ಬೆಂಗಳೂರು ನಿವಾಸಿಗಳಿಗೆ BMRCL ಸಿಹಿ ಸುದ್ದಿ: ಸುರಂಗ ಕೊರೆಯುವ ವೇಳೆ ಮನೆಗಳಿಗೆ ಬಿರುಕು ಬಿಡುವ ಸಮಸ್ಯೆಗೆ ಸಿಕ್ತು ಪರಿಹಾರ
ಸುರಂಗ ಕೊರೆಯುವ ಸಂದರ್ಭದಲ್ಲಿ ಶಿವಾಜಿನಗರ ಸೇರಿದಂತೆ ಸುತ್ತಮುತ್ತಲಿನ ಮನೆಗಳು ಬಿರುಕು ಬಿಟ್ಟು ನಿವಾಸಿಗಳು ಆತಂಕಗೊಂಡಿದ್ದರು. ಅದನ್ನು ದೂರ ಮಾಡಲು ಮಾಸ್ ಸ್ಪ್ರಿಂಗ್ ಸಿಸ್ಟಮ್ ನ್ನು ಅಳವಡಿಕೆ ಮಾಡಲು BMRCL ಪ್ಲಾನ್ ಮಾಡಿಕೊಂಡಿದೆ. ನಾಗವಾರದಿಂದ ಕಾಳೇನ ಅಗ್ರಹಾರದವರೆಗಿನ ಸುರಂಗ ಮಾರ್ಗದ ಟ್ರ್ಯಾಕ್‌ಗಳಲ್ಲಿ ಮಾಸ್ ಸ್ಪ್ರಿಂಗ್ ಸಿಸ್ಟಮ್ ನ್ನು ಅಳವಡಿಕೆ ಮಾಡಲು ಪ್ಲಾನ್ ಮಾಡಲಾಗಿದೆ.
ಬೆಂಗಳೂರು, ಜ.04: ರಾಜಧಾನಿ ಬೆಂಗಳೂರಲ್ಲಿ ಮೆಟ್ರೋವಿನ (Namma Metro) ಯಾವುದಾದರೂ ಹೊಸ ಮಾರ್ಗ ಆರಂಭವಾಗುತ್ತದೆ ಅಂದರೆ ಅಕ್ಕಪಕ್ಕದ ನಿವಾಸಿಗಳು ಅಯ್ಯೋ ಯಾಕಾದ್ರು ನಮ್ಮ ಮನೆ ಪಕ್ಕದಲ್ಲಿ ಮೆಟ್ರೋ ಬರ್ತಿದ್ಯಪ್ಪ ಅಂತ ತಲೆ ಚಚ್ವಿಕೊಳ್ತಿದ್ರು. ಕಾರಣ ಮೆಟ್ರೋ ಸುರಂಗ ಮಾರ್ಗ ಕೊರೆಯುವ ವೇಳೆ ಮತ್ತು ರೈಲು ಸಂಚಾರ ಮಾಡುವ ಸಂದರ್ಭದಲ್ಲಿ ಮನೆಗಳು ಕ್ರ್ಯಾಕ್ ಆಗುತ್ತದೆ ಅಥವಾ ಶೇಕ್ ಆಗುತ್ತದೆ ಅನ್ನೋ ಆತಂಕವಿತ್ತು. ಆದರೆ ಮೆಟ್ರೋ ಅಧಿಕಾರಿಗಳ ಈ ಮಾಸ್ಟರ್ ಪ್ಲಾನ್ ನಿಂದ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಗೊಟ್ಟಿಗೆರೆ ಟೂ ನಾಗವಾರ ಮಾರ್ಗದಲ್ಲಿ 21 ಕಿಮೀ ಮಾರ್ಗದಲ್ಲಿ 13 ಕಿಮೀ ಸುರಂಗ ಮಾರ್ಗ ಬರುತ್ತದೆ. ಹಾಗಾಗಿ ರೈಲು ಸಂಚಾರ ಮಾಡುವ ಸಂದರ್ಭದಲ್ಲಿ ಅಕ್ಕಪಕ್ಕದ ಮನೆಗಳು ಬಿರುಕು ಬಿಡುವಂತದ್ದು ರೈಲು ಸಂಚಾರ ಮಾಡುವ ವೇಳೆಯಲ್ಲಿ ಶೇಕ್ ಆಗುವ ಆತಂಕ ಇತ್ತು. ಅದನ್ನು ದೂರ ಮಾಡಲು ಮೆಟ್ರೋ ಅಧಿಕಾರಿಗಳು ಪ್ಲಾನ್ ಮಾಡಿಕೊಂಡಿದ್ದಾರೆ. ಇನ್ನು ಈ ಮಾರ್ಗದಲ್ಲಿ ಸುರಂಗ ಕೊರೆಯುವ ಸಂದರ್ಭದಲ್ಲಿ ಶಿವಾಜಿನಗರ ಸೇರಿದಂತೆ ಸುತ್ತಮುತ್ತಲಿನ ಮನೆಗಳು ಬಿರುಕು ಬಿಟ್ಟು ನಿವಾಸಿಗಳು ಆತಂಕಗೊಂಡಿದ್ದರು. ಅದನ್ನು ದೂರ ಮಾಡಲು ಮಾಸ್ ಸ್ಪ್ರಿಂಗ್ ಸಿಸ್ಟಮ್ ನ್ನು ಅಳವಡಿಕೆ ಮಾಡಲು BMRCL ಪ್ಲಾನ್ ಮಾಡಿಕೊಂಡಿದೆ. ನಾಗವಾರದಿಂದ ಕಾಳೇನ ಅಗ್ರಹಾರದವರೆಗಿನ ಸುರಂಗ ಮಾರ್ಗದ ಟ್ರ್ಯಾಕ್‌ಗಳಲ್ಲಿ ಮಾಸ್ ಸ್ಪ್ರಿಂಗ್ ಸಿಸ್ಟಮ್ ನ್ನು ಅಳವಡಿಕೆ ಮಾಡಲು ಪ್ಲಾನ್ ಮಾಡಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಶೀಘ್ರದಲ್ಲೇ ತಿರುಮಂಗಲಂನಲ್ಲಿ 12 ಅಂತಸ್ತಿನ ಕಟ್ಟಡದ ಮೂಲಕ ಹಾದುಹೋಗಲಿದೆ ಚೆನ್ನೈ ಮೆಟ್ರೋ ರೈಲು
ಇನ್ನು 13.8 ಕಿಮೀ ಸುರಂಗ ಮಾರ್ಗದ ಕಾರಿಡಾರ್‌ನಲ್ಲಿ ಡೈರಿ ಸರ್ಕಲ್‌ನಿಂದ ಹಂತ-2 ರ ಪಿಂಕ್ ಲೇನ್ ನ ನಾಗವಾರವರೆಗಿನ 9 ಕಿಲೋಮೀಟರ್‌ನಲ್ಲಿ ಮಾಸ್ ಸ್ಪ್ರಿಂಗ್ ಸಿಸ್ಟಮ್ ಹಾಕಲು ಸಿದ್ದತೆ ನಡೆದಿದೆ. ಎಂಟರಿಂದ ಒಂಬತ್ತು ಮೀಟರ್ ಆಳದಲ್ಲಿ ಅವಳಿ ಸುರಂಗಗಳನ್ನು ನಿರ್ಮಿಸಲಾಗುತ್ತದೆ. ಸುರಂಗದ ಕೊನೆಯಲ್ಲಿ ಟ್ರ್ಯಾಕ್‌ಗಳನ್ನು ಹಾಕಲಾಗಿದೆ ಮತ್ತು ಆದ್ದರಿಂದ ಇದು ನೆಲದಿಂದ 14 ಮೀಟರ್‌ನ 13 ಮೀಟರ್ ಆಳದಲ್ಲಿದೆ. ಇದು ನೆಲದ ಕೆಳಗೆ ಸಾಕಷ್ಟು ಆಳವಾಗಿದ್ದರೂ, ರೈಲು ಮತ್ತು ವೀಲ್ ಸಂಪರ್ಕದಿಂದಾಗಿ ಉಂಟಾಗುವ ಶೇಕಿಂಗ್ ನಿಂದ ಮೇಲಿರುವ ಕಟ್ಟಡಗಳಿಗೆ ಹಾನಿಯಾಗದಂತೆ ಮಾಸ್ ಸ್ಪ್ರಿಂಗ್ ಸಿಸ್ಟಮ್ ನಲ್ಲಿ, ಪಾಲಿಯುರೆಥೇನ್ ವಸ್ತುಗಳಿಂದ ಮಾಡಿದ ವಿಶೇಷ ಪ್ಯಾಡ್ ನ್ನು ಟ್ರ್ಯಾಕ್ ಸ್ಲ್ಯಾಬ್ ನ ಕೆಳಗೆ ಮತ್ತು ಬದಿಗಳಲ್ಲಿ ಒದಗಿಸಲಾಗುತ್ತದೆ.
ಇದು ಸುರಂಗದಲ್ಲಿ ಉಂಟಾಗುವ ಶೇಕ್ ಅನ್ನು ಸಂಪೂರ್ಣವಾಗಿ ಸಪರೇಟ್ ಮಾಡುತ್ತದೆ. ಇದರಿಂದಾಗಿ ಉಂಟಾಗುವ ವೈಬ್ರೆಷನ್ ಸುರಂಗದ ಒಳಗೆ ಉಳಿದುಕೊಳ್ಳುತ್ತದೆ. ಈ ಬಗ್ಗೆ ಮಾತಾನಾಡಿದ ಸ್ಥಳೀಯ ರಾಜು ಮೊದಲು ನಾನು ಮೆಟ್ರೋ ಅಧಿಕಾರಿಗಳಿಗೆ ಧನ್ಯವಾದಗಳನ್ನು ಹೇಳ್ತೀನಿ ನಮಗೆ ಸಾಕಷ್ಟು ಆತಂಕವಿತ್ತು. ಈ ಮಾಸ್ ಸ್ಪ್ರಿಂಗ್ ಸಿಸ್ಟಮ್ ನಿಂದ ನಮಗೆ ಆತಂಕ ದೂರವಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ