ಜ್ಞಾನಭಾರತಿ ವಿವಿ ಕ್ಯಾಂಪಸ್​ನಲ್ಲಿ BMTC ಬಸ್​ ಹರಿದ ಪ್ರಕರಣ: ಇಂದಿನಿಂದ ಕ್ಯಾಂಪಸ್​​ನಲ್ಲಿ ಟ್ರಾಫಿಕ್ ರೂಲ್ಸ್ ಅನ್ವಯ!

ಜ್ಞಾನಭಾರತಿ ವಿವಿ ಕ್ಯಾಂಪಸ್​ನಲ್ಲಿ BMTC ಬಸ್​ ಹರಿದ ಪ್ರಕರಣ ಹಿನ್ನೆಲೆ, ಬೆಂಗಳೂರು ವಿವಿ ಕುಲಪತಿ ಡಾ. ಜಯಕರ್ ಇಂದು ಸಭೆ ಮಾಡಿ, ಹಲವು ನಿರ್ಣಯ ಕೈಗೊಂಡಿದ್ದಾರೆ.

ಜ್ಞಾನಭಾರತಿ ವಿವಿ ಕ್ಯಾಂಪಸ್​ನಲ್ಲಿ BMTC ಬಸ್​ ಹರಿದ ಪ್ರಕರಣ: ಇಂದಿನಿಂದ ಕ್ಯಾಂಪಸ್​​ನಲ್ಲಿ ಟ್ರಾಫಿಕ್ ರೂಲ್ಸ್ ಅನ್ವಯ!
ಜ್ಞಾನಭಾರತಿ ವಿವಿ ಕ್ಯಾಂಪಸ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 13, 2022 | 6:45 AM

ಬೆಂಗಳೂರು: ಬೆಂಗಳೂರು ವಿವಿ ಜ್ಞಾನಭಾರತಿ ಕ್ಯಾಂಪಸ್​ನಲ್ಲಿ ( jnanabharathi university campus) ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅತ್ತ ವಿವಿ ಆವರಣದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದೆ‌. ಆಸ್ಪತ್ರೆ ಪಾಲಾಗಿರುವ ವಿದ್ಯಾರ್ಥಿನಿ ಪ್ರಕರಣ ಮುಂದಿಟ್ಟು, ಇಂದೂ ಸಹ ಪ್ರತಿಭಟನೆ ನಡೆಸಲಾಯಿತು. ಈ ಬೆನ್ನಲ್ಲೇ ವಿವಿ ಆವರಣದಲ್ಲಿ ಖಾಸಗಿ ವಾಹನಗಳಿಗೆ ನಿರ್ಬಂಧ ಹೇರುವ ವಿಚಾರವಾಗಿ ಹೈವೋಲ್ಟೇಜ್ ಮೀಟಿಂಗ್ ನಡೆಸಲಾಯ್ತು. ಗುರುವಾರದಿಂದಲೇ (ಅ 13) ಬೆಂಗಳೂರು ವಿವಿ ಕ್ಯಾಂಪಸ್ ಟ್ರಾಫಿಕ್ ಎಂಪವರ್ಮೆಂಟ್ ಜಾರಿ ಆಗುತ್ತೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ. ಹೆಲ್ಮೆಟ್, ತ್ರಿಬಲ್ ರೈಡಿಂಗ್, ಡ್ರಂಕ್ ಮತ್ತು ಡ್ರೈವ್ ಬಗ್ಗೆ ನಾಳೆಯಿಂದಲೇ ತಪಾಸಣೆ ನಡೆಸಲಾಗುತ್ತೆ. ಸಾರ್ವಜನಿಕರು ಸೇರಿದಂತೆ ವಿದ್ಯಾರ್ಥಿಗಳಿಗೂ ಈ ನಿಯಮ ಅನ್ವಯ ಅಂತ ತಿಳಿಸಿದ್ದಾರೆ‌.

ವಾಹನಗಳಿಗೆ ನಿಷೇಧ ಹೇರುವುದು ಸೂಕ್ತ ಪರಿಹಾರವಲ್ಲ- ಸ್ಥಳೀಯರ ಆಕ್ರೋಶ

ಇನ್ನು ಇಂದಿನ ಮೀಟಿಂಗ್ ಖಾಸಗಿ ವಾಹನಗಳ ಓಡಾಟಕ್ಕೆ ಸಮಯ ನಿಗದಿಯ ಕುರಿತು ಚರ್ಚೆ ನಡೆಸಲಾಯ್ತು. ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸುವ ಕುರಿತು ಚರ್ಚೆ ನಡೆಸಲಾಯ್ತು. ಈ ವಿಷಯ ತಿಳಿದ ಸ್ಥಳೀಯರು ಸಭೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿ, ಯಾವುದೇ ಕಾರಣಕ್ಕೂ ವಾಹನಗಳಿಗೆ ನಿರ್ಬಂಧ ಹೇರಬಾರದು. ಭಾರೀ ವಾಹನಗಳಿಗೆ ನಿಷೇಧ ಹೇರಿ, ಅವೈಜ್ಞಾನಿಕ ಹಂಪ್ ಹಾಗೂ ಇತರೆ ಭದ್ರತಾ ಕ್ರಮಗಳನ್ನ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಸಚಿವ ವಿ. ಸೋಮಣ್ಣ ಸ್ಟೂಡೆಂಟ್ ಆದಾಗಿನಿಂದಲೂ ವಿವಿಯೊಳಗೆ ಖಾಸಗಿ ವಾಹನಗಳ ದರ್ಬಾರ್

ನಿನ್ನೆ ಸಚಿವ ವಿ.ಸೋಮಣ್ಣ ಬೆಂಗಳೂರು ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು, ನನಗೆ ಎಲ್ಲಾ ಮಾಹಿತಿ ಸಿಕ್ಕಿದೆ. ನಾನು ಕೂಡ ಈ ರಸ್ತೆ ಬಂದ್ ಮಾಡಬೇಕು ಅಂತ ಒತ್ತಾಯಿಸಿರುವ ಮೊದಲಿಗ. ನಾನು ಕೂಡ ವಿದ್ಯಾರ್ಥಿ ಆಗಿದ್ದಾಗ ಗೂಸಾ ತಿಂದವನು. ನಾನು ಇದೇ ಕಾಲೇಜಿನಲ್ಲಿ ಓದಿದವನು. ಸಂಜೆ ಕಾಲೇಜಿನಲ್ಲಿ ಓದಿದವನು. ಶಿಲ್ಪಾ ಕೋಲಾರದ ಹೆಣ್ಣು ಮಗಳು, ಸಿಎಂ ಕೂಡ ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ನನ್ನ ವಿನಂತಿ ಏನಂದ್ರೆ ಅಕ್ಟೋಬರ್ 13 ರ ತನಕ ಸಿಎಂ ಪ್ರವಾಸದಲ್ಲಿದ್ದಾರೆ.

ಬೇಡಿಕೆ ಅಲ್ಲ, ಇದು ಅವಶ್ಯಕತೆ ಹೀಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಮಕ್ಕಳ ಜ್ಞಾನರ್ಜನೆ ಮುಖ್ಯ, ವಿವಿ ಅಂದರೆ ದೇಗುಲ. ದೇಗುಲವನ್ನು ಕುಲಷಿತ ಮಾಡಲು ಪ್ರಯತ್ನ ನಡೆದಿರಬಹುದು. ಆದರೆ ನಾನು ಯಾರನ್ನು ದೂಷಿಸುವುದಿಲ್ಲ. ನಿಮ್ಮ ಸಮಂಜಸವಾದ ತೀರ್ಮಾನದ ಬಗ್ಗೆ ಸಿಎಂ ಜತೆ ಚರ್ಚೆ ನಡೆಸುತ್ತೇನೆ. ಬೆಂಗಳೂರು ಈ ರೀತಿ ಬೆಳೆಯುವುದಕ್ಕೆ ನಾವೇ ಕಾರಣ. ಬೆಂಗಳೂರು ವಿದ್ಯೆಗೆ ಮಹತ್ವ ಕೊಡುವ ಜಾಗವಾಗಿತ್ತು. ವಿವಿ ಕ್ಯಾಂಪಸ್​ನಲ್ಲಿ ಖಾಸಗಿ ವಾಹನಗಳು ಓಡಾಡುತ್ತಿದೆ, ಕಾನೂನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಸಿಎಂ ಜತೆ ಚರ್ಚಿಸಲಾಗುತ್ತದೆ ಅಂತ ವಿದ್ಯಾರ್ಥಿಗಳಲ್ಲಿ ವಿಶ್ವಾಸ ಮೂಡಿಸಿದ್ದಾರೆ.

ಅಪಘಾತ, ಅವ್ಯವಸ್ಥೆ ವಿರುದ್ಧ ಮುಂದುವರೆದ ವಿದ್ಯಾರ್ಥಿಗಳ ಪ್ರತಿಭಟನೆ

ಬೆಂಗಳೂರು ವಿವಿ ಜ್ಞಾನಭಾರತಿಯಲ್ಲಿ ಒಂದರ ಹಿಂದೊಂದರಂತೆ ಅಪಘಾತ ಪ್ರಕರಣಗಳು ಸಂಭವಿಸುತ್ತಲೇ ಇವೆ. ಕಳೆದ ಮೂರು ದಿನಗಳಿಂದ ಅಪಘಾತಗಳನ್ನ ಕಂಡು ಬೇಸತ್ತಿರುವ ವಿದ್ಯಾರ್ಥಿಗಳು ಮೂರನೇ ದಿನವು ಪ್ರತಿಭಟನೆ ಮುಂದುವರೆಸಿದ್ದಾರೆ. ಎರಡು ದಿನದ ಹಿಂದಷ್ಟೇ ಬಿಎಂಟಿಸಿ ಬಸ್‌ ಹತ್ತುವಾಗ ಏಕಾಏಕಿ ಬಸ್‌ ಮುಂದೆ ಚಲಿಸಿದ್ದರಿಂದ ಆಯತಪ್ಪಿ ರಸ್ತೆಗೆ ಬಿದ್ದ ವಿದ್ಯಾರ್ಥಿನಿ ಶಿಲ್ಪ ಮೇಲೆ ಬಸ್‌ನ ಹಿಂಬದಿ ಚಕ್ರ ಹರಿದು ಆಕೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿತ್ತು. ಸದ್ಯ ಆಕೆ ಈಗಲೂ ಗಂಭೀರ ಸ್ಥಿತಿಯಲ್ಲಿದ್ದಾರೆ. ಈ ಘಟನೆ ಖಂಡಿಸಿ ವಿದ್ಯಾರ್ಥಿಗಳು ಕಳೆದ ಎರಡು ದಿನಗಳಿಂದ ಬಿಎಂಟಿಸಿ ವಿರುದ್ಧ ಸಿಡಿದೆದ್ದು ಪ್ರತಿಭಟನೆ ನಡೆಸಿದ್ರು. ಬಿಬಿಎಂಪಿ ಜ್ಞಾನ ಭಾರತಿ ರಸ್ತೆಯಲ್ಲಿ ಹಂಪ್ ನಿರ್ಮಾಣ ಮಾಡಿತ್ತು, ಅವೈಜ್ಞಾನಿಕ ಹಂಪ್ ನಿರ್ಮಾಣದ ವಿರುದ್ಧ ಇಂದು ಕೂಡ ಪ್ರತಿಭಟನೆ ಮುಂದುವರೆಸಿದ್ದಾರೆ. ಖಾಸಗಿ ವಾಹನಗಳನ್ನ ನಿರ್ಬಂಧ ಮಾಡಲೇಬೇಕು ಅಂತ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.

ಒಟ್ಟಾರೆ ವಿವಿ ಆಡಳಿತ ಮಂಡಳಿ ಮತ್ತು ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶದ ಕಟ್ಟೆ ಹೊಡೆದಿದೆ. ಇತ್ತ ಬೆಂಗಳೂರು ವಿವಿ ವಾಹನಗಳ ನಿಷೇಧ ವಿಚಾರದಲ್ಲಿ ತಟಸ್ಥ ನಿಲುವನ್ನ ಹೊಂದಿದ್ದು, ಚಕ್ರವ್ಯೂಹದಲ್ಲಿ ಸಿಲುಕಿದೆ. ಸರ್ಕಾರ ಈ ವಿಚಾರವಾಗಿ ಯಾವ ನಿರ್ಧಾರವನ್ನ ಕೈಗೊಳ್ಳುತ್ತೆ ಅಂತ ಕಾದು ನೋಡಬೇಕಿದೆ.

ವರದಿ: ಅನಿಲ್ ಕಲ್ಕೆರೆ, ಟಿವಿ9, ಬೆಂಗಳೂರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:29 pm, Wed, 12 October 22

ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್