AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಬೆಂಗಳೂರಿನಲ್ಲಿ ವರನಟ ಡಾ. ರಾಜ್​​ಕುಮಾರ್ ಪುತ್ಥಳಿ ಕಳವು; ಇಲ್ಲಿದೆ ಕ್ರೈಂ ಅಪ್ಡೇಟ್ಸ್

ತನಿಖೆಯಲ್ಲಿ ಇನ್ಸ್​ಪೆಕ್ಟರ್ ಶ್ರೀನಿವಾಸ್ ಮತ್ತು ಎಎಸ್​ಐಗಳು 5 ಲಕ್ಷ ಲಂಚ ಪಡೆದಿರೋದು ಸಾಬೀತು ಆದ ಹಿನ್ನೆಲೆ ಇದೀಗ ಅಮಾನತು ಮಾಡಲಾಗಿದೆ. ಅರ್ಜಿದಾರ ಮತ್ತು ಇನ್ಸ್ ಪೆಕ್ಟರ್ ಪರಸ್ವರ ಸಂಪರ್ಕದಲ್ಲಿರುವುದು ಸಾಬೀತು ಹಿನ್ನೆಲೆ ಅಮಾನತು ಮಾಡಲಾಗಿದೆ.

Crime News: ಬೆಂಗಳೂರಿನಲ್ಲಿ ವರನಟ ಡಾ. ರಾಜ್​​ಕುಮಾರ್ ಪುತ್ಥಳಿ ಕಳವು; ಇಲ್ಲಿದೆ ಕ್ರೈಂ ಅಪ್ಡೇಟ್ಸ್
ಸಾಂಕೇತಿಕ ಚಿತ್ರ
TV9 Web
| Edited By: |

Updated on:Feb 06, 2022 | 10:50 PM

Share

ಬೆಂಗಳೂರು: ಐಪಿಎಸ್ ಅಧಿಕಾರಿಯಿಂದ ಲಂಚ ಪಡೆದ ಆರೋಪ ಸಾಬೀತು ಆದ ಹಿನ್ನೆಲೆ ಡಿಸಿಐಬಿ ಇನ್ಸ್​ಪೆಕ್ಟರ್ ಶ್ರೀನಿವಾಸ್, ಎಎಸ್​​ಐಗಳಾದ ಶುಭಾ, ಕೆ.ಜಿ. ಅನಿತಾ ಅಮಾನತು ಮಾಡಲಾಗಿದೆ. ಅತ್ತಿಬೆಲೆಯ ಕ್ರಷರ್ ಉದ್ಯಮಿ ಮಂಜುನಾಥ್ ಎಂಬವರು ದೂರು ದಾಖಲಿಸಲು 55 ಲಕ್ಷ ರೂಪಾಯಿ ಲಂಚ ಪಡೆದ ಆರೋಪದಡಿ ಸಿಎಸ್​ಗೆ ದೂರು ನೀಡಿದ್ದರು. ಕೇಂದ್ರ ವಲಯದ ಐಜಿಪಿ ತನಿಖೆಯಲ್ಲಿ ಇನ್ಸ್​​ಪೆಕ್ಟರ್​ ಶ್ರೀನಿವಾಸ್​, ಎಎಸ್​​ಐಗಳು 5 ಲಕ್ಷ ರೂ. ಲಂಚ ಪಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ನೀಡಲಾಗಿದೆ.

ದೂರು ದಾಖಲಿಸಲಯ 55 ಲಕ್ಷ ಲಂಚ ಪಡೆದ ಆರೋಪ ಅಧಿಕಾರಿಗಳ ವಿರುದ್ದ ಕೇಳಿ ಬಂದಿತ್ತು. ಈ ಬಗ್ಗೆ ತನಿಖೆಗೆ ಕೇಂದ್ರ ವಲಯ ಐಜಿಪಿಗೆ ಸಿಎಸ್ ರವಿಕುಮಾರ್ ಸೂಚಿಸಿದ್ದರು. ತನಿಖೆಯಲ್ಲಿ ಇನ್ಸ್​ಪೆಕ್ಟರ್ ಶ್ರೀನಿವಾಸ್ ಮತ್ತು ಎಎಸ್​ಐಗಳು 5 ಲಕ್ಷ ಲಂಚ ಪಡೆದಿರೋದು ಸಾಬೀತು ಆದ ಹಿನ್ನೆಲೆ ಇದೀಗ ಅಮಾನತು ಮಾಡಲಾಗಿದೆ. ಅರ್ಜಿದಾರ ಮತ್ತು ಇನ್ಸ್ ಪೆಕ್ಟರ್ ಪರಸ್ವರ ಸಂಪರ್ಕದಲ್ಲಿರುವುದು ಸಾಬೀತು ಹಿನ್ನೆಲೆ ಅಮಾನತು ಮಾಡಲಾಗಿದೆ. ಈ ಹಿಂದೆ ಡಿಸಿಐಬಿಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ಶ್ರೀನಿವಾಸ್ ಸಸ್ಪೆಂಡ್ ಆಗಿದ್ದಾರೆ.

ಬೆಂಗಳೂರು: ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ನಾಲ್ವರು ಆರೋಪಿಗಳ ಬಂಧನ

ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ನಾಲ್ವರು ಆರೋಪಿಗಳ ಬಂಧನ ಮಾಡಲಾಗಿದೆ. ಜೋಗಯ್ಯ, ಕೇಶವ್, ಅಜಿತ್, ಹರೀಶ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೊಂಚು ಹಾಕಿ ಕುಳಿತಿದ್ದ ಆರೋಪಿಗಳನ್ನು ಬಂಧನ ಮಾಡಲಾಗಿದೆ. ದರೋಡೆಗೆ ಒಟ್ಟು ಐದು ಜನ ಪ್ಲಾನ್ ಮಾಡಿ ಹೊಂಚು‌ ಹಾಕ್ತಿದ್ರು ಎಂದು ತಿಳಿದುಬಂದಿದೆ. ಪಕ್ಕಾ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಒಬ್ಬ ಆರೋಪಿ ತಪ್ಪಿಸಿಕೊಂಡಿದ್ದು ನಾಲ್ವರು ಅರೆಸ್ಟ್ ಆಗಿದ್ದಾರೆ. ಈ ಸಂಬಂಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬೆಂಗಳೂರಿನಲ್ಲಿ ವರನಟ ಡಾ.ರಾಜ್​​ಕುಮಾರ್ ಪುತ್ಥಳಿ ಕಳ್ಳತನ

ಬೆಂಗಳೂರಿನಲ್ಲಿ ವರನಟ ಡಾ.ರಾಜ್​​ಕುಮಾರ್ ಪುತ್ಥಳಿ ಕಳ್ಳತನವಾದ ಘಟನೆ ನಡೆದಿದೆ. ಲುಂಬಿನಿ ಗಾರ್ಡನ್​ನಲ್ಲಿದ್ದ ಡಾ.ರಾಜ್​ ಕಂಚಿನ ಪುತ್ಥಳಿ ಕಳವಾಗಿದೆ. 2 ದಿನದ ಹಿಂದೆ ರಾಜ್ ಪುತ್ಥಳಿ ಕಳ್ಳತನ ಮಾಡಲಾಗಿದೆ. ಘಟನೆ ಬಗ್ಗೆ ಅರಣ್ಯಾಧಿಕಾರಿ ಯೋಗೇಶ್ ಎಂಬುವರಿಂದ ದೂರು ದಾಖಲಾಗಿದೆ. ಈ ಬಗ್ಗೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು ಸದ್ಯ ಅಮೃತಹಳ್ಳಿ ಪೊಲೀಸರು ಶಂಕಿತರಿಬ್ಬರನ್ನ ವಶಕ್ಕೆ ಪಡೆದಿದ್ದಾರೆ.

ವಿಜಯನಗರ: 15 ದಿನಗಳ ಹಿಂದೆ ಕಾಣೆಯಾಗಿದ್ದ ರೈತ ಶವವಾಗಿ ಪತ್ತೆ

ಕಳೆದ 15 ದಿನಗಳ ಹಿಂದೆ ಕಾಣೆಯಾಗಿದ್ದ ಹೂವಿನಹಡಗಲಿಯ ರೈತ ಬಣಕಾರ ಮಲ್ಲಪ್ಪ ಶವವಾಗಿ ಪತ್ತೆ ಆಗಿದ್ದಾರೆ. ಹೂವಿನಹಡಗಲಿ ಪಟ್ಟಣದ ಹೊರವಲಯದಲ್ಲಿ ರೈತ ಬಣಕಾರ ಮಲ್ಲಪ್ಪ ಮೃತದೇಹ ಪತ್ತೆ ಆಗಿದೆ. ಅಕ್ರಮ ಲೇಔಟ್ ವಿರುದ್ಧ ಹೋರಾಟ ಮಾಡುತ್ತಿದ್ದ ರೈತ ಬಣಕಾರ ಮಲ್ಲಪ್ಪ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

ಬಳ್ಳಾರಿ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ ಮಾಡಲಾಗಿದೆ. ಬಂಧಿತರಿಂದ 46 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ. ಹಡಗಲಿ ತಾಲೂಕಿನ ಡೊಂಬ್ರಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಈ ಹಿನ್ನೆಲೆ ಬಸವರಾಜ, ರಾಜು ಎನ್ನುವ ಆರೋಪಿಗಳಿಬ್ಬರ ಬಂಧನ ಮಾಡಲಾಗಿದೆ. ಹಿರೇಹಡಗಲಿ ಪೊಲೀಸರಿಂದ ಕಾರ್ಯಾಚರಣೆ ನಡೆಸಲಾಗಿದೆ. ವಿಜಯನಗರ ಜಿಲ್ಲೆಯ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಒಂದೇ ಕುಟುಂಬದ ಐವರ ಕೊಲೆ! ರಾತ್ರಿ ಮಲಗಿದ್ದಾಗ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

ಇದನ್ನೂ ಓದಿ: ಹಿಂಡಲಗಾ ಜೈಲಿನಲ್ಲಿ ಕೊಲೆ ಆರೋಪಿ ಅನುಮಾನಾಸ್ಪದ ಸಾವು

Published On - 6:21 pm, Sun, 6 February 22

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ