BMTC ಬಸ್​ ಚಾಲನೆಯಲ್ಲಿ ಇರುವಾಗಲೇ ಡ್ರೈವರ್​ಗೆ ಹೃದಯಾಘಾತ

ಬಿಎಂಟಿಸಿ ಬಸ್ ಹೋಗುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಹೃದಯಾಘಾತವಾಗಿದೆ. ಬಸ್ ಚಲಿಸುವಾಗ​ ಡ್ರೈವರ್​​ಗೆ ಹೃದಯಾಘಾತವಾಗಿದೆ. ಕೂಡಲೇ ಚಾಲಕ ಬಸ್​ನನ್ನು ಸ್ಲೋ ಮಾಡಿ ನಿಲ್ಲಿಸಿ ಅಲ್ಲೇ ಪ್ರಾಣ ಬಿಟ್ಟಿದ್ದಾನೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

BMTC ಬಸ್​ ಚಾಲನೆಯಲ್ಲಿ ಇರುವಾಗಲೇ ಡ್ರೈವರ್​ಗೆ ಹೃದಯಾಘಾತ
ಪ್ರಾತಿನಿಧಿಕ ಚಿತ್ರ
Follow us
ಬಿ ಮೂರ್ತಿ, ನೆಲಮಂಗಲ
| Updated By: ರಮೇಶ್ ಬಿ. ಜವಳಗೇರಾ

Updated on:Nov 06, 2024 | 5:01 PM

ಬೆಂಗಳೂರು, (ನವೆಂಬರ್ 06): ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಕರು ಇರುವಾಗ ಹೃದಯಾಘಾತದಿಂದ ಡ್ರೈವರ್ ಸಾವನ್ನಪ್ಪಿರುವ ಘಟನೆ ನೆಲಮಂಗಲ ಟೌನ್ ಬಿನ್ನಮಂಗಲ ಬಸ್ ನಿಲ್ದಾಣ ಬಳಿ ನಡೆದಿದೆ. ಹಾಸನ ಮೂಲದ ಚಾಲಕ ಕಿರಣ್‌ಕುಮಾರ್ (40) ಮೃತ ಚಾಲಕ. ಇಂದು (ನವೆಂಬರ್ 06) ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಡಿಪೋಗೆ ಸೇರಿದ ಬಸ್ ಡ್ರೈವ್​ ಮಾಡಿಕೊಂಡು ಹೋಗುತ್ತಿರುವಾಗಲೇ ಏಕಾಏಕಿ ಹೃದಯಾಘಾತವಾಗಿದೆ. ಕೂಡಲೇ ಚಾಲಕ ಕಿರಣ್‌ಕುಮಾರ್ ಬಸ್​ ರಸ್ತೆ ಬದಿಗೆ ಹಾಕಿ ಅಲ್ಲೇ ಪ್ರಾಣಬಿಟ್ಟಿದ್ದಾನೆ.

ಹಾಸನ ಮೂಲದ ಚಾಲಕ ಕಿರಣ್‌ಕುಮಾರ್, ಡಿಪೋ 40ರಲ್ಲಿ ಕಳೆದ 6 ವರ್ಷದಿಂದ ಡೈವರ್ ಆಗಿ ಕೆಲಸ ಮಾಡುತ್ತಿದ್ದರು. ಆದ್ರೆ, ದುರದೃಷ್ಟವಶಾತ್ ಇಂದು ಬಸ್ ಚಾಲನೆ ಮಾಡುವಾಗಲೇ ಹೃದಯಘಾತವಾಗಿದೆ. ಕೂಡಲೇ ನಿರ್ವಾಹಕ ಒಬಳೇಶ್‌ ಸಹಾಯದಿಂದ ಚಾಲಕನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ, ಅಷ್ಟರಾಗಲೇ ಕಿರಣ್‌ಕುಮಾರ್ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಉದ್ಘಾಟನೆ ಆಡಂಬರವಿಲ್ಲದೇ ನಾಗಸಂದ್ರ-ಮಾದಾವರ ಮೆಟ್ರೋ ಸೇವೆ ಆರಂಭ

ಪುಣ್ಯಕ್ಕೆ ಹೃದಯಘಾತವಾಗುತ್ತಿದ್ದಂತೆಯೇ ಕಿರಣ್‌ಕುಮಾರ್ ಬಸ್​ ನಿಲ್ಲಿಸಿದ್ದಾರೆ. ಒಂದು ವೇಲೆ ಹಾಗೇ ಬಸ್ ರನ್ನಿಂಗ್ ಇದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಇನ್ನು ಬಸ್​ನಲ್ಲಿ ಪ್ರಯಾಣಿಕರು ಸಹ ನಿಟ್ಟುಸಿರುಬಿಟ್ಟಿದ್ದಾರೆ.

4ನೇ ಮಹಡಿಯಿಂದ ಬಿದ್ದು ಕಾರ್ಮಿಕ ಸಾವು

ಬೆಂಗಳೂರು: ಅಪಾರ್ಟ್ ಮೆಂಟ್ ನ 4ನೇ ಮಹದಿಯಿಂದ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ದಾರುಣ ಘಟನೆ ಇಂದು (ನವೆಂಬರ್ 06) ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಅಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತಪಟ್ಟಿದ್ದಾನೆ. ಅಬಿದುಲ್ಲಾ ಮೃತ ಕಾರ್ಮಿಕ.

ಬಿಹಾರ ಮೂಲದ ಅಬಿದುಲ್ಲಾ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಅಪಾರ್ಟ್ ಮೆಂಟ್ ನ ನಾಲ್ಕನೇ ಮಹಡಿಯಿಂದ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಸ್ಥಳಕ್ಕೆ ಯಲಹಂಕ ಠಾಣೆ ಪೊಲೀಸರು ದೌಡಾಯಿಸಿದ್ದು ಪ್ರಕರಣ ಸಂಬಂಧ ತನಿಖೆ ಮುಂದುವರಿಸಿದ್ದಾರೆ. ಇನ್ನು ಮೃತ ಅಬಿದುಲ್ಲಾ ಕುಟುಂಬದವರಿಗೆ ಮಾಹಿತಿ ನೀಡಲಾಗಿದ್ದು, ಕುಟುಂಬದವರು ಬಿಹಾರದಿಮ್ದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:42 pm, Wed, 6 November 24