
ಬೆಂಗಳೂರು, (ಆಗಸ್ಟ್ 13): ಆಗಸ್ಟ್ 11ರಿಂದ ಸಾರ್ವಜನಿಕರ ಪ್ರಯಾಣಕ್ಕೆ ಮುಕ್ತವಾಗಿರುವ ಹಳದಿ ಮೆಟ್ರೋ ಮಾರ್ಗದ (Yellow Metro Line) ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಮತ್ತೊಂದು ಸಿಹಿ ಸುದ್ದಿಯೊಂದನ್ನು ನೀಡಿದೆ. BMTC ಹಳದಿ ಮೆಟ್ರೋ ನಿಲ್ದಾಣಗಳಿಂದ ಫೀಡರ್ ಬಸ್ ಸರ್ವಿಸ್ (BMTC feeder bus) ಆರಂಭಿಸಿದೆ. ಹೌದು..ಮೆಟ್ರೊ ಪ್ರಯಾಣಿಕರ ಅನುಕೂಲಕ್ಕಾಗಿ ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು(ಬಿಎಂಟಿಸಿ) ಹೊಸದಾಗಿ ಫೀಡರ್ ಬಸ್‌ಗಳ ಕಾರ್ಯಾಚರಣೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಂಗಳವಾರ ಚಾಲನೆ ನೀಡಿದ್ದಾರೆ. ಹೀಗಾಗಿ ಹಳದಿ ಮೆಟ್ರೊ ಮಾರ್ಗದಲ್ಲಿ ಸಂಸ್ಥೆಯು ಒಟ್ಟು 4 ಮಾರ್ಗಗಳಲ್ಲಿ ಫೀಡರ್ ಸೇವೆ ಆರಂಭಿಧಿಸಿದ್ದು, 12 ಬಸ್‌ಗಳು 96 ಟ್ರಿಪ್ ಕಾರ್ಯಾಚರಣೆ ನಡೆಸುತ್ತಿವೆ.
ಹೊಸ ರೋಡ್, ಬೆರಟೇನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಇನ್ಫೋಸಿಸ್ ಫೌಂಡೇಶನ್, ಕೋನಪ್ಪನ ಅಗ್ರಹಾರ, ಹೆಬ್ಬಗೋಡಿ ಹಾಗೂ ಬೊಮ್ಮಸಂದ್ರ ಸೇಧಿರಿಧಿದಂತೆ ಒಟ್ಟು 6 ಮೆಟ್ರೊ ನಿಲ್ದಾಣಗಳಿಗೆ ಫೀಡರ್ ಸೇವೆಗಳ ಸೌಲಭ್ಯ ಇದೆ. ಪ್ರತಿದಿನ 12 ಬಿಎಂಟಿಸಿ ಬಸ್‌ಗಳು, ಪ್ರತಿದಿನ 96 ಟ್ರಿಪ್ ಮಾಡಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದಾರೆ. ಇದರಿಂದ ಮೆಟ್ರೋ ನಿಲ್ದಾಣದಿಂದ ಅಥವಾ ಬೇರೆ ಕಡೆಯಿಂದ ಈ ಮಾರ್ಗದ ಮೆಟ್ರೋಗೆ ಹೋಗಬೇಕಾದವರಿಗೆ ತುಂಬ ಅನುಕೂಲವಾಗಿದೆ.
ಸೋಮವಾರದಿಂದ ನಮ್ಮ ಮೆಟ್ರೋ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಿದೆ. ಮೊದಲ ದಿನವೇ ಸಾವಿರಾರು ಸಂಖ್ಯೆಯಲ್ಲಿ ಜನ ಪ್ರಯಾಣ ಮಾಡಿದ್ದಾರೆ. ಈ ಮಾರ್ಗದ ಮೆಟ್ರೋ ನಿಲ್ದಾಣಗಳಿಗೆ ತೆರಳಲು ವಿವಿಧ ಬಡಾವಣೆಗಳಿಂದ ಬಿಎಂಟಿಸಿ ಬಸ್ ಸೇವೆಯನ್ನು ಆರಂಭಿಸಿದೆ. ಮಂಗಳವಾರ ಈ ಫೀಡರ್ ಬಸ್‌ಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.
ಬೆಂಗಳೂರು ಮೆಟ್ರೊ ಸಂಪರ್ಕವನ್ನು ಬಲಪಡಿಸುವ ಉದ್ದೇಶದಿಂದ ಬಿಎಂಟಿಸಿಯ ಹೊಸ ಮೆಟ್ರೊ ಫೀಡರ್ ಬಸ್ ಮಾರ್ಗಗಳನ್ನು ಹಳದಿ ಮಾರ್ಗದಲ್ಲಿ ಇಂದು ಉದ್ಘಾಟಿಸಿದೆ.
ನಂತರ, ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಪ್ರಯಾಣ ಮಾಡಿದೆ— ಮೆಟ್ರೋ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಹಾಗೂ ವಿಶೇಷವಾಗಿ ಐಟಿ ವಲಯದ ಸಾವಿರಾರು ಪ್ರಯಾಣಿಕರಿಗೆ ಸಹಾಯ ಮಾಡಲಿದೆ.
ಹಳದಿ… pic.twitter.com/KMTpMxB4Tq
— Ramalinga Reddy (@RLR_BTM) August 12, 2025
ಬೆಂಗಳೂರಿನಲ್ಲಿ ಪ್ರತಿದಿನ ಬಿಎಂಟಿಸಿ 6,217 ಬಸ್‌ಗಳು ಚಲಿಸುತ್ತವೆ. ಈ ಬಸ್‌ಗಳಲ್ಲಿ ದಿನಕ್ಕೆ ಸುಮಾರು 44 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಬಸ್‌ಗಳು 65,206 ಟ್ರಿಪ್ ಮೂಲಕ 12.85 ಲಕ್ಷ ಕಿ.ಮೀ. ಕವರ್ ಮಾಡುತ್ತವೆ. ಈಗ ಹಳದಿ ಮೆಟ್ರೋ ಪ್ರಯಾಣಿಕರಿಗಾಗಿ ಫೀಡರ್ ಬಸ್ ಸೇವೆಯನ್ನು ಆರಂಭಿಸಿದೆ. ಈ ಹಿಂದೆ ಕೆ.ಆರ್. ಪುರಂ ರೈಲು ನಿಲ್ದಾಣ ಮತ್ತು ಬಿಟಿಎಂ ಲೇಔಟ್ ಬಸ್ ನಿಲ್ದಾಣದ ನಡುವೆ ಫೀಡರ್ ಬಸ್ ಸೇವೆ ಆರಂಭಿಸಲಾಗಿತ್ತು. ಹೊಸ ಫೀಡರ್ ಬಸ್ ಸೇವೆಯ ಮಾಹಿತಿ ಈ ಕೆಳಗಿನಂತಿದೆ.