AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BMTC NIMMBUS App: ಬಿಎಂಟಿಸಿ ಬಹುನಿರೀಕ್ಷಿತ ನಿಮ್ ಬಸ್ ಮೊಬೈಲ್​ ಆ್ಯಪ್ ಮುಂದಿನವಾರ ಬಿಡುಗಡೆ

ಬಿಎಂಟಿಸಿಯ ಬಹುನಿರೀಕ್ಷಿತ NIMMBUS ಅಪ್ಲಿಕೇಶನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಇತರ ವೈಶಿಷ್ಟ್ಯಗಳೊಂದಿಗೆ BMTC ಬಸ್‌ಗಳ ನೈಜ-ಸಮಯದ ಮಾಹಿತಿ ನೀಡಲಿದ್ದು, ಶೇಕಡಾ 90 ರಷ್ಟು ನಿಖರತೆಯನ್ನು ಪಡೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

BMTC NIMMBUS App: ಬಿಎಂಟಿಸಿ ಬಹುನಿರೀಕ್ಷಿತ ನಿಮ್ ಬಸ್ ಮೊಬೈಲ್​ ಆ್ಯಪ್ ಮುಂದಿನವಾರ ಬಿಡುಗಡೆ
ಬಿಎಂಟಿಸಿ
Prajwal D'Souza
| Updated By: Digi Tech Desk|

Updated on:Apr 20, 2023 | 12:11 PM

Share

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (Bengaluru Metropolitan Transport Corporation – BMTC) ಬಿಎಂಟಿಸಿ ಬಹು ನಿರೀಕ್ಷಿತ ನಿಮ್ಮ ​ಬಸ್ ಆ್ಯಪ್ ಮುಂದಿನ ವಾರ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ (ಮಾರ್ಚ್ 10) ತಿಳಿಸಿದ್ದಾರೆ. ಐಒಸ್ ಮತ್ತು ಆಂಡ್ರಾಯ್ಡ್​ ಪ್ಲಾಟ್​ಫಾರ್ಮ್​ಗಳಲ್ಲಿ ಶೀಘ್ರವೇ ಆ್ಯಪ್ ಬಿಡುಗಡೆಯಾಗುತ್ತಿದೆ. ಈ ಹಿಂದೆ ಆ್ಯಪ್ ಬಿಡುಗಡೆಗೆಂದು ನಿಗದಿಯಾಗಿದ್ದ ಹಲವು ಗಡುವುಗಳನ್ನು ಬಿಎಂಟಿಸಿ ಮೀರಿತ್ತು. ಇದೀಗ ಶೀಘ್ರದಲ್ಲೇ ಪ್ರಯಾಣಿಕರಿಗೆ ಆ್ಯಪ್ ಲಭ್ಯವಾಗಲಿದೆ. ಈ ಬಗ್ಗೆ ನ್ಯೂಸ್9 ನೊಂದಿಗೆ ಮಾತನಾಡಿದ ಬಿಎಂಟಿಸಿಯ ಮಾಹಿತಿ ತಂತ್ರಜ್ಞಾನದ ನಿರ್ದೇಶಕ ಸೂರ್ಯ ಸೇನ್, ಸದ್ಯ ಬೀಟಾ ಪರೀಕ್ಷೆ ನಡೆಯುತ್ತಿದೆ. ಪ್ರಸ್ತುತ ಶೇಕಡಾ 90 ರಷ್ಟು ನಿಖರತೆಯನ್ನು ಪಡೆಯುತ್ತಿದ್ದೇವೆ. ನಾವು ಬಹುಶಃ ಇನ್ನೊಂದು ವಾರದ ಸಮಯದಲ್ಲಿ NIMMBUS ಅಪ್ಲಿಕೇಶನ್ ಅನ್ನು ಪ್ರಾರಂಭಿಸುತ್ತೇವೆ ಎಂದರು.

ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023) ದಿನಗಳಷ್ಟೇ ಬಾಕಿ ಇದೆ. ಅದರಂತೆ ಭಾರತೀಯ ಚುನಾವಣಾ ಆಯೋಗದ (ECI) ಅಧಿಕಾರಿಗಳು ರಾಜ್ಯಕ್ಕೆ ಭೇಟಿ ನೀಡಿರುವ ಹಿನ್ನಲೆ ಮಾರ್ಚ್ 8 ರ ಬುಧವಾರದಂದು ನಡೆಯಬೇಕಿದ್ದ NIMMBUS ಆ್ಯಪ್ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

“ನನಗೆ ಹೆಚ್ಚುವರಿ ಚುನಾವಣಾ ಉಸ್ತುವಾರಿ ವಹಿಸಿರುವುದರಿಂದ ಆ ಬಗ್ಗೆ ಕಾರ್ಯ ನಿರ್ವಹಿಸುತ್ತಿದ್ದೇನೆ. ಚುನಾವಣಾ ಆಯೋಗದ ಅಧಿಕಾರಿಗಳು ಮೂರು ದಿನಗಳ ಕಾಲ ರಾಜ್ಯದಲ್ಲೇ ಇರುತ್ತಾರೆ, ಬಹುಶಃ ಅಧಿಕಾರಿಗಳು ತೆರಳಿದ ನಂತರ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡುತ್ತೇವೆ. ಆದರೆ ಲೋಕಾರ್ಪಣೆ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ ಎಂದು ಸೇನ್ ಹೇಳಿದರು. “ಎರಡು-ಮೂರು ತಿಂಗಳ ಹಿಂದೆ ನಾವು ಎಲ್ಲಾ ಬಸ್‌ಗಳಲ್ಲಿ ಸಾಧನಗಳನ್ನು ಅಳವಿಡಿಸುವ ಕಾರ್ಯವನ್ನು ಪೂರ್ಣಗೊಳಿಸಿದ್ದೇವೆ. ಐದು ಸಾವಿರ ಬಸ್‌ಗಳಿಗೆ ಅಳವಡಿಸಲು ಸೂಚಿಸಲಾಗಿತ್ತು. ಇದಲ್ಲದೇ ಎಲೆಕ್ಟ್ರಿಕ್ ಬಸ್​ಗಳೂ ಸೇರಿದಂತೆ ಎಲ್ಲಾ ಹೊಸ ಬಸ್‌ಗಳಲ್ಲಿ ಸಾಧನಗಳನ್ನು ಅಳವಡಿಸಲಾಗಿದೆ. ನಾವು ಸುಮಾರು 6,000 ಬಸ್‌ಗಳನ್ನು ಹೊಂದಿದ್ದೇವೆ, ಅವುಗಳನ್ನು ಪ್ರಸ್ತುತ ಟ್ರ್ಯಾಕ್ ಮಾಡಲಾಗುತ್ತಿದೆ” ಎಂದು ಸೇನ್ ಹೇಳಿದ್ದಾರೆ.

ಇದನ್ನೂ ಓದಿ: ಚಾಲಕರ ಜೇಬಿನಿಂದಲೇ ರಿಯಾಯ್ತಿ ಟ್ರಾಫಿಕ್ ದಂಡ ಪಾವತಿಗೆ ಮುಂದಾದ ಬಿಎಂಟಿಸಿ, ಕೆರಳಿ ಕೆಂಡವಾದ ಸಿಬ್ಬಂದಿ!

ಈ ಮೊದಲು ಡಿಸೆಂಬರ್ 13ಕ್ಕೆ ಆ್ಯಪ್ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ಕೊನೆಯ ಕ್ಷಣದಲ್ಲಿ ಒಂದಿಷ್ಟು ಸಮಸ್ಯೆಗಳು (ಬಗ್) ಕಾಣಿಸಿಕೊಂಡಿದ್ದರಿಂದ ನಂತರ ಡಿಸೆಂಬರ್ 23ಕ್ಕೆ ಮುಂದೂಡಲಾಯಿತು. ಆದರೆ ಅಂದೂ ಸಹ ಲಾಂಚ್ ಮಾಡಲು ಸಾಧ್ಯವಾಗಲಿಲ್ಲ. ಕಂಡುಬಂದ ದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಲೋಕಾರ್ಪಣೆಯನ್ನು ಮುಂದೂಡಲಾಗಿತ್ತು. ಅದಾದ ನಂತರ ಮಾರ್ಚ್ 8ರಂದು ಬಿಡುಗಡೆಗೆ ಪ್ಲಾನ್ ಹಾಕಲಾಗಿತ್ತು. ನಿಮ್ಮ​ಬಸ್ ಆ್ಯಪ್​ನಲ್ಲಿ ಬಿಎಂಟಿಸಿ ಬಸ್​ಗಳ ಕ್ಷಣಕ್ಷಣದ ಸಂಚಾರ ವಿವರ (Real-time tracking) ಲಭ್ಯವಾಗಲಿದೆ. ಅದರ ಜೊತೆಗೆ ತುರ್ತು ಪರಿಸ್ಥಿತಿಯ ವೇಳೆ ಗಮನ ಸೆಳೆಯಲು ಎಸ್​ಒಎಸ್ (SOS) ಎಚ್ಚರಿಕೆಯ ಸೌಲಭ್ಯವೂ ಲಭ್ಯವಿದೆ. ಪ್ರಯಾಣಿಕರು ತಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಬಳಸಿಕೊಂಡು ಸೈನ್ ಅಪ್ ಮಾಡುವ ಮೂಲಕ ಅಪ್ಲಿಕೇಶನ್ ಅನ್ನು ಬಳಸಬಹುದಾಗಿದೆ. ಈ ಆ್ಯಪ್ ಪ್ರಸ್ತುತ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಲಭ್ಯವಿದೆ.

ವರದಿ: ಪ್ರಜ್ವಲ್ ಡಿ’ಸೋಜಾ, ನ್ಯೂಸ್9

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:46 pm, Thu, 9 March 23

ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ