ ಪಡೆಯುತ್ತಿದ್ದಾರೆ ಎಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ನಟ ಪುನೀತ್​ ಮನೆ ಬಳಿ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಇಂದು (ನವೆಂಬರ್ 7) ಹೇಳಿಕೆ ನೀಡಿದ್ದಾರೆ.

ಪುನೀತ್ ರಾಜ್​ಕುಮಾರ್ ಪ್ರಚಾರವಿಲ್ಲದೆ ಸೇವೆ ಮಾಡಿದ್ದಾರೆ. ನಾನು ಶಕ್ತಿಧಾಮಕ್ಕೆ ನೆರವು ನೀಡುವ ಬಗ್ಗೆ ಅಶ್ವಿನಿ ಜತೆ ಮಾತಾಡಿದ್ದೇನೆ. ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ನುಡಿನಮನ ಆಯೋಜಿಸಿರುವೆ. ಗಾಯಕ ರಾಜೇಶ್ ಕೃಷ್ಣನ್​ರಿಂದ ನುಡಿನಮನ ಕಾರ್ಯಕ್ರಮ ನಡೆಯಲಿದೆ. 10 ಸಾವಿರ ಜನರು ಸೇರಿ ಪುನೀತ್​​ಗೆ ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ನೇತ್ರದಾನ ಬಗ್ಗೆ ನಮ್ಮ ಕುಟುಂಬಸ್ಥರು ಅಭಿಯಾನ ಮಾಡುತ್ತೇವೆ. ಪುನೀತ್​ಗೆ ಪದ್ಮಶ್ರೀ, ಡಾ. ರಾಜ್​ಕುಮಾರ್‌ಗೆ​ ಭಾರತ ರತ್ನ ಗೌರವ ನೀಡಬೇಕು. ಈ ಬಗ್ಗೆ ಪ್ರಧಾನಿಗೆ ಪತ್ರ ಬರೆಯುವೆ ಎಂದು ಶಾಸಕ ರೇಣುಕಾಚಾರ್ಯ ತಿಳಿಸಿದ್ದಾರೆ.

ಪುನೀತ್​ ಸಮಾಧಿ ಬಳಿ ಬಂದು ಹಾಡು ಹೇಳಿದ ಮಕ್ಕಳು ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದವರು ಪುನೀತ್​ ರಾಜ್​ಕುಮಾರ್​. ಹೃದಯಾಘಾತದಿಂದ ಸಡನ್​ ಆಗಿ ಅವರು ಇಹಲೋಕ ತ್ಯಜಿಸಿದ ಬಳಿಕ ಅಪಾರ ಸಂಖ್ಯೆಯ ಅಭಿಮಾನಿ ಬಳಗಕ್ಕೆ ತೀವ್ರ ನೋವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಚಿಕ್ಕ ಮಕ್ಕಳು ಸಂಕಟಪಡುತ್ತಿದ್ದಾರೆ. ಪುನೀತ್​ ಅವರ ಸಿನಿಮಾಗಳನ್ನು ಎಲ್ಲ ವರ್ಗದ ಪ್ರೇಕ್ಷಕರು ಇಷ್ಟಪಡುತ್ತಿದ್ದರು. ಮಕ್ಕಳು ಕೂಡ ಅಪ್ಪು ಅಭಿನಯವನ್ನು ಮನಸಾರೆ ಮೆಚ್ಚಿಕೊಂಡಿದ್ದರು. ಆದರೆ ಈಗ ಪುನೀತ್​ ಇಲ್ಲ ಎಂಬ ಕಹಿ ಸತ್ಯದಿಂದ ಪುಟಾಣಿಗಳಿಗೆ ನೋವಾಗಿದೆ.

ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಪುನೀತ್​ ರಾಜ್​ಕುಮಾರ್​ ಸಮಾಧಿಗೆ ಪ್ರತಿ ದಿನ ಭಾರಿ ಸಂಖ್ಯೆಯ ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ಪೋಷಕರ ಜೊತೆ ಮಕ್ಕಳು ಕೂಡ ಸರದಿ ಸಾಲಿನಲ್ಲಿ ಬಂದು ಅಪ್ಪು ಸಮಾಧಿಗೆ ನಮಿಸುತ್ತಿದ್ದಾರೆ. ಸಮಾಧಿ ಎದುರು ಪುನೀತ್​ ಸಿನಿಮಾಗಳ ಹಾಡುಗಳನ್ನು ಹೇಳಿ ನಮನ ಸಲ್ಲಿಸಲಾಗುತ್ತಿದೆ. ಇಷ್ಟೆಲ್ಲ ಜನರ ಪ್ರೀತಿ ಗಳಿಸಿದ್ದ ಪುನೀತ್​ ಅವರು ಅಕಾಲಿಕ ಮರಣ ಹೊಂದಿದ್ದನ್ನು ಸಹಿಸುವುದಾದರೂ ಹೇಗೆ?

ಇದನ್ನೂ ಓದಿ: ಪುನೀತ್​ ಸಮಾಧಿ ಬಳಿ ಬಂದು ಹಾಡು ಹೇಳಿದ ಮಕ್ಕಳು; ಪುಟ್ಟ ಹೃದಯಗಳಿಗೆ ಅಪ್ಪು ಎಂದರೆ ಪಂಚಪ್ರಾಣ

ಇದನ್ನೂ ಓದಿ: Puneeth Rajkumar: ಪುನೀತ್ ಸಮಾಧಿ ದರ್ಶನದ ಅವಧಿ ಇಂದು 7 ಗಂಟೆವರೆಗೆ ವಿಸ್ತರಣೆ; ನಾಳೆ ಕಾರ್ಯ ಮುಗಿಸಿದ ನಂತರ ದರ್ಶನಕ್ಕೆ ಅವಕಾಶ

Published On - 4:34 pm, Sun, 7 November 21

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ