AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಂಟಿಸಿ ಎಲೆಕ್ಟ್ರಿಕ್ ಬಸ್​ಗಳಿಗೆ ಸಿಗುತ್ತಿಲ್ಲ ಚಾಲಕರು, ಸಂಬಳ ಸರಿಯಾಗಿ ಕೊಡದಿರುವುದೇ ಕಾರಣ

ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್​​ಗಳು ಸರಿಯಾಗಿ ಸಂಚರಿಸದೇ ಇರುವುದು ಪ್ರಯಾಣಿಕರನ್ನು ಸಂಕಷ್ಟಕ್ಕೀಡು ಮಾಡಿದೆ. ಬಿಎಂಟಿಸಿಯ ಇತರ ಬಸ್​ಗಳ ಚಾಲಕರ ಮತ್ತು ಎಲೆಕ್ಟ್ರಿಕ್ ಬಸ್​​ ಚಾಲಕರ ನಡುವೆ ಇರುವ ವೇತನ ತಾರತಮ್ಯ ಇದಕ್ಕೆ ಕಾರಣವಾಗಿದೆ. ಅದಕ್ಕಿಂತಲೂ ಹೆಚ್ಚಾಗಿ, ಎಲೆಕ್ಟ್ರಿಕ್ ಬಸ್ ಚಾಲಕರಿಗೆ ಸರಿಯಾಗಿ ವೇತನವನ್ನೇ ನೀಡಲಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಬಿಎಂಟಿಸಿ ಎಲೆಕ್ಟ್ರಿಕ್ ಬಸ್​ಗಳಿಗೆ ಸಿಗುತ್ತಿಲ್ಲ ಚಾಲಕರು, ಸಂಬಳ ಸರಿಯಾಗಿ ಕೊಡದಿರುವುದೇ ಕಾರಣ
ಎಲೆಕ್ಟ್ರಿಕ್ ಬಸ್ (ಸಾಂದರ್ಭಿಕ ಚಿತ್ರ)
Kiran Surya
| Updated By: Ganapathi Sharma|

Updated on: Apr 16, 2024 | 9:15 AM

Share

ಬೆಂಗಳೂರು, ಏಪ್ರಿಲ್ 16: ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಕಡಿಮೆ ಮಾಡುತ್ತೇವೆ ಎಂದು ಬಿಎಂಟಿಸಿ ರಸ್ತೆಗಿಳಿಸಿರುವ ಎಲೆಕ್ಟ್ರಿಕ್ ಬಸ್​​ಗಳು (Electric Buses) ಇದೀಗ ಸರಿಯಾಗಿ ಸೇವೆ ಒದಗಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ರಾಜ್ಯ ರಾಜಧಾನಿಯ ವಾಯು ಮಾಲಿನ್ಯ ಕಡಿಮೆ ಮಾಡುತ್ತೇವೆ, ನಗರದಲ್ಲಿ ಶಬ್ದ ಮಾಲಿನ್ಯ ಮಾಡದೆ ಬಸ್ ಕಾರ್ಯಾಚರಣೆ ಮಾಡುತ್ತೇವೆ ಎಂದು ಇವಿ ಬಸ್​​​ಗಳನ್ನು ಬಿಎಂಟಿಸಿ (BMTC) ರಸ್ತೆಗಿಳಿಸಿತ್ತು. ಈ ಬಸ್​​ಗಳಿಗೆ ಜನ ಕೂಡ ಹೊಂದಿಕೊಂಡಿದ್ದಾರೆ. ಆದರೆ ಇದೀಗ ಎಲೆಕ್ಟ್ರಿಕ್ ಬಸ್​​ಗಳು ಸಮಯಕ್ಕೆ ಸರಿಯಾಗಿ ಬರ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಬಿಎಂಟಿಸಿಯಲ್ಲಿ ಒಟ್ಟು 6842 ಬಸ್​​ಗಳಿವೆ. ಅದರಲ್ಲಿ ಸಾಮಾನ್ಯ 5642 ಬಸ್​​ಗಳಿದ್ದರೆ, 600 ಎಸಿ ಬಸ್​​ಗಳಿವೆ. 600 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್​​ಗಳಿವೆ. ಆದರೆ ಅದರಲ್ಲಿ 300 ಕ್ಕೂ ಹೆಚ್ಚು ಬಸ್​​​ಗಳು ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿಲ್ಲ. ಇದಕ್ಕೆ ಕಾರಣ ಅಂದರೆ, ಎಲೆಕ್ಟ್ರಿಕ್ ಬಸ್ ಚಾಲಕರಿಗೆ ಖಾಸಗಿ ಕಂಪನಿಗಳು ಸರಿಯಾಗಿ ‌ಸಂಬಳ ನೀಡದಿರುವುದು ಹಾಗೂ ಕಡಿಮೆ ಸಂಬಳ ನೀಡುತ್ತಿರುವುದು. ಬಿಎಂಟಿಸಿಯ ಚಾಲಕರಿಗೆ ತಿಂಗಳಿಗೆ 35 ರಿಂದ 40 ಸಾವಿರ ರೂಪಾಯಿ ಸಂಬಳ ನೀಡಿದರೆ, ಖಾಸಗಿ ಕಂಪನಿಗಳು ಎಲೆಕ್ಟ್ರಿಕ್ ಬಸ್ ಡ್ರೈವರ್​​​ಗಳಿಗೆ 15 ರಿಂದ 18 ಸಾವಿರ ರೂಪಾಯಿ ಸಂಬಳ ನೀಡುತ್ತಿವೆ.

ಖಾಸಗಿ ಚಾಲಕರಿಗೆ ಪ್ರತಿ ತಿಂಗಳು ಸರಿಯಾಗಿ ಸಂಬಳ ನೀಡುವುದಿಲ್ಲ. ನೀಡುವ ಸಂಬಳದಲ್ಲೂ ಎರಡರಿಂದ ಮೂರು ಸಾವಿರ ರೂಪಾಯಿಯನ್ನು ಬಿಎಂಟಿಸಿಯ ಅಧಿಕಾರಿಗಳು ಮತ್ತು ಖಾಸಗಿ ಏಜೆನ್ಸಿಗಳು ಪಡೆದಕೊಳ್ಳುವ ಆರೋಪ ಇದೆ. ಬಿಎಂಟಿಸಿಯ ಚಾಲಕರಂತೆ ಯಾವುದೇ ಓಟಿ ಮತ್ತು ಭತ್ಯೆಗಳನ್ನೂ ನೀಡುವುದಿಲ್ಲ. ಹಾಗಾಗಿ ಚಾಲಕರು ಸರಿಯಾಗಿ ಕೆಲಸಕ್ಕೆ ಬರ್ತಿಲ್ಲ. ಕೆಲಸಕ್ಕೆ ಬಂದ್ರು ಒಂದೋ ಅಥವಾ ಎರಡು ತಿಂಗಳು ಕೆಲಸ ಮಾಡಿ ಬಿಡುತ್ತಿದ್ದಾರೆ.

ಪ್ರಯಾಣಿಕರಿಗೆ ಸಮಸ್ಯೆ

ಎಲೆಕ್ಟ್ರಿಕ್ ಬಸ್​​ಗಳು ಸರಿಯಾಗಿ ಸಂಚರಿಸದೇ ಇರುವುದರಿಂದ ಪ್ರಯಾಣಿಕರಿಗೆ ಸಮಸ್ಯೆ ಆಗ್ತಿದೆ. ಇದರಿಂದ ಬೆಂಗಳೂರಲ್ಲಿ ಬಸ್​​​ಗಳ ಸಂಖ್ಯೆ ಕೂಡ ಕಡಿಮೆ ಆಗುತ್ತಿದೆ. ಪ್ರಯಾಣಿಕರು ದುಬಾರಿ ಹಣ ಕೊಟ್ಟು ಕ್ಯಾಬ್, ಆಟೋಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಎಂದು ಬಸ್ ಪ್ರಯಾಣಿಕರ ವೇದಿಕೆಯ ಸದಸ್ಯ ವಿನಯ್ ಶ್ರೀ ನಿವಾಸ್ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಸಾರ್ವಜನಿಕ ಶೌಚಾಲಯಗಳ ದರ ದುಪ್ಪಟ್ಟು: ನೀರಿನ ಬಿಕ್ಕಟ್ಟೇ ಕಾರಣ

ಎಲೆಕ್ಟ್ರಿಕ್ ಬಸ್​​ಗಳಿಗೆ ಚಾಲಕರು ಸರಿಯಾಗಿ ಸಿಗದ ಕಾರಣ, ನಗರದಲ್ಲಿ ಬಸ್ ಸಂಚಾರ ‌ಕಡಿಮೆ ಆಗಿದೆ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆ ಆಗಿರುವುದಂತೂ ನಿಜ. ಕೂಡಲೇ ಬಿಎಂಟಿಸಿಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಚುನಾವಣಾ ಆಯೋಗದಿಂದ ನೋಟಿಸ್, ಬಿಹಾರ ಡಿಸಿಎಂ ವಿಜಯ್ ಹೇಳಿದ್ದೇನು?
ಚುನಾವಣಾ ಆಯೋಗದಿಂದ ನೋಟಿಸ್, ಬಿಹಾರ ಡಿಸಿಎಂ ವಿಜಯ್ ಹೇಳಿದ್ದೇನು?
VIDEO: ಬರೋಬ್ಬರಿ 109 ಮೀಟರ್ ಸಿಕ್ಸ್​ ಸಿಡಿಸಿದ ಟಿಮ್ ಡೇವಿಡ್
VIDEO: ಬರೋಬ್ಬರಿ 109 ಮೀಟರ್ ಸಿಕ್ಸ್​ ಸಿಡಿಸಿದ ಟಿಮ್ ಡೇವಿಡ್
Assembly Session Live: ವಿಧಾನಸಭೆ ಅಧಿವೇಶನ ನೇರಪ್ರಸಾರ
Assembly Session Live: ವಿಧಾನಸಭೆ ಅಧಿವೇಶನ ನೇರಪ್ರಸಾರ
ಭೀಮ ಹೆಸರಿಗೆ ತಕ್ಕಂತೆ ಗಜಪಡೆಯಲ್ಲಿ ಎಲ್ಲರಿಗಿಂತ ಹೆಚ್ಚು ತೂಕದ ಆನೆ
ಭೀಮ ಹೆಸರಿಗೆ ತಕ್ಕಂತೆ ಗಜಪಡೆಯಲ್ಲಿ ಎಲ್ಲರಿಗಿಂತ ಹೆಚ್ಚು ತೂಕದ ಆನೆ
‘ನನ್ನ ಅಮೂಲ್ಯ 8 ವರ್ಷ ವ್ಯರ್ಥವಾಗಿದೆ’; ಧ್ರುವ ಬಗ್ಗೆ ರಾಘವೇಂದ್ರ ಹೊಸ ಆರೋಪ
‘ನನ್ನ ಅಮೂಲ್ಯ 8 ವರ್ಷ ವ್ಯರ್ಥವಾಗಿದೆ’; ಧ್ರುವ ಬಗ್ಗೆ ರಾಘವೇಂದ್ರ ಹೊಸ ಆರೋಪ
ಮೈಮೇಲೆಲ್ಲಾ ಕಚ್ಚಿದ ಗಾಯ, ಡೇ ಕೇರ್ನಲ್ಲಿರುವ ಮಗುವಿನ ಸ್ಥಿತಿ ಏನಾಗಿದೆ ನೋಡಿ
ಮೈಮೇಲೆಲ್ಲಾ ಕಚ್ಚಿದ ಗಾಯ, ಡೇ ಕೇರ್ನಲ್ಲಿರುವ ಮಗುವಿನ ಸ್ಥಿತಿ ಏನಾಗಿದೆ ನೋಡಿ
ಅಪಘಾತದಲ್ಲಿ ಮೃತಪಟ್ಟ ಪತ್ನಿಯನ್ನು ಬೈಕ್​ನಲ್ಲಿ ಕಟ್ಟಿ ಹೊತ್ತೊಯ್ದ ಪತಿ
ಅಪಘಾತದಲ್ಲಿ ಮೃತಪಟ್ಟ ಪತ್ನಿಯನ್ನು ಬೈಕ್​ನಲ್ಲಿ ಕಟ್ಟಿ ಹೊತ್ತೊಯ್ದ ಪತಿ
ಕೊನೆಯ ಓವರ್​ನಲ್ಲಿ 7 ರನ್​ಗಳ​ ಗುರಿ ನಿಯಂತ್ರಿಸಿ ಪಂದ್ಯ ಗೆಲ್ಲಿಸಿದ ಆಶಿಶ್
ಕೊನೆಯ ಓವರ್​ನಲ್ಲಿ 7 ರನ್​ಗಳ​ ಗುರಿ ನಿಯಂತ್ರಿಸಿ ಪಂದ್ಯ ಗೆಲ್ಲಿಸಿದ ಆಶಿಶ್
ಸೆಲ್ಫೀಗೆ ಮುಂದಾದವನ ಅಟ್ಟಾಡಿಸಿ ಮೆಟ್ಟಿದ ಕಾಡಾನೆ, ಆಮೇಲೇನಾಯ್ತು ನೋಡಿ
ಸೆಲ್ಫೀಗೆ ಮುಂದಾದವನ ಅಟ್ಟಾಡಿಸಿ ಮೆಟ್ಟಿದ ಕಾಡಾನೆ, ಆಮೇಲೇನಾಯ್ತು ನೋಡಿ